ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸಿದ ಪೆಪ್ಸ್ ಇಂಡಸ್ಟ್ರೀಸ್: ಆಕ್ಸೆಸರೀಸ್ ವರ್ಗ “ಪೆಪ್ಸ್ ಡ್ರೀಪ್ ಡೆಕಾರ್” ಬಿಡುಗಡೆ ಮಾಡಿದೆ

 

 ವರ್ಗಕ್ಕಾಗಿ ಮೂಲಸೌಕರ್ಯಕ್ಕಾಗಿ 10 ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದನ್ನು ಎದುರು ನೋಡುತ್ತಿದೆ.

   ನಿತ್ಯವಾಣಿ,ಬೆಂಗಳೂರು,(ಜೂ.11.2021) :   ಭಾರತದಲ್ಲಿ ಅಗ್ರಮಟ್ಟದ ಮಾರಾಟ ಹೊಂದಿರುವ ಸ್ಪ್ರಿಂಗ್ ಮ್ಯಾಟ್ರೆಸ್‍ಗಳ ತಯಾರಕರಾದ ಪೆಪ್ಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಈಗ ನಿದ್ರೆಯ ಆಕ್ಸಸರಿಗಳನ್ನು ಒಳಗೊಂಡಿರುವ `ಪೆಪ್ಸ್ ಡ್ರೀಮ್ ಡೆಕಾರ್’ ಎಂಬ ಬ್ರಾಂಡ್ ಅನ್ನು ಬಿಡುಗಡೆ ಮಾಡುತ್ತಿದೆ. ನೂತನ ಶ್ರೇಣಿಯಲ್ಲಿ ಅತ್ಯಂತ ಎಚ್ಚರಿಕೆಯೊಂದಿಗೆ ರೂಪಿಸಲಾದ ಉನ್ನತಮಟ್ಟದ ಬೆಡ್‍ಶೇಟ್‍ಗಳು, ಪಿಲ್ಲೊಗಳು, ಮ್ಯಾಟ್ರೆಸ್ ಪ್ರೊಟೆಕ್ಟರ್‍ಗಳು, ಕುಷನ್‍ಗಳು, ಬ್ಲಾಂಕೆಟ್‍ಗಳು ಮತ್ತು ಟ್ರಾವೆಲ್ ಆಕ್ಸಸರಿಗಳು ಸೇರಿರುತ್ತವೆ. ಇವುಗಳನ್ನು ಅತ್ಯಂತ ಅನುಕೂಲಕರವಾಗಿರುವಂತೆ ಮತ್ತು ಸೂಕ್ತ ಬೆಂಬಲ ನೀಡುವಂತೆ ಹಾಗೂ ವಿಶೇಷ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಪೆಪ್ಸ್ ಡ್ರೀಮ್ ಡೆಕಾರ್‍ನ ಬೆಡ್ ಲಿನೆನ್ ಶ್ರೇಣಿ ಆಕರ್ಷಕ ಕಣ್ಸೆಳೆಯುವ ಬಣ್ಣಗಳಲ್ಲಿ ಹಾಗೂ ಬೆರಗುಗೊಳಿಸುವ ವಿನ್ಯಾಸಗಳಲ್ಲಿ ಬರುತ್ತಿದೆ. ಹೂವುಗಳ ಚಿತ್ರಗಳಿಂದ ಹಿಡಿದು ಜ್ಯಾಮಿತಿಯ ವಿನ್ಯಾಸಗಳನ್ನು ಇದು ಒಳಗೊಂಡಿದೆ. ಯಾವುದೇ ಸ್ಥಳದ ನೋಟವನ್ನು ಇವು ತಕ್ಷಣ ಉತ್ತಮ ಪಡಿಸುತ್ತವೆ. ಜೊತೆಗೆ ಬಳಕೆದಾರರಿಗೆ ಮಕಮಲ್ಲಿನ ಮೃದುವಾದ ಹತ್ತಿಯ ವಿಲಾಸಿ ಭಾವನೆಯನ್ನು ಆನಂದಿಸಲು ಅವಕಾಶ ಮಾಡಿಕೊಡುತ್ತವೆ. ಉತ್ಪನ್ನಗಳ ಶ್ರೇಣಿಯಲ್ಲಿ ಯಾವುದೇ ರೀತಿಯ ತೊಂದರೆಗೆ ಅವಕಾಶ ಕೊಡದೆ ಅನುಕೂಲಕರವಾದಂತಹ ನೋ-ಫಸ್ ಉತ್ಪನ್ನಗಳಾದ, ವಾಟರ್‍ಪ್ರೂಫ್ ಮ್ಯಾಟ್ರೆಸ್ ಪ್ರೊಟೆಕ್ಟರ್, ಫಿಟ್ಟೆಡ್ ಶೀಟ್ಸ್, ಆಂಟಿ-ಸ್ಕಿಡ್ ಬೊಲ್ಸ್ಟರ್ ಮತ್ತು ಆ್ಯಂಟಿ-ಪಿಲ್ಲಿಂಗ್ ಫ್ಲೀಸ್ ಬ್ಲಾಂಕೆಟ್ ಮುಂತಾದವುಗಳು ಸೇರಿದ್ದು, ನಿಮ್ಮ ಹಾಸಿಗೆ ಸಂಪೂರ್ಣ ಮತ್ತು ಶುದ್ಧವಾದ ವಿಶ್ರಾಂತಿ ನೀಡುವ ಮೂಲವಾಗಿರುವ ಖಾತ್ರಿ ಮಾಡಿಕೊಳ್ಳುತ್ತವೆ.

