ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112ತುರ್ತು ಸಹಾಯ ಸ್ಪಂದನ ವ್ಯವಸ್ಥೆಯನ್ನು ಉದ್ಘಾಟಿಸಿದ ಚಿತ್ರದುರ್ಗ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ. ರಾಧಿಕ

ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112(one india one Emwrgency-112) ತುರ್ತು ಸಹಾಯ ಸ್ಪಂದನ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿಗೆ ತಂದಿದ್ದು,  ಈ ಪರಿಕಲ್ಪನೆಯನ್ನು ಕರ್ನಾಟಕ ರಾಜ್ಯದಲ್ಲಿಯೂ ಸಹ ಅನುಷ್ಠಾನಗೊಳಿಸಿದ್ದು ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿಯೂ ದಿನಾಂಕ 27 -01-2020  ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗ ನಗರ ಪೊಲೀಸ್ ಕವಾಯತು ಮೈದಾನದಲ್ಲಿ ವಿದ್ಯುಕ್ತವಾಗಿ ಚಾಲನೆ ಮಾಡಲಾಯಿತು, ಸಾರ್ವಜನಿಕರು ಪೊಲೀಸರ ಪೊಲೀಸ್ ನೆರವು ಬೇಕಾದಲ್ಲಿ, ಅಗ್ನಿ ದುರಂತ ಸಂಭವಿಸಿದ್ದಲ್ಲಿ  ಮತ್ತು ಇತರೆ  ವಿಪತ್ತು  ಸಂದರ್ಭಗಳಿಗೆ ಸಂಬಂಧಿಸಿದಂತೆ 24*7 ಯಾವುದೇ ಸಮಯದಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಬಹುದು.

 ಸಾರ್ವಜನಿಕರು ಕರೆ ಮಾಡಿದಾಗ ಕೇವಲ 15 ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಿ ತ್ವರಿತವಾಗಿ ಅವರ ಸಮಸ್ಯೆಗೆ ಸ್ಪಂದಿಸಲಾಗುವುದು. 112 ಸಂಖ್ಯೆಗೆ ಕರೆ ಮಾಡಿದಾಗ ಬೆಂಗಳೂರಿನಲ್ಲಿರುವ public safety answering point (PSAP)  ಕೇಂದ್ರದಲ್ಲಿ ಕರೆ ಸ್ವೀಕರಿಸಿ ಕರೆ ಮಾಡಿದವರ ಸ್ಥಳದ ಆಧಾರದ ಮೇಲೆ ಸಂಬಂಧಪಟ್ಟ ಜಿಲ್ಲಾ ಸಮನ್ವಯ ಕೇಂದ್ರ   (District Co-ordination Center )  ಕ್ಕೆ   ಕರೆಯನ್ನು ಕೂಡಲೇ ವರ್ಗಾಯಿಸಲಾಗುತ್ತದೆ, ತಕ್ಷಣ ಜಿಲ್ಲಾ ಕೇಂದ್ರದಲ್ಲಿ ಕರೆ ಮಾಡಿದ ವ್ಯಕ್ತಿಯ ವಿವರಗಳನ್ನು ಪಡೆದು ಸದರಿ ವ್ಯಕ್ತಿ ಇರುವ ಸ್ಥಳಕ್ಕೆ ERSS ಗಾಗಿ ಮೀಸಲಿರುವ ವಾಹನದಲ್ಲಿ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ಕರೆ ಮಾಡಿದವರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲಾಗುವುದು, ಚಿತ್ರದುರ್ಗ ಜಿಲ್ಲೆಯಲ್ಲಿ ಇದಕ್ಕಾಗಿಯೇ ಆಧುನಿಕ ತಂತ್ರಜ್ಞಾನವುಳ್ಳ ಹನ್ನೊಂದು ERSS ವಾಹನಗಳನ್ನು ಮೀಸಲಿರಿಸಿದ್ದು, ಸದರಿ ವಾಹನದಲ್ಲಿ ಪೊಲೀಸ್ ಅಧಿಕಾರಿಗಳು 24*7 ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ. ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಈ ಮುಂದೆ ಇರುವ  ಯಾವುದಾದರೂ ಒಂದು ವಿಧಾನದಿಂದ ತುರ್ತು ಸೇವೆಗಳನ್ನು ಪಡೆಯಬಹುದು.   * ನಿಮ್ಮ ಫೋನ್ನಲ್ಲಿ 112 ನಂಬರಿಗೆ ಕರೆ ಮಾಡಬಹುದು  * 112 ಇಂಡಿಯ ಮೊಬೈಲ್ ಆಪ್ ಮೂಲಕ ವಿನಂತಿಸಬಹುದು * www.ka.ners.in ಜಾಲತಾಣದ ಮೂಲಕ ವಿನಂತಿಸಬಹುದು * Erss112ktk@ksp.gov.in ಗೆ ಇ -ಮೇಲ್ ಕಳುಹಿಸುವುದು * ಪ್ಯಾನಿಕ್  ಅಲರ್ಟ್ ಗಾಗಿ ಸಾಮಾನ್ಯ ಮೊಬೈಲ್ (ಕೀಪ್ಯಾಡ್ ಫೋನ್) ಫೋನಿನಲ್ಲಿ 5 ಅಥವಾ 9 ಸಂಖ್ಯೆಯನ್ನು ಲಾಂಗ್   ಪ್ರೆಸ್ ಮಾಡುವುದು * ಪ್ಯಾನಿಕ್ ಅಲರ್ಟ್ ಗಾಗಿ ಸಾಮಾನ್ಯ ಮೊಬೈಲ್ ಫೋನಿನಲ್ಲಿ (ಕೀಪ್ಯಾಡ್ ಫೋನ್ )ಪವರ್ ಬಟನ್ ಅನ್ನು 3 ಅಥವಾ 5 ಭಾರಿ ವೇಗವಾಗಿ ಪ್ರೆಸ್ ಮಾಡುವುದು, ಈ ವ್ಯವಸ್ಥೆಯನ್ನು ಗಳು ಇದರ ಸಂಪೂರ್ಣ ಮಾಹಿತಿಯನ್ನು ಕೊಟ್ಟು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು

Leave a Reply

Your email address will not be published.