ನಿತ್ಯವಾಣಿ, ಚಿತ್ರದುರ್ಗ, (ಜ,15) : ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಜಗದ್ಗುರುಗಳು ಶ್ರೀ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೂಡಲಸಂಗಮ ದಿಂದ ಬೆಂಗಳೂರಿಗೆ ಪಾದಯಾತ್ರೆಗೆ 1ವರ್ಷ ಮುಗಿದಿದ್ದು ಸರ್ಕಾರದ ವಿಳಂಬ ನೀತಿಗೆ ಲಿಂಗಾಯತ ಪಂಚಮಸಾಲಿಗಳ ಆಕ್ರೋಶ ಚಿತ್ರದುರ್ಗ ದಲ್ಲಿ ಪ್ರವಾಸಿ ಮಂದಿರದ ಎದುರು ಪಂಚಮಸಾಲಿಗಳ ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿದರು,
ಈ ಸಂದರ್ಭದಲ್ಲಿ ನೇತೃತ್ವ ವಹಿಸಿದ್ದ ಪಂಚಮಸಾಲಿ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಕೆ ಸಿ ಗಂಗಾಧರಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಟಿ ನವೀನ್ ಕುಮಾರ್ ಮುಖಂಡರಾದ ಎಚ್ ಎಂ ಮಂಜುನಾಥ್, ತಿಪ್ಪೇಸ್ವಾಮಿ ಗಾರೆಹಟ್ಟಿ ಜಿತೇಂದ್ರ ಹುಲಿಕುಂಟೆ, ಮನು ಜಾಲಿಕಟ್ಟೆ, ಗಿರೀಶ್, ಪ್ರಶಾಂತ್ ಹಾಗೂ ಇನ್ನಿತರರು ಸಮಾಜದ ಮುಖಂಡರು ಭಾಗವಹಿಸಿದ್ದರು