`ಪೆಪ್ಸ್ ಡ್ರೀಮ್ ಡೆಕಾರ್’ಗೆ ಪೆಪ್ಸ್ ಮ್ಯಾಟ್ರೆಸ್‍ಗಳಲ್ಲಿ ಬಳಸಲಾಗುವ ನವೀನ, ಉನ್ನತ ನಾಜೂಕಿನ ತಂತ್ರಜ್ಞಾನ ಕೂಡ ಸೇರಿಸಲಾಗಿದೆ. ನೂತನ ಶ್ರೇಣಿಯ ದಿಂಬುಗಳನ್ನು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಇವುಗಳು ಗರಿಷ್ಠ ಅನುಕೂಲ ಮತ್ತು ಬೆಂಬಲಪೂರೈಸುತ್ತವೆ.

ಈ ನೂತನ ಉತ್ಪನ್ನ ಶ್ರೇಣಿಯ ಮುಖ್ಯಾಂಶ ಎಂದರೆ ಗ್ರಿಪ್‍ಸ್ಟೆರ್-ಭಾರತದ ಪ್ರಥಮ ಆ್ಯಂಟಿ-ಸ್ಕಿಡ್ ಬಾಲ್ಸ್ಟರ್ ಆಗಿದೆ. ಎರ್ಗಾನಮಿಕಲಿ ವಿನ್ಯಾಸಗೊಳಿಸಲಾಗಿರುವ ಈ ಉತ್ಪನ್ನ ನಿಮ್ಮ ಮನೆಯಿಂದ ಕೆಲಸ ಮಾಡುವ ಅನುಭವವನ್ನು ಉತ್ತಮಗೊಳಿಸುತ್ತದೆ. ನಿಮ್ಮ ಹಾಸಿಗೆಯ ಮೇಲೆ ಅನುಕೂಲಕರ ರೀತಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆಯಲ್ಲದೆ, ಬೆನ್ನು ಮತ್ತು ಭುಜದ ನೋವುಗಳ ಹಿನ್ನೆಡೆ ಇಲ್ಲದಂತೆ ಮಾಡುತ್ತದೆ.

