🙏ನಿತ್ಯವಾಣಿ ಮಂಗಳವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಮಂಗಳವಾರದ ರಾಶಿ ಭವಿಷ್ಯ 🙏
ಮೇಷ
ಮಂಗಳವಾರ, 6 ಜುಲೈ
ಗ್ರಹಗತಿಗಳ ಚಿತ್ರಣವು ಅಸ್ಫುಟವಾಗಿ ಕಾಣುತ್ತದೆ. ಇದು ನಿಮಗೆ ಕಲಿಸುವ ಪಾಠವೇನೆಂದರೆ, ನಿಮ್ಮ ಗಮನ ಬೇರೆಡೆ ಹರಿಸಲು ಬಿಡದೆ ನಿಮ್ಮನ್ನು ನಿಯಂತ್ರಣದಲ್ಲಿಡಿ. ನೀವು ವೆಚ್ಚಮಾಡಲೇಬೇಕಿದ್ದರೆ ವಿವೇಚನೆಯಿಂದ ಖರ್ಚು ಮಾಡಿ. ದುಂದುವೆಚ್ಚ ಬೇಡ. ನಿಮ್ಮ ಪ್ರೀತಿಪಾತ್ರರ ಮನಸ್ಸಲ್ಲಿ ಶಾಪಿಂಗ್ ತೆರಳುವ ಆಲೋಚನೆಯಿದ್ದಲ್ಲಿ ಅದನ್ನು ಮುಂದೂಡುವಂತೆ ತಿಳಿಸಿ. ಹಣ ಕೊಡುಕೊಳ್ಳುವಿಕೆಯ ವ್ಯವಹಾರಗಳಿಗೆ ಇದು ಉತ್ತಮ ದಿನವಲ್ಲ. ಒಂದು ವೇಳೆ ದೊಡ್ಡ ಮೊತ್ತದ ಹಣವನ್ನು ನಿಮ್ಮ ಆತ್ಮೀಯ ಸ್ನೇಹಿತರಿಗೆ ಕೊಡಲೇಬೇಕಾಗಿ ಬಂದಲ್ಲಿ ಕಾನೂನು ಪತ್ರಗಳ ಕರಡುಪ್ರತಿ ತಯಾರಿಸಿ. ನೀವು ಆಡುವ ಪ್ರತಿ ಪದಗಳ ಮೇಲು ಎಚ್ಚರಿಕೆಯಿಂದಿರಿ. ಅಪಾರ್ಥಕ್ಕೆ ಒಳಗಾಗಬಹುದು ಅಥವಾ ವಿವಾದಗಳಿಗೆ ಗುರಿಯಾಗಬಹುದು. ಇದು ನಿಮಗೆ ಮೋಸ ಮತ್ತು ನೋವು ಮಾಡಿದ ಭಾವನೆಯನ್ನು ಉಂಟುಮಾಡಬಹುದು. ಇವುಗಳ ಬದಲಾಗಿ, ಮನೆಯಲ್ಲೇ ಉಳಿದುಕೊಳ್ಳಿ, ನಿಮ್ಮ ಬಗ್ಗೆ ಗಮನಹರಿಸಿ, ನಿಮ್ಮ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಗಮನಹರಿಸಿ,

ವೃಷಭ
ಮಂಗಳವಾರ, 6 ಜುಲೈ
ಈ ದಿನವು ನಿಮಗೆ ವಿಶೇಷ ದಿನವಾಗಲಿದೆ, ನಿಮ್ಮ ಸೃಜನಶೀಲತೆ ಮತ್ತು ಕಲಾತ್ಮಕತೆಯ ಒಲವು ಹೆಚ್ಚುತ್ತದೆ ಮತ್ತು ಆತ್ಮವಿಶ್ವಾಸವು ಇಂದು ಉಚ್ಛಾಯ ಸ್ಥಿತಿಯಲ್ಲಿರುತ್ತದೆ. ಜೊತೆಗೆ ನಿಮ್ಮ ಮನಸ್ಸು ಅನಗತ್ಯ ವಿಚಾರಗಳಲ್ಲಿ ಒಳಗೊಳ್ಳುವುದಿಲ್ಲ. ಇದು ವೃತ್ತಿಕ್ಷೇತ್ರದಲ್ಲಿ ನಿಮ್ಮನ್ನು ಎಲ್ಲವನ್ನೂ ಎದುರಿಸಲು ಸಿದ್ಧರನ್ನಾಗಿಸುತ್ತದೆ. ಆರ್ಥಿಕ ಕ್ಷೇತ್ರದಲ್ಲಿ ಹೊಣೆ ತೆಗೆದುಕೊಳ್ಳುತ್ತೀರಿ ಮತ್ತು ನಿಮಗೆ ಬೇಕಿರುವ ಬಂಡವಾಳ ಸಂಗ್ರಹಿಸುತ್ತೀರಿ. ಉಡುಗೆತೊಡುಗೆ, ಆಭರಣ, ವಿನೋದ, ನಲಿವು ಮುಂತಾದವುಗಳಿಗಾಗಿ ಖರ್ಚುಮಾಡಲಿದ್ದೀರಿ. ಒಟ್ಟಾರೆ, ಈ ದಿನವನ್ನು ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಕಳೆಯುವಿರಿ.

ಮಿಥುನ
ಮಂಗಳವಾರ, 6 ಜುಲೈ
ಈ ದಿನವು ನೀವು ಬಯಸಿದಂತೆ ಇರದು. ಆತಂಕ ಮತ್ತು ಅವಿಶ್ರಾಂತವು ನಿಮ್ಮನ್ನು ದಿನವಿಡೀ ಕಾಡಬಹುದು, ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ, ಅನಗತ್ಯ ವಿಷಯಗಳಿಗೆ ಕಲಹ ಉಂಟಾಗುವ ಸಾಧ್ಯತೆಯಿದೆ. ಬೇರೆಯವರ ಮನಸ್ಸನ್ನು ನೋಯಿಸುವುದನ್ನು ತಪ್ಪಿಸಬೇಕಾದರೆ, ನಿಮ್ಮ ವರ್ತನೆ ಮತ್ತು ನಾಲಗೆಯ ಮೇಲೆ ಹಿಡಿತವಿರಿಸಬೇಕು. ಇಂದು ನಿಮಗೆ ಅಪಘಾತದ ಸಂಭಾವ್ಯತೆಯಿದೆ. ಜಾಗರೂಕರಾಗಿರಿ. ಅನಗತ್ಯ ಖರ್ಚುವೆಚ್ಚ ಮತ್ತು ಒತ್ತಡಗಳು ನಿಮ್ಮನ್ನು ಇನ್ನಷ್ಟು ಕೆಳಕ್ಕೆ ತಳ್ಳುತ್ತದೆ. ಆದ್ದರಿಂದ ಅನಗತ್ಯ ಎಂದು ಅನಿಸುವ ಯಾವುದೇ ಚಟುವಟಿಕೆಗಳಲ್ಲಿ ತೊಡಗುವುದನ್ನು ತಪ್ಪಿಸಿ. ಧ್ಯಾನ ಮತ್ತು ನಿಮ್ಮ ದೈವದ ಪ್ರಾರ್ಥನೆಯು ಕತ್ತಲೆಯ ಕೂಪದಿಂದ ನಿಮ್ಮನ್ನು ಮೇಲಕ್ಕೆತ್ತಲು ಸಹಾಯವಾಗಲಿದೆ.

