ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ

ನಿರ್ಭಯಾ ಪ್ರಕರಣದ ಕಹಿ ನೆನಪು ಮಾಸುವ ಮೊದಲೇ ಕಳೆದ ವಾರವಷ್ಟೇ ಅದೇ ರೀತಿಯಲ್ಲಿ ಉತ್ತರ ಪ್ರದೇಶದ ಬದೌನ್​ನಲ್ಲಿ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್​ ತೂರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಇದೀಗ ಅಂಥದ್ದೇ ಭಯಾನಕ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಭೋಪಾಲ್‌ನಿಂದ 600 ಕಿ.ಮೀ ದೂರದಲ್ಲಿರುವ ಸಿಧಿ ಜಿಲ್ಲೆಯ ಅಮಿಲಿಯಾ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದೆ. ಟೀ ಅಂಗಡಿ ನಡೆಸಿ ಜೀವನ ಮಾಡುತ್ತಿದ್ದ 45 ವರ್ಷದ ವಿಧವೆ ಮೇಲೆ ರಾಡ್​ ತೂರಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.

ಸಂತ್ರಸ್ತೆಯ ಪತಿ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಇವರು ಒಬ್ಬರೇ ವಾಸಿಸುತ್ತಿದ್ದ ಜೀವನಕ್ಕಾಗಿ ಟೀ ಅಂಗಡಿ ನಡೆಸುತ್ತಿದ್ದಾರೆ.

ಶನಿವಾರ ರಾತ್ರಿ ಮೂರು ಕಿ.ಮೀ ದೂರದಲ್ಲಿರುವ ಪಕ್ಕದ ಹಳ್ಳಿಯಿಂದ ಮಹಿಳೆಯ ಗುಡಿಸಲಿಗೆ ಬಂದ ಈ ವ್ಯಕ್ತಿಗಳು ನೀರು ಕೇಳಿದ್ದಾರೆ. ಅವರ ಮೇಲೆ ಅನುಮಾನಗೊಂಡಿದ್ದ ಮಹಿಳೆ ನೀರು ಕೊಡಲು ನಿರಾಕರಿಸಿದ್ದಾರೆ.

ಕೂಡಲೇ ಆಕೆಯ ಮೇಲೆ ಪ್ರಾಣಿಯಂತೆ ಎರಗಿದ ಕಾಮುಕರು ಖಾಸಗಿ ಭಾಗಕ್ಕೆ ರಾಡ್​ ತೂರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯನ್ನು ಸಿಧಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ರೇವಾದಲ್ಲಿನ ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published.