ನಿತ್ಯವಾಣಿ, ಚಿತ್ರದುರ್ಗ,( ಜೂ. 30) : ಪರಿಸರವನ್ನು ಉಳಿಸಿ ಬೆಳಸುವುದು ಎಲ್ಲರ ಕರ್ತವ್ಯವಾದಾಗ ಮಾತ್ರ ಉತ್ತಮವಾದ ಪರಿಸರ ನಿರ್ಮಾಣವಾಗಲು ಸಾಧ್ಯವಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.
ಭಾರತೀಯ ಜನತಾ ಪಾರ್ಟಿವತಿಯಿಂದ ಪಂಡಿತ್ ಶ್ಯಾಮ ಪ್ರಕಾಶ್ ಯವರ ಸ್ಮರಣಾರ್ಥ ಕಳೆದ 23 ರಿಂದ ಪ್ರಾರಂಭವಾಗಿರುವ ವೃಕ್ಷಾರೋಪಣ ಕಾರ್ಯಕ್ರಮದ ಅಂಗವಾಗಿ ನಗರದ ಅಕ್ಕಮಹಾದೇವಿ ಸಮಾಜದ ಆವರಣದಲ್ಲಿ ಹಮ್ಮಿಕೊಂಡಿರುವ ಬೀಜ ತಯಾರಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಾತನಾಡಿದರು.
ಇತ್ತೀಚೀನ ದಿನದಲ್ಲಿ ಅಭೀವೃದ್ದಿ ನೆಪದಲ್ಲಿ ಹಲವಾರು ವರ್ಷಗಳಿಂದ ಬೆಳದಿರುವ ಮರಗಳನ್ನು ಕಡಿಯಲಾಗಿದೆ, ಅ ಜಾಗದಲ್ಲಿ ಬೇರೆ ಸಸಿಗಳನ್ನು ನೆಡುವುದರ ಮೂಲಕ ಮರಗಳನ್ನು ಬೆಳಸುವುದರೊಂದಿಗೆ ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕಿದೆ ಎಂದ ಸಂಸದ ನಾರಾಯಣಸ್ವಾಮಿ, ಅರಣ್ಯವನ್ನು ಬೆಳಸುವ ನಿಟ್ಟಿನಲ್ಲಿ ಭಾಜಪದಿಂದ ಬೀಜ ತಯಾರಿಕೆಯನ್ನು ಮಾಡಲಾಗುತ್ತಿದೆ ಮಣ್ಣಿನ ಒಳಗಡೆ ವಿವಿಧ ಹಣ್ಣಿನ ಬೀಜವನ್ನು ಇಡುವುದರ ಮೂಲಕ ಬಾಲ್ ಗಳನ್ನು ತಯಾರು ಮಾಡಿ ಒಣಗಿಸಿ ಮುಂದಿನ ದಿನದಲ್ಲಿ ಅವುಗಳನ್ನು ನಗರದ ವಿವಿಧೆಡೆಗಳನ್ನು ಅವುಗಳನ್ನು ಹಾಕುವುದರ ಮೂಲಕ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಕಾರಣರಾಗಲಿದ್ದೇವೆ ಎಂದು ತಿಳಿಸಿದರು.
ಹೊಂಗೆ, ಹಲಸಿ, ನೇರಳೆ ಸೇರಿದಂತೆ ಸುಮಾರು 20 ಸಾವಿರ ವಿವಿಧ ಹಣ್ಣಿನ ಬೀಜದ ಉಂಡೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದು ಪೂರ್ಣವಾಗಿ ಬಾಜಪದ ಕಾರ್ಯಕರ್ತರ ಪರಿಶ್ರಮವಾಗಿದೆ, ಸ್ವಯಂ ಪ್ರೇರಿತರಾಗಿ ಪಕ್ಷದ ವಿವಿಧ ಘಟಕದ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿ ಮಣ್ಣಿನ ಬೀಜದ ಉಂಡೆಗಳನ್ನು ತಯಾರು ಮಾಡಿದ್ದಾರೆ. ಎಂದು ಸಂಸದ ನಾರಾಯಣಸ್ವಾಮಿ ಹೇಳಿದರು.
ಬಾಜದ ಜಿಲ್ಲಾಧ್ಯಕ್ಷ ಮುರುಳಿ ಮಾತನಾಡಿ, ಭಾಜಪದವತಿಯಿಂದ ತಯಾರು ಮಾಡಲಾದ ಮಣ್ಣಿನ ಬೀಜದ ಉಂಡೆಗಳನ್ನು ಜು.06ರಂದು ನಗರದ ಜೋಗಿಮಟ್ಟಿ ಅರಣ್ಯ ಪ್ರದೇಶ, ಚಂದ್ರವಳ್ಳಿ ಮತ್ತು ಆಡು ಮಲ್ಲೇಶ್ವರದ ವಿವಿಧ ಭಾಗಗಳಲ್ಲಿ ಹಾಕುವುದರ ಮೂಲಕ ಪರಿಸರ ಹೆಚ್ಚಳಕ್ಕೆ ನೆರವಾಗಲಿದೆ. ಅಂದಿನ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಮುಖಂಡರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಅರಣ್ಯ ಸಂಪತ್ತ್‍ನ್ನು ಹೆಚ್ಚಳ ಮಾಡಬೇಕೆಂದು ಕಾರ್ಯಕ್ರಮವನ್ನು ರೂಪಿಸಿದ್ದು ಇದಕ್ಕಾಗಿ 21 ಜನರ ತಂಡವನ್ನು ರಚನೆ ಮಾಡಿದ್ದು, ಅದು ಇದರ ಹೊಣೆಯನ್ನು ಹೊತ್ತಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಬೀಜದ ಉಂಡೆಗಳನ್ನು ತಯಾರು ಮಾಡಲಾಗುತ್ತಿದೆ ಎಂದು ಮುರುಳಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅನಿತ್. ಜಿ.ಸಿ. ಮುಖಂಡರಾದ ರಘುಚಂದನ್, ಮಹಿಳಾ ಘಟಕದ ಶೈಲಜಾ ರೆಡ್ಡಿ ನಗರಾಭೀವೃದ್ದಿ ಪ್ರಾಧಿಕಾರದ ಸದಸ್ಯೆ ರೇಖಾ, ನಗರಸಭಾ ಸದಸ್ಯ ಶಶಿಧರ್, ವಕ್ತಾರ ನಾಗರಾಜ್ ಬೇದ್ರೇ, ಶಿವಣ್ಣಾಚಾರ್, ಗೀರೀಶ್, ವೆಂಕಟೇಶ್ ಯಾದವ್, ಕವನ, ಯಶವಂತ್, ನವೀನ್ ನಾಗರಾಜ್,ಸೇರಿದಂತೆ ಇತರರು ಭಾಗವಹಿಸಿದ್ದರು.