🙏ನಿತ್ಯವಾಣಿ ಶುಕ್ರವಾರದ ರಾಶಿ ಭವಿಷ್ಯ 🙏
ಮೇಷ
ಶುಕ್ರವಾರ, 9 ಜುಲೈ
ಈ ದಿನವು ಸಾಮಾನ್ಯ ಪ್ರಭಾವವನ್ನು ಹೊಂದಿರುತ್ತದೆ, ತುಂಬಾ ದಿನಗಳಿಂದ ಹಿಂದೆ ನೀವು ಯೋಜಿಸಿದ್ದ ಹೊಸ ವ್ಯಾವಹಾರಿಕ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಕುರಿತು ಪ್ರೇರಿತರಾಗಿರುವಂತೆ ಅನಿಸುವಿರಿ. ಮುಂದಕ್ಕೆ ಸಾಗಿ. ಏನೇ ಆದರೂ, ಕೆಲವೊಂದು ವಿಚಾರಗಳ ಬಗ್ಗೆ ನೀವು ಇನ್ನೂ ಸ್ಥಿರ ನಿರ್ಧಾರವನ್ನು ಹೊಂದಿರುವುದಿಲ್ಲ. ಆದ್ದರಿಂದ ನೀವು ದೃಢ ನಿರ್ಧಾರಕ್ಕೆ ಬರಲು ಅಶಕ್ತರಾಗುವಿರಿ. ಇದೇ ವಿಚಾರವು ನಿಮ್ಮ ಮನಸ್ಸನ್ನು ವ್ಯಾಪಿಸಿರುತ್ತದೆ. ನಿಮ್ಮ ಚಟುವಟಿಕೆಗಳ ವೇಗವನ್ನು ತಗ್ಗಿಸಿ ಮತ್ತು ವಿಶ್ರಾಂತಿಯನ್ನು ಪಡೆಯಿರಿ. ವೃತ್ತಿಕ್ಷೇತ್ರದಲ್ಲಿ ಶತ್ರುಗಳ ಪ್ರಾಬಲ್ಯವಿರುತ್ತದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಮತ್ತು ನಿಮ್ಮದೇ ಹಾದಿಯಲ್ಲಿ ಸಾಗಿ. ಒಂದು ಅಥವಾ ಎರಡು ದಿನಗಳ ಮಟ್ಟಿಗೆ ಪ್ರಯಾಣ ತೆರಳುವ ಸಂಭವವಿದೆ. ಮೇಷರಾಶಿಯ ಮಹಿಳೆಯರು ವಿಶೇಷವಾಗಿ ತಮ್ಮ ಸಿಟ್ಟು ಹಾಗೂ ಚುಚ್ಚುಮಾತುಗಳ ಮೇಲೆ ಹತೋಟಿಯಿಡಬೇಕು. ಇಂದು ನಿಮ್ಮೊಂದಿಗೆ ಜನರು ಹೆಚ್ಚು ಸಹಿಷ್ಣುತೆಯನ್ನು ಹೊಂದಿರುವುದಿಲ್ಲ.
ವೃಷಭ
ಶುಕ್ರವಾರ, 9 ಜುಲೈ
ನಿನ್ನೆಯ ಭವಿಷ್ಯದ ಪ್ರಮುಖ ಸಲಹೆಯು ಇಂದಿಗೂ ನಿಜವಾಗಲಿದೆ. ನೀವು ವೃಷಭರಾಶಿಯವರು ಶಕ್ತಿಗೆ ಹೆಸರಾದವರು. ಆದರೆ, ಇದು ಹಠಮಾರಿತನದೊಂದಿಗೆ ಬರುವುದರಿಂದ ಇಂದಿನ ಗ್ರಹಗತಿಗಳು ಸಂತೋಷವನ್ನು ತರುವುದಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ಚರ್ಚೆಯಿಂದ ದೂರವಿರಿ . ಇತರರ ದೃಷ್ಟಿಕೋನವನ್ನೂ ಪರಿಗಣಿಸಿ. ನೀವು ಏನು ಹೇಳುತ್ತೀರಿ ಅದರ ಬಗ್ಗೆ ಕುಶಲರಾಗಿರಿ ಮತ್ತು ಪ್ರತಿಫಲ ಪಡೆಯಿರಿ. ನೀವು ಮೃದುಸ್ವಭಾವದವರಾಗಿದ್ದಲ್ಲಿ ಸಿಡುಕಿನ ಸ್ನೇಹಿತರು ನಿಮ್ಮನ್ನು ನೆಲೆತಪ್ಪಿಸಬಹುದು. ನಿಮ್ಮ ಒಡಹುಟ್ಟಿದವರು, ಮತ್ತು ಪ್ರೀತಿಪಾತ್ರರಲ್ಲೂ ಇದೇ ಅನ್ವಯವಾಗುತ್ತದೆ. ಯಾವುದಕ್ಕೂ ಬಗ್ಗಬೇಡಿ. ನಿಮ್ಮತ್ತ ಬರುವ ಅತ್ಯುತ್ತಮ ಅವಕಾಶವೊಂದನ್ನು ನೀವು ಇನ್ನೂ ಕಳೆದುಕೊಳ್ಳುವ ಅಂಚಿನಲ್ಲಿರಬಹುದು. ಜೊತೆಗೆ ಇನ್ನೊಂದು ಅಡಚಣೆ ಉಂಟಾಗಲಿದೆ. ನೀವು ಇನ್ನೂ ಅಸ್ಥಿರವಾಗಿರಬಹುದು ಮತ್ತು ಏಕಾಭಿಪ್ರಾಯದ ನಿರ್ಧಾರವು ನಿಮಗೆ ಭಾರೀ ಕೆಲಸವೆನಿಸಬಹುದು. ನಿಧಾನವಾಗಿರಿ ಮತ್ತು ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸಬೇಡಿ.
ಮಿಥುನ
ಶುಕ್ರವಾರ, 9 ಜುಲೈ
ಇಂದು ನೀವು ಉತ್ತಮ ಆಶಾವಾದದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುತ್ತೀರಿ. ನಿಮ್ಮ ಮುಖದಲ್ಲಿನ ನಗುವು ಸಾವಿರಾರು ಹೃದಯಗಳಲ್ಲಿನ ದೀಪ ಬೆಳಗಲು ಸಾಕು,ಸದೃಢ ಆರೋಗ್ಯ, ಸಂತೋಷಕರ ಮಾನಸಿಕ ಸ್ಥಿತಿ, ಸ್ನೇಹಿತರೊಂದಿಗೆ ವಿಶೇಷ ಯೋಜನೆಗಳು ಇವೆಲ್ಲವನ್ನೂ ನೀವು ಇಂದು ಹೊಂದುತ್ತೀರಿ. ಕುಟುಂಬದೊಂದಿಗೆ ಅದ್ಭುತ ಭೋಜನ ಮಾಡುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ ಅಥವಾ ನಿಮ್ಮ ಮುಂಜಾನೆಯ ಉಪಾಹಾರವನ್ನು ನಿಮ್ಮ ಇನಿಯನೊಂದಿಗೆ ಸೇವಿಸಿ. ಲವಲವಿಕೆಯುಳ್ಳ ಉಡುಪು ಧರಿಸಿ. ಇದು ಬೇರೆಯವರನ್ನು ಆಕರ್ಷಿಸಲು ಅಲ್ಲ, ನಿಮ್ಮನ್ನೇ. ಇದು ಬದಲಾವಣೆಯ ಸಮಯ. ನಿಮ್ಮ ಪ್ರೀತಿ ಪಾತ್ರರಿಂದ ಉಡುಗೊರೆಗಳು ನಿಮ್ಮತ್ತ ಬರುವ ಹಾದಿಯಲ್ಲಿರಬಹುದು. ಆರ್ಥಿಕವಾಗಿ ಎಲ್ಲವೂ ಸುಸ್ಥಿತಿಯಲ್ಲಿರುತ್ತದೆ. ಇಂತಹ ಸುಂದರ ದಿನದಲ್ಲಿ ಮತ್ತು ಅದರ ಪ್ರತಿಫಲವನ್ನು ಪಡೆಯುತ್ತಿರುವ ವೇಳೆ ನಿಮ್ಮ ಮನದಲ್ಲಿ ಋಣಾತ್ಮಕ ಆಲೋಚನೆಗಳು ಬರದಂತೆ ನೋಡಿಕೊಳ್ಳಿ. ಖರ್ಚು ಹೆಚ್ಚಾಗಬಹುದು.
