ಗರ್ಭಿಣಿ ಅಪಹರಿಸಿ ಅತ್ಯಾಚಾರ

ಅಸ್ಸಾಂ ಮೂಲದ ಗರ್ಭಿಣಿಯನ್ನು ರಾಜಸ್ಥಾನದ ಇಬ್ಬರು ಪುರುಷರು ಅಪಹರಿಸಿ ಅತ್ಯಾಚಾರ ಎಸಗಿ ಬಲವಂತವಾಗಿ ಮದುವೆಯಾಗಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.

ಆರು ತಿಂಗಳ ಗರ್ಭಿಣಿಯಾಗಿರುವ ಮಹಿಳೆಯನ್ನು ಆಕೆಯ ಮೂರು ವರ್ಷದ ಮಗಳೊಂದಿಗೆ ಅಸ್ಸಾಂನಿಂದ ಅಪಹರಿಸಲಾಗಿದೆ. ಮತ್ತು ಬರುವ ಪಾನೀಯ ಕುಡಿಸಿದ್ದ ಆರೋಪಿಗಳು ಆಕೆಯನ್ನು ಅಪಹರಿಸಿ ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಮದುವೆಯಾಗುವಂತೆ ಬಲವಂತ ಮಾಡಲಾಗಿದೆ. ಮದುವೆಯಾದ ಬಳಿಕ ಕಾರ್ ವೀರ್ ತಹಸೀಲ್ ಪಂಚಗಾವ್ ಗ್ರಾಮಕ್ಕೆ ಆಕೆಯನ್ನು ಕರೆದುಕೊಂಡು ಹೋದ ಆರೋಪಿಗಳು ಹಲ್ಲೆ ನಡೆಸಿದ್ದಾರೆ.ಬೇರೆ ಪುರುಷರೊಂದಿಗೆ ದೈಹಿಕ ಸಂಬಂಧ ಬೆಳೆಸಲು ಆರೋಪಿಗಳು ಒತ್ತಾಯಿಸಿದ್ದು, ನಿರಾಕರಿಸಿದಾಗ ತನ್ನ ಮಗಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾಳೆ. ಭಾನುವಾರ ರಾತ್ರಿ ತಪ್ಪಿಸಿಕೊಂಡು ಬಂದ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ಸಂದೀಪ್ ಕೋಲೇಕರ್ ತಿಳಿಸಿದ್ದಾರೆ. ರಾಜಸ್ಥಾನದಿಂದ ಕೊಲ್ಹಾಪುರಕ್ಕೆ ಮಹಿಳೆಯನ್ನು ಕರೆದುಕೊಂಡು ಬರಲಾಗಿದೆ ಎಂದು ಹೇಳಿದ್ದು, ತನಿಖೆ ಕೈಗೊಳ್ಳಲಾಗಿದೆ. ದೂರು ದಾಖಲಿಸಿಕೊಂಡ ನಂತರ ಆರೋಪಿಗಳನ್ನು ಬಂಧಿಸಿ ಸ್ಥಳೀಯ ಕೋರ್ಟ್ ಗೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.