ಮಳೆ ಮಳೆ…..ಮಳೆಯ ವಿವರ ಇಂತಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-2ರಲ್ಲಿ ಜನವರಿ 7ರಂದು 101.6 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆಯ ವಿವರ ಇಂತಿದೆ.
ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-1ರಲ್ಲಿ 78.9 ಮಿ.ಮೀ ಮಳೆಯಾಗಿದೆ. ಹಿರೇಗುಂಟನೂರು 2, ಐನಹಳ್ಳಿ 19.2, ಭರಮಸಾಗರ 4.2, ಸಿರಿಗೆರೆ 3.6, ತುರುವನೂರು 46.2 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 37.6, ಪರಶುರಾಂಪುರ 3.3, ನಾಯಕನಹಟ್ಟಿ 15.2, ಡಿ.ಮರಿಕುಂಟೆ 24.4, ತಳಕು 10.4 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರಿನಲ್ಲಿ 57.6, ಬಬ್ಬೂರು 73.2, ಈಶ್ವರಗೆರೆ 43.6, ಇಕ್ಕನೂರು 55.8, ಸೂಗೂರು 35.4 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ 5.4, ರಾಮಗಿರಿ 20.2, ಹೆಚ್.ಡಿ.ಪುರ 14, ತಾಳ್ಯ 2.4 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗದಲ್ಲಿ 16.8, ಬಾಗೂರು 4, ಮತ್ತೋಡು 2, ಶ್ರೀರಾಂಪುರ 10.2, ಮಾಡದಕರೆ 6.2 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮುರಿನಲ್ಲಿ 10, ಬಿ.ಜಿ.ಕೆರೆ 6, ರಾಂಪುರ 4.4, ದೇವಸಮುದ್ರ 2.2, ರಾಯಾಪುರದಲ್ಲಿ 8.9 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published.