ಕರ್ಕಾಟಕ
ಶುಕ್ರವಾರ, 9 ಜುಲೈ
ಅನುಕೂಲಕರ ದಿನ ನಿಮಗಾಗಿ ಕಾದಿದೆ ಎಂಬು ಮುನ್ಸೂಚನೆ,ನೀವು ಆತಂಕ ಎಂಬ ಪೀಡೆಗೆ ಒಳಗಾಗಬಹುದು. ಇದರಿಂದಾಗಿ ಕೆಲವು ಪ್ರಮುಖ ಸಂಬಂಧಗಳಲ್ಲಿ ದೃಢ ನಿಲುವನ್ನು ತಾಳಲು ನಿಮಗೆ ಕಷ್ಟವಾಗಬಹುದು.ಎರಡು ಉದ್ಯೋಗಗಳ ನಡುವೆ ಆಯ್ಕೆ ಮಾಡಬೇಕಾದ ಪರಿಸ್ಥಿತಿಯೂ ಇರಬಹುದು. ನಿಮ್ಮೊಳಗಿನ ಗೊಂದಲವು ನಿಮ್ಮ ಆರೋಗ್ಯ ಮತ್ತು ಮಾನಸಿಕ ಶಾಂತಿಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಇಲ್ಲವಾದಲ್ಲಿ ನೀವು ಎಲ್ಲಾ ಒತ್ತಡಗಳನ್ನು ತುಂಬಿಕೊಂಡು ನಂತರ ನಿಮ್ಮ ಪ್ರೀತಿಪಾತ್ರರ ಮೇಲೆ ಅದನ್ನು ಹರಿಯಬಿಡಬಹುದು. ಇದು ಸಂಘರ್ಷಕ್ಕೆ ಕಾರಣವಾಗಬಹುದು ಮತ್ತು ನಿಮ್ಮ ಸಹೋದ್ಯೋಗಿಗಳೊಂದಿಗೆ ಮತ್ತು ಅಪರಿಚಿತರೊಂದಿಗೂ ಘರ್ಷಣೆಯನ್ನು ಉಂಟುಮಾಡಬಹುದು. ಆಳವಾದ ಉಸಿರು ತೆಗೆದುಕೊಳ್ಳಿ, ಎಲ್ಲವನ್ನೂ ನಿಮಿಷಗಳ ಕಾಲ ಮುಂದೂಡಿ ಮತ್ತು ಕಚೇರಿಗೆ ವಿಳಂಬವಾಗಿ ತಲುಪುವುದು ಉತ್ತಮ. ಆವೇಗವನ್ನು ತಪ್ಪಿಸಿ ಮತ್ತು ಅನಿರೀಕ್ಷಿತೆಯ ಬಗ್ಗೆ ಎಚ್ಚರವಾಗಿರಿ.
ಸಿಂಹ
ಶುಕ್ರವಾರ, 9 ಜುಲೈ
ನೀವು ಮತ್ತು ನಿಮ್ಮ ಗ್ರಹಗತಿಗಳು ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ.ನಿನ್ನೆಯ ಗ್ರಹಗತಿಯ ಸನ್ನಿವೇಶಗಳ ಅಸ್ಥಿರತೆಯು ನಿಮ್ಮನ್ನು ದೃಢನಿರ್ಧಾರ ಕೈಗೊಳ್ಳಲು ಬಿಡುವುದಿಲ್ಲ. ಅನಿಶ್ಚಿತತೆಯು ಅಧಿಕಾರ ಚಲಾಯಿಸುತ್ತದೆ, ಕನಿಷ್ಟ ಮಧ್ಯಾಹ್ನದೊಳಗೆ ಅವುಗಳನ್ನು ತೊಡೆದುಹಾಕಲು ತೀವ್ರ ಪ್ರಯತ್ನಿಸಿ ಇಲ್ಲದಿದ್ದಲ್ಲಿ ನಿಮಗಾಗಿ ಕಾದಿರುವ ಅತ್ಯುತ್ತಮ ಅವಕಾಶವನ್ನು ನೀವು ಕಳೆದುಕೊಳ್ಳಬಹುದು. ನೀವು ಅನ್ಯಮನಸ್ಕರಾಗಿರುತ್ತೀರಿ. ಸದ್ಯಕ್ಕೆ ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸಬೇಡಿ. ಆಲೋಚಿಸಲು ಸಮಯಾವಕಾಶ ತೆಗೆದುಕೊಳ್ಳಿ ಮತ್ತು ನಿಮ್ಮ ಆಯ್ಕೆಗಳನ್ನು ಸರಿಯಾಗಿ ಪರಿಶೀಲಿಸಿ. ಮಹಿಳೆಯರು ಕಾಫಿ ಅಥವಾ ಸಂತೋಷ ಕೂಟಕ್ಕೆ ಆಹ್ವಾನಿಸಿದರೆ, ಅದನ್ನು ನಿರಾಕರಿಸಬೇಡಿ. ಅವರಿಂದ ನಿಮಗೆ ಪ್ರಯೋಜನ ಉಂಟಾಗಲಿದೆ. ಸ್ನೇಹಿತರೊಂದಿಗಿನ ವಿಹಾರ ಯೋಜನೆಯಲ್ಲೂ ಇದೇ ಅನ್ವಯಿಸುತ್ತದೆ. ಹಣಕಾಸಿನ ವಿಚಾರಗಳಿಗೆ ಮತ್ತು ವ್ಯವಹಾರಗಳಿಗೆ ಇಂದು ಅದೃಷ್ಟಕರ ದಿನ.
