ಕೋಟೆ ನಾಡಿನ ಗ್ರಾಮಾಂತರ ಠಾಣೆಯ ಪೋಲಿಸರು ಭರ್ಜರಿ ಭೇಟೆ ::ಎಸ್ಪಿ ಜಿ. ರಾಧಿಕಾರವರು ಈ ಕಾರ್ಯಾಚರಣೆಗೆ ಬಹುಮಾನವನ್ನು ಘೋಷಿಸಿದ್ದಾರೆ.

 

ಚಿತ್ರದುರ್ಗ,ಫೆ.23

ಕೋಟೆ ನಾಡಿನ ಗ್ರಾಮಾಂತರ ಠಾಣೆಯ ಪೋಲಿಸರು ಭರ್ಜರಿ ಭೇಟೆಯಾಡಿ ಮೂವರು ಅಂತರರಾಜ್ಯ ಡಾಕಕಾಯಿತರನ್ನು ಬಂಧಿಸಿ 1 ಕೋಟಿ 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿರುವ ಪೊಲೀಸರು 90 ಲಕ್ಷ ರೂ.ಬೆಲೆಬಾಳುವ ಅಡಿಕೆ, ಲಾರಿ ಹಾಗೂ ಕಾರು ಸೇರಿದಂತೆ ಒಟ್ಟು 1 ಕೋಟಿ 21 ಲಕ್ಷ ರೂ. ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಂಗಳೂರು ಜಿಲ್ಲೆಯ ಬಿಲ್ಲಹಳ್ಳಿ ಗ್ರಾಮದ ರಿಜ್ವಾನ್, ದಾವಣಗೆರೆ ಜಿಲ್ಲೆಯ ಕೆರೆಬಿಳಚಿ ಗ್ರಾಮದ ಸಲ್ಮಾನ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಡಣಾಯಕಪುರ ಗ್ರಾಮದ ಲಿಂಗರಾಜು ಬಂಧಿತ ವ್ಯಕ್ತಿಗಳಾಗಿದ್ದಾರೆ.

ಕಳೆದ ಜ 5 ರಂದು ಭೀಮಸಮುದ್ರದ ಶ್ರೀರಂಗನಾಥ ಟ್ರೆಡರ್ಸ್ ಮಂಡಿಯಿಂದ ದೆಹಲಿಗೆ ಕೊಂಡೊಯ್ಯುತ್ತಿದ್ದ ಅಡಿಕೆ ಲಾರಿಯನ್ನು ಕೂಡ್ಲಿಗಿಯ ಬಳಿ ಡಕಾಯಿತರು ಅಡ್ಡಗಟ್ಟಿ ಚಾಲಕನಿಗೆ ಕಾರದಪುಡಿ ಎರಚಿ ಹಲ್ಲೆ ಮಾಡಿ, ಲಾರಿಯನ್ನು ಕಳ್ಳತನ ಮಾಡಿದ್ದರು. ಅಲ್ಲದೆ ಲಾರಿ ಚಾಲಕ ಭೂಪ್ ಸಿಂಗ್ ಅವರನ್ನು ಅಪಹರಿಸಿದ್ದು, ಈ

ಬಗ್ಗೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚಿತ್ರದುರ್ಗದ ಭೀಮ ಸಮುದ್ರದ ಅಡಿಕೆ ಮಂಡಿಯ ರಂಗನಾಥ ಟ್ರೇಡರ್ಸ್ ನಿಂದ 340 ಅಡಿಕೆ ಚೀಲಗಳನ್ನು ತುಂಬಿಕೊಂಡು ದೆಹಲಿಗೆ ಹೋಗುತ್ತಿದ್ದ ವೇಳಯಲ್ಲಿ ಎರ್ಟಿಗಾ ಕಾರಿನಲ್ಲಿ ಹಿಂಬಾಲಿಸಿದ 12 ಜನ ಡಕಾಯಿತರ ತಂಡ ಕೂಡ್ಲಿಗಿ ಬಳಿ ಲಾರಿ ಅಡ್ಡಗಟ್ಟಿ ಚಾಲಕ ಬೂಪ್‍ಸಿಂಗ್‍ನ ಕಣ್ಣಿಗೆ ಖಾರದ ಪುಡಿ ಎರಚಿ ಬೆದರಿಸಿ ಲಾರಿ ಸಮೇತ ಅಡಿಕೆ ಡಕಾಯಿತಿ ಮಾಡಿಕೊಂಡು ಹೋಗಿದ್ದರು ಎಂದು ಚಾಲಕ ಬೂಪ್ ಸಿಂಗ್ ಹೇಳುತ್ತಾನೆ.

