🙏ನಿತ್ಯವಾಣಿ ಭಾನುವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಭಾನುವಾರದ ರಾಶಿ ಭವಿಷ್ಯ 🙏

ಮೇಷ
ಭಾನುವಾರ, 11 ಜುಲೈ
ಇಂದು ನೀವು ಅತ್ಯಂತ ಭಾವುಕರಾಗಿರುವಿರಿ. ನೀವು ಎಲ್ಲವನ್ನೂ ಬೇಗನೇ ಮನಸ್ಸಿಗೆ ಹಚ್ಚಿಕೊಳ್ಳುವ ಕಾರಣ ಮಾನಸಿಕವಾಗಿ ಸದೃಢರಾಗಲು ಪ್ರಯತ್ನಿಸಿ, ಹಲವಾರು ವಿಷಯಗಳು ನಿಮ್ಮನ್ನು ಚಿಂತೆಗೀಡುಮಾಡಬಹುದು ಮುಖ್ಯವಾಹಿ ನಿಮ್ಮ ತಾಯಿಯ ಆರೋಗ್ಯ. ಧ್ಯಾನ ಮತ್ತು ಯೋಗಾಭ್ಯಾಸಗಳ ಸಹಾಯದಿಂದ ನಿಮಗೆ ವಿಶ್ರಾಂತಿ ದೊರೆಯಬಹುದು. ಇಂದು ಅನುಕೂಲಕರ ದಿನವಲ್ಲದ ಕಾರಣ ನಿಮ್ಮ ಆಸ್ತಿ ಅಥವಾ ಮನೆಗಳಿಗೆ ಸಂಬಂಧಿಸಿದ ಕಾನೂನುಪತ್ರಗಳ ವ್ಯವಹಾರಗಳಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ. ಮಹಿಳೆ ಮತ್ತು ಅಜ್ಞಾತ ಜಲಪ್ರದೇಶಗಳ ಬಗ್ಗೆ ಎಚ್ಚರದಿಂದಿರಿ, ವಿದ್ಯಾರ್ಥಿಗಳು ಪರಿಪೂರ್ಣ ಫಲಿತಾಂಶವನ್ನು ಪಡೆಯಬೇಕಾದರೆ ಹೆಚ್ಚಿನ ಶ್ರಮಪಡಬೇಕಾಗಬಹುದು. ಮೇಷರಾಶಿಯವರಿಗೆ ಇಂದು ಸರಾಸರಿ ದಿನ.

ವೃಷಭ
ಭಾನುವಾರ, 11 ಜುಲೈ
ಆತಂಕ ಮತ್ತು ಉದ್ವೇಗವು ಇಂದು ನಿಮ್ಮಲ್ಲಿ ತುಂಬಿರುತ್ತದೆ, ಆದರೂ, ಚಿಂತೆಗಳ ಕಾರ್ಮೋಡದಿಂದ ನಿಮಗೆ ಮುಕ್ತಿ ದೊರೆಯಲಿದೆ ಮತ್ತು ನೀವು ಖುಷಿ ಮತ್ತು ಗೆಲುವಿನಿಂದ ಕೂಡಿರುತ್ತೀರಿ. ಕುಟುಂಬ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ಸಂಜೆಯ ವೇಳೆ ಸ್ನೇಹಕೂಟ ಅಥವಾ ಆಹ್ವಾನಕೂಟವನ್ನು ಆಯೋಜಿಸಬಹುದು. ಇಂದು ನೀವು ಸೃಜನಶೀಲತೆಯ ಉತ್ತುಂಗದಲ್ಲಿರುವಿರಿ. ಅನಿರೀಕ್ಷಿತ ಪ್ರಯಾಣ ತೆರಳುವ ಸಾಧ್ಯತೆಯಿರುವುದರಿಂದ ಅದಕ್ಕೆ ಸಿದ್ಧರಾಗಿರಿ. ಹಣಕಾಸು ವಿಚಾರಗಳಿಗೆ ಮತ್ತು ಹಣಕಾಸು ಮೂಲಗಳ ಮರುಸಂಘಟನೆಗೆ ಇಂದು ಸೂಕ್ತದಿನ. ತೃಪ್ತಿಕರ ದಿನವನ್ನು ಹೊಂದಿ.

