ಅಮಾಯಕ ಪೊಲೀಸ್ ಸಿಬ್ಬಂದಿಗಳ ಮೇಲೆ ಪೂರ್ವಪರ ವಿಚಾರ ತಿಳಿಯದೇ ಸಾರ್ವಜನಿಕರು ಏಕಾಏಕಿ ದಾಳಿ ಮಾಡಿರುವುದು ಖಂಡನೆ :: ಕೆ.ಟಿ.ಶಿವಕುಮಾರ್

:

ಚಿತ್ರದುರ್ಗ, ನಿತ್ಯವಾಣಿ,ಮಾ 24 :  ದಿ-22-03-2021 ರಂದು ಸಂಜೆ ಸುಮಾರು 5-30 ರ ಸುಮಾರಿಗೆ ಹಿನಕಲ್ ರಿಂಗ್ ರಸ್ತೆ ಬಳಿ ನಡೆದ ಅಪಘಾತದಲ್ಲಿ ಪೊಲೀಸರ ಪಾತ್ರ ಇಲ್ಲದಿದ್ದರೂ ಸಹಾ ಅಮಾಯಕ ಪೊಲೀಸ್ ಸಿಬ್ಬಂದಿಗಳ ಮೇಲೆ ಪೂರ್ವಪರ ವಿಚಾರ ತಿಳಿಯದೇ ಸಾರ್ವಜನಿಕರು ಏಕಾಏಕಿ ದಾಳಿ ಮಾಡಿ ಗಾಯಗೊಳಿಸಿರುವುದಲ್ಲದೇ, ಪೊಲೀಸ್ ವಾಹನಗಳನ್ನು ಜಕಂಗೊಳಿಸಿರುತ್ತಾರೆ. ಈ ವಿಚಾರದ ನಿಮಿತ್ತ ರಕ್ಷಣೆ ನೀಡುವ ಪೊಲೀಸ್‍ರಿಗೆ ರಕ್ಷಣೆ ಅವಶ್ಯಕ ಇರುವುದು ಕಂಡುಬಂದಿರುತ್ತದೆ. ಆದ್ದರಿಂದ ಮಾನ್ಯ ಪೊಲೀಸ್ ಮಹಾನಿರ್ದೇಶಕ ಸಾಹೇಬರು ಕೆಳಗಿನ ಅಂಶಗಳನ್ನು ಅವಲೋಕಿಸಿ ಪೊಲೀಸರಿಗೆ ಸೂಕ್ತ ಬೆಂಬಲ ಸೂಚಿಸಬೇಕೆಂದು ಎಲ್ಲಾ ಸಿಬ್ಬಂದಿಗಳ ಪರವಾಗಿ ಹಾಗೂ ಪೊಲೀಸ್ ಮಹಾ ಸಂಘದ ಅಧ್ಯಕ್ಷರಾದ ವಿ.ಶಶಿಧರ್ ಹಾಗೂ ರಾಜ್ಯದ ಎಲ್ಲಾ ಪದಾಧಿಕಾರಿಗಳು ವಿನಂತಿಸಿಕೊಳ್ಳುತ್ತೇವೆ.
• ನಿನ್ನೆ ನಡೆದ ಘಟನೆಯಲ್ಲಿ ಪೊಲೀಸರನ್ನು ಬಲಿಪಶು ಮಾಡದೇ, ಅಮಾನಿಯವಾಗಿ ವರ್ತಿಸಿದ ಸಾರ್ವಜನಿಕರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
• ಕರ್ತವ್ಯದ ಸಂದರ್ಭದಲ್ಲಿ ಪೊಲೀಸರಿಗೆ ಅದರಲ್ಲು (ಪಿಸಿ, ಹೆಚ್‍ಸಿ, ಎಎಸ್‍ಐ) ಗಳಿಗೆ ಸೂಕ್ತ ರಕ್ಷಣೆ ಮಾಡಿಕೊಳ್ಳಲು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಬೇಕು.
• ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳನ್ನು ಗುಲಾಮರಾಗಿ ಕಾಣಲಾಗುತ್ತಿದೆ.ಇದನ್ನು ಅಳಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.
• ಕೆಲವು ಕಡೆ ಅಧಿಕಾರಿಗಳು ಸಿಬ್ಬಂದಿಗಳಿಗೆ ಕರ್ತವ್ಯದ ವಿಚಾರವಾಗಿ ಕಿರುಕುಳ ನೀಡುತ್ತಿರುವುದು ವರದಿಯಾಗುತ್ತಿದೆ. ಅಂತ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವುದು.