ಘಟನೆಯ ಬಗ್ಗೆ ರಂಗನಾಥ್ ಟ್ರೇಡರ್ಸ್ ಮಾಲೀಕರು ಗ್ರಾಮಾಂತರ ಠಾಣೆಯಲ್ಲಿ ಚಾಲಕ ಭೂಪ್ ಸಿಂಗದ ಮೇಲೆ ಅನುಮಾನಿಸಿ ಪ್ರಕರಣ ದಾಖಲಿಸುತ್ತಾರೆ. ಇದರ ಬೆನ್ನು ಹತ್ತಿದ್ದ ಪೋಲಿಸರು ಸತತವಾಗಿ ಭೂಪ್ ಸಿಂಗ್ ವಿಚಾರಣೆ ನಡೆಸಿ ನಂತರ ಅವನ ಪಾತ್ರವಿಲ್ಲ ಎಂದು ಖಾತರಿಪಡಿಸಿಕೊಂಡ ಮೇಲೆ ಕಾರ್ಯಾಚರಣೆ ಆರಂಭಿಸುತ್ತಾರೆ. ಆಗ 12 ಜನರ ತಂಡದ ಮಾಹಿತಿ ಸಿಗುತ್ತದೆ.

ಅಂತರರಾಜ್ಯ ಡಕಾಯಿತನಾದ ಚಿಕ್ಕಮಗಳೂರು ಜಿಲ್ಲೆಯ ಬಿಲ್ಲಹಳ್ಳಿ ಗ್ರಾಮದ ಆಶ್ರಫ್ ಅಲಿ ಎಂಬವನ ಜಾಡು ಹಿಡಿದು ಹೋದಾಗ ಪ್ರಕರಣದಲ್ಲಿ ಲಿಂಗರಾಜು, ರಿಜ್ವಾನ್, ಸಲ್ಮಾನ್ ಸೇರಿದಂತೆ 10 ಜನರ ತಂಡ ಚಿತ್ರದುರ್ಗ ನಗರದ ರವಿಮಯೂರ್ ಲಾಡ್ಜನಲ್ಲಿ ಒಂದು ತಿಂಗಳಿಂದ ಠಾಕಾಣಿ ಹೂಡಿ, ಭೀಮಸಮುದ್ರದ ಶ್ರೀರಂಗನಾಥ ಟ್ರೆಡರ್ಸ್‍ಗೆ ಹೋಗಿ ಅಡಿಕೆ ಖರೀದಿ ಮಾಡುವುದಾಗಿ ಭೇಟಿ ನೀಡಿ ಅಲ್ಲಿನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದು, ನಂತರ ಅಡಿಕೆ ತುಂಬಿದ್ದ ಲಾರಿ ದೆಹಲಿಗೆ ಹೊರಟಿದ್ದನ್ನು ಬಿನ್ನು ಹತ್ತಿ ಕೂಡ್ಲಿಗಿ ಬಳಿ ಕಾರಿಯನ್ನು ತಡೆದು ಚಾಲಕನಿಗೆ ತಳಿಸಿ ಲಾರಿಯ ಜೊತೆ ಚಾಲಕನ ಕಣ್ಣಿಗೆ ಬಟ್ಟೆ ಕಟ್ಟಿ ಅಪಹರಿಸಿದ್ದರು. ನಂತರ ಲಾರಿಯನ್ನು ಚಿಕ್ಕಮಗಳೂರಿಗೆ ತೆಗೆದುಕೊಂಡು ಹೋಗಿ ಲಾರಿಯಲ್ಲಿದ್ದ ಅಡಿಕೆಯನ್ನು ಹಂಚಿಕೊಂಡು ಖಾಲಿ ಲಾರಿಯನ್ನು ಮಂಡ್ಯ ಬಳಿ ಹಾಗೂ ಚಾಲಕನನ್ನು ಹುಬ್ಬಳ್ಳಿಯ ತಡಸ್ ಕ್ರಾಸ್ ಬಳಿ ಬಿಟ್ಟು ಹೋಗಿರುತ್ತಾರೆ. ಇದನ್ನು ಪೂರ್ಣವಾಗಿ ತನಿಖೆ ನಡಿಸಿ, ಲಿಂಗರಾಜು, ಸಲ್ಮಾನ್ ಹಾಗೂ ರಿಜ್ವಾನ್ ಎಂಬುವರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ರಾಧಿಕಾ ಜಿ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅದರಲ್ಲಿ ಮೂರು ತಂಡಗಳನ್ನಾಗಿ ಮಾಡಿಕೊಂಡು ಡಕಾಯಿತಿ ಮಾಡಿರುವುದು ಬೆಳಕಿಗೆ ಬಂದಿದ್ದು, ಅವರಲ್ಲಿ ಚಿಕ್ಕಮಗಳೂರಿನ ರಿಜ್ವಾನ್, ಚನ್ನಗಿರಿ ಮೂಲದ ಸಲ್ಮಾನ್ ಹಾಗೂ ಅಜ್ಜಂಪುರ ಮೂಲದ ಲಿಂಗರಾಜು ಎಂಬ ಮೂರು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿ ಆಶ್ರಫ್‍ಆಲಿಯನ್ನು ಬಂಧಿಸಲು ಹೋದಾಗ ಚಿಕ್ಕ ಮಗಳೂರಿನಲ್ಲಿ ಕಾರ್ಯಾಚರಣೆ ನೇತೃತ್ವ ವಹಿಸಿರುವ ಸಿಪಿಐ ಬಾಲಚಂದ್ರನಾಯ್ಕ್ ಸೇರಿದಂತೆ ಪೋಲಿಸರ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದು, ಅದರ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಆಶ್ರಫ್ ಅಲಿ ಅವನನ್ನು ಬಂಧಿಸಲು ಹೋದಾಗ ಬಿಲ್ಲಹಳ್ಳಿಯಲ್ಲಿ ಗ್ರಾಮಸ್ಥರು ವಿರೊಇಧ ವ್ಯಕ್ತಪಡಿಸಿ, ಪೊಲೀಸರ ಮೇಲೆ ಹಲ್ಲೆಯನ್ನು ಮಾಡಿದ್ದಾರೆ. ಈ ವೇಳೆ ಆಶ್ರಫ್ ಅಲಿ ತಪ್ಪಿಸಿ ಕೊಂಡಿದ್ದಾನೆ. ಆದರೂ ಕೂಡ ಪಣ ತೊಟ್ಟ ಸಿಬ್ಬಂದಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು 9 ಜನರ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದ್ದು, ಎಸ್ಪಿ ರಾಧಿಕಾ ಪೋಲಿಸರ ಈ ಕಾರ್ಯಕ್ಕೆ ಶ್ಲಾಘಿಸಿದ್ದಾರೆ. ಪೋಲಿಸರು ಪ್ರಾಣದ ಹಂಗು ತೊರೆದು ಅಡಿಕೆ ಕೃತ್ಯಕ್ಕೆ ಬಳಸಿದ ಕಾರುಗಳು ಮತ್ತು ಅಡಿಕೆ ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿದ್ದು ಈ ಕಾರ್ಯಾಚರಣೆಗೆ ಪೋಲಿಸರಿಗೆ ಬಹುಮಾನವನ್ನು ಘೋಷಿಸಿದ್ದಾರೆ.

Leave a Reply

Your email address will not be published.