ಕರ್ಕಾಟಕ
ಮಂಗಳವಾರ, 6 ಜುಲೈ
ಹಣಕಾಸು ಲಾಭಗಳಿಗೆ ಸಂಬಂಧಿಸಿದಂತೆ ಇಂದು ನಿಮಗೆ ವಿಶೇಷ ದಿನ, ಅಂದರೆ ನಿಮ್ಮ ಆದಾಯ ವೃದ್ಧಿಯಾಗುತ್ತದೆ, ಆರ್ಥಿಕ ಲಾಭ ಉಂಟಾಗುತ್ತದೆ, ನಿಮ್ಮ ವ್ಯವಹಾರದಲ್ಲಿ ಅಭಿವೃದ್ದಿ ಮತ್ತು ಏಳಿಗೆ ಉಂಟಾಗುತ್ತದೆ ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳು ಉಂಟಾಗುತ್ತವೆ. ಮಹಿಳಾ ಸ್ನೇಹಿತರಿಂದ ನಿಮಗೆ ಉತ್ತಮ ಸಹಾಯ ದೊರೆಯಲಿದೆ. ಮಕ್ಕಳು ಮತ್ತು ಪತ್ನಿಯಿಂದ ನಿಮಗೆ ನೆಮ್ಮದಿ ಮತ್ತು ಸಂತೋಷವನ್ನು ನಿರೀಕ್ಷಿಸಿ.ಮದುವೆಯಾಗುವ ಸಿದ್ಧತೆಯಲ್ಲಿರುವವರಿಗೆ ಈ ದಿನ ಉತ್ತಮ. ನೀವು ದಿನವಿಡೀ ನೂರು ಪ್ರತಿಶತ ಆರೋದ್ಯದಿಂದಿರುತ್ತೀರಿ ಮತ್ತು ನಿಮ್ಮ ಎಲ್ಲಾ ಚಿಂತೆ ಮತ್ತು ಒತ್ತಡಗಳನ್ನು ತೊರೆಯುತ್ತೀರಿ. ಸ್ನೇಹಿತರೊಂದಿಗೆ ವಿಹಾರ ತೆರಳುವಿರಿ. ಕೊನೆಯದಾಗಿ ಒಳ್ಳೆ ಸ್ವಾದಿಷ್ಟ ಆಹಾರ ತಿನ್ನುವ ಯೋಗವಿದೆ.

ಸಿಂಹ
ಮಂಗಳವಾರ, 6 ಜುಲೈ
ಉದ್ಯಮ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಸಿಂಹ ರಾಶಿಯವರಿಗೆ ಇಂದು ವಿಶೇಷ ದಿನ. ಇಂದು ಕೈಗೆತ್ತಿಕೊಂಡ ಯೋಜನೆಗಳನ್ನು ನೀವು ಯಶಸ್ವಿಯಾಗಿ ಪೂರೈಸುವಿರಿ. ಮತ್ತು ನೀವು ಮಾಡುತ್ತಿರುವ ಉತ್ತಮ ಕಾರ್ಯಗಳಿಗೆ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಬೆನ್ನುತಟ್ಟುತ್ತಿರುತ್ತಾರೆ. ವೃತ್ತಿಕ್ಷೇತ್ರದಲ್ಲಿ ನೀವು ಎಲ್ಲರನ್ನೂ ಪ್ರಭಾವಿತಗೊಳಿಸುವಿರಿ. ಗೃಹಕ್ಷೇತ್ರದಲ್ಲಿ, ಉಲ್ಲಾಸಕರದಿನವನ್ನು ನಿರೀಕ್ಷಿಸಬಹುದು.ಇಂದು ನಿಮ್ಮ ತಂದೆಯಿಂದ ಸಹಾಯ ದೊರೆಯಲಿದೆ. ಎಲ್ಲಾ ಆಸ್ತಿ ಸಂಬಂಧಿತ ಕಾರ್ಯಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ತಿರುವು ಪಡೆದುಕೊಳ್ಳಲಿವೆ. ನಿಮ್ಮ ಆರೋಗ್ಯವು ಕೇಕ್ ಮೇಲಿನ ಐಸ್‌ನಂತಿರುತ್ತದೆ. ಇದು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ.

ಕನ್ಯಾ
ಮಂಗಳವಾರ, 6 ಜುಲೈ
ಅದೃಷ್ಟಕಾರಿ ತುಲಾ ರಾಶಿಯವರಿಗೆ ಉತ್ತಮ ದಿನವು ಕಾದಿದೆ, ಹೆಚ್ಚಿನವು ಪ್ರಯಾಣಕ್ಕೆ ಸಂಬಂಧಿಸಿರುತ್ತದೆ. ನೀವು ಈಗ ಪ್ರಯಾಣಿಸುತ್ತಿದ್ದಲ್ಲಿ ಅದು ಫಲಪ್ರದವಾಗಿರುತ್ತೆದ ಮತ್ತು ತೀವ್ರ ಸಂತಸದಿಂದ ಕೂಡಿರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಹರ್ಷದಾಯಕ ಪ್ರಯಾಣ ಅಥವಾ ನಿಮ್ಮದೇ ವಯಸ್ಸಿನವರೊಂದಿಗೆ ಯಾತ್ರಾಸ್ಥಳಕ್ಕೆ ತೆರಳಬಹುದು. ವಿದೇಶದಿಂದ ಶುಭಸುದ್ದಿ ಬರಲಿದೆ. ನಿಮ್ಮ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ವೃದ್ಧಿಸಲಿದೆ. ಜೊತೆಯಾಗಿ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ನೀವು ಆಲೋಚಿಸಬಹುದು. ಹಣಕಾಸಿಗೆ ಸಂಬಂಧಿಸಿದಂತೆ ಇಂದು ಉಜ್ವಲ ದಿನ. ಆದ್ದರಿಂದ ಫಲಪ್ರದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯಬೇಡಿ.

ತುಲಾ
ಮಂಗಳವಾರ, 6 ಜುಲೈ
ಎಲ್ಲಾ ಹೊಸ ವಿಚಾರಗಳಿಗೆ ಉತ್ತಮ ದಿನ. ಅದಕ್ಕಾಗಿಯೇ ಏನಾದರೂ ಹೊಸದನ್ನು ಪ್ರಾರಂಭಿಸುವಂತೆ ಸಲಹೆ,ನಿಮ್ಮಲ್ಲೇ ಅಥವಾ ನಿಮ್ಮ ಪ್ರೀತಿಪಾತ್ರರ ಸಂಬಂಧಗಳಲ್ಲಿ ಹೊಸತನ್ನು ಕಂಡುಕೊಳ್ಳುವಷ್ಟು ಸಾಮಾನ್ಯವಾಗಿರಬಹುದು.ಏನೇ ಆಗಿರಲಿ. ಅದರ ಬಗ್ಗೆ ಆಲೋಚಿಸಿ. ಇವು ನಿಮ್ಮನ್ನು ದಿನವಿಡೀ ಕಾಡಲಿರುವ ಋಣಾತ್ಮಕ ಯೋಚನೆಗಳಿಂದ ದೂರವಿರಿಸುತ್ತದೆ. ಕ್ರಾಂತಿಕಾರಿ ಯೋಚನೆಗಳು ಮತ್ತು ಕ್ರಿಯೆಗಳಿಂದ ದೂರವಿರಿ ಮತ್ತು ವಿರೋಧಿಗಳ ವರ್ತನೆಯ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ. ಅತೀಂದ್ರಿಯ, ಅಲೌಕಿಕ, ನಿಸರ್ಗಾತೀತ ಮತ್ತು ಇತರ ಆಧ್ಯಾತ್ಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಆಸಕ್ತಿ ಹೊಂದುವಿರಿ. ಜ್ಯೋತಿಷ್ಯ ಅಥವಾ ಭವಿಷ್ಯ ವಿದ್ಯೆಯನ್ನು ಕಲಿಯುವುದಿದ್ದರೆ ಇದು ಉತ್ತಮ ಸಮಯ. ಮೌನ ಧ್ಯಾನದಲ್ಲಿ ನೆಮ್ಮದಿಯನ್ನು ಕಾಣುವಿರಿ. ನೀರು ಮತ್ತು ಮಹಿಳೆಯರಿಂದ ದೂರವಿರಿ.

ವೃಶ್ಚಿಕ
ಮಂಗಳವಾರ, 6 ಜುಲೈ
ವಿಭಿನ್ನ ದಿನವು ನಿಮಗಾಗಿ ಕಾದಿದೆ. ಸಿನಿಮಾದಲ್ಲಿ ತಾರೆಯರು ಸಾಮಾನ್ಯ ವಿಷಯಗಳನ್ನು ‘ವಿಭಿನ್ನ’ವಾಗಿ ಹೇಳುವಂತೆ ಯಾವಾಗಲೂ ಕೇಳುವಂತಹ ರೀತಿಯಲ್ಲಿರಬಹುದು. ಆದರೆ, ಇಲ್ಲಿನ ಸಂದರ್ಭದಲ್ಲಿ ಹೀಗಿರುವುದಿಲ್ಲ, ನಿಮಗಾಗಿ ನೀವು ಸಮಯ ಮೀಸಲಿಡುವಿರಿ ಮತ್ತು ಇದು ನಿಜವಾಗಿಯೂ ನಿಮಗೆ ವಿಭಿನ್ನವಾಗಿರಲಿದೆ. ನಿಮ್ಮನ್ನು ಸ್ನೇಹಿತರಲ್ಲ, ಕುಟುಂಬ ಸದಸ್ಯರಲ್ಲ ಮತ್ತು ನಿಮ್ಮ ಕಾರ್ಯದ ನಿಯಮಗಳೂ ಅಲ್ಲ. ನೀವು ಏನು ಮಾಡಲು ಬಯಸುತ್ತೀರೋ ಅದರಲ್ಲಿ ತೊಡಗಿಕೊಳ್ಳುವಿರಿ. ಇದು ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ತೆರಳುವ ಕುರಿತಾಗಿಯೂ ಇರಬಹುದು ಅಥವಾ ಪ್ರತಿಷ್ಠಿತ ಯೋಜನೆಗಳಿಗಾಗಿ ಶ್ರಮಪಡುವ ಕುರಿತಾಗಿಯೂ ಇರಬಹುದು. ನಿಮ್ಮ ಸ್ಥಾನವು ಸ್ನೇಹಿತ,ಪ್ರೀತಿಪಾತ್ರ ಮತ್ತು ಸಹೋದ್ಯೋಗಿಯಾಗಿರಬಹುದು. ನೀವು ಕಾರು ಖರೀದಿಸಬಹುದು. ಬಹು ಸಂಸ್ಕೃತಿಯ ಸಂವಾದವು ನಡೆಯಬಹುದು. ಇದರಿಂದ ವೈವಾಹಿಕ ಜೀವನದಲ್ಲಿ ಸಂತಸ ತುಂಬಿರುತ್ತದೆ. ಖುಷಿಯಿಂದಿರಿ.

ಧನು
ಮಂಗಳವಾರ, 6 ಜುಲೈ
ಹಣ ಮತ್ತು ಆರ್ಥಿಕ ವಿಚಾರಗಳಿಗೆ ಈ ದಿನವು ಅದೃಷ್ಟದ ದಿನವಾಗಿದೆ,ಆಸ್ತಿ ಖರೀದಿಸುವ ಬಗ್ಗೆ ಅಥವಾ ಹೊಸ ಯೋಜನೆಗಳಲ್ಲಿ ಬಂಡವಾಳ ಹೂಡುವ ಬಗ್ಗೆ ನೀವು ಆಲೋಚಿಸಬಹುದು. ಮುಂದಕ್ಕೆ ಸಾಗಿ ಆದರೆ ಅದಕ್ಕೂ ಮುನ್ನ ಎರಡೆರಡು ಬಾರಿ ಯೋಚಿಸಿ. ವೃತ್ತಿಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಮತ್ತು ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಒಪ್ಪಂದಗಳು ಫಲಕಾರಿಯಾಗಲಿವೆ ಮತ್ತು ಪ್ರಸ್ತುತಿಗಳು ಪ್ರಶಂಸನೀಯವಾಗಿ ಮಾರ್ಪಡಲಿವೆ. ಕೆಳಗಿನ ಅಧಿಕಾರಿಗಳು ಎಲ್ಲಾ ಗೊತ್ತುಪಡಿಸಿದ ದರ್ಜೆಯನ್ನು ಪಡೆದುಕೊಳ್ಳುತ್ತಾರೆ. ಮನೆಯಲ್ಲಿ ಅದೃಷ್ಟ ಮುಂದುವರಿಯುತ್ತದೆ. ಶಾಂತ ಮತ್ತು ಸೌಮ್ಯತೆಯ ದೃಶ್ಯದೊಂದಿಗೆ, ಸಂಜೆಯ ವೇಳೆಗೆ ಹಿತಕರ ಸಮಯವು ಕಾದಿದೆ. ಆರೋಗ್ಯವು ಸ್ಥಿತಿಯು ಉತ್ಕೃಷ್ಟವಾಗಿರುತ್ತದೆ. ನೀವು ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಮತ್ತು ವಿರೋಧಿಗಳ ವಿರುದ್ಧ ಗೆಲುವು ಪಡೆಯಬಹುದು. ಮಹಿಳೆಯರೊಂದಿಗಿನ ಸಂಘರ್ಷದಿಂದ ದೂರವಿರಿ. ಯಾಕೆಂದರೆ ಇದರಲ್ಲಿ ನೀವು ಸೋಲುವ ಸಾಧ್ಯತೆಯಿದೆ.

