ನಿತ್ಯವಾಣಿ,ಭರಮಸಾಗರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ. ಟ್ರಸ್ಟ್ ಸಿರಿಗೆರೆ ತಾಲೂಕಿನ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಜ್ಞಾನ ವಿಕಾಸ ಕೇಂದ್ರ ಹಾಗೂ ಮಲ್ಲಿಗೆ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಪರಿಸರಸ್ನೇಹಿ ಬಟ್ಟೆ ಬ್ಯಾಗ್ ತಯಾರಿ ಯ 10 ದಿನದ ತರಬೇತಿಯನ್ನು ಹಮ್ಮಿಕೊಂಡಿದ್ದು ಹತ್ತು ದಿನಗಳ ಅವಧಿಯಲ್ಲಿ 25 ಜನ ಸದಸ್ಯರು ಉತ್ತಮವಾದ ಬಟ್ಟೆ ಬ್ಯಾಗ್ ತಯಾರಿಯನ್ನು ಕಲಿತುಕೊಂಡಿದು ದಿನಾಂಕ 11/3/2022 ರಂದು ಸೃಜನಶೀಲ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಸಿರಿಗೆರೆ ತಾಲೂಕಿನ ಯೋಜನಾಧಿಕಾರಿಗಳಾದ ಪ್ರವೀಣ ಅವರು ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮ ಒಂದು ಅಮ್ಮನವರ ಕನಸಿನ ಕೂಸು ಇದನ್ನು ಎಲ್ಲಾ ಸದಸ್ಯರು ತಿಳಿದುಕೊಂಡು ಜ್ಞಾನ ವಿಕಾಸ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಹಾಗೂ ಇಂದಿನ 10 ದಿನದಲ್ಲಿ ಎಲ್ಲಾ ಸದಸ್ಯರು ಉತ್ತಮವಾದ ತಯಾರಿಯನ್ನು ಮಾಡಿದಿರಾ ಇದನ್ನು ಇವತ್ತು ಒಂದು ದಿನದ ಮಟ್ಟಿಗೆ ಕಲಿತು ಮಾರನೆಯದಿನ ಮರೆತುಹೋದ ಹೋಗುವಂತಾಗಬಾರದು ಎಲ್ಲರೂ ಒಳ್ಳೆಯ ಒಂದು ಸಹೋದ್ಯೋಗಿಗೆ ಪ್ರೇರಣೆಯಾಗುವಂತಹ ಉದ್ಯೋಗವನ್ನು ಮಾಡಿ ಎಂದು ಮಾತನಾಡಿದರು ಕಾರ್ಯಕ್ರಮದಲ್ಲಿ ಶಿವಯೋಗಿ, ಸುರೇಶ್ ,ರುದ್ರೇಶ್ ,ಶಾರದ, ರಾಧಾ ,ತಿಪ್ಪೇಸ್ವಾಮಿ ,ಕಲ್ಲೇಶ್, ಸುಬ್ರಮಣ್ಯ, ಶಿವಲೀಲಾ, ಸ್ಥಳೀಯ ಸೇವಾ ಪ್ರತಿನಿಧಿಗಳು ಹಾಗೂ ಸದಸ್ಯರು ಇದ್ದರು .