ಚಿತ್ರದುರ್ಗ ಫೆ. 23
ಮೊಳಕಾಲ್ಮೂರು ತಾಲ್ಲೂಕ್ ಕೆರೆಕೊಂಡಾಪುರ ಗ್ರಾಮದ ಲಿಂಕೇಶ 4 ವಷರ್À,ಜೀವನ್ 6 ವಷರ್À ಈ ಇಬ್ಬರು ಮಕ್ಕಳು ತಮ್ಮ ಗ್ರಾಮದಲ್ಲಿರುವ ಬ್ರಹ್ಮಾನಂದರೆಡ್ಡಿಯವರ ಟೀ ಅಂಗಡಿ ಹೊಟೇಲ್ ಬಳಿ ಆಟವಾಡುತ್ತಿದ್ದವರು ಏಕಾಏಕಿ ಕಾಣೆಯಾಗಿದ್ದು ಇವರನ್ನು ಯಾರೋ ದುಷÀ್ಕರ್ಮಿಗಳು ಅಪಹರಣ ಮಾಡಿಕೊಂಡು ಹೋಗಿರಬಹುದು ಎಂದು ವಸಂತ ತಂದೆ ಹೊನ್ನೂರಪ್ಪ, ಮೊಳಕಾಲ್ಮೂರು ಠಾಣೆಯಲ್ಲಿ ದೂರು ನೀಡಿದ್ದರು.
ಶೀಘ್ರವಾಗಿ ಮಕ್ಕಳನ್ನು ಪತ್ತೆಗಾಗಿ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡಗಳನ್ನು ರಚನೆ ಮಾಡಿ ಕೆರೆಕೊಂಡಾಪುರ ಗ್ರಾಮದ ಗೋಕಟ್ಟೆ, ಕೃಷಿಹೊಂಡಗಳು, ಬಾವಿಗಳು, ಹಳ್ಳ ಕೆರೆ ನೀರಿನ ಸಂಪುಗಳು ದೇವಸಮುದ್ರ ಕೆರೆ, ಜಾಲಿ ಗಿಡಗಳ ಪೆÇದೆಗಳು, ಜಮೀನುಗಳಲ್ಲಿ, ಕಣಗಳಲ್ಲಿ ಮುಂತಾದ ಕಡೆ ಹುಡುಕಾಟ ನಡೆಸಿದ್ದು, ಸಮಯದಲ್ಲಿ ಕಾಣೆಯಾದ ಮಕ್ಕಳ ಮನೆಯಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತಿದ್ದ ಟಾಟಾ ಇಂಡಿಗೋ ಕಾರೊಂದರಲ್ಲಿ ಯಾರೋ ಶಬ್ದ ಮಾಡುತ್ತಿರುವುದನ್ನು ಕಂಡು ಗ್ರಾಮದವರಾದ ಪ್ರವೀಣ್ ಹೋಗಿ ನೋಡಿದಾಗ ಕಾಣೆಯಾದ ಮಕ್ಕಳಾದ ಲಿಂಕೇಶ, ಜೀವನ್ ಇವರು ಕಾರಿನ ಒಳಗೆ ಇರುವುದು ಕಂಡು ಬಂದಿದ್ದು ಇವರನ್ನು ರಕ್ಷಿಸಲಾಗಿದೆ.
ನಂತರ ಮಕ್ಕಳನ್ನು ಪಾಲಕರಿಗೆ ಒಪ್ಪಿಸಿ ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿದ್ದು ಆರೋಗ್ಯವಾಗಿರುತ್ತಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದು, ಸಮಯಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಯಿಂದ ಎರಡೂ ಮಕ್ಕಳನ್ನು ಪತ್ತೆ ಮಾಡಿ ರಕ್ಷಿಸಿ ಸುರಕ್ಷಿತವಾಗಿ ಅವರ ಪಾಲಕರ ವಶಕ್ಕೆ ಒಪ್ಪಿಸಿರುತ್ತೆ.
ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ಈ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.