ನಿತ್ಯವಾಣಿ,ಚಿತ್ರದುರ್ಗ,(ನ.12) : ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಿಬ್ಬಂದಿಗಳಿಗೆ ಜಿಲ್ಲಾ ಆರೋಗ್ಯ ಕಾರ್ಯಗಾರ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹೃದಯಾಘಾತದ ಬಗ್ಗೆ ಸಂಪೂರ್ಣವಾಗಿ ನುರಿತ ವೈದ್ಯರುಗಳು ಮಾಹಿತಿಯನ್ನು ನೀಡಿದರು, ಮೊನ್ನೆ ನಡೆದ ಬಾರಿ ದುರಂತದ ಸಾವಾದ ಡಿವೈಎಸ್ಪಿ ರಮೇಶ್ ರವರ ಅವರ ಆತ್ಮ ಶಾಂತಿಗೆ ಎದ್ದುನಿಂತು ಕೆಲವು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು,
ವೀಡಿಯೊಸ್
ಈ ಸಾವು ಹಿನ್ನೆಲೆ ಯಲ್ಲಿ ಇಲಾಖೆಯ ಪ್ರತಿಯೊಬ್ಬರು ಕೂಡ ಈ ಸಂಬಂಧಿ ಕಾಯಿಲೆಗೆ ಮುಂಚಿತವಾಗಿ ಪ್ರಥಮ ಚಿಕಿತ್ಸೆ ನಾವು ಹೇಗೆ ಮಾಡಬೇಕು ಎಂದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು, ಮತ್ತು ಧ್ಯಾನದಿಂದ ಕಾಯಿಲೆಗಳನ್ನು ಹೇಗೆ ದೂರ ಇಡಬಹುದು ಎಂದು ಭಾಗವಹಿಸಿದ್ದ ಎಲ್ಲರನ್ನು ಕೂಡ ಧ್ಯಾನದಿಂದ ಕೆಲವು ನಿಮಿಷಗಳವರೆಗೆ ಮೌನ ಗೊಳಿಸಿದರು, ಈ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ರಾಧಿಕಾ ರವರು ಕಾರ್ಯಕ್ರಮವನ್ನು ಏರ್ಪಡಿಸಿ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಮಹಾನಿಂಗ ನಂದಗಾವಿ, ಡಾಕ್ಟರ್ ಮಂಜುನಾಥ್ ಹಾಗೂ ಇನ್ನಿತರ ವೈದ್ಯರುಗಳು, ಮತ್ತು ಪೊಲೀಸ್ ಇಲಾಖೆಯ ಆಫೀಸರ್ ಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು