🙏ನಿತ್ಯವಾಣಿ ಶನಿವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಶನಿವಾರದ ರಾಶಿ ಭವಿಷ್ಯ 🙏

ಮೇಷ
ಶನಿವಾರ, 3 ಜುಲೈ
ಮೇಷ ರಾಶಿಯವರಿಗೆ ಸಾಮಾನ್ಯ ದಿನವು ಕಾದಿದೆ, ಏಕಾಗ್ರತೆ ಮತ್ತು ಲಕ್ಷ್ಯದ ಕೊರತೆಯು ನೀವು ಎಷ್ಟೇ ಕಷ್ಟವಾದರೂ ಎದುರಿಸಲೇಬೇಕಾದ ಸಮಸ್ಯೆಗಳಾಗಿವೆ. ಧ್ಯಾನ ಮತ್ತು ಯೋಗದ ಮೂಲಕ ಇವುಗಳಿಂದ ಮುಕ್ತಿ ಪಡೆಯಬಹುದು.ಈ ದಿನವು ಫಲಪ್ರದವಾಗಿರುವ ಸಾಧ್ಯತೆಯಿರದ ಕಾರಣ, ಹೂಡಿಕೆದಾರರು ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಇಂದು ಕಾನೂನು ದಾಖಲೆ ಪತ್ರಗಳಿಗೆ ಸಹಿ ಹಾಕುವಾಗ ಎಚ್ಚರವಹಿಸಿ. ಸಂಜೆಯ ವೇಳೆಗೆ, ಪರಿಸ್ಥಿತಿಗಳು ಸುಲಭ ಹಾಗೂ ಸಂತಸದಿಂದ ಕೂಡಿರುತ್ತದೆ. ಮನೆಯಲ್ಲಿನ ಪ್ರಕ್ಷುಬ್ಧತೆಯು ತಿಳಿಗೊಂಡು ಎಲ್ಲವೂ ಸುಗಮವಾಗುತ್ತದೆ.ಜೊತೆಗೆ, ಯಾವುದಾದರೂ ಹೊಸ ಯೋಜನೆಗಳ ಕುರಿತು ಕಾರ್ಯಪ್ರಾರಂಭಿಸಲು ಆಲೋಚಿಸಿದ್ದಲ್ಲಿ, ಸಂಜೆಯು ಉತ್ತಮ ವೇಳೆಯಾಗಿದೆ. ನಿಮ್ಮ ಖರ್ಚುವೆಚ್ಚಗಳ ಮೇಲೆ ನಿಗಾವಿರಿಸಿ ಇಲ್ಲವಾದಲ್ಲಿ ಮಿತಿಮೀರಿದ ವೆಚ್ಚವು ನಿಮ್ಮ ಕಿಸೆಯನ್ನು ಖಾಲಿಗೊಳಿಸಬಹುದು.

ವೃಷಭ
ಶನಿವಾರ, 3 ಜುಲೈ
ಈ ದಿನವನ್ನು ಮನರಂಜನೆ ಮತ್ತು ಹೆಣಗಾಟ ಎರಡು ಪದಗಳನ್ನು ಬಳಸುವ ಮೂಲಕ ವ್ಯಾಖ್ಯಾನಿಸುತ್ತಾರೆ, ಜನರೊಂದಿಗೆ ಬೆರೆಯುವಿಕೆ, ಹೊಸ ವ್ಯವಹಾರ ಅಥವಾ ಸಂಪರ್ಕಗಳೊಂದಿಗೆ ಸೇರುವಿಕೆ, ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ತಿರುಗಾಟಕ್ಕೆ ತೆರಳುವಿಕೆ ಮತ್ತು ನಿಮ್ಮ ಕುಟುಂಬ ಸದಸ್ಯರ ವಿಶೇಷವಾಗಿ ಮಕ್ಕಳಲ್ಲಿನ ಏಳಿಗೆಯನ್ನು ಆನಂದಿಸುವುದರಲ್ಲಿ ದಿನದ ಪೂರ್ವಾರ್ಧವು ಕಳೆದುಹೋಗುತ್ತದೆ. ಆದರೆ, ದ್ವಿತೀಯಾರ್ಧದಲ್ಲಿ ಗ್ರಹಗತಿಗಳು ತೊಂದರೆಯನ್ನು ನೀಡಬಹುದು. ಇದು ನಿಮ್ಮ ಆರೋಗ್ಯವು ಕ್ಷೀಣಿಸುವುದರೊಂದಿಗೆ ಪ್ರಾರಂಭಗೊಳ್ಳಬಹುದು ಮತ್ತು ನಿಮ್ಮನ್ನು ಆಕ್ರೋಶ ಮತ್ತು ಒತ್ತಡದಲ್ಲಿರಿಸಬಹುದು. ಮನೆಮಂದಿಯೊಂದಿಗಿನ ಕಲಹವು ಮನೆಯಲ್ಲಿನ ಶುದ್ಧ ವಾತಾವರಣದಲ್ಲಿ ಕೊಳಕನ್ನು ಮೂಡಿಸಬಹುದು. ಶಾಂತಿಯನ್ನು ಪಡೆಯಲು ದೃಢ ನಿಲುವನ್ನು ತಾಳಿ ಮತ್ತು ನಿಮ್ಮ ಕೋಪವನ್ನು ನಿಯಂತ್ರಿಸಿ. ಖರ್ಚುವೆಚ್ಚಗಳೂ ಹೆಚ್ಚಾಗಲಿವೆ. ಯಾವುದೇ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.

ಮಿಥುನ
ಶನಿವಾರ, 3 ಜುಲೈ
ಉದ್ಯಮಿಗಳಿಗೆ ಮತ್ತು ಅವರ ವ್ಯವಹಾರಗಳಿಗೆ ಇಂದು ಉತ್ತಮ ದಿನ,ಇಂದು ಅವರು ಹೇರಳ ಲಾಭವನ್ನು ಗಳಿಸುತ್ತಾರೆ. ಸೇವಾ ವರ್ಗದವರಿಗೂ ಈ ದಿನವು ಅದೃಷ್ಟ ಮತ್ತು ಸೌಭಾಗ್ಯವನ್ನು ತರಲಿದೆ. ನಿಮ್ಮ ಪ್ರಯತ್ನ, ಉತ್ಪಾದಕತೆ ಮತ್ತು ದಕ್ಷತೆಯು ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳ ಗಮನ ಸೆಳೆಯುತ್ತವೆ ಮತ್ತು ಇದು ವರ್ಗಶ್ರೇಣಿಯಲ್ಲಿ ಮೇಲ್ಮಟ್ಟಕ್ಕೇರಿಸುತ್ತದೆ. ನಿಮ್ಮ ದಿನವನ್ನು ಇನ್ನಷ್ಟು ಉತ್ತಮವಾಗಿಸಲು ನೀವು ನಿಮ್ಮ ಸ್ನೇಹಿತರೊಂದಿಗೆ ಸಂಜೆಯ ವೇಳೆ ತಿರುಗಾಟಕ್ಕೆ ತೆರಳಬಹುದು.ಮಿಥುನ ರಾಶಿಯವರಿಗೆ ಇಂದು ಧನಲಾಭ ಉಂಟಾಗಲಿದೆ. ಇಂದು ಸಿಗಲಿರುವ ಲಾಭಕ್ಕಾಗಿ ಬೊಕ್ಕಸವನ್ನು ಸಿದ್ಧಪಡಿಸಿಡಿ.

ಕರ್ಕಾಟಕ
ಶನಿವಾರ, 3 ಜುಲೈ
ಈ ದಿನವು ಉತ್ತಮವಾಗಿ ಪ್ರಾರಂಭಗೊಳ್ಳಲಾರದು ಆದರೆ, ಪ್ರತೀ ಗಂಟೆಯು ಸಾಗುತ್ತಿದ್ದಂತೆ, ಇದು ಅತ್ಯುತ್ತಮವಾಗಲು ಪ್ರಾರಂಭಿಸುತ್ತದೆ ಒತ್ತಡ, ಆಕ್ರೋಶ ಮತ್ತು ಉದರ ಸಂಬಂಧಿ ವ್ಯಾಧಿಗಳು ನಿಮ್ಮನ್ನು ಕಾಡಬಹುದು. ಆರೋಗ್ಯಕರ ಆಹಾರ ಸೇವಿಸಿ ಮತ್ತು ಧ್ಯಾನ ಹಾಗೂ ಯೋಗ ಮಾಡಿ ಇವು ನಿಮಗೆ ನೆಮ್ಮದಿಯನ್ನು ನೀಡುತ್ತವೆ. ಸಾಕಷ್ಟು ಪರಿಶ್ರಮದ ಹೊರತಾಗಿಯೂ ಯಶಸ್ಸು ನಿಮ್ಮಿಂದ ದೂರಸಾಗುತ್ತದೆ. ಇದು ಯಾಕೆಂದರೆ, ಅದೃಷ್ಟವು ನಿಮ್ಮನ್ನು ಕಡೆಗಣಿಸಲು ಪ್ರಯತ್ನಿಸಿತ್ತು. ಆದರೂ, ನಿಮ್ಮ ಪ್ರಯತ್ನವನ್ನು ಮುಂದುವರಿಸಿ. ಮಧ್ಯಾಹ್ನದ ಬಳಿಕ, ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದರೊಂದಿಗೆ ನಿಮ್ಮ ಜೀವನು ಸಾಮಾನ್ಯ ಪಥಕ್ಕೆ ಹಿಂತಿರುಗುತ್ತದೆ.ನಿಮ್ಮಲ್ಲಿರದೇ ಇದ್ದ ಹುರುಪು ಮತ್ತು ಚೈತನ್ಯವು ಕಾಣಲಾರಂಭಿಸುತ್ತದೆ ಮತ್ತು ಮುಂದಕ್ಕೆ ಸಾಗಲು ಇದು ಸಹಾಯಕವಾಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿನ ಸ್ಥಾನಮಾನ ಹೆಚ್ಚಳವನ್ನು ನಿರೀಕ್ಷಿಸಿ. ಉದ್ಯಮಿಗಳು ಲಾಭ ಪಡೆಯುವ ಸಾಧ್ಯತೆಯಿದೆ.

ಸಿಂಹ
ಶನಿವಾರ, 3 ಜುಲೈ
ಯೋಗ್ಯ ಪ್ರಭಾವವನ್ನು ಹೊಂದಿರುವಂತಹ ದಿನವು ಸಿಂಹ ರಾಶಿಯವರಿಗೆ ಕಾದಿದೆ, ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ ಇಲ್ಲವಾದಲ್ಲಿ ಇವು ನಿಮ್ಮನ್ನು ತೊಂದರೆಯಲ್ಲಿ ಸಿಲುಕಿಸುತ್ತದೆ. ಕಚೇರಿಯಲ್ಲಿ ಪ್ರತೀ ಗಂಟೆಯಲ್ಲೂ ನಿಮಗೆ ಕೆಲಸಗಳ ರಾಶಿಯೇ ಇರುವುದರಿಂದ ನೀವು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಆದರೆ, ಪ್ರತೀ ಸಮಯದಲ್ಲೂ ನೀವು ಬಿಡುವು ತೆಗೆದುಕೊಳ್ಳುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಇಲ್ಲವಾದಲ್ಲಿ ಇದು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅನಿರೀಕ್ಷಿತ ಧನಲಾಭದ ಯೋಗವಿದೆ; ನಿಮ್ಮ ವಾಲೆಟ್ ಸಿದ್ಧಪಿಡಿಸಿ. ಸ್ಪರ್ಧಿಗಳು ಅಥವಾ ವಿರೋಧಿಗಳೊಂದಿಗಿನ ಸಂವಾದ ಅಥವಾ ಚರ್ಚೆಯನ್ನು ತಪ್ಪಿಸಿ.ಇವರು ನಿಮ್ಮ ಅಸಹನೆಯನ್ನು ಇನ್ನಷ್ಟು ಪ್ರಚೋದಿಸಬಹುದು ಮತ್ತು ನಿಮ್ಮ ದಿನವನ್ನು ಹಾಳುಗೆಡಹಬಹುದು. ಅಂತಿಮವಾಗಿ, ಯಾವುದೇ ವಿಚಾರದಲ್ಲಾದರೂ ಧನಾತ್ಮಕವಾಗಿಯೇ ಇರಿ.

ಕನ್ಯಾ
ಶನಿವಾರ, 3 ಜುಲೈ
ಕಲೆ ಮತ್ತು ಸಾಮಾಜಿಕ ಜಗತ್ತಿನಲ್ಲಿನ ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯು ನಿಮಗೆ ಮನ್ನಣೆ ಮತ್ತು ಗೌರವವನ್ನು ತರುತ್ತದೆ  ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿ, ನಿಮ್ಮ ಉದ್ಯಮ ಪಾಲುದಾರರು ಲಾಭವನ್ನು ಪಡೆದುಕೊಳ್ಳುತ್ತಾರೆ ಮತ್ತು ನಿಮಗೆ ಧನಲಾಭ ಉಂಟಾಗಲಿದೆ. ಇಂದು ನೀವು ಮನರಂಜನೆ ಮತ್ತು ವಿನೋದಗಳಲ್ಲಿ ಹೆಚ್ಚು ಕಾಲಕಳೆಯಬಹುದು. ಮಧ್ಯಾಹ್ನದ ಬಳಿಕ ನಿಮ್ಮ ಆರೋಗ್ಯವು ಉತ್ತಮವಾಗಿರುವುದಿಲ್ಲ ಆದ್ದರಿಂದ ಎಚ್ಚರಿಕೆಯಿಂದಿರಿ. ಯೋಗ, ಧ್ಯಾನ ಮತ್ತು ಪ್ರಾರ್ಥನೆಯು ನಿಮ್ಮನ್ನು ಶಾಂತಿ ಹಾಗೂ ಸಮಾಧಾನದಲ್ಲಿರಿಸುತ್ತದೆ.

ತುಲಾ
ಶನಿವಾರ, 3 ಜುಲೈ
ಇದು ನೆನಪಿನಲ್ಲಿಡಬೇಕಾದಂತಹ ದಿನ,ನೀವು ಪ್ರತೀ ವಿಚಾರವನ್ನು ಆತ್ಮವಿಶ್ವಾಸ ಮತ್ತು ದೃಢನಿರ್ಧಾರದೊಂದಿಗೆ ನಿರ್ವಹಿಸುತ್ತೀರಿ ಆದರೆ, ಅತೀ ಭಾವೋದ್ವೇಗಕ್ಕೆ ಒಳಗಾಗದಂತೆ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ ಇಲ್ಲವಾದಲ್ಲಿ ಇದು ನಿಮಗೆ ತೊಂದರೆಯನ್ನುಂಟುಮಾಡಬಹುದು. ಮನೆಯಲ್ಲಿನ ವಾತಾವರಣವು ಸಂತಸ ಹಾಗೂ ಹಿತಕರವಾಗಿರುತ್ತದೆ ಮತ್ತು ಇದು ನಿಮ್ಮ ನಾಲಗೆ ಮತ್ತು ಸಿಟ್ಟನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಲಾವಿದರಿಗೆ ಈ ದಿನವು ಅನುಕೂಲಕರ ದಿನವಾಗಿದೆ. ಇಂದು ಘನತೆಯನ್ನು ತರುವಲ್ಲಿ ಮತ್ತು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲು ಪ್ರತಿಭೆ ಪ್ರದರ್ಶಿಸುವಲ್ಲಿ ಶಕ್ತರಾಗುತ್ತಾರೆ. ಸ್ನೇಹಿತರೊಂದಿಗೆ ಇರುವ ಮೂಲಕ ನೀವು ನಿಮ್ಮ ಅಮೂಲ್ಯ ಕ್ಷಣಗಳನ್ನು ಇಂದು ಕಳೆಯುತ್ತೀರಿ.

ವೃಶ್ಚಿಕ
ಶನಿವಾರ, 3 ಜುಲೈ
ವೃಶ್ಚಿಕ ರಾಶಿಯವರಿಗೆ ಈ ದಿನವು ಪರಿಪೂರ್ಣ ದಿನವಾಗಿದೆ,ಸಾಹಿತ್ಯ ಕಾರ್ಯಗಳು ಇಂದು ನಿಮ್ಮ ಗಮನ ಸೆಳೆಯುತ್ತವೆ ಮತ್ತು ಪುಸ್ತಕಗಳ ಓದುವಿಕೆಯಲ್ಲಿಯೇ ನಿಮ್ಮ ಹೆಚ್ಚು ಸಮಯವನ್ನು ನೀವು ಕಳೆಯುತ್ತೀರಿ.ಈ ದಿನವು ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿದೆ, ಅವರು ತಮ್ಮ ಅಧ್ಯಯನದಲ್ಲಿ ಉತ್ತಮ ನಿರ್ವಹಣೆಯನ್ನು ತೋರಲಿದ್ದಾರೆ. ಹೂಡಿಕೆದಾರರಿಗೂ, ಈ ದಿನವು ಸೌಭಾಗ್ಯ ಮತ್ತು ಅದೃಷ್ಟವನ್ನು ತರುತ್ತದೆ. ಅವರು ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ಇಂದು ನೀವು ಆತ್ಮವಿಶ್ವಾಸ ಮತ್ತು ದೃಢನಿರ್ಧಾರದಿಂದ ತುಂಬಿಹೋಗಿರುತ್ತೀರಿ. ಮತ್ತು ಇದು ನಿಮಗೆ ಗುಣಮಟ್ಟದ ಕಾರ್ಯವನ್ನು ನೀಡಲು ಮತ್ತು ವಾಯಿದೆಯ ಮುನ್ನ ಕೆಲಸವನ್ನು ಮುಗಿಸಲು ಪ್ರೇರೇಪಿಸುತ್ತದೆ. ಆರೋಗ್ಯಕ್ಕೆ ಸಂಬಂಧಿಸಿಯೂ ನೀವು ಉತ್ತಮವಾಗಿರುವಿರಿ. ಇಂದು ನೀವು ಎಚ್ಚರವಹಿಸಬೇಕಾದ ಒಂದೇ ಅಂಶವೆಂದರೆ ತಾಳ್ಮೆ.

ಧನು
ಶನಿವಾರ, 3 ಜುಲೈ
ದಿನಪೂರ್ತಿ ಜಾಗರೂಕರಾಗಿರಿ ಎಂದು ಸಲಹೆ,ನಿಮ್ಮ ತಾಯಿಯ ಆರೋಗ್ಯ ಪರಿಸ್ಥಿತಿಯು ಮತ್ತು ಮನೆಯಲ್ಲಿನ ಅಹಿತಕರ ವಾತಾವರಣವು ನಿಮ್ಮಲ್ಲಿ ಋಣಾತ್ಮಕತೆಯನ್ನು ತುಂಬುತ್ತದೆ. ಧನಾತ್ಮಕವಾಗಿರಿ, ಅಂತಹ ಮನಸ್ಥಿತಿಯು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆರ್ಥಿಕ ನಷ್ಟ ಉಂಟಾಗಲಿದೆ. ಎಚ್ಚರದಿಂದಿರಿ. ಮಧ್ಯಾಹ್ನದ ಬಳಿಕ, ನಿಮ್ಮ ದಿನವು ಸುಗಮವಾಗಿ ತೊಂದರೆರಹಿತವಾಗಿರುತ್ತದೆ. ಕ್ರಿಯಾತ್ಮಕ ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ನೀವು ಬಯಸುವಿರಿ. ನಿಮ್ಮ ದೈಹಿಕ ಭಾಷೆಯು ಧನಾತ್ಮಕವಾಗಿರುತ್ತದೆ. ಮತ್ತು ವ್ಯಕ್ತಿತ್ವದ ಪ್ರೀತಿಯ ಭಾಗವು ಪ್ರದರ್ಶಿಸಲ್ಪಡುತ್ತದೆ. ವಿದ್ಯಾರ್ಥಿಗಳಿಗೆ ಈ ದಿನವು ಅನುಕೂಲಕರವಾಗಿರಲಿದೆ.

ಮಕರ
ಶನಿವಾರ, 3 ಜುಲೈ
ದಿನದ ಪೂರ್ವಾರ್ಧವು ಅನುಕೂಲಕರವಾಗಿರುತ್ತದೆ ಆದರೆ, ದಿನದ ಉತ್ತರಾರ್ಧವು ಕೆಲವು ತೊಂದರೆಗಳನ್ನು ಉಂಟುಮಾಡುತ್ತದೆ,ಮನೆಯಲ್ಲಿನ ವಾತಾವರಣವು ಆತ್ಮೀಯವಾಗಿರುತ್ತದೆ ಆದ್ದರಿಂದ ನೀವು ಕುಟುಂಬ ಮಾತುಕತೆ ಅಥವಾ ಚರ್ಚೆಗಳಲ್ಲಿ ಪಾಲ್ಗೊಳ್ಳುವಿರಿ. ಕೆಲವು ಸ್ನೇಹಿತರೂ ಇದರೊಂದಿಗೆ ನಿಮ್ಮ ಸಾಮಾಜಿಕ ಜೀವನನ್ನು ಸಂತೋಷಗೊಳಿಸಬಹುದು. ವೃತ್ತಿಕ್ಷೇತ್ರದಲ್ಲೂ , ನಿಮ್ಮ ಸ್ಪರ್ಧಾತ್ಮಕತೆ, ಶ್ರಮಶೀಲತೆ ಮತ್ತು ಪ್ರತಿಸ್ಪರ್ಧಿಗಳ ವಿರುದ್ಧದ ಗೆಲುವು ಎಲ್ಲರನ್ನೂ ನಿಮ್ಮತ್ತ ಸೆಳೆಯುವಂತೆ ಮಾಡುತ್ತದೆ. ಏನೇ ಆದರೂ, ಮಧ್ಯಾಹ್ನದ ಬಳಿಕ ಪರಿಸ್ಥಿತಿಗಳು ಕೆಳಹಂತಕ್ಕೆ ಸಾಗಲು ಪ್ರಾರಂಭಿಸುತ್ತವೆ. ಅಪಘಾತ ಸಂಭವಿಸಿ ನಿಮ್ಮ ಪ್ರೀತಿಪಾತ್ರರಿಗೆ ನೋವುಂಟಾಗಬಹುದು. ಧೈರ್ಯವಾಗಿರಿ ಮತ್ತು ನಿಮ್ಮ ಭಾವುಕತೆಯು ನಿಮ್ಮ ಮೇಲೆಯೇ ಸವಾರಿ ಮಾಡದಂತೆ ನೋಡಿಕೊಳ್ಳಿ. ನಿಮ್ಮ ತಾಯಿಯ ಆರೋಗ್ಯವೂ ಚಿಂತೆಯ ಕಾರಣವಾಗಿರುತ್ತದೆ. ಸ್ಥಿರಾಸ್ತಿ ಸಂಬಂಧಿ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರದಿಂದಿರಿ.

ಕುಂಭ
ಶನಿವಾರ, 3 ಜುಲೈ
ನಿಮ್ಮ ಗ್ರಹಗತಿಗಳು ಈ ದಿನವನ್ನು ತುಂಬಾ ಕಷ್ಟಕರವಾಗಿಸಲಿದೆ, ನಿಮ್ಮ ಸಿಟ್ಟು ಸುಲಭವಾಗಿ ಏರುತ್ತದೆ. ಅದರ ಮೇಲೆ ನಿಯಂತ್ರಣವಿರಿಸಿ ಇಲ್ಲವಾದಲ್ಲಿ, ಮನೆಯಲ್ಲಿನ ಮತ್ತು ಕಚೇರಿಯಲ್ಲಿನ ವಾತಾವಾರಣವನ್ನು ಕಲುಶಿತಗೊಳಿಸುತ್ತದೆ. ನೀವು ಮಾತನಾಡುವ ಮುನ್ನ ಯೋಚಿಸಿ. ಇದು ಪರಿಸ್ಥಿತಿಯು ಕಷ್ಟಕರವಾಗಿದ್ದರೂ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಲು ಸಹಾಯಕವಾಗುತ್ತದೆ. ಋಣಾತ್ಮಕ ಆಲೋಚನೆಗಳನ್ನು ಎಂದಿಗೂ ದೂರವಿರಿಸಿ. ಮಧ್ಯಾಹ್ನದ ಬಳಿಕ ಪರಿಸ್ಥಿತಿಗಳು ಸುಧಾರಿಸುತ್ತವೆ. ಮನೆಯಲ್ಲಿನ ವಾತಾವರಣವು ಸ್ನೇಹಪರ ಹಾಗೂ ಶಾಂತಿಯಿಂದ ಕೂಡಿರುತ್ತದೆ. ಮತ್ತು ವೃತ್ತಿಕ್ಷೇತ್ರದಲ್ಲೂ ಉತ್ತಮ ಫಲಿತಾಂಶ ಮತ್ತು ಯಶಸ್ವೀ ಕಾರ್ಯ ಪೂರ್ಣಗೊಳಿಸುವಿಕೆಯು ನಿಮ್ಮನ್ನು ತೃಪ್ತಿ ಹಾಗೂ ಸಮಾಧಾನದಲ್ಲಿರಿಸುತ್ತದೆ.

ಮೀನ
ಶನಿವಾರ, 3 ಜುಲೈ
ಮೀನ ರಾಶಿಯವರಿಗೆ ಈ ದಿನವು ಸಂತಸ ಹಾಗೂ ಖುಷಿಯ ದಿನವಾಗಲಿದೆ,ನಿಮ್ಮ ಕುಟುಂಬವು ಸಂತೋಷದಲ್ಲಿರುತ್ತದೆ. ಆದರೂ, ಮಧ್ಯಾಹ್ನದ ಬಳಿಕ ಪರಿಸ್ಥಿತಿಗಳು ಹಗುರವಾಗಿರದೇ ಇದ್ದಾಗ ನಿಮ್ಮ ದುರಾಕ್ರಮಣ ಪ್ರವೃತ್ತಿ ಹಾಗೂ ಕಟು ಮಾತುಗಳ ಮೂಲಕ ಈ ವಾತಾವರಣದಲ್ಲಿ ಕಾರ್ಮೋಡವನ್ನು ತರದಂತೆ ನೋಡಿಕೊಳ್ಳಿ. ಜೊತಗೆ, ನಿಮ್ಮ ಕುಟುಂಬ ಸದಸ್ಯರೊಂದಿಗೆ ಮಿತಿಮೀರಿದ ಚರ್ಚೆ ನಡೆಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ದಿನವು ಫಲಪ್ರದವಾಗಿರುವುದರಿಂದ, ಹೊಸ ಯೋಜನೆ ಮತ್ತು ಕಾರ್ಯಗಳನ್ನು ಕೈಗೆತ್ತಿಕೊಳ್ಳಿ. ನೀವು ತೆಗೆದುಕೊಳ್ಳುವ ಆಹಾರ ಕ್ರಮಗಳು ನಿಮ್ಮನ್ನು ಸೋಂಕಿನಿಂದ ದೂರವಿರಿಸುವಂತೆ ನೋಡಿಕೊಳ್ಳಿ. ಋಣಾತ್ಮಕ ಚಿಂತನೆಗಳನ್ನು ದೂರವಿರಿ.

Leave a Reply

Your email address will not be published.