ಕನ್ಯಾ
ಶುಕ್ರವಾರ, 9 ಜುಲೈ
ಇಂದು ಅದೃಷ್ಟದಾಯಕ ಮತ್ತು ಶುಭಕರ ದಿನವನ್ನು ಪಡೆಯುವ ಯೋಗವು ಕನ್ಯಾರಾಶಿಯವರಾದ ನಿಮಗಿದೆ. ಯಾವುದೇ ಒಂದು ಕಾರ್ಯವನ್ನು ಪೂರ್ಣಗೊಳಿಸಲು ಸಿದ್ಧರಾಗಿ ನಿಂತಿದ್ದಲ್ಲಿ ಅದನ್ನು ಪೂರ್ಣಗೊಳಿಸುವಿರಿ ಮತ್ತು ಜಗತ್ತಿಗೆ ಅದನ್ನು ತೋರ್ಪಡಿಸುವಿರಿ.ವೃತ್ತಿನಿರತರಿಗೆ ಮತ್ತು ವ್ಯಾಪಾರಿಗಳಿಗೆ ವಿಫುಲ ಅವಕಾಶಗಳು ಬರುವ ಸಾಧ್ಯತೆಯಿದೆ. ಪಾಲುದಾರಿಕೆ, ಬಡ್ತಿ, ವೇತನ ಹೆಚ್ಚಳ, ನಿಮ್ಮ ವೃತ್ತಿಗೆ ಹಾಗೂ ವ್ಯವಹಾರಕ್ಕೆ ಧನಾತ್ಮಕ ಪ್ರೋತ್ಸಾಹವನ್ನು ನೀಡುವ ಯಾವುದೇ ವಿಚಾರಗಳು ಸಂಭವಿಸಲಿವೆ. ಮೇಲಾಧಿಕಾರಿಗಳು ನಿಮ್ಮ ಬೆನ್ನುತಟ್ಟಲಿದ್ದಾರೆ ಮತ್ತು ನಿಮ್ಮ ಗೌರವಾದರಗಳು ಹೆಚ್ಚಲಿವೆ. ನಿಮ್ಮ ತಂದೆ, ತಂದೆಯ ಸಂಬಂಧಿ ಅಥವಾ ತಾತ ನಿಮಗೆ ಲಾಭವನ್ನು ಉಂಟುಮಾಡುವ ವ್ಯಕ್ತಿಗಳಲ್ಲಿ ಒಬ್ಬರಾಗಿರಬಹುದು. ಆರೋಗ್ಯ ಸ್ಥಿತಿಯು ಉತ್ತಮವಾಗಿರುತ್ತದೆ. ಕುಟುಂಬ, ಮತ್ತು ವೈವಾಹಿಕ ಸಂಬಂಧಗಳು ಪ್ರೀತಿಯಿಂದ ಹಾಗೂ ಹಿಗ್ಗಿನಿಂದ ಕೂಡಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಚರ್ಚೆಗಳು ಫಲಕಾರಿಯಾಗಲಿವೆ. ಯಾವುದೇ ಅಧಿಕಾರಕ್ಕೆ ಸಂಬಂಧಿಸಿದ ಕಾರ್ಯಗಳು ಸುಲಭವಾಗಿ ನಡೆಯಲಿವೆ. ಸರಕಾರಿ ಬಂಡವಾಳ ಯೋಜನೆಗಳಲ್ಲಿ ಬಂಡವಾಳ ಹೂಡಲು ಉತ್ತಮ ಸಮಯ.
