ವೀರಶೈವ ಲಿಂಗಾಯಿತ ಸಮಾಜದಿಂದ ಚಿತ್ರದುರ್ಗದಲ್ಲಿ ಪ್ರತಿಭಟನೆ

ನಿತ್ಯವಾಣಿ,ಚಿತ್ರದುರ್ಗ,ಜು.11 ; ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಸಿ.ಮೋಹನ್ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ರೌಡಿ ಶೀಟ್ ಮತ್ತು ಗಡಿಪಾರು ಮಾಡಲು ಪ್ರತಿಭಟನೆ ನಡೆಸಲಾಯಿತು.
8ನೇ ಜುಲೈ ರಂದು ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಗೆ ಬರತಕ್ಕಂತಹ ಚಿಕ್ಕಜಾಜೂರು ಗ್ರಾಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಸಿ.ಮೋಹನ ಇದೇ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯನಾದ ಸಿದ್ದೇಶ್ವರನ ಮೇಲೆ ಕ್ಷುಲ್ಲಕ ಕಾರಣಕ್ಕೆ ಅಂದರೆ ನಲ್ಲಿ ನೀರು ಹಾಕಿಸುವ ವಿಷಯಕ್ಕೆ ಸಂಬಂಧಿಸಿದಂತೆ ಏಕಾಏಕಿ ಇಟ್ಟಿಗೆಯಿಂದ ತಲೆಗೆ ಮಾರಣಾಂತಿಕ ಹಲ್ಲೆ ಮಾಡಿದ್ದು ಮತ್ತು ಈ ವ್ಯಕ್ತಿ ಪದೇ ಪದೇ ಲಿಂಗಾಯತ ಸಮುದಾಯದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿರುತ್ತಾನೆ.         

                                                                               ಹಲ್ಲೆ ಮಾಡಿದವರು

       

                                                                                                                                                                                                          ಹಲ್ಲೆಗೊಳಗಾದವರು                                                                                                                                                                 ಈ ವಿಚಾರವಾಗಿ ಚಿಕ್ಕಜಾಜೂರಿನಲ್ಲಿ ಸಾರ್ವಜನಿಕರು ಹಾಗೂ ಬಹುತೇಕ ಜಾತಿಯವರು ಈ ಅಮಾನವೀಯ ಕೃತ್ಯವನ್ನು ಖಂಡಿಸಿ ಚಿಕ್ಕಜಾಜೂರು ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುತ್ತಿರುತ್ತಾರೆ ಹಾಗೂ ಈತನ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಇದರಿಂದ ನಮ್ಮ ಜನಾಂಗಕ್ಕೆ ತುಂಬಲಾರದ ನಷ್ಠ ಮತ್ತು ಸಾರ್ವಜನಿಕ ವಲಯದಲ್ಲಿ ಈ ಕೆಲಸವನ್ನು ರೌಡಿಗಳು ಮಾಡುವಂತಹ ಕೃತ್ಯವಾಗಿದ್ದು, ಇದೇ ತರಹ ಪ್ರಕರಣಗಳು ಮುಂದುವರೆದಲ್ಲಿ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು,

 ವೀಡಿಯೋಸ್                                                       ಈ ತನ ಇತಿಹಾಸ ಮತ್ತು ನಡತೆ ಬಗ್ಗೆ ತನಿಖೆ ನಡೆಸಿ ವರದಿ ತರಿಸಿಕೊಂಡು ಈತನ ವಿರುದ್ಧ ರೌಡಿಶೀಟರ್ ಮೊಕದ್ದಮೆ ಮಾಡಿ ಗಡಿಪಾರು ಮಾಡಬೇಕೆಂದು ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಚಿತ್ರದುರ್ಗ ಜಿಲ್ಲಾ, ಜಿಲ್ಲಾಧಿಕಾರಿಗಳವರ ಕಚೇರಿಯವರೆಗೂ ವೀರಶೈವ ಲಿಂಗಾಯತ ಮುಖಂಡರುಗಳು ಪ್ರತಿಭಟನೆ ಮುಖಾಂತರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ನೇತೃತ್ವವನ್ನು ಜಿ.ಎಸ್.ಮಂಜುನಾಥ, ಭೀಮಸಮುದ್ರ, ಕೆ.ಸಿ.ಗಂಗಾಧರಪ್ಪ, ಹೆಚ್.ಎಂ.ಮಂಜುನಾಥ, ಮಹಡಿ ಶಿವಮೂರ್ತಿ, ಲಿಂಗರಾಜು, ವಕೀಲರಾದ ದಯಾನಂದ್, ಗಾರೇಹಟ್ಟಿ ತಿಪ್ಪೇಸ್ವಾಮಿ.ಎಸ್, ಗಿರೀಶ್, ಸಚಿನ್, ಕೆ.ಎಂ.ಶಿವಕುಮಾರ್, ಕಾಮದೇನು ಶೇಖರಪ್ಪ, ಹೆಚ್.ಟಿ.ಹನುಮಂತಪ್ಪ, ಜಿ.ಬಿ.ನಾಗಲಿಂಗಪ್ಪ, ಎಸ್.ಮಾರುತೇಶ್, ವಿಜಯಕುಮಾರ್, ರಾಜು, ಬಿ.ಟಿ.ರಮೇಶ್, ಎಂ.ಆರ್.ಬಸವರಾಜಪ್ಪ, ಕಾರ್ತಿಕ್, ಪ್ರಶಾಂತ್.ಹೆಚ್, ಮಾದುರಿ ಗಿರೀಶ್, ಎಂ.ಕೆ.ರುದ್ರಪ್ಪ, ಶಿವರಾಜ್ ಜಾಲಿಕಟ್ಟೆ, ಮನು, ಇನ್ನಿತರ ವೀರಶೈವ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.