ಪೆಪ್ಸ್ ಇಂಡಸ್ಟ್ರೀಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ಕೆ. ಮಾಧವನ್ ಅವರ ಪ್ರಕಾರ – “ಈ ಮಾರುಕಟ್ಟೆಯಲ್ಲಿ ನಾವು ನೂತನವಾಗಿ ಪ್ರವೇಶ ಮಾಡುತ್ತಿದ್ದರೂ, ನಮ್ಮ ಅನುಭವ ಮತ್ತು ಪರಂಪರೆ ಅಗ್ರಸ್ಥಾನಕ್ಕೆ ಶೀಘ್ರವಾಗಿ ಏರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ನಾವು ಮಾರುಕಟ್ಟೆಯ ಸಕಾರಾತ್ಮಕ ಹೊರನೋಟ ಹೊಂದಿದ್ದು, ಇದೇ ವರ್ಷ 50 ಕೋಟಿ ರೂ.ಗಳ ವಹಿವಾಟನ್ನು ನಿರೀಕ್ಷಿಸಿದ್ದೇವೆ. ಮ್ಯಾಟ್ರೆಸ್‍ನಿಂದ ಆರಂಭಿಸಿ ಬೆಡ್‍ಶೀಟ್‍ಗಳು, ಬ್ಲಾಂಕೆಟ್‍ಗಳು, ಫಿಲ್ಲೊಗಳು ಮತ್ತು ಇತರೆ ನಿದ್ರಾ ಸಂಬಂಧಿ ಆಕ್ಸಸರಿಗಳೊಂದಿಗೆ ನಮ್ಮ ಗ್ರಾಹಕರಿಗೆ ಸಮಗ್ರವಾದ ನಿದ್ರಾ ಪರಿಹಾರಗಳನ್ನು ಸೃಷ್ಟಿಸುವ ನಮ್ಮ ಗುರಿಯಲ್ಲಿ ಇದು ಮತ್ತೊಂದು ಹೆಜ್ಜೆಯಾಗಿದೆ’’.

ಅತ್ಯಾಧುನಿಕ ಶ್ರೇಣಿ ಇತ್ತೀಚಿನ ನಿದ್ರಾ ತಂತ್ರಜ್ಞಾನವನ್ನು ನಾಜೂಕಿನ ಮತ್ತು ಫ್ಯಾಷನ್ ಶೈಲಿಗಳೊಂದಿಗೆ ಮಿಶ್ರ ಮಾಡಿ ಭಾರತ ಹೆಚ್ಚು ಉತ್ತಮವಾಗಿ ನಿದ್ರೆ ಮಾಡಲು ಮತ್ತು ದೊಡ್ಡ ಕನಸುಗಳನ್ನು ಕಾಣುವಲ್ಲಿ ನೆರವಾಗುವಲ್ಲಿ ಬ್ರಾಂಡ್‍ನ ಉದ್ದೇಶಗಳ ಪ್ರತಿರೂಪವಾದ ಉತ್ಪನ್ನಗಳನ್ನು ಸೃಷ್ಟಿಸಲಾಗುತ್ತಿದೆ.

ಪೆಪ್ಸ್ ಇಂಡಸ್ಟ್ರೀಸ್ ಸಂಸ್ಥೆಯು ಈ ಪೆಪ್ಸ್ ಡೆಕಾರ್‍ನ ವಹಿವಾಟಿಗೆ ನೆರವಾಗುವ ಮೂಲಸೌಕರ್ಯ ಅಭಿವೃದ್ಧಿಯತ್ತ 10 ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಗುರಿ ಹೊಂದಿದೆ.

ಈ ಉತ್ಪನ್ನಗಳು www.pepsdreamdecor.com ರಲ್ಲಿ ಹಾಗೂ ಎಲ್ಲಾ ಮುಂಚೂಣಿಯ ವಿದ್ಯುನ್ಮಾನ ವಾಣಿಜ್ಯ ವೇದಿಕೆಗಳಲ್ಲಿ ಲಭ್ಯವಿರುತ್ತವೆ.

ಸುದ್ದಿಗಾಗಿ, ಜಾಹೀರಾತಿಗಾಗಿ 👉  ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020

 

Leave a Reply

Your email address will not be published.