ನಿತ್ಯವಾಣಿ, ಚಿತ್ರದುರ್ಗ, ಮೇ.24 : ಪ್ರತಿಷ್ಠಿತ ಉದ್ಯಮಿ ಕಳೆದ ಚಿತ್ರದುರ್ಗ ವಿಧಾನಸಭಾ ಚುನಾವಣೆ ಪರಾಜಿತ ಅಭ್ಯರ್ಥಿ ವೀರೇಂದ್ರ ಪಪ್ಪಿ ಅವರಿಗೆ, ಜೆಡಿಎಸ್ ಪಕ್ಷದಿಂದ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಸದಸ್ಯ ಸ್ಥಾನ ಕೊಡುತ್ತೇವೆ ಎಂದು ಜೆಡಿಎಸ್ ನಾಯಕರಾದ ಎಚ್ ಡಿ ಕುಮಾರಸ್ವಾಮಿ, ಮುಖ್ಯ ಮುಖಂಡರುಗಳು ಆಶ್ವಾಸನೆ ಕೊಟ್ಟು ಈಗ ಶರವಣ ಅವರಿಗೆ ಟಿಕೆಟ್ ಕೊಟ್ಟಿರುವುದಕ್ಕೆ ವೀರಶೈವ ಲಿಂಗಾಯತ ಸಮಾಜಕ್ಕೆ ಅವಮಾನಿಸಿದಂತೆ ಆಗಿದೆ ಮಾತಿಗೆ ತಪ್ಪಿದ ಜೆಡಿಎಸ್ ಪಕ್ಷ ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ಚಿತ್ರದುರ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಹೆಚ್ ಎಮ್ ಮಂಜುನಾಥ್, ಹಾಗೂ ಮುಖಂಡರಾದ ಎಸ್ ತಿಪ್ಪೇಸ್ವಾಮಿ ಶಿವರಾಜ್ ಜಾಲಿಕಟ್ಟೆ ಕೆನ್ನೆಡ್ಲೂ ಶಿವಕುಮಾರ್ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಪ್ರಶಾಂತ್ ರೆಡ್ಡಿ ಚಿತ್ರದುರ್ಗದಲ್ಲಿ ಭಾರೀ ಖಂಡನೆ ವ್ಯಕ್ತಪಡಿಸಿದ್ದಾರೆ