ರಾಷ್ಟ್ರೀಯ ಪೌಷ್ಟಿಕ ಆಹಾರ ಅಭಿಯಾನ

ನಿತ್ಯವಾಣಿ,ಚಿತ್ರದುರ್ಗ, (ಸೆ.08) : ಅರೋಗ್ಯ ಇಲಾಖೆ ಮತ್ತು ಚಿತ್ರದುರ್ಗ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ,
ದೇಶದಾದ್ಯಂತ ಇದೇ ಸೆಪ್ಟೆಂಬರ್ ಒಂದರಿಂದ ಆಚರಿಸಲಾಗುತ್ತಿರುವರ ರಾಷ್ಟ್ರೀಯ ಪೌಷ್ಟಿಕ ಆಹಾರ ಮಾಸಾಚರಣೆ ಅಂಗವಾಗಿ ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಾಸಲಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಕುರಿತು ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನೀರಿಕ್ಷಣಾಧಿಕಾರಿ ಮಹೇಶ ಡಿ. ಮಾತನಾಡಿ ” ಪ್ರಾಥಮಿಕ ಅರೋಗ್ಯ ಕೇಂದ್ರ ಬೆಳಗಟ್ಟ ವ್ಯಾಪಿಯ 14 ಹಳ್ಳಿಯ 21 ಅಂಗನವಾಡಿ ಕೇಂದ್ರಗಳಲ್ಲಿ ಸಮುದಾಯವನ್ನು ತೊಡಗಿಸಿಕೊಂಡು ಜಾಥ, ಸ್ವಚ್ಚತಾ ಕಾರ್ಯಕ್ರಮ, ಪೌಷ್ಟಿಕಾಹಾರ ಪ್ರಾತ್ಯಕ್ಷಿಕೆ, ಅಹಾರದ ಕಿಟ್ ವಿತರಣೆ, ಲಸಿಕಾ , ಎದೆ ಹಾಲಿನ ಮಹತ್ವ, ಗರ್ಭಿಣಿ ಬಾಣಂತಿ ಅರೈಕೆ, ಅಪೌಷ್ಟಿಕತೆಯ ಮಕ್ಕಳನ್ನು ಗುರುತಿಸಿ, ಅವರ ಉನ್ನತ ಚಿಕಿತ್ಸೆಗಾಗಿ ಜಿಲ್ಲಾ ಪೌಷ್ಟಿಕ ಪುನಶ್ಚೇತನ ಕೇಂದ್ರಗಳಿಗೆ ನಿರ್ದೆಶಿಸಿ ಮಕ್ಕಳ ಅಪೌಷ್ಟಿಕತೆ ನಿವಾರಿಸುವುದು, ಈ ಎಲ್ಲಾ ಅರೋಗ್ಯ ಕಾರ್ಯಕ್ರಮಗಳಿಂದ ತಾಯಿಮರಣ ಮತ್ತು ಶಿಶು ಮರಣ ನಿಯಂತ್ರಿಸಲು ಪ್ರೋತ್ಸಾಹಿಸುವುದು, ಒಂದು ತಿಂಗಳಿನ 4 ವಾರಗಳಲ್ಲಿ ವಾರಕ್ಕೊಂದು ಮಾಹಿತಿ ಶಿಕ್ಷಣ ಸಂವಾಹನೆ ನೀಡುವ ಮೂಲಕ ಜನ ಜಾಗೃತಿ ಮೂಡಿಸುವುದು ಪೋಷಣ್ ಅಭಿಯಾನದ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ವಿನೋದಮ್ಮ ಅವರು “5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟುವ ಉದ್ದೇಶದಿಂದ  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪೌಷ್ಟಿಕ ಆಹಾರನಡೆಯಲಿವೆ (ಪೋಷಣ್) ಮಾಸಾಚರಣೆ’ ಅಭಿಯಾನ ಜಿಲ್ಲೆಯಲ್ಲಿ ಸೆಪ್ಟೆಂಬರ್ 30ರವರೆಗೆ ನಡೆಯಲಿದೆ ಗರ್ಭಿಣಿ ಹಾಗೂ ಬಾಣಂತಿ ಸ್ತ್ರೀಯರು ಇದರಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದರು.
ಇದೇ ಸಂದರ್ಭದಲ್ಲಿ ಅಹಾರ ಪದಾರ್ಥಗಳನ್ನು ಪ್ರದರ್ಶಿಸಲಾಯಿತು. ಅಂಗನವಾಡಿ ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಅಂಜಿನಮ್ಮ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಹೇಮಲತಾ, ಬೋರಮ್ಮ, ಗ್ರಾಮಸ್ಥರು, ಹದಿಹರೆಯದವರು, ಗರ್ಭಿಣಿ, ಬಾಣಂತಿಯರು ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published.