ನಿತ್ಯವಾಣಿ, ಚಿತ್ರದುರ್ಗ,(ಸೆ,11) : ಜಿಲ್ಲಾ ವಕೀಲರ ಸಂಘ ಜಿಲ್ಲಾ ಕಾನೂನು ಸೇವಾ ಪ್ರಾದಿಕಾರ ತಾಲ್ಲೂಕು ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವ ಮತ್ತು ನೆರವು ಕಾರ್ಯಕ್ರಮವನ್ನು ದೊಡ್ಡ ಸಿದ್ದ ವನಹಳ್ಳಿ ಜೆ ಎನ್ ಕೋಟಿ ಇಂಗದಾಳ್ ಗ್ರಾಮಗಳಲ್ಲಿ ಏರ್ಪಡಿಸಲಾಗಿತ್ತು
ಕಾರ್ಯಕ್ರಮವನ್ನು ಜಿಲ್ಲಾ ವಕೀಲರ ಸಂಘದ ಅದ್ಯಕ್ಷರಾದ ಸಿ ಶಿವುಯಾದವ್ ಉದ್ಘಾಟನೆ ಮಾಡಿದರು
ಅವರು ಮಾತನಾಡಿ ಜನಸಾಮಾನ್ಯರಿಗೆ ಮತ್ತು ರೈತನಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಉಂಟಾಗುವ ತೊಂದರೆ ಮತ್ತು ಅವುಗಳ ನಿವಾರಣೆ ಬಗ್ಗೆ ಮಾಹಿತಿ ನೀಡಿದು
ಜೊತೆಗೆ ಪೊಲೀಸ್ ಠಾಣೆಗಳು ಇರುವುದು ಜನಸಾಮಾನ್ಯರ ರಕ್ಷಣೆಗಾಗಿ ಅವರು ಜನಸಾಮಾನ್ಯರ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಪೊಲೀಸ್ ಠಾಣೆಯಲ್ಲಿ ಅರೋಪಿತರ ಮೇಲೆ ದಬ್ಬಾಳಿಕೆ ಮತ್ತು ಹೊಡೆಯುವುದು ಬಡಿಯುವುದು ಮತ್ತು ಕೆಟ್ಟ ಬಾಷೆಯಲ್ಲಿ ಬೈಯುವುದು ಮಾಡಬಾರದು ಅದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಜಿ ಭವಾನಿ ನಿರ್ಮಲ ವಿದ್ಯಾರವರು ಮತ್ತು ಸಿದ್ದವ್ವನಹಳ್ಳಿ ಗ್ರಾಮ ಪಂಚಾಯತ್ ಅದ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಜೆ ಎನ್ ಕೋಟಿ ಗ್ರಾಮ ಪಂಚಾಯತಿ ಅದ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಇಂಗಳದಾಳ್ ಪಂಚಾಯತ ಅದ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ದಯಾನಂದ ಪ್ರದಾನ ಕಾರ್ಯದರ್ಶಿ ಮೂರ್ತಿ ವಕೀಲರಾದ ವೀರಭದ್ರಪ್ಪ ಚಂದ್ರಮೌಳಿ ಸಕ್ರಯ್ಯ
ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯ ಕರ್ತರು ನೂರಾರು ಜನ ಗ್ರಾಮದ ಗ್ರಾಮಸ್ಥರು ಮಹಿಳೆಯರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.