ಮಾನ್ಯ ಡಿ.ಜಿ.ಪಿ & ಐ.ಜಿ.ಪಿ. ರವರ ಆದೇಶ ಇದ್ದರೂ ಸಹಾ ಕೆಲವು ಕಡೆ ವಾರದ ರಜೆ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಅಂತಹದನ್ನು ತನಿಖೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು.
• ಸಿಬ್ಬಂದಿಗಳ ಕೊರತೆಯಿಂದ ಬಿಡುವಿಲ್ಲದೆ ಕೆಲಸ ಮಾಡಿ ಸಿಬ್ಬಂದಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ವರ್ಷದಲ್ಲಿ ಕನಿಷ್ಟ 4 ಬಾರಿ ಆರೋಗ್ಯ ತಪಾಸಣೆ ನಡೆಸಲು ಕ್ರಮ ತೆಗೆದುಕೊಳ್ಳುವುದು.
• ಇಲಾಖೆಯಲ್ಲಿ ಆಧುನಿಕ ಉಪಕರಣಗಳನ್ನು ಬಳಸಿ ಮಾದರಿ ಇಲಾಖೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದು.
• ಅವೈಜ್ಞಾನಿಕವಾಗಿ ರಸ್ತೆಯಲ್ಲಿ ನಿಂತು ದಂಡ ವಸೂಲಿ ಮಾಡುವುದನ್ನು ತಪ್ಪಿಸಿ, ತಂತ್ರಜ್ಞಾನ ಬಳಸಿ ದಂಡ ವಸೂಲಿ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದು.
ಸಿಬ್ಬಂದಿಗಳು ಕರ್ತವ್ಯದ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ಬದಿಗಿರಿಸಿ ಮೇಲಾಧಿಕಾರಿಗಳ ಆಜ್ಞೆಯಂತೆ ಕೆಲಸ ನಿರ್ವಹಿಸುತ್ತಿರುತ್ತಾರೆ. ಆದ್ದರಿಂದ ಅವರ ರಕ್ಷಣೆ ತಮ್ಮ ಕರ್ತವ್ಯವಾಗಿರುತ್ತದೆ. ಇಂತಹ ದುರ್ಘಟನೆಗಳು ನಡೆದ ಸಂದರ್ಭದಲ್ಲಿ ತಾವು ತೆಗೆದುಕೊಳ್ಳುವ ತೀರ್ಮಾನಗಳ ಮೇಲೆ ಅವರ ಆತ್ಮಸ್ಥೈರ್ಯ ನಿಂತಿರುತ್ತದೆ. ಆದ್ದರಿಂದ ದಯಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ನಿಮ್ಮನ್ನು ನಂಬಿದ ಸಿಬ್ಬಂದಿಗಳಿಗೆ ನ್ಯಾಯದೊರಕಿಸಿಕೊಡಬೇಕೆಂದು ಪೊಲೀಸ್ ಮಹಾ ಸಂಘ ರಾಜ್ಯ ಕಾರ್ಯಾಧ್ಯಕ್ಷ  ಕೆ.ಟಿ.ಶಿವಕುಮಾರ್ ಪತ್ರಿಕೆ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ

 

Leave a Reply

Your email address will not be published.