ಮಕರ
ಮಂಗಳವಾರ, 6 ಜುಲೈ
ಇಂದು ದೃಢ ನಿಲುವನ್ನು ಅಥವಾ ಪ್ರಮುಖ ನಿರ್ಧಾರ ಕೈಗೊಳ್ಳುವುದನ್ನು ಮುಂದೂಡಿ.ಸದ್ಯಕ್ಕೆ ಅವುಗಳ ಬಗ್ಗೆ ಸರಿಯಾಗಿ ಯೋಚಿಸಲು ನೀವು ಉತ್ತಮ ಮನಸ್ಸಿನ ಚೌಕಟ್ಟನ್ನು ಹೊಂದಿಲ್ಲ. ಹೆಚ್ಚು ಗಮನ ಬೇಕಾಗಿರುವ ಪ್ರಮುಖ ವಿಚಾರಗಳಿಂದ ಕೆಲಸದಿಂದ ನಿಮ್ಮ ಮನಸ್ಸುಬೇರೆಡೆ ತೆರಳಬಹುದು. ಇದಕ್ಕೆ ಕಾರಣಗಳು ಯಾವುದೇ ಇರಬಹುದು. ನಿದ್ರೆಯ ಕೊರತೆಯಿಂದಲೂ ಆಗಿರಬಹುದು ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಚಿಂತೆಯೂ ಆಗಿರಬಹುದು. ಎಚ್ಚರಿಕೆಯಿಂದಿರಿ. ಕೆಲಸದಲ್ಲಿ ಮೇಲಾಧಿಕಾರಿಗಳು ದುರಾಕ್ರಮಣ ಮನಸ್ಥಿತಿಯನ್ನು ಹೊಂದಿರಬಹುದು ಮತ್ತು ಇದರಿಂದಾಗಿ ನಿಮ್ಮ ದೃಷ್ಟಿಕೋನವನ್ನು ಕಾಣಲು ವಿಫಲರಾಗಬಹುದು. ಧೈರ್ಯಕೆಡದಿರಿ. ಇದು ನಿಮ್ಮ ತಪ್ಪಲ್ಲ. ಜಾಗರೂಕರಾಗಿರಿ. ಮಕ್ಕಳೊಂದಿಗಿನ ಸಂಘರ್ಷವನ್ನು ತಪ್ಪಿಸಿ.

ಕುಂಭ
ಮಂಗಳವಾರ, 6 ಜುಲೈ
ಇಂದು ಪ್ರಣಯವು ನಿಮಗೆ ಹಿತಕರವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನಿಮಗೆ ಎಲ್ಲವೂ ಗಾಜಿನಲ್ಲಿರುವ ಗುಲಾಬಿಯಂತೆ ಕಾಣುತ್ತದೆ ಆದರೆ ಒಮ್ಮೆಲೇ ಹೂವಿನ ಸುವಾಸನೆಯು ಮಧುರವಾಗಿರುವಂತಿರುತ್ತದೆ ಮತ್ತು ಜಗತ್ತು ಉತ್ಕೃಷ್ಟ ಎಂಬುದಾಗಿ ಕಾಣುತ್ತದೆ. ಈ ದಿನವು ನೀವು ಕನಸಿನ ಲೋಕದಲ್ಲಿರುವಂತೆ ಭಾಸವಾಗುತ್ತದೆ. ಇದು ನೀವು ಒಬ್ಬರನ್ನು ಪಡೆದುಕೊಂಡ ಕಾರಣಕ್ಕಿರಬಹುದು. ಆದರೆ, ದುರ್ಬಲ ಸಾಮರ್ಥ್ಯವು ನಿಮ್ಮ ತಾಳ್ಮೆಗೆಡಬಹುದು ಮತ್ತು ಕಾರ್ಯಗಳನ್ನು ಪೂರ್ಣಗೊಳಿಸಿ ಬೇಗನೇ ಮನೆಗೆ ತೆರಳುವ ತರಾತುರಿಯಲ್ಲಿರಬಹುದು. ಮಹಿಳೆಯರು ಸೂಕ್ತ ರೀತಿಯ ವರ್ತನೆಯನ್ನು ತೋರುತ್ತಾರೆ ಮತ್ತು ಅವರ ದೃಷ್ಟಿಯನ್ನು ಅತಿಶಯಗೊಳಿಸುತ್ತಾರೆ. ಆದರೆ, ಪುರುಷರು ಹಣದ ವಿಚಾರಕ್ಕೆ ಸಂಬಂಧಿಸಿ ಚರ್ಚೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಾರೆ. ನಿಮ್ಮ ತಾಯಿಯಿಂದ ಲಾಭ ದೊರೆಯಲಿದೆ. ಆಸ್ತಿ ಮತ್ತು ವಾಹನಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರದಿಂದಿರಿ. ಮೊಂಡುತನದಿಂದಿರಬೇಡಿ ಮತ್ತು ನಿಮ್ಮ ಅವಕಾಶಗಳನ್ನು ಕಳೆದುಕೊಳ್ಳಬೇಡಿ.

ಮೀನ
ಮಂಗಳವಾರ, 6 ಜುಲೈ
ಅದೃಷ್ಟ ಮೀನ ರಾಶಿಯವರಿಗೆ ಅದೃಷ್ಟದಾಯಕ ದಿನವು ಕಾದಿದೆ. ನಿಮ್ಮ ಸೃಜನಶೀಲತೆ ಮತ್ತು ವಿಶ್ಲೇಷಣಾತ್ಮಕ ಅರ್ಹತೆಗಳಲ್ಲಿ ಏಳಿಗೆಯನ್ನು ಕಾಣುವಿರಿ, ಇದು ನಿಮ್ಮನ್ನು ಫಲಪ್ರದ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಶಕ್ತರನ್ನಾಗಿಸುತ್ತದೆ ಮತ್ತು ನಿಮ್ಮ ಆಲೋಚನೆ ಮತ್ತು ಕ್ರಿಯೆಗಳಲ್ಲಿ ಸ್ಥಿರತೆಯನ್ನು ಕಾಣುವಿರಿ. ಯೋಜಿತ ಕಾರ್ಯಗಳನ್ನು ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸುವಿರಿ. ದೀರ್ಘ ಸಮಯದವರೆಗೆ ಪರಿಣಾಮ ಬೀರುವಂತಹ ದೃಢ ನಿರ್ಧಾರವನ್ನು ನೀವು ತಾಳಬಹುದು. ಸ್ನೇಹಿತರೊಂದಿಗೆ ಸಣ್ಣ ಹಂತದ ಪ್ರವಾಸ ಯೋಜನೆ ನಡೆಸಲು ಉತ್ತಮ ಸಮಯ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂತಸದ ಸಮಯ ಕಳೆಯುವಿರಿ. ಸಂಜೆಯ ವೇಳೆ ಮನೆಗೆ ತೆರಳುವಾಗ ಗುಲಾಬಿ ಗುಚ್ಛಗಳನ್ನು ಕೊಂಡೊಯ್ಯಲು ಮರೆಯದಿರಿ. ಅವರು ಖಂಡಿತವಾಗಿಯೂ ನಿಮ್ಮ ಅನುಕೂಲತೆಗೆ ತಕ್ಕಂತೆ ಪ್ರತಿಫಲ ನೀಡುತ್ತಾರೆ. ನಿಮ್ಮ ಒಡಹುಟ್ಟಿದವರಿಂದ ಲಾಭ ಪಡೆಯುತ್ತೀರಿ ಮತ್ತು ವಿರೋಧಿಗಳ ಎದುರು ಗೆಲುವು ಸಾಧಿಸುತ್ತೀರಿ.

Leave a Reply

Your email address will not be published.