ತುಲಾ
ಶುಕ್ರವಾರ, 9 ಜುಲೈ
ಸೃಜನಶೀಲ, ಸಾಹಿತ್ಯ ಮತ್ತು ಬೌದ್ಧಿಕ ಹವ್ಯಾಸಗಳಿಗೆ ಇಂದು ಅನುಕೂಲಕರ ದಿನ ಮತ್ತು ನಿಮ್ಮ ಆಸಕ್ತಿಯು ಸಮಾನ ದಿಕ್ಕಿನಲ್ಲಿರುತ್ತದೆ,ಆಳವಾದ ಚತುರ ಚರ್ಚೆಯ ಅಗತ್ಯವುಳ್ಳ ಯಾವುದೇ ವಿಚಾರಗಳು ನಿಮ್ಮನ್ನು ಉತ್ಸಾಹಿತಗೊಳಿಸುತ್ತದೆ. ನಿಮ್ಮ ಸೃಜನಶೀಲ ಆಲೋಚನೆಗಳಿಗೆ ಆಕಾರ ನೀಡಿ ಅದನ್ನು ರೂಪಿಸಲು ಇದು ಉತ್ಕೃಷ್ಟ ಸಮಯ. ಇವೆಲ್ಲವನ್ನೂ ಮಾಡಿ , ಮತ್ತು ನೀವು ಪ್ರತಿಫಲವನ್ನೂ ಪಡೆಯಬಹುದು ಆದರೆ, ಅಸೂಯೆ ಮತ್ತು ದ್ರೋಹ ಬಗೆಯುವಂತಹ ಪ್ರತಿಸ್ಪರ್ಧಿಗಳ ಬಗ್ಗೆ ಜಾಗರೂಕರಾಗಿರಿ. ಅವರು ನಿಮ್ಮನ್ನು ವಿವಾದದಲ್ಲಿ ಸಿಕ್ಕಿಸಬಹುದು ಮತ್ತು ಮುಂದಕ್ಕೆ ಸಹಕಾರವು ಕ್ಷೀಣಿಸಬಹುದು.ಏನೇ ಆದರೂ ಚಿಂತೆಯಿಲ್ಲ, ಇವುಗಳ ಮಧ್ಯೆ ಸಾಗಲು ನೀವು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದೀರಿ.ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ ಮತ್ತು ಆರೋಗ್ಯ ಪ್ರಜ್ಞೆಯನ್ನು ಹೊಂದಿರಿ. ನೀವು ಸ್ನೇಹಿತರೊಂದಿಗೆ ಯಾತ್ರೆಯನ್ನು ಪ್ರಾರಂಭಿಸಬಹುದು ಅಥವಾ ವಿದೇಶದಿಂದ ಶುಭ ಸುದ್ದಿ ಬರಬಹುದು.
