ರಾಹುಲ್ ಗಾಂಧಿ ದಿಡೀರ್ ಇಟಲಿಗೆ ಹಾರಿದ್ದಾರೆ. ಈಗ ಕಾಂಗ್ರೆಸ್ ಕೂಡ ರಾಹುಲ್ ವಿದೇಶಕ್ಕೆ ತೆರಳಿರುವುದನ್ನು ಖಚಿತಪಡಿಸಿದೆ. ಆದರೆ ಇತರ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಇತ್ತ ವಿದೇಶ ಪ್ರಯಾಣಕ್ಕೆ ರಾಹುಲ್ ಗಾಂಧಿ ವಿರುದ್ಧ ಟೀಕೆ ವ್ಯಕ್ತವಾಗಿದೆ. ರೈತ ಪ್ರತಿಭಟನೆ ನಡುವೆ ವಿದೇಶ ಪ್ರಯಾಣವನ್ನು ಹಲವರು ಪ್ರಶ್ನಿಸಿದ್ದಾರೆ. ಇದೀಗ ಪ್ರತಿಭಟನಾ ನಿರತ ರೈತರ ಸಂಘಟನೆ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದೆ.ರಾಹುಲ್ ಪ್ರಯಾಣದ ಕುರಿತು ಪ್ರತಿಭಟನೆ ನಿರತ ಭಾರತೀಯ ಕಿಸಾನ್ ಯೂನಿಯನ್(BKU) ನಾಯಕ ರಾಕೇಶ್ ಟಿಕ್ಯೆಟ್ ಪ್ರತಿಕ್ರಿಯೆ ನೀಡಿದ್ದಾರೆ.ರಾಹುಲಗಾಂಧಿ ಇದುವರೆಗೆ ನಮ್ಮ ಜೊತೆ ಯಾಗಲಿ, ಪ್ರತಿಭಟನಾನಿರತರ ಜೊತೆ ಮಾತನಾಡಿಲ್ಲ ಇಲ್ಲಿಗೆ ಭೇಟಿ ನೀಡಿಲ್ ನಮ್ಮ ವಿರೋಧಪಕ್ಷ ತುಂಬ ದುರ್ಬಲವಾಗಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಕೃಷಿ ಕಾಯ್ದೆ ವಿರುದ್ಧಹೋರಾಟ ನಡೆಸುತ್ತಿರುವ ರೈತರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೆ. ರೈತರ ಜೊತೆ ನಾವು ನಿಲ್ಲಲಿದ್ದೇವೆ ಎಂದಿತ್ತು. ರಾಹುಲ್ ಗಾಂಧಿ ಇತ್ತೀಚಿಗೆ ವಾಗ್ದಾಳಿನಡೆಸಿದ್ದರು. ಕೃಷಿ ಮಸೂದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ರೈತರ ಪ್ರತಿಭಟನೆ ತೀರ್ವ ಗೊಳ್ಳುತ್ತಿದ್ದಂತೆ ರಾಹುಲ್ ಗಾಂಧಿ ವಿದೇಶಕ್ಕೆ ಪ್ರಯಾಣ ಮಾಡಿರುವುದು ಇದೀಗ ರೈತರನ್ನೇ ಕೆರಳಿಸಿದೆ