ನಿತ್ಯವಾಣಿ,ಚಿತ್ರದುರ್ಗ ,(ಜೂ. 26) ; ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ನಗರ ಮಂಡಲ ವತಿಯಿಂದ ವೃಕ್ಷಾರೋಹಣ ಅಭಿಯಾನ ಪ್ರಯುಕ್ತ ಚಿತ್ರದುರ್ಗ ನಗರದ ಚೋಡೇಶ್ವರಿ ಲೇಔಟ್ ಪಾರ್ಕ್‍ನಲ್ಲಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆ ಜೆ ಶಶಿದರ್ ವಹಿಸಿದರು. ಸಂದರ್ಭದಲ್ಲಿ ನಗರ ಯುವಮೋರ್ಚಾ ಅಧ್ಯಕ್ಷ ಟಿ ಟಿ ಅರುಣ್ . ವೃಕ್ಷಾರೋಹಣದ ಪ್ರಮುಖ್ ರಾದ ಕೆ .ರಾಮು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ ಬದರಿನಾಥ್, ನಗರ ಪ್ರಧಾನ ಕಾರ್ಯದರ್ಶಿ ಭಾನುಮೂರ್ತಿ, ನಗರಸಭಾ ಸದಸ್ಯ ಸುರೇಶ ಕುಮಾರ್, ರವಿ, ಪರಮೇಶ್ವರ್ .ನಗರ ಉಪಾಧ್ಯಕ್ಷ ಕಾರ್ತಿಕ್ ಒಬಿಸಿ ಮೋರ್ಚಾ ಅಧ್ಯಕ್ಷರು ಎನ್ ಕೃಷ್ಣ , ನಾಗರಾಜ್ . ಆರ್ ವರುಣ್ ಕುಮಾರ್ , ನಗರ ಕಾರ್ಯದರ್ಶಿ ಪ್ರದೀಪ್, ಶಿವಕುಮಾರ್, ಪ್ರಸನ್ನ,ವೆಂಕಟೇಶ್ ಯುವ ಮೋರ್ಚಾದ ಸದಸ್ಯ ಮಲ್ಲಿಕಾರ್ಜುನ. ಅನಿರುದ್. ಅಭಿಲಾಷ್. ಮಂಜುನಾಥ್ ಉಪಸ್ಥಿತರಿದ್ದರು.