ಸೈಕಲ್‌ನಲ್ಲೇ ಕಚೇರಿಗೆ ಹೋಗಿ ಮಾದರಿಯಾದ ಎಸಿಪಿ ಸಂದೇಶ್‌ಕುಮಾರ್‌ ವರ್ಗ

ಮೈಸೂರು: 17 ತಿಂಗಳು ಮೈಸೂರಿನಲ್ಲಿ ಸೇವೆ ಸಲ್ಲಿಸಿ ಜನಸ್ನೇಹಿ ಪೊಲೀಸ್‌ ಎಂದೇ ಖ್ಯಾತರಾಗಿದ್ದ ಸಹಾಯಕ ಪೊಲೀಸ್‌ ಆಯುಕ್ತ (ಸಂಚಾರ) ಎಸ್‌.ಎನ್‌. ಸಂದೇಶ್‌ ಕುಮಾರ್‌ ಅವರು ವರ್ಗಾವಣೆಗೊಂಡಿದ್ದಾರೆ.

ಸಂದೇಶ್‌ ಕುಮಾರ್‌ ಅವರು ಶ್ರೀರಂಗಪಟ್ಟಣದ ಉಪ ವಿಭಾಗ, ಮಂಡ್ಯ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ.

ಫಿಟ್‌ನೆಸ್‌ ಪ್ರಿಯರಾಗಿದ್ದ ಸಂದೇಶ್‌ ಕುಮಾರ್‌ ಅವರು ತಮ್ಮ ಕಚೇರಿಗೆ ಸೈಕಲ್‌ನಲ್ಲೇ ಹೋಗಿ ಬರುತ್ತಿದ್ದರು.

ಪೆಟ್ರೋಲ್‌ ಬೆಲೆ ಏರಿಕೆಯಾಗಿರುವ ಸಮಯದಲ್ಲಿ ಸೈಕಲ್‌ ಬಳಸುವಂತೆ ಯುವ ಜನರಿಗೆ ಅವರು ಸಂದೇಶ ಕೊಟ್ಟರು. ಸಂದೇಶ್‌ ಕುಮಾರ್‌ ಅವರು ಉತ್ತಮ ಗಾಯಕರೂ ಆಗಿದ್ದರು.

ನಗರ ಸಂಚಾರ ವಿಭಾಗದಲ್ಲಿ ತಂತ್ರಜ್ಞಾನ ಬಳಕೆ ಬಗ್ಗೆ ಅವರು ಹೆಚ್ಚು ಗಮನ ನೀಡಿದರು. ಇಂಟರ್‌ಸೆಪ್ಟರ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು.

ಸಂಚಾರ ಪೊಲೀಸರು ಟ್ಯಾಬ್‌ ಬಳಸುವ ಮೂಲಕ ಸಂಚಾರ ಉಲ್ಲಂಘನೆಯನ್ನು ನೇರವಾಗಿ ಸರ್ವರ್‌ಗೆ ಅಪ್‌ಲೋಡ್‌ ಮಾಡುವಂತೆ ವ್ಯವಸ್ಥೆ ಜಾರಿಗೆ ತಂದಿದ್ದರು.

Leave a Reply

Your email address will not be published.