ಇಂದ್ರಜಿತ್ ಲಂಕೇಶ್ ಅಕ್ಕ ಕೂಡ ಡ್ರಗ್ ಅಡಿಕ್ಟ್ : ಪ್ರಮೋದ್ ಮುತಾಲಿಕ್

ಹಾವೇರಿ : ಸ್ಯಾಂಡಲ್‌ವುಡ್ ನಟ, ನಟಿಯರು ಡ್ರಗ್ಸ್ ಜಾಲದಾಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.ಹಾವೇರಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಇಂದ್ರಜಿತ್ ಲಂಕೇಶ್ ದೊಡ್ಡ ಪ್ರಮಾಣದಲ್ಲಿ ಹಿರೋ ಆಗಲು ಹೊರಟಿದ್ದಾರೆ. ನಿಮ್ಮ ಅಕ್ಕ ಗೌರಿ ಲಂಕೇಶ್ ಕೂಡ ಡ್ರಗ್ಸ್ ಅಡಿಕ್ಟ್ ಆಗಿದ್ದರು, ಆಗ ನಿವೇಲ್ಲಿ ಹೋಗಿದ್ರಿ ? ಆಗ ನೀವು ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಸರ್ಜಾ ಕುಟುಂಬದವರು ಶುದ್ಧವಾಗಿದ್ದಾರೆ, ಅವರನ್ನ ಯಾಕೆ ಡ್ರಗ್ಸ್ ಜಾಲಕ್ಕೆ ಲಿಂಕ್ ಮಾಡ್ತಿರಾ ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.ಡ್ರಗ್ ಮಾಫಿಯಾದಲ್ಲಿ ಪೊಲೀಸರು ನಮ್ಮ ಕಡೆಯಿಂದ ಆಗಲ್ಲ ಎಂದು ಹೇಳಲಿ ನಾನು ಮಾಡಿ ತೋರಿಸುತ್ತೇನೆ ಎಂದು ಪೊಲೀಸ್ ಇಲಾಖೆಯಿಂದ ಸವಾಲ್ ಹಾಕಿದ್ದಾರೆ. ಗೃಹ ಸಚಿವರು ಹಾಗು ಸಿಟಿ ರವಿ ಡ್ರಗ್ಸ್ ಜಾಲವನ್ನ ಬೇರು ಸಮೇತ ಕಿತ್ತುಹಾಕುತ್ತೇವೆ ಎಂದು ಹೇಳಿದ್ದಾರೆ. ಈಗ ನಾಟಕವಾಡಿ, ಸ್ವಲ್ಪದಿನದಲ್ಲಿ ಎಲ್ಲಾ ಮರೆತು ಹೋಗುತ್ತಾರೆ ಎಂದಿದ್ದಾರೆ.

Leave a Reply

Your email address will not be published.