ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ

ನಿತ್ಯವಾಣಿ, ಚಿತ್ರದುರ್ಗ,(ಡಿ,22) : ಚಿತ್ರದುರ್ಗ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ಬೆಳಗಾವಿಯಲ್ಲಿ ನಡೆದ ಘಟನೆ ಖಂಡಿಸಿ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ನೀಡುತ್ತಾ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಟಿ ರಮೇಶ್ ಬೆಳಗಾವಿಯಲ್ಲಿ ತಾಯಿ ನೆಲಕ್ಕಾಗಿ ಹೋರಾಡಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಭೆಯನ್ನು ಎಂ ಇ ಎಸ್ ಹಾಗೂ ಶಿವಸೇನೆ ಗೂಂಡಾಗಳು ವಿರೂಪಗೊಳಿಸಿದ ಬೆನ್ನಲ್ಲೇ ಖಾನಾಪುರದ ಹಲಸಿ ಯಲ್ಲಿ ಕನ್ನಡ ಬಾವುಟ ಸುಟ್ಟು ವಿಶ್ವಮಾನವ ಕ್ರಾಂತಿಯೋಗಿ ಬಸವಣ್ಣನವರ ಭಾವಚಿತ್ರಕ್ಕೆ ಸಗಣಿ ಬಳಿದ ಘಟನೆ ನಡೆದಿದ್ದು ಕನ್ನಡ ನಾಡಿನ ಜನತೆ ಆಘಾಥಕ್ಕೆ ಒಳಗಾಗಿದ್ದಾರೆ, ಸಾಮಾಜಿಕ ಕ್ರಾಂತಿ ಧಾರ್ಮಿಕ ಕ್ರಾಂತಿ ಸಮತವಾದದ ಹರಿಕಾರ ವಿಶ್ವಗುರು ಬಸವಣ್ಣನವರಿಗೆ ನೀಚ ಎಂ ಇ ಎಸ್ ಮತ್ತು ಶಿವಸೇನೆ ಭಯೋತ್ಪಾದಕರು ಅಪಮಾನ ಮಾಡುವ ಮೂಲಕ ಸಮಸ್ತ ಮಾನವ ಕುಲಕ್ಕೆ ಅವಮಾನ ಎಸೆಗಿ.ದಿದ್ದಾರೆ, ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಖಂಡಿಸುತ್ತದೆ.ವಿಡಿಯೋ 

ಜಗತ್ತಿನ ಶ್ರೇಷ್ಠ ಕ್ರಾಂತಿ ಬಸವ ಕ್ರಾಂತಿ ಯಾರನ್ನು ದ್ವೇಷಿಸಬೇಡಿ ಧರ್ಮದ ಮೂಲವಯ್ಯ ಎಂದು ಸಕಲ ರನ್ನು ಬಿಗಿದಪ್ಪಿದ ಮಹಾಚೇತನಕ್ಕೆ ಮಸಿ ಬಳಿದ ಜನರ ಸಂಸ್ಕೃತಿ ಎಂತಹವುದು, ಸಮಾಜ ಅರ್ಥಮಾಡಿಕೊಳ್ಳಬೇಕಾಗಿದೆ ಬಸವಣ್ಣ ಬದುಕಿದ್ದರೆ ಇವರ ದ್ವೇಷ ಅಸಹನೆ ಅನುಕಂಪ ಪಡುತ್ತಿದ್ದರು ಮರುಗುತ್ತಿದ್ದರು, ಖಾನಾಪುರದ ಹಲಸಿ ಹಿಂದೊಮ್ಮೆ ಕನ್ನಡಿಗರ ಬೃಹತ್ ಕದಂಬ ಸಾಮ್ರಾಜ್ಯದ ರಾಜಧಾನಿಯಾಗಿತ್ತು, ಅಂತಹ ಕನ್ನಡಿಗರ ಪವಿತ್ರ ಭೂಮಿಯಲ್ಲಿ ವಿಶ್ವಗುರು ಬಸವಣ್ಣ ಅವರಿಗಾದ ಅವಮಾನ ಸಹಿಸಲಸಾಧ್ಯ, ಮಹಾನ್ ಮಾನವತಾವಾದಿಗೆ ಅವಮಾನ ಮಾಡಿದ ನೀಚರಿಗೆ ಎಂತಹ ಘೋರ ಶಿಕ್ಷೆ ನೀಡಿದರೂ ಕಡಿಮೆಯೇ, ಸರ್ಕಾರ ಇವರನ್ನು ಶಿಕ್ಷಿಸಿದರೆ ಜನರೇ ಶಿಕ್ಷಿಸುವ ಕಾಲಬಂದಿದೆ, ರಾಜಕಾರಣಿಗಳು ಮಾತನಾಡಿದ್ದು ಸಾಕು ಹೇಳಿಕೆಗಳನ್ನು ಕೇಳಿ ಸಾಕಾಗಿದೆ ಸರ್ಕಾರ ಈಗಲಾದರೂ ಕಾರ್ಯೋನ್ಮುಖವಾಗಬೇಕು, ಕೂಡಲೇ ಈ ದುಷ್ಕೃತ್ಯ ಎಸಗಿದ ಅಪರಾಧಿಗಳನ್ನು ಸರ್ಕಾರ ಬಂದಿಸಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದು ಮನವಿಯನ್ನು ಸಲ್ಲಿಸಿದರು, ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಶಿವಮೂರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಗಣೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಾಫರ್, ಎಂ ರಮೇಶ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಘನಶ್ಯಾಮ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಸಂಚಾಲಕಿ ಮಂಜುಳಾ, ಚಿತ್ರದುರ್ಗ ತಾಲೂಕ ಅಧ್ಯಕ್ಷ ಜಿ ರಾಜಪ್ಪ, ನಗರಾಧ್ಯಕ್ಷ ಪಿ ಟಿ ರಮೇಶ್ ತಾಲೂಕ ಅಧ್ಯಕ್ಷ ದ್ರಾಕ್ಷಾಯಿಣಿ, ಅಧ್ಯಕ್ಷ ಹರೀಶ್ ಶಶಿಧರ್, ಲೋಕೇಶ್, ಸಂದೀಪ್ ಕುಮಾರ್ ಇನ್ನಿತರರು ಭಾಗವಹಿಸಿದ್ದರು

Leave a Reply

Your email address will not be published.