ಪುನೀತ್ ರಾಜ್ ಕುಮಾರ್ ರವರು ಮಾಡಿದ ಸಮಾಜ ಸೇವೆ ಎಲ್ಲರಿಗೂ ಮಾದರಿ : ಹೆಚ್. ಜೀವನ್

ನಿತ್ಯವಾಣಿ, ಚಿತ್ರದುರ್ಗ,(ನ.29) : ನಗರದ ಆರ್ಯ ಈಡಿಗ ಸಂಘದ ಹಾಸ್ಟೆಲ್ ಸಭಾಂಗಣದಲ್ಲಿ  ಚಿತ್ರದುರ್ಗ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಹೆಚ್. ಜೀವನ್ ರವರು ಪುನೀತ್ ರಾಜಕುಮಾರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ .  ಪುನೀತ್ ರಾಜ್ ಕುಮಾರ್ ರವರು ಮಾಡಿದ ಸಮಾಜ ಸೇವೆ ಎಲ್ಲರಿಗೂ ಮಾದರಿ, ಅವರು ಇನ್ನಷ್ಟು ಕಾಲ ಬದುಕಬೇಕಿತ್ತು, ಅವರು ಬದುಕಿದ್ದರೆ ಇನ್ನಷ್ಟು ಜನರಿಗೆ ಸಹಾಯ ಮಾಡುತ್ತಿದ್ದರು, ಚಿತ್ರ ರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿತ್ತು, ಭಾರತ ರತ್ನ ಪ್ರಶಸ್ತಿ ಗೆ ಅರ್ಹತೆ ಇರುವ ವ್ಯಕ್ತಿ ಯಾಗುತ್ತಿದ್ದರು ಅವರ ಮಾರ್ಗದಲ್ಲಿ ನಾವು ಸಮಾಜದಲ್ಲಿ ಕೆಲಸವವನ್ನು ಮಾಡೋಣ ಎಂದು ಆರ್ಯ ಈಡಿಗ ಸಮಾಜದ ವತಿಯಿಂದ ನಡೆದ ಪುನೀತ್ ರಾಜ್ ಕುಮಾರ್ ನುಡಿನಮನ  ಕಾರ್ಯಕ್ರಮದಲ್ಲಿ ಮಾತನಾಡಿದರು
 ಈ ಸಂದರ್ಭದಲ್ಲಿ  ಸಂಘದ ಕಾರ್ಯದರ್ಶಿ ಮಂಜುನಾಥ್, ಮಹಿಳಾ ಸಂಘದ ಅಧ್ಯಕ್ಷರಾದ ಅನುರಾಧ ರವಿಕುಮಾರ್, ಹಿರಿಯೂರು ಅಧ್ಯಕ್ಷರಾದ ಅಜಯ್ ಕುಮಾರ್, ಹೊಳಲ್ಕೆರೆ ಅಧ್ಯಕ್ಷರಾದ ತಿಪ್ಪೇಸ್ವಾಮಿ, ವಿ. ಟಿ. ತಿಪ್ಪೇಸ್ವಾಮಿ, ರವಿಕುಮಾರ್, ವೆಂಕಟೇಶ್, ಶಿವಕುಮಾರ್, ಸೋಮನಾಥ್, ದೇವರತ್ನ ಮಂಜು ಹಾಗೂ ಸಮಾಜ ಬಾಂಧವರು, ಅಪ್ಪು ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published.