ನಿತ್ಯವಾಣಿ,ಚಿತ್ರದುರ್ಗ,(ಡಿ.22) : ವಿಶ್ವಗುರುಬಸವಣ್ಣನವರ ಪೋಟೋಗೆ ಸಗಣಿ ಬಳಿದು ಅವಮಾನ ಮಾಡಿರುವ ಘಟನೆ ಖಂಡಿಸಿ ಚಿತ್ರದುರ್ಗದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ಮಾಡಿ, ಅವರನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ದೇಶಭಕ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿರುವ ಎಂಇಎಸ್ ಮತ್ತು ಶಿವಸೇನೆ ಹೇಡಿಗಳ ಕೃತ್ಯದ ಬೆನ್ನಲ್ಲೆ ವಿಶ್ವಗುರು ಬಸವಣ್ಣನವರ ಪೋಟೋಗೆ ಸಗಣಿ ಬಳಿದು ಅವಮಾನ ಮಾಡಿರುವುದು ಅತ್ಯಂತ ಬೇಸರ ಸಂಗತಿ ಎಂದು ಆಕ್ರೋಶ ಹೊರಹಾಕಿದರು. ವಿಡಿಯೋಸ್
ಚಿತ್ರದುರ್ಗ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಗೆ ಪ್ರವಾಸಿ ಮಂದಿರದಿAದ ಆಗಮಿಸಿ ಡಿಸಿಗೆ ಮನವಿ ಸಲ್ಲಿಸಿದರು. ಎಂಇಎಸ್ ಮತ್ತು ಶಿವಸೇನೆ ಪುಂಡರನ್ನು ಮಟ್ಟಹಾಕಬೇಕು. ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ ಎಂಇಎಸ್ ಹಾಗೂ ರಾಜ್ಯದಲ್ಲಿ ಬಸವಣ್ಣಗೆ ಸಗಣಿ ಬಳಿದ ಸಂಘಟನೆಗಳನ್ನು ನಿಷೇಧಿಸಬೇಕು ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.ವೀರಶೈವ ಲಿಂಗಾಯತ ಯುವ ವೇದಿಕೆ ಚಿತ್ರದುರ್ಗ ಜಿಲ್ಲಾಧ್ಯಕ್ಷ ಹೆಚ್.ಎಂ. ಮಂಜುನಾಥ್, ಗೌರವಾಧ್ಯಕ್ಷ ಕೆ ಗಂಗಾಧರಪ್ಪ, ನಿರ್ದೇಶಕರು ಎಲ್. ಎಂ ವಿಜಯಕುಮಾರ್, ನಗರಾಧ್ಯಕ್ಷ ಶಿವು ಜಾಲಿಕಟ್ಟೆ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಸದಾಶಿವಪ್ಪ ಜಮೀನ್ದಾರ್, ವೀರಶೈವ ಮುಖಂಡ ಜಿತೇಂದ್ರ ಹುಲಿಕುಂಟೆ, ಗ್ರಾಮ ಸದಸ್ಯ ಗಾರೆಹಟ್ಟಿ ತಿಪ್ಪೇಸ್ವಾಮಿ ಶಶಿಧರ ಬಾಬಣ್ಣ, ವೀರಭದ್ರಪ್ಪ, ವೀರಶೈವ ಬ್ಯಾಂಕ್ ನಿರ್ದೇಶಕರಾದ ಚಂದ್ರಪ್ಪ ಸಿ ಪರಮೇಶ್, ಕರಿಬಸಣ್ಣ, ಹರೀಶ್ ಮತ್ತು ಜಿಲ್ಲಾ ಪದಾಧಿಕಾರಿಗಳು ಮತ್ತು ಮುಖಂಡರು ಇದ್ದರು.