ಮಿಥುನ
ಭಾನುವಾರ, 11 ಜುಲೈ
ಹೊರಗೆ ಹೋಗಿ, ಜನರನ್ನು ಭೇಟಿಯಾಗಿ ಮತ್ತು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಬೆರೆಯಿರಿ. ಇದು ನಿಮ್ಮನ್ನು ದಿನವಿಡೀ ಉತ್ಸಾಹದಿಂದಿರಿಸುತ್ತದೆ. ಪ್ರಾರಂಭಿಕವಾಗಿ ಅನಿರೀಕ್ಷಿತ ಹಣಕಾಸು ಯೋಜನೆಗಳ ಅನುಭವವಾಗಬಹುದು, ಆದರೂ, ನಂತರ ಇದನ್ನು ನೀವು ಬಗೆಹರಿಸಬಲ್ಲಿರಿ, ಅಪೂರ್ಣಗೊಂಡಿರುವ ಯಾವುದೋ ಕಾರ್ಯವು ಈಗ ಪೂರ್ಣಗೊಳ್ಳುವ ಸಾಧ್ಯತೆಯಿರುವುದರಿಂದ ಇಂದು ನೀವು ಶಾಂತಿಯಿಂದಿರುವಿರಿ. ಕಾರ್ಯಕ್ಷೇತ್ರದಲ್ಲಿ ಆರೋಗ್ಯಕರ ವಾತಾವರಣ ಮತ್ತು ಸಹೋದ್ಯೋಗಿಗಳ ಬೆಂಬಲವು ನಿಮ್ಮ ದಿನವನ್ನು ಇನ್ನಷ್ಟು ಉತ್ತಮವಾಗಿಸಲಿದೆ.

ಕರ್ಕಾಟಕ
ಭಾನುವಾರ, 11 ಜುಲೈ
ಪ್ರೀತಿಯು ಗಾಳಿಯಲ್ಲಿದೆ ಎಂಬುದಾಗಿ ಊರು ತುಂಬಾ ಗುಲ್ಲೆಬ್ಬಿಸಿ!, ಈ ದಿನವು ಅನೇಕ ಆಕಸ್ಮಿಕಗಳಿಂದ ಕೂಡಿದ್ದು, ಇವು ನಿಮ್ಮ ಸ್ನೇಹಿತರು, ಸಂಬಂಧಿಗಳು ಅಥವಾ ಸಂಗಾತಿಯಿಂದಲೂ ಆಗಿರಬಹುದು. ಸುಂದರ ಪ್ರವಾಸಿ ತಾಣಗಳಲ್ಲಿ ನಿಮಗಿಷ್ಟವಾದ ತಿನಿಸುಗಳನ್ನು ಆಸ್ವಾದಿಸುತ್ತಾ ನಿಮ್ಮ ಪ್ರೀತಿಪಾತ್ರರೊಂದಿಗೆ ದಿನವನ್ನು ಅತ್ಯಂತ ಖುಷಿಯಿಂದ ಕಳೆಯುವಿರಿ. ಬೆಂಬಲಿಸುವ ಹಾಗೂ ಅರ್ಥೈಸಿಕೊಳ್ಳುವ ಸಂಗಾತಿಯನ್ನು ಪಡೆದಿರುವುದು ತಮ್ಮ ಅದೃಷ್ಟ ಎಂಬುದಾಗಿ ತಿಳಿದುಕೊಳ್ಳುವುದರಿಂದ ಸಂಗಾತಿಗಳು ಇಂದು ಉತ್ತಮ ದಿನವನ್ನು ಹೊಂದಿರುತ್ತಾರೆ.ಸಂಕ್ಷಿಪ್ತವಾಗಿ ಅದ್ಭುತ ದಿನವು ನಿಮಗಾಗಿ ಕಾದಿದೆ.

ಸಿಂಹ
ಭಾನುವಾರ, 11 ಜುಲೈ
ಇಂದು ನೀವು ಹಲವಾರು ವಿಚಾರಗಳ ಬಗ್ಗೆ ಎಚ್ಚರಿಕೆಯಿಂದರಬೇಕಾದ ಕಾರಣ ಜಾಗರೂಕರಾಗಿರಿ, ಇಂದು ನೀವು ಅತ್ಯಂತ ಭಾವುಕರಾಗಿರುವುದರಿಂದ ಮತ್ತು ಇದು ಅನುಕೂಲಕರ ರೀತಿಯಲ್ಲಿ ಕಾರ್ಯನಿರ್ವಹಣೆಗೊಳ್ಳದ ಕಾರಣ, ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಿ. ಸಾಧ್ಯವಿದ್ದರೆ, ಕಾನೂನು ವಿಚಾರಗಳಿಂದ ದೂರವಿರಿ. ನಿಮ್ಮ ಗ್ರಹಗತಿಗಳು ಈ ವಿಚಾರಗಳಲ್ಲಿ ಸಹಾಯ ಮಾಡುವಲ್ಲಿ ದುರ್ಬಲರಾಗಿರಬಹುದು. ಮೃದು ಮಾತು ಹಾಗೂ ವಿನಯದ ವರ್ತನೆಯಿಂದ ನೀವು ಏನೇ ಮಾಡಿದರೂ ಅದರಲ್ಲಿ ಯಶಸ್ಸು ಸಾಧಿಸುತ್ತೀರಿ. ವಿದೇಶದಿಂದ ಬರುವ ಸುದ್ದಿಗಳು ನಿಮ್ಮ ಕೆಲಸಗಳನ್ನು ಉತ್