ನಿತ್ಯವಾಣಿ ಚಿತ್ರದುರ್ಗ : ಏ,05 : ಲಿಂಗಾಯಿತ ಪಂಚಮಶಾಲಿ ಮಹಾಸಭಾ ಕೂಡಲಸಂಗಮ ಪೀಠ, ಚಿತ್ರದುರ್ಗ ಜಿಲ್ಲಾ ಘಟಕದಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು, ಸರ್ಕಾರವು ಕೊಟ್ಟ ಮಾತು ತಪ್ಪಿರು ವುದಕ್ಕಾಗಿ ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಒಂದು ದಿನ ಆಯಾ ತಾಲೂಕಿನ ತಹಶೀಲ್ದಾರರ ಕಚೇರಿ ಮುಂದೆ ಧರಣಿ ಪ್ರತಿಭಟನೆ ನಡೆಸಲಾಯಿತು, ವಿಡಿಯೋ ದೃಶ್ಯ
ಇದರಂತೆ ಚಿತ್ರದುರ್ಗದಲ್ಲಿ ಕೂಡ ಕೂಡಲಸಂಗಮ ಲಿಂಗಾಯಿತ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಮನವಿಯಂತೆ ಪಂಚ ಹಂತದ 2ಎ ಮೀಸಲಾತಿಗಾಗಿ ಕೊನೆಯ ಹೋರಾಟ ಈಗಾಗಲೇ ಸ್ವಾಮೀಜಿ ಅವರ 15 ತಿಂಗಳುಗಳಿಂದ ನಿರಂತರ ಹೋರಾಟವನ್ನು ಅದರಲ್ಲಿ ಪಾದಯಾತ್ರೆ ಬೆಂಗಳೂರು 10 ಲಕ್ಷ ಪಂಚಮಶಾಲಿ ಸಮಾವೇಶ ಬೆಂಗಳೂರಿನಲ್ಲಿ ಸತ್ಯಗ್ರಹ ಶರಣಾರ್ಥಿ ಸಂದೇಶ ಪ್ರತಿಜ್ಞಾ ಪಂಚಾಯತ್ ಅಭಿಯಾನ ಹಾಗೂ ಕೂಡಲಸಂಗಮ ದೇವಾಲಯದಲ್ಲಿ ನಿರಂತರ ಸತ್ಯಾಗ್ರಹ ಮಾಡುತ್ತಾ ಹಕ್ಕೊತ್ತಾಯ ಮಾಡುತ್ತಿದ್ದಾರೆ, ಆದರೂ ಇಲ್ಲಿಯವರೆಗೆ ಸರ್ಕಾರ ಯಾವುದೇ ಸಕಾರಾತ್ಮಕ ಉತ್ತರ ಕೊಡದೆ ಇರುವ ಕಾರಣ ಚಿತ್ರದುರ್ಗ ತಹಸೀಲ್ದಾರ ಕಚೇರಿ ಉಪ ತಹಸೀಲ್ದಾರರಿಗೆ ಮನವಿ ಪತ್ರವನ್ನು ವೀರಶೈವ ಮುಖಂಡ ಹಾಗೂ ಪತ್ರಕರ್ತ ಎಸ್ ಟಿ ನವೀನ್ ಕುಮಾರ್ ಮನವಿ ಪತ್ರವನ್ನು ಓದಿ ಪತ್ರವನ್ನು ಸರ್ಕಾರಕ್ಕೆ ತಲುಪಿಸಬೇಕೆಂದು ಚಿತ್ರದುರ್ಗ ಉಪ ತಹಸೀಲ್ದಾರರಿಗೆ ಪತ್ರವನ್ನು ನೀಡಲಾಯಿತು, ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಘಟಕದ ಅಧ್ಯಕ್ಷ ಕೆ ಸಿ ಗಂಗಾಧರಪ್ಪ ವಹಿಸಿದ್ದರು, ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್ ಎಮ್, ಮಂಜುನಾಥ್, ಜಿತೇಂದ್ರ ಹುಲಿಕುಂಟೆ,ಸಮಾಜದ ಮುಖಂಡ ತಿಪ್ಪೇಸ್ವಾಮಿ, ಗಿರೀಶ್, ಮನು ತಮಟಕಲ್ಲು, ಶಿವರಾಜ್ ಜಾಲಿಕಟ್ಟೆ, ನವೀನ್, ಬಸವನಗೌಡ, ನಾಗರಾಜ್ ನಂದಿಪುರ, ವಿಜಯಕುಮಾರ್ ಗಾರೆಹಟ್ಟಿ, ಮಧು ಗಾರೆ ಹಟ್ಟಿ, ಬದ್ರಿನಾಥ್, ಇನ್ನು ವೀರಶೈವ ಪಂಚಮಶಾಲಿ ಮುಖಂಡರು ಪ್ರತಿಭಟನೆಗೆ ಕೈಜೋಡಿಸಿದರು