ನಿತ್ಯವಾಣಿ, ಚಿತ್ರದುರ್ಗ,(ಜ.21) : ವೀರಶೈವ ಲಿಂಗಾಯತ ಯುವ ವೇದಿಕೆ ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ಗಾರೆಹಟ್ಟಿಯಲ್ಲಿರುವ ಜಿಲ್ಲಾ ಕಚೇರಿಯಲ್ಲಿ ತ್ರಿವಿದ ದಾಸೋಹಿ ಕರ್ನಾಟಕ ರತ್ನ ಪರಮಪೂಜ್ಯ ಡಾll. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಮೂರನೇ ಶ್ರದ್ದಾಂಜಲಿ ಕಾರ್ಯಕ್ರಮ ಹಾಗೂ ದಾಸೋಹ ದಿನ ಆಚರಿಸುವ ಮೂಲಕ ಭಕ್ತಿ ಪೂರ್ವಕ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಕೆ ಜಿ ಗಂಗಾಧರಪ್ಪ, ಜಿಲ್ಲಾಧ್ಯಕ್ಷ ಹೆಚ್ ಎಮ್ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಚಿತ್ರದುರ್ಗ ತಾಲೂಕು ಘಟಕದ ಅಧ್ಯಕ್ಷ ಪ್ರಶಾಂತ್ ರೆಡ್ಡಿ ಹೆಚ್, ನಿತ್ಯವಾಣಿ ಪತ್ರಿಕೆ ಸಂಪಾದಕ ಎಸ್ ಟಿ ನವೀನ್ ಕುಮಾರ್ ವೀರಶೈವ ಸಮಾಜದ ಮುಖಂಡರು ಗಳಾದ ತಿಪ್ಪೇಸ್ವಾಮಿ ಎಸ್, ಮನು ಕುಮಾರ್, ವೀರಶೈವ ಕೋಪರೇಟಿವ್ ಬ್ಯಾಂಕ್ ನ ನಿರ್ದೇಶಕ ಕರಿಬಸವಯ್ಯ ಬಿ ಎಂ, ಜಂಗಮ ಸಮಾಜದ ಮುಖಂಡ ಶಶಿಧರ್ ಬಾಬು ಎಂ ,ನಗರ ಘಟಕದ ಅಧ್ಯಕ್ಷ ಶಿವಕುಮಾರ್, ಇನ್ನಿತರರು ಭಾಗವಹಿಸಿದ್ದರು,