ರಜನಿಕಾಂತ್ ಅವರನ್ನು ಹೈದರಾಬಾದ ಅಪೊಲೊ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮೆಗಾಸ್ಟಾರ್ ರಜನಿಕಾಂತ್ ಅವರನ್ನು ಭಾನುವಾರ ಹೈದರಾಬಾದ ಅಪೊಲೊ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ತೀವ್ರ ರಕ್ತದೊತ್ತಡದ ಏರುಪೇರಿನಿಂದ ಬಳಲುತ್ತಿದ್ದ ಅವರು ಡಿಸೆಂಬರ್ 25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಬಿಡುಗಡೆಯಾದ ಆಸ್ಪತ್ರೆಯ ಬುಲೆಟಿನ್ ಈ ಸುದ್ದಿಯನ್ನು ಖಚಿತಪಡಿಸಿದೆ. ‘ತೀವ್ರ ರಕ್ತದೊತ್ತಡ ಮತ್ತು ಬಳಲಿಕೆಯಿಂದ 2020ರ ಡಿಸೆಂಬರ್ 25ರಂದು ರಜನಿಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಹದ ನೋಡಿ, ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ತಿಳಿಸಿದೆ.

ಈ ಹೇಳಿಕೆಯಲ್ಲಿ, ‘ಅವರ ರಕ್ತದೊತ್ತಡವನ್ನು ಸ್ಥಿರಗೊಳಿಸಲಾಗಿದೆ ಮತ್ತು ಅವರು ತುಂಬಾ ಉತ್ತಮ ಭಾವನೆಹೊಂದಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸಿರುವುದರಿಂದ ಇಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರ ಟ್ರಾನ್ಸ್ ಪ್ಲಾಂಟ್ ನಂತರದ ಸ್ಥಿತಿ, ಅಧಿಕ ರಕ್ತದೊತ್ತಡ ಮತ್ತು ವಯಸ್ಸಿನ ಹಿನ್ನೆಲೆಯಲ್ಲಿ ಔಷಧೋಪಚಾರಗಳು ಮತ್ತು ಆಹಾರಕ್ರಮದ ಜೊತೆಗೆ ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ ಅಂತ ತಿಳಿಸಿದೆ. ರಕ್ತದೊತ್ತದೊತ್ತಡದ ನಿಯಮಿತ ಮೇಲ್ವಿಚಾರಣೆಯೊಂದಿಗೆ ಒಂದು ವಾರ ಕಾಲ ಸಂಪೂರ್ಣ ಬೆಡ್ ರೆಸ್ಟ್ ಗೆ ರಜನಿಕಾಂತ್ ಅವರಿಗೆ ಸೂಚಿಸಲಾಗಿದೆ. ದೈಹಿಕ ಚಟುವಟಿಕೆಗಳಿಂದ ದೂರವಿರಲು ಹಾಗೂ ಒತ್ತಡದ ಸನ್ನಿವೇಶಗಳಿಂದ ದೂರಇರುವಂತೆ ಯೂ ಸಹ ಅವರಿಗೆ ಸೂಚಿಸಲಾಗಿದೆ.

Leave a Reply

Your email address will not be published.