ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ರಿಂದ  ಕುಖ್ಯಾತ ಕಳ್ಳರ ಬಂಧನ::ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಶ್ಲಾಘನೆ

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ  ಐನಹಳ್ಳಿಗ್ರಾಮದ ಭಾಗ್ಯಮ್ಮ ಎಂಬುವರ ಮನೆಯ ಬೀಗ ಹೊಡೆದು ಬೀರುವಿನಲ್ಲಿದ್ದ ಸುಮಾರು 3 ಲಕ್ಷ ಬೆಲೆಬಾಳುವ ಬಂಗಾರದ ಆಭರಣಗಳು ಮತ್ತು 70 ಸಾವಿರ ರೂಪಾಯಿ ನಗದು ಹಣ ಕಳವು ಆಗಿರುವ ಬಗ್ಗೆ ದಿನಾಂಕ 18-11-2020 ರಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ.375/2020 ಕ ಲಂ: 454, 457, 380 ಐಪಿಸಿ ರೀ ತ್ಯ ಕೇಸ್ ದಾಖಲಾಗಿತ್ತು.  ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ರಾಧಿಕಾ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹಾನಿಂಗ ಬಿ ನಂದಗಾವಿ ಚಿತ್ರದುರ್ಗ ಉಪವಿಭಾಗದ ಉಪಾದೀಕ್ಷಾಕರಾದ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ಪತ್ತೆಗಾಗಿ ಚಿತ್ರದುರ್ಗ ಗ್ರಾಮಾಂತರ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಯವರಿಗೆ ನಿರ್ದೇಶನ ನೀಡಿದ್ದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ದಿನಾಂಕ 16-12-2020 ರಂದು   ಕುಖ್ಯಾತ ಮನೆಗಳ್ಳತನ ಆರೋಪಿ ಸನಾವುಲ್ಲಾ ತಂದೆ ಖಾದರ್ ಸಾಬ್ 50ವರ್ಷ ಪಲ್ಲಗಟ್ಟ ಗ್ರಾಮ ಜಗಳೂರು ತಾಲೂಕು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿ ಗ್ರಾಮ ಪಂಚಾಯಿತಿ ಚುನಾವಣೆ ಇದ್ದುದರಿಂದ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಂತರ ದಿನಾಂಕ 28-12-2020 ರಂದು ಮತ್ತೆ ಪೊಲೀಸ್ ವಶಕ್ಕೆ ಪಡೆದು ಕೂಲಂಕುಶವಾಗಿ ವಿಚಾರಣೆಗೆ ಒಳಪಡಿಸಲಾಗಿ ಆರೋಪಿ ಸನಾವುಲ್ಲಾ,  ಪಾಲಯ್ಯ, ಸುಭಾನ್ ಸಾಬ್, ಮತ್ತು ದಾದು,  ನಾಲ್ಕು ಜನರು ಸೇರಿಕೊಂಡು ಮನೆಕಳ್ಳತನ ಮತ್ತು ದೇವಸ್ಥಾನಗಳ ಹುಂಡಿಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು ಇದಕ್ಕೆ ಆರೋಪಿ ಸನಾವುಲ್ಲಾ ನ ಹೆಂಡತಿ ಹಸೀನಾ ಬಿ ಸಾತ್ ಕೊಟ್ಟಿರುವುದು ತಿಳಿದುಬಂದಿದ್ದು ಇವರುಗಳು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ಮೊ. ನಂ 375/2020ಕಲಂ: 454, 457, 380  ಐಪಿಸಿ, ತುರುವನೂರು ಪೊಲೀಸ್ ಠಾಣೆ ಮೊ. ನಂ. 122/2020 ಕಲಂ 454, 380 ಐಪಿಸಿ, ಭರಮಸಾಗರ ಪೊಲೀಸ್ ಠಾಣೆ ಮೊ. ನಂ. 427/2017 ಕ ಲಂ:457, 380 ಐಪಿಸಿ ಪ್ರಕರಣಗಳಲ್ಲಿ ಕಳವು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಈತನಿಂದ ಒಟ್ಟು 5,62,000/- ರೂಪಾಯಿ ಬೆಲೆಬಾಳುವ 144 ಗ್ರಾಂ ಬಂಗಾರದ ಆಭರಣಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ನಂ. ಕೆ. ಎ. 17/ಇ ಪಿ -8479 ಮೋಟರ್ ಸೈಕಲ್ ಮತ್ತು ಒಂದು ಕಬ್ಬಿಣದ ರಾಡನ್ನು ವಶಪಡಿಸಿಕೊಳ್ಳಲಾಗಿದೆ.
 ಆರೋಪಿ ಸನಾವುಲ್ಲಾ ಮತ್ತು ಅವನ ತಂಡ ದಾವಣಗೆರೆ ಹಾವೇರಿ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಕಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿರುತ್ತದೆ. ಉಳಿದ ನಾಲ್ಕು ಜನ ಆರೋಪಿಗಳನ್ನು ಪತ್ತೆ ಮಾಡಬೇಕಾಗಿದ್ದು ತನಿಖೆ ಮುಂದುವರೆದಿರುತ್ತದೆ. ಪ್ರಕರಣಗಳನ್ನು ಪತ್ತೆ ಮಾಡಿದ ಚಿತ್ರದುರ್ಗ ಗ್ರಾಮಾಂತರ ವೃತ್ತದ ಪೊಲೀಸ್ ನಿರೀಕ್ಷಕರಾದ ಶ್ರೀ ಬಾಲಚಂದ್ರ ನಾಯಕ್ ಗ್ರಾಮಾಂತರ ಠಾಣೆ ಪಿಎಸ್ಐ ಗಳಾದ ಮಹೇಶಗೌಡ ಯಶೋದಮ್ಮ ಸಿಬ್ಬಂದಿ ಅವರಾದ ಸಂಜಯ್ ರಂಗನಾಥ್ ಅವಿನಾಶ್ ತಿಪ್ಪೇಸ್ವಾಮಿ ರಾಜು ಮತ್ತು ಚಾಲಕ ಪೋಲ ಣ್ಣರೆಡ್ಡಿ ಇವರ ಕಾರ್ಯಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ

Leave a Reply

Your email address will not be published.