ಇತ್ತೀಚೆಗೆ ಒಂದು ವಿಡಿಯೋ ಭಾರಿ ವೈರಲ್ ಆಗಿತ್ತು. ಮದುವೆ ಮಂಟಪದಲ್ಲಿ ವಧುವಿನ ಮುಖವನ್ನು ಫೋಟೋಗ್ರಾಫರ್ ಮುಟ್ಟಿದನೆಂದು ವರ ಹೊಡೆಯುವ ವಿಡಿಯೋವದು. ಆ ವಿಡಿಯೋದ ಅಸಲಿಯತ್ತು ಇದೀಗ ಹೊರಬಿದ್ದಿದೆ.
ಆ ವಿಡಿಯೋದ ಬಗ್ಗೆ ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಫೋಟೋಗ್ರಾಫರ್ಗೆ ಈ ರೀತಿ ಅವಮಾನಿಸಬಾರದು, ಇದು ಫೇಕ್ ವಿಡಿಯೋ ಅದು ಇದು ಎಂದು ಅನೇಕ ರೀತಿಯ ಪ್ರತಿಕ್ರಿಯೆಗಳು ಬಂದಿದ್ದವು. ಇದೀಗ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವಧುವೇ ವಿಡಿಯೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅನಿಕೃತಿ ಚೌಹಾಣ್
ಅಷ್ಟಕ್ಕೂ ಆ ವಿಡಿಯೋ ನಿಜವಾದ ಮದುವೆಯದ್ದಲ್ಲವಂತೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವಧು ಚತ್ತೀಸಗಢದ ನಟಿ ಅನಿಕೃತಿ ಚೌಹಾಣ್. ಅದು ಒಂದು ಸಿನಿಮಾ ಚಿತ್ರೀಕರಣದ ವಿಡಿಯೋವಾಗಿದೆ. ನಟಿ ಅನಿಕೃತಿ ಇದೀಗ ‘ಡಾರ್ಲಿಂಗ್ ಪ್ಯಾರ್ ಜುಕ್ತಾ ನಹೀಂ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ವಿಡಿಯೋ ಆ ಚಿತ್ರೀಕರಣದ ವೇಳೆಯೇ ತೆಗೆದಿರುವಂತೆ. ಅದೇನೇ ಇರಲಿ, ಈ ರೀತಿಯ ಕಾಮಿಡಿ ಸನ್ನಿವೇಶಗಳು ಹಲವಾರು ಫೋಟೋಗ್ರಾಫರ್ಗಳ ಬದುಕಲ್ಲಿ ಆಗಿರುವುದಂತೂ ಸುಳ್ಳಲ್ಲ.