ಅಪ್ಪ ತನ್ನ ಮಗಳಿಗೆ ಸಲ್ಯೂಟ್ ಹೊಡೆದ ಹೃದಯಸ್ಪರ್ಶಿ ಪೊಲೀಸ್

ಅಮರಾವತಿ, ಜನವರಿ 04: ಅಪ್ಪ, ಮಗಳು ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮೊದಲ ಬಾರಿ ಕರ್ತವ್ಯದ ಮೇಲೆ ಇಬ್ಬರು ಎದುರಾದ ಸಂದರ್ಭ ಅಪ್ಪ ತನ್ನ ಮಗಳಿಗೆ ಸಲ್ಯೂಟ್ ಹೊಡೆದ ಹೃದಯಸ್ಪರ್ಶಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಂಧ್ರದ ತಿರುಪತಿಯಲ್ಲಿ ಭಾನುವಾರ ಪೊಲೀಸ್ ಇಲಾಖೆ ಸಭೆ “ಇಗ್ನೈಟ್” ಅನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಅಪ್ಪ ಮಗಳು ಎದುರಾಗಿದ್ದಾರೆ. ಇದೇ ಮೊದಲ ಬಾರಿಗೆ ಕರ್ತವ್ಯದ ಮೇಲೆ ಇಬ್ಬರೂ ಭೇಟಿಯಾಗಿದ್ದು, ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಪ್ಪ, ಡಿಎಸ್ ಪಿ ಆಗಿರುವ ಮಗಳಿಗೆ ಸಲ್ಯೂಟ್ ಹೊಡೆದಿದ್ದಾರೆ. ಈ ದೃಶ್ಯ ನೋಡುಗರ ಹೃದಯ ತುಂಬುವಂತೆ ಮಾಡಿತ್ತು.

ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವೈ ಶ್ಯಾಮ ಸುಂದರ್, ಗುಂಟೂರು ಜಿಲ್ಲೆಯ ಡೆಪ್ಯುಟಿ ಸೂಪರಿಂಟೆಂಡೆಂಟ್ ಪೊಲೀಸ್ ಆಗಿ ನಿಯೋಜನೆಗೊಂಡಿರುವ ತಮ್ಮ ಮಗಳು ಯಂದ್ಲೂರು ಜೆಸ್ಸಿ ಪ್ರಶಾಂತಿ ಅವರಿಗೆ ಗೌರವ ಸಮರ್ಪಿಸಿದ್ದು, ನೋಡುಗರಲ್ಲಿ ಹೆಮ್ಮೆ ಮೂಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಶಾಂತಿ, “ತನ್ನ ತಂದೆ ನನಗೆ ಸಟ್ಯೂಟ್ ಮಾಡಿದಾಗ ಇರಿಸುಮುರಿಸಾಯಿತು. ಕರ್ತವ್ಯದ ಮೇಲೆ ಇಬ್ಬರೂ ಎದುರಾದೆವು. ಅಪ್ಪನಿಗೆ ಸಲ್ಯೂಟ್ ಮಾಡಬೇಡಿ ಅಂದೆ. ಆದರೂ ಗೌರವ ಸಮರ್ಪಿಸಿದರು. ನಾನೂ ಅವರಿಗೆ ಸಲ್ಯೂಟ್ ಹೊಡೆದೆ” ಎಂದಿದ್ದಾರೆ.

2018ರಲ್ಲಿ ಇಲಾಖೆ ಸೇರಿರುವ ಪ್ರಶಾಂತಿ ಇಲಾಖೆ ಸೇರಿದಾಗಿನಿಂದಲೂ ಅಪ್ಪನನ್ನು ಕರ್ತವ್ಯದಲ್ಲಿ ಭೇಟಿಯಾಗಿದ್ದು ಇದೇ ಮೊದಲು. ನನ್ನ ತಂದೆಯೇ ನನಗೆ ದೊಡ್ಡ ಸ್ಫೂರ್ತಿ. ಜನರ ಸೇವೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡುತ್ತಾ ಬಂದ ತಂದೆಯನ್ನು ನೋಡಿ ಬೆಳೆದವಳು ನಾನು. ತನ್ನ ಕೈಯಿಂದ ಆಗುವ ಸಹಾಯವನ್ನು ಆಗಿನಿಂದ ಮಾಡುತ್ತಾ ಬಂದಿದ್ದಾರೆ. ಅದೇ ಕಾರಣ ನಾನು ಇಲಾಖೆಗೆ ಸೇರಲು ಸ್ಫೂರ್ತಿ” ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published.