ವೃಶ್ಚಿಕ
ಶುಕ್ರವಾರ, 9 ಜುಲೈ
ಆಕರ್ಷಣ ವಿಫುಲರು! ನೀವು ಕಬ್ಬಿಣದಂತೆ ಅವರು ಅಥವಾ ಅದು ಅಯಸ್ಕಾಂತದಂತೆ. ಏನೇ ಆಗಿರಲಿ ಅಥವಾ ಯಾರೇ ಆಗಿರಲಿ ನೀವು ಆಕರ್ಷಿತರಾಗುತ್ತೀರಿ ಮತ್ತು ಮನಸೆಳೆಯುವ ಸಾಮರ್ಥ್ಯವನ್ನು ಹೊಂದಿರುತ್ತೀರಿ. ಅಂತಹ ಯಾವುದೇ ಪ್ರಚೋದನೆಗಳ ಬಗ್ಗೆ ಹತೋಟಿಯಿರಿಸಿ, ಮನಸೂರೆಗೊಳ್ಳುವ ಸುಂದರಿಯನ್ನು ನಿಮ್ಮ ಕಾರ್ಯದರ್ಶಿಯಾಗಿ ನೇಮಕಮಾಡುವ ಮುನ್ನ, ಫೇಸ್‌ಬುಕ್ ಸ್ನೇಹಿತರೊಂದಿಗೆ ನಿಮ್ಮ ದೂರವಾಣಿ ಸಂಖ್ಯೆಯನ್ನು ಹಂಚಿಕೊಳ್ಳುವ ಮುನ್ನ, ಹೊಸ ಯೋಜನೆಗಳಲ್ಲಿ ಬಂಡವಾಳ ಹೂಡುವ ಮುನ್ನ ಪರಿಶೀಲನಾ ಕ್ರಮ ಕೈಗೊಳ್ಳಿ. ನನ್ನ ಗೆಳೆಯ ಮೊದಲಾದ ಅಪನಂಬಿಕೆಗಳಿಗೆ ಒಳಗಾಗುವಿರಿ. ಅನೈತಿಕ ಅಥವಾ ಕ್ರಾಂತಿಕಾರಿ ಯೋಜನೆಗಳನ್ನು ಕಿತ್ತೊಗೆಯಿರಿ. ಠೇವಣಿಯನ್ನು ಸಂಗ್ರಹಿಸಿ ಮತ್ತು ಉಳಿಸಿ. ನಿಮ್ಮ ಉದ್ರೇಕವನ್ನು ನಿಯಂತ್ರಿಸಿ ಮತ್ತು ಯೋಗ, ಧ್ಯಾನ, ವ್ಯಾಯಾಮ ಮತ್ತು ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುವ ಮೂಲಕ ನಿಮ್ಮ ಗಮನವನ್ನು ಬೇರೆಡೆ ಹರಿಸಿ.
ಧನು
ಶುಕ್ರವಾರ, 9 ಜುಲೈ
ದೇವರ ಅನುಗ್ರಹವು ಮತ್ತು ಗ್ರಹಗತಿಗಳ ಉತ್ತಮ ಹೊಂದಾಣಿಕೆಯು ಉಲ್ಲಾಸ, ಹರ್ಷ ಹಾಗೂ ಆನಂದದಾಯಕ ದಿನವನ್ನು ದಯಪಾಲಿಸುತ್ತದೆ. ನೀವು ಈ ಪಡೆಯುವ ಪ್ರಯೋಜನದೊಂದಿಗೆ ನೀವು ಮನರಂಜನೆ ಹಾಗೂ ಗೆಲುವಿನಿಂದಿರುವಿರಿ. ಇದು ವಿನೋದಕೂಟವಾಗಿರಬಹುದು, ನಿಮ್ಮ ನಿಶ್ಚಿತಾರ್ಥದಂತಹ ಶುಭ ಸಮಾರಂಭವಾಗಿರಬಹುದು, ಪ್ರವಾಸ, ಅತ್ಯುತ್ತಮ ಪ್ರಯಾಣ ಅಥವಾ ಶಾಪಿಂಗ್ ಮುಂತಾದವುಗಳು ನಿಮ್ಮನ್ನು ಸಂಭ್ರಮದಲ್ಲಿರಿಸುತ್ತದೆ. ನೀವು ಹುರುಪಿನಿಂದಿರುತ್ತೀರಿ ಮತ್ತು ಇದು ನಿಮ್ಮ ಅಭಿರುಚಿಯ ಉಡುಪು ಹಾಗೂ ರುಚಿಕರವಾದ ವಿವಿಧ ಅಡುಗೆಯ ಆನಂದದಲ್ಲಿ ಪ್ರತಿಬಿಂಬಿತವಾಗುತ್ತದೆ.ವಿವಿಧ ಸಂಸ್ಕೃತಿಗಳಿಂದ ನಿಮ್ಮನ್ನು ಆಕರ್ಷಿಸಬಲ್ಲ ಒಬ್ಬರನ್ನು ನೀವು ಭೇಟಿ ಮಾಡಬಹುದು ಮತ್ತು ಇದರಿಂದ ನಿಮ್ಮನ್ನು ಖುಷಿಯಲ್ಲಿರಿಸುತ್ತದೆ. ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಕೆಮೆಸ್ಟ್ರಿಯನ್ನು ಆನಂದಿಸಬಹುದು. ಸೃಜನಶೀಲ ಮತ್ತು ಸಾಹಿತ್ಯ ಆಸಕ್ತಿ ಉಳ್ಳವರಿಗೆ ಇದು ಉತ್ಕೃಷ್ಟ ದಿನ. ನೀವು ಪ್ರಶಂಸೆಯನ್ನೂ ಗಳಿಸಬಹುದು. ಪಾಲುದಾರಿಕೆಗೆ ಈ ದಿನವು ಅದೃಷ್ಟಕಾರಿಯಾಗಿದೆ.
ಮಕರ
ಶುಕ್ರವಾರ, 9 ಜುಲೈ
ತುಂಬಾ ಸಮಯದ ನಂತರ ಉಜ್ವಲ ದಿನವು ನಿಮಗೆ ಕಾದಿದೆ, ನೀವು ಕುಂಭ ರಾಶಿಯವರು ಕಠಿಣ ಪರಿಶ್ರಮಿಗಳು ಅನೇಕ ಸಮಸ್ಯೆಗಳನ್ನು ಎದುರಿಸಿದ್ದೀರಿ.ಮತ್ತು ಈಗ ನಿಮಗೆ ಉತ್ತಮ ಪ್ರತಿಫಲ ಸಿಗಲಿದೆ.ನಿಮ್ಮ ವ್ಯವಹಾರವನ್ನು ವೃದ್ಧಿಸಲು ಯೋಜನೆ ರೂಪಿಸಿದ್ದಲ್ಲಿ ಇದಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ. ಎಲ್ಲಾ ಕಡೆಗಳಿಂದಲೂ ನಿಮಗೆ ಬೆಂಬಲ ಸಿಗಲಿದೆ. ಹಣ ನೀಡುವುದು ಅಥವಾ ಪಡೆಯುವುದು ಅನುಕೂಲಕರವಾಗಲಿದೆ. ಮನೆಯಲ್ಲಿ, ಎಲ್ಲವೂ ಸುಸ್ಥಿತಿಯಲ್ಲಿರುತ್ತದೆ. ದೈನಂದಿನ ವಿಚಾರಗಳಲ್ಲಿ ಖರ್ಚು ಹೆಚ್ಚಾಗಬಹುದು ಆದರೆ, ಆದಾಯವೂ ಹೆಚ್ಚಾಗಲಿದೆ ಆದ್ದರಿಂದ ಪರಿಣಾಮವು ಸಮರೂಪಗೊಳ್ಳುತ್ತದೆ. ಸಹೋದ್ಯೋಗಿಗಳಿಂದ ಸಹಕಾರ, ವೈರಿಗಳ ವಿರುದ್ಧದ ಗೆಲುವು, ಉತ್ತಮ ಆರೋಗ್ಯ ಇವೆಲ್ಲವೂ ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ. ವಿದೇಶಿ ವ್ಯಾಪಾರ ಭಾರೀ ಯಶಸ್ಸನ್ನು ಕಾಣುತ್ತದೆ. ಆದರೆ, ತಮ್ಮ ಕಾರ್ಯವನ್ನು ಮುಂದುವರಿಸಲು ಅಗತ್ಯವಾಗಿ ಮಾಡಬೇಕಾದ ಅಧಿಕಾರಿ ಸಂಬಂಧಿ ಕಾರ್ಯಗಳ ಅಡೆತಡೆಗಳಿಂದಾಗಿ ಉದ್ಯಮಿಗಳು ಗೊಂದಲಗೊಳಗಾಗಬಹುದು.
ಕುಂಭ
ಶುಕ್ರವಾರ, 9 ಜುಲೈ
ಇಂದು ಯಾವುದೇ ಹೊಸ ಯೋಜನೆಗಳ ಪ್ರಾರಂಭವನ್ನು ತಪ್ಪಿಸುವಂತೆ ನಿಮ್ಮ ಮನಸ್ಥಿತಿಯು ಇನ್ನೂ ಸ್ಥಿರವಾಗಿರುವುದಿಲ್ಲ,ನೀವು ಅಸ್ಥಿರತೆಯ ಭಾವಕ್ಕೆ ಬದ್ಧರಾಗಿರುತ್ತೀರಿ. ದೃಢ ನಿರ್ಧಾರಕ್ಕೆ ಬರಲು ನೀವು ವಿಫಲರಾಗುವಿರಿ. ಈ ರಾಶಿಯ ಮಹಿಳೆಯರು ತಾವು ಮಾತನಾಡುವ ಪ್ರತಿಯೊಂದು ಪದಗಳ ಮೇಲೂ ನಿಯಂತ್ರಣವಿರಿಸಬೇಕು. ಅವರ ಅಸಮಾಧಾನವನ್ನು ತೋರ್ಪಡಿಸುವಲ್ಲಿ ಹತೋಟಿಯನ್ನು ಕಾಯ್ದುಕೊಳ್ಳಿ. ಮಕ್ಕಳಿಗೆ ಸಂಬಂಧಿಸಿ ವಿಚಾರಗಳಲ್ಲಿ ನೀವು ಆತಂಕದಲ್ಲಿದ್ದು ನೀವು ಸರಿಯಾದ ಮನಸ್ಥಿತಿಯನ್ನು ಹೊಂದಿರದೇ ಇರುವ ಕಾರಣ ಪ್ರಯಾಣವನ್ನು ಮುಂದೂಡಿ. ಖರ್ಚುವೆಚ್ಚಗಳು ಒಮ್ಮೆಲೇ ವರ್ಧಿಸಬಹುದು. ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಣ್ಣ ಮಟ್ಟದ ವ್ಯಾಧಿಯು ನಿಮ್ಮನ್ನು ತೊಂದರೆಗೊಳಪಡಿಸಬಹುದು. ಸೃಜನಶೀಲ ಅಥವಾ ಸಾಹಿತ್ಯ ಹವ್ಯಾಸಗಳಿಗೆ ಇಂದು ಉತ್ಕೃಷ್ಟ ದಿನ ಮತ್ತು ಬೌದ್ಧಿಕ ಸಂವಾದಗಳಲ್ಲಿ ಭಾಗವಹಿಸುವ ಮೂಲಕ ನೀವು ಉತ್ಸಾಹದಲ್ಲಿರುವಂತೆ ಅನಿಸಬಹುದು.
ಮೀನ
ಶುಕ್ರವಾರ, 9 ಜುಲೈ
ಈ ದಿನವು ತುಂಬಾ ಅನುಕೂಲಕರ ದಿನವಾಗಲಿದೆ, ಈ ದಿನದಲ್ಲಿ ಸಾಗಲು ನೀವು ಆಶಾವಾದಿಯಾಗಿರಬೇಕಾದ ಅಗತ್ಯವಿದೆ. ಕುಟುಂಬ ಸದಸ್ಯರೊಂದಿಗೆ ನೀವು ಸಂಘರ್ಷದಲ್ಲಿ ತೊಡಗಬಹುದು. ಪರಿಣಾಮವಾಗಿ ನೀವು ಅಹಿತಕರ ಮತ್ತು ಅಸಾಮರ್ಥ್ಯ ಭಾವನೆಯನ್ನು ಹೊಂದಬಹುದು. ನಿಮ್ಮ ಆರೋಗ್ಯ ಮತ್ತು ಮನಸ್ಸಿನ ಉಯ್ಯಾಲೆಯ ಬಗ್ಗೆ ಎಚ್ಚರಿಕೆವಹಿಸಿ. ಒಂದು ವೇಳೆ ನಿದ್ರಾಹೀನತೆಯು ನಿಮ್ಮನ್ನು ಕಾಡಿದರೆ, ನೀವು ಸಾಕಷ್ಟು ವಿಶ್ರಾಂತಿ ಪಡೆದುಕೊಂಡಿದ್ದೀರಿ, ವ್ಯಾಯಾಮ ಮತ್ತು ಧ್ಯಾನದಲ್ಲಿ ತೊಡಗಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಸುತ್ತಲಿರುವ ಮಹಿಳೆಯರ ಬಗ್ಗೆ ಹುಷಾರಾಗಿರಿ. ಇದು ಅಸೂಯೆ ಹೊಂದಿದ ನಿಮ್ಮ ಸ್ನೇಹಿತೆಯಾಗಿರಬಹುದು ಅಥವಾ ಜಗಳಗಂಟಿ ಅತ್ತೆಯಾಗಿರಬಹುದು. ಅವರಿಂದ ದೂರವಿರಿ. ಅವರು ಉತ್ತಮ ಪ್ರಭಾವವನ್ನು ಬೀರುವುದಿಲ್ಲ. ಸಾಮಾಜಿಕ ಅಥವಾ ಆರ್ಥಿಕ ನೆಲೆಯಲ್ಲಿ ನಿಮಗೆ ನಷ್ಟ ಉಂಟಾಗಬಹುದು.