ಅಭಿಮಾನಿಗಳ ಪಾಲಿಗೆ ಪ್ರೀತಿಯ ಅಪ್ಪುವಾಗಿರುವ ಪುನೀತ್‍ರಾಜ್‍ಕುಮಾರ್ ಅವರು ಅವರ ಆಸೆಗಳನ್ನು ಈಡೇರಿಸಲು ಸದಾ ಮುಂದು.
ಈಗ ಅಂತಹದೇ ಅಭಿಮಾನಿಯೊಬ್ಬರ ಆಸೆಯನ್ನು ಅಪ್ಪು ಈಡೇರಿಸುವ ಮೂಲಕ ಗಮನ ಸೆಳೆದಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೋವಿನಕೆರೆಯ ನಿವಾಸಿ ದೇವಿಪ್ರಿಯಾಗೆ ಅಪ್ಪು ಎಂದರೆ ಪಂಚಪ್ರಾಣ, ಪ್ರತಿನಿತ್ಯ ಅಪ್ಪು ಸಿನಿಮಾ ನೋಡದೆ ಊಟ ಮಾಡುವುದಿಲ್ಲ ಈಕೆಗೆ ಪುನೀತ್‍ರ ನೋಡುವ ಬಯಕೆ.
ಆದರೆ ದೇವಿಪ್ರಿಯಾ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದರೂ ಆಕೆಗೆ ಅಪ್ಪುವನ್ನು ನೋಡುವ ಆಸೆ ಕುಂದಿರಲಿಲ್ಲಘಿ, ಇತ್ತೀಚೆಗೆ ಪುನೀತ್ ಅವರು ಆಕೆಯನ್ನು ಭೇಟಿಯಾಗಿ ಆಕೆಯ ಬಯಕೆಯನ್ನು ಈಡೇರಿಸಿದ್ದಾರೆ.
ಅಪ್ಪುವಿನ ಈ ಮನಮಿಡಿಯುವ ಕಾರ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.