ದಿ ಪೊಲಿಟಿಕಲ್ ರೋಲ್ ಆಪ್ ವುಮೆನ್ ಇನ್ ಚಿತ್ರದುರ್ಗ ಪಂಚಾಯತ್ ಸಂಶೋಧನಾ ಮಹಾಪ್ರಬಂದಕ್ಕೆ ಪಿಎಚ್ ಡಿ ಡಾಕ್ಟರೇಟ್ ಪದವಿ

 

ನಿತ್ಯವಾಣಿ, ಚಿತ್ರದುರ್ಗ,(ಸೆ.2) : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿತ್ರದುರ್ಗ ತಾಲ್ಲೂಕು ಶಾಖೆಯ ಅಧ್ಯಕ್ಷರು ಹಾಗೂ ದಂಡಿನ ಕುರುಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಬಿ. ಟಿ. ಲೋಲಾಕ್ಷಮ್ಮ ಇವರು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀ ಚತುರ್ವೇದಿ ತಿವಾರಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ *” ದಿ ಪೊಲಿಟಿಕಲ್ ರೋಲ್ ಆಪ್ ವುಮೆನ್ ಇನ್ ಚಿತ್ರದುರ್ಗ ಪಂಚಾಯತ್ “* ಎಂಬ ವಿಷಯದ ಸಂಶೋಧನಾ ಮಹಾಪ್ರಬಂದಕ್ಕೆ ಕಾನ್ಪುರ ವಿಶ್ವವಿದ್ಯಾನಿಲಯವು ಪಿಎಚ್ ಡಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ವೃತ್ತಿಯಲ್ಲಿ ಶಿಕ್ಷಕಿಯಾಗಿ, ನೌಕರರ ಸಮುದಾಯದಲ್ಲಿಯೇ ಅತಿ ದೊಡ್ಡ ಸಮುದಾಯವಾದ ಶಿಕ್ಷಕ ಸಂಘಟನೆಯ ಅಧ್ಯಕ್ಷೆಯಾಗಿ, ಸಂಸಾರದಲ್ಲಿ ಗೃಹಿಣಿಯಾಗಿ, ಮಕ್ಕಳಿಗೆ ತಾಯಿಯಾಗಿ, ಸಂಸಾರದಲ್ಲಿಯೂ ಯಶಸ್ವಿಯಾಗಿ ಗೌರವ ಡಾಕ್ಟರೇಟ್ ಪಡೆದ ಶ್ರೀಮತಿ ಶ್ರೀ ಲೋಲಕ್ಷ್ಮಮ್ಮ ಬಿ.ಟಿ.ರವರಿಗೆ ಹಾಗೂ       ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಶ್ರೀ ಕೆ.ಎನ್.ಮಹೇಶ್ ರವರು ಮಂಡಿಸಿರುವ *”ಎ ಸ್ಟಡಿ ಆಪ್ ದಿ ವೀಡ್ ಫ್ಲೋರ ಆಫ್ ಸಮ್ ಕಲ್ಟಿವೇಟೆಡ್ ಫೀಲ್ಡ್ ಆಫ್ ಕರ್ನಾಟಕ ಸ್ಟೇಟ್”* ಎಂಬ ವಿಷಯದ ಸಂಶೋಧನಾ ಮಹಾಪ್ರಭಂದಕ್ಕೆ ಕಾನ್ಪುರ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.                          ಚಿತ್ರದುರ್ಗದ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ  ಕೆ ಮಂಜುನಾಥ್ ರವರು ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದ್ದಾರೆ.

 

Leave a Reply

Your email address will not be published.