ಜೈನ ಮುನಿಗಳ ಹತ್ಯೆ ಖಂಡಿಸಿ ಪ್ರತಿಭಟನೆ

  • ನಿತ್ಯವಾಣಿ ನ್ಯೂಸ್,  ಚಿತ್ರದುರ್ಗ ಜು.12,ಜೈನ ಮುನಿಗಳ ಹತ್ಯೆಯನ್ನು ಖಂಡಿಸಿ ನಗರದ ಜ್ಯನ್ ಸಮುದಾಯ ದ ಒಕ್ಕೂಟ ದವತಿಯಿಂದ ಪ್ರತಿಭಟನೆಯ ನ್ನು ನಡೆಸಿ ತಪ್ಪಿತ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲ್ಲೂಕು, ಹಿರೇಕೋಡಿ ಗ್ರಾಮದಲ್ಲಿ ನಂದಿಪರ್ವತ ಎಂಬ ಆಶ್ರಮದಲ್ಲಿ ಜೈನ ಮಂದಿರವಿದ್ದು, ಅಲ್ಲಿ ಆಚಾರ್ಯ ಶ್ರೀ: 108 ಕಾಮ ಕುಮಾರನಂದಿ ಮುನಿ ಮಹಾರಾಜರನ್ನು ಅಪಹರಿಸಿ, ಬರ್ಬರವಾಗಿ ಹತ್ಯೆ ಮಾಡಿ, ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಮುನಿಶ್ರೀಗಳ ಶರೀರವನ್ನು ವಿಕೃತಗೊಳಿಸಿ ಕೊಲೆ ಮಾಡಿರುವುದು ಅತ್ಯಂತ ಖಂಡನಿಯ. ಇಂತಹ ಕೃತ್ಯವನ್ನು ಸಕಲ ಜೈನ ಸಮಾಜ ಮತ್ತು ಜೈನ ಮಠಗಳು ಎಲ್ಲಾ ಮಠಾಧೀಶರು ಖಂಡನೆ ವ್ಯಕ್ತಪಡಿಸುತ್ತೇವೆ.

ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆಯಿಂದ ಹಂತಕರನ್ನು ಬಂಧಿಸಿ, ಕಾನೂನಾತ್ಮಕವಾದಂತಹ ಕಾರ್ಯಚರಣೆಯನ್ನು ಮುಂದುವರೆಸಿದ್ದಾರೆ. ಆದರೆ, ಸಂವಿಧಾನ ಹಂತಕರಿಗೆ ಅತ್ಯಂತ ಕಠಿಣ ಮತ್ತು ಅತ್ಯಧಿಕ ಶಿಕ್ಷೆಯನ್ನು ವಿಧಿಸಬೇಕು. ಯಾವುದೇ ರೀತಿಯಾದಂತಹ ಕರುಣೆಯನ್ನು ತೋರಬಾರದು ಪಡಿಸುತ್ತೇವೆ. ಎಂದು ಚಿತ್ರದುರ್ಗ ತಾಲ್ಲೂಕು ಜೈನ ಸಮುದಾಯ ಅಸಂಘಟಿತ ವಲಯದಿಂದ ಆಗ್ರಹಿಸಿದೆ.

“ಮುನಿ ಹತ್ಯಾ ದೋಷ ಮಹಾ ಪಾಪವಾಗುರುತ್ತದೆ” ಯಾವ ರೀತಿಯಾಗಿ ದಯವೇ ಮೂಲ ಧರ್ಮವೆಂದು ಲೋಕದ ಎಲ್ಲಾ ಜೀವಿಗಳಲ್ಲಿಯೂ ಸಮತಾ ಭಾವನೆಯನ್ನು ಹೊಂದಿದ ಭಗವಾನ್‌ ಶ್ರೀ ಮಹಾವೀರಸ್ವಾಮಿಯ ಮೂಲ ಸಂದೇಶವಾದ ಬದುಕು-ಬದುಕಲು ಬಿಡು, ಮತ್ತು ಜೀವಿಗೆ ಜೀವಿಯೇ ನೆರವು ಎಂಬ ತತ್ವ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವವರು ಜೈನ ಧರ್ಮಮದ ಅನುಯಾಯಿಗಳು, ಅದರಲ್ಲಿಯೂ ಧರ್ಮಪ್ರವರ್ತಕರಾಗಿ ಆಧ್ಯಾತ್ಮ, ಪ್ರವರ್ತಕರಾಗಿ, ಶಾಂತಿ ಪ್ರಿಯರಾಗಿ ಅಹಿಂಸೆಯನ್ನು ಪ್ರತಿಪಾದನೆ ಮಾಡುವಂತಹ ಜೈನ ಮುನಿಗಳಿಗೆ ಆಗಿರುವ ಈ ಅಹಿತಕರ ಘಟನೆಗೆ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಕಾನೂನಾತ್ಮಕವಾಗಿ ಅತ್ಯಂತ ಕಠಿಣವಾದ ಸೂಕ್ತ ದಂಡನೆಯನ್ನು ನೀಡುವುದರೊಂದಿಗೆ ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದಂತಹ ಜೈನ ಧರ್ಮ ಸಾಧು ಸಂತರಿಗೆ ಇಂತಹ ಈ ಭೂಮಿಯ ಮೇಲೆ ಈ ಮನುಕುಲ ಬಂದಾಗಿನಿಂದ ಎಂದೂ ಕೇಳರಿಯದ ಘನಘೋರ ಕಠೋರ ಮೃಗಗಳಿಗಿಂತಲೂ ಕೀಳಾಗಿ ವರ್ತಿಸಿದ ಆ ಕೊಲೆ ಕಟುಕರು ತಮ್ಮ ಕ್ರೌರ್ಯ ಮೆರೆದಿದ್ದಾರೆ. ಮುಂದಿನ ಭವಿಷ್ಯದಲ್ಲಿ ಇಂತಹ ಯೋಜನೆ ಕನಸಿನಲ್ಲಿಯೂ ಬರಬಾರದು ಅಂತಹ ಕಠೋರ ಶಿಕ್ಷೆಗೆ ಅವರನ್ನು ಗುರಿಪಡಿಸಬೇಕು ಮತ್ತು ಎಂದೂ ಇಂತಹ ಹಿಂಸಾತ್ಮಕ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರೊಂದಿಗೆ ಸಕಲ ಜೈನ ಸಮಾಜಕ್ಕೆ ನ್ಯಾಯ ಮತ್ತು ರಕ್ಷಣೆ ಒದಗಿಸಿಕೊಡಿರೆಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಜೈನ ಸಮುದಾಯದ ಮುಖಂಡ ರಾದ ಅಜಿತ್ ಜ್ಯನ್,ಪ್ರೇಮಚಂದ್,ಆಶೋಕ್ ಜ್ಯನ್, ರಜಿತ್ ಜ್ಯನ್,ವಿಕ್ರಾಂತ್ ಜ್ಯನ್, ಶ್ರೇಣಿಕ್ ಜ್ಯನ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published.