ಚಳ್ಳಕೆರೆ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ಹಿಂಪಡೇಯಬೇಕೆಂದು ದೆಹಲಿಯ ವಿವಿಧ ಗಡಿಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ರೈತರು ಪ್ರತಿಭಟನೆ ನೆಡೆಸುತ್ತಿದ್ದು ಈ ಮಧ್ಯೆ ರೈತರಿಗೆ ಸರ್ಕಾರವು ದ್ರೋಹ ಬಗೆದಿರುವುದನ್ನು ಬೆಂಬಲಿಸಿ ಕರ್ನಾಟಕರಾಜ ಹಸಿರುಸೇನೆ ರೈತ ಸಂಘದ ವತಿಯಿಂದ ಚಳ್ಳಕೆರೆ ನೆಹರು ವೃತ್ತದಲ್ಲಿ ರಸ್ತೆ ತಡೆ ನೆಡಸಿ ಪತ್ರಿಭಟನೆಯನ್ನು ನೆಡಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕರಾಜ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ ಆದರೆ ರೈತರ ಬೆನ್ನು ಮುರುಯುವಂತೆ ಮಾಡುತ್ತಾರೆ ರೈತ ಬೆಳಬೇಕು ನಾಡಿನ ಜನ ತಿನ್ನಬೇಕು,ಆಹಾರ ಬೆಳಯದಿದ್ದರೆ ಮಣ್ಣು ತಿನ್ನಬೇಕಾಗುತ್ತದೆ. ಆಹಾರ ಬೆಳೆಯಬೇಕು ವಿನಹ ತಯಾರು ಮಾಡುವುದಕ್ಕೆ ಹಾಗುವುದಿಲ್ಲಾ ಕೇಂದ್ರ ಸರ್ಕಾರ ರೈತ ವಿರೋದ ನೀತಿಯನ್ನು ಅನುಸರಿಸುತ್ತಿದೆ.ದೇಶದಲ್ಲಿ ಕ್ರೀಡೆ,ಸಿನಿಮಾ ಇತಂಹವುಗಳಿಗೆ ಪ್ರೋತ್ಸಹಾ ನೀಡಿ ರೈತರು ಪ್ರತಿಭಟನೆ ನೆಡೆಸಿದರೆ ಪೋಲೀಸರಿಂದ ದೌರ್ಜನ್ಯ ಮಾಡಿಸುತ್ತಾರೆ ಇದರಿಂದ ರೈತರಿಗೆ ಹಿನ್ನೆಡೆಯಾಗುತ್ತದೆ ಇದೆ ರೀತಿ ಮುಂದುವರೇದರೆ ರೈತರು ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುತ್ತಿದ್ದೆ ಎಂದರ .
ಕೆಲಕಾಲ ನೆಹರು ರಸ್ತೆ ತಡೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತು ಸಂಚಾರಕ್ಕೆ ಅಡಚಣೆ ಉಂಟಾಯಿತು ಬಳಿಕ ಸ್ಥಳಕ್ಕೆ ಧಾವಿಸಿ ಪೋಲೀಸ್ ಪ್ರತಿಭಟನೆನಿರತ ರೈತರನ್ನು ವಶಕ್ಕೆ ಪೆಡದು ಬಿಡುಗಡೆ ಮಾಡಿದರು.
ಈ ಸಮಯದಲ್ಲಿ ಕರ್ನಾಟಕರಾಜ್ಯ ಹಸಿರುಸೇನೆ ರೈತ ಸಂಘದ ವತಿಯಿಂದ ಅಧ್ಯಕ್ಷ ಶ್ರೀಕಂಠ ಮಾಜಿ ಅಧ್ಯಕ್ಷ ಚೆನ್ನಕೇಶವ,ಸಂಘ ಕಾರ್ಯದರ್ಶಿ ಯರ್ರಸ್ವಾಮಿ ಉಪಾಧ್ಯಕ್ಷರಾದರಾಜಣ್ಣ,ತಿಪ್ಪೇಸ್ವಾಮಿ,ತಾಲ್ಲೂಕು ಕಾರ್ಯದರ್ಶಿ ಬಸವರಾಜ,ಬುಡ್ನಹಟ್ಟಿತಿಪ್ಪೇಸ್ವಾಮಿ,ಗೋವಿಂದಪ್ಪ,ತಿಪ್ಪೇಸ್ವಾಮಿ ಮಹಾಲಿಂಗಪ್ಪ ತಾಲ್ಲೂಕು ಮಹಿಳಾ ಸಂಘದಸಂಚಾಲಕಿ ಲಕ್ಷ್ಮಕ್ಕ,ಮಲ್ಲಿಕಾರ್ಜನ್ ವಿರೇಂದ್ರ , ಬೋಮ್ಮಣ್ಣ, ವೆಂಕಟೇಶ, ಏಕಾಂತರೆಡ್ಡಿ, ತಾಲ್ಲೂಕಿನ ಇತರ ರೈತರಿದ್ದರು.
ಪೊಟೋ: ನಗರದ ನೆಹರು ವೃತ್ತದಲ್ಲಿ ಕರ್ನಾಟಕ ರಾಜ್ಯ ಹಸಿರು ಸೇನೆ ವತಿಯಿಂದ ಕೇಂದ್ರ ಸರ್ಕಾರ ವಿರುದ್ದ ಕೆಲಕಾಲ ರಸ್ತೆ ತಡೆ ಮಾಡಿ ಪ್ರತಿಭಟಕಾರರನ್ನು ಚಳ್ಳಕೆರೆ ಪೋಲೀಸ್ ವಶಕ್ಕೆ ಪೆಡೆದರು.