ಹಿರಿಯೂರು ನಗರ ಪೊಲೀಸರಿಂದ ಕುರಿ ಕಳ್ಳರ ಬಂಧನ

 

ಹಿರಿಯೂರು ಫೆ. 23

ನಗರದ ಸಿದ್ದನಾಯಕ ಸರ್ಕಲ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಲೋಕೇಶ್ ತಂದೆ ಮಾರುತಿ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗಿ ಸದರಿಯವರು ಚಳ್ಳಕರೆ ತಾಲ್ಲೂಕಿನ ಗೌರಸಮುದ್ರ ಗ್ರಾಮ, ದಾಸರಗಿಡ್ಡಯ್ಯನಹಟ್ಟಿ, ತಳಕು ಗ್ರಾಮಗಳಲ್ಲಿ ಹಾಗೂ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಕುರಿ-ಮೇಕೆಗಳನ್ನು ಕಳ್ಳತನ ಮಾಡಿದ್ದು ಈ ಬಗ್ಗೆ ಹಿರಿಯೂರು ನಗರ ಠಾಣೆ ಪ್ರಕರಣ ದಾಖಲಾಗಿತ್ತು.

ಹಿರಿಯೂರು ನಗರ ಠಾಣೆ ಪಿ.ಎಸ್.ಐ. ಶ್ರೀಮತಿ ಅನಸೂಯರವರು ತನಿಖೆ ಮುಂದುವರೆಸಿ ಆರೋಪಿತರು ಚಳ್ಳಕರೆ ತಾಲ್ಲೂಕಿನ ಗೌರಸಮುದ್ರ ಗ್ರಾಮ, ದಾಸರಗಿಡ್ಡಯ್ಯನಹಟ್ಟಿ, ತಳಕು ಗ್ರಾಮಗಳಲ್ಲಿ ಹಾಗೂ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಗ್ರಾಮಗಳಲ್ಲಿ ಕಳುವು ಮಾಡಿದ್ದ 80,000/- ಮೌಲ್ಯದ 11 ಕುರಿ-ಮೇಕೆಗಳನ್ನು ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ ರೂ. 3,00,000/- ಬೆಲೆಬಾಳುವ ಸ್ವಿಪ್ಟ್ ಡಿಸೈರ್ ಕಾರನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ರಾಧಿಕಾ.ಜಿ. ಐ.ಪಿ.ಎಸ್. ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ.ಮಹಾಲಿಂಗ ಬಿ. ನಂದಗಾವಿ ಹಾಗೂ ಶ್ರೀ.ರೋಷನ್ ಜಮೀರ್, ಪೊಲೀಸ್ ಉಪಾಧೀಕ್ಷಕರು, ಹಿರಿಯೂರು ಉಪವಿಭಾಗ, ರವರ ಮಾರ್ಗದರ್ಶನದಲ್ಲಿ ಹಿರಿಯೂರು ನಗರ ಪೆÇಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ.ವಿ.ಎಸ್.ಶಿವಕುಮಾರ್ ರವರು ತಮ್ಮ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯÀ ಎ.ಎಸ್.ಐ. ಅಸ್ಲಾಂಬಾಬಾ ಪೆÇಲೀಸ್ ಹೆಡ್ ಕಾನ್ಸ್ಟೇಬಲ್‍ಗಳಾದ ಸುರೇಶ್ ನಾಯ್ಕ್, ಸಿದ್ದಲಿಂಗೇಶ್ವರ, ವಸಂತಕುಮಾರ್ ಭಾಗವಹಿಸಿದ್ದರು. ಮೇಲ್ಕಂಡ ಪತ್ತೆ ಕಾರ್ಯವನ್ನು ಪೊಲೀಸ್ ಅಧೀಕ್ಷಕರು  ಶ್ಲಾಘಿಸಿರುತ್ತಾರೆ.

Leave a Reply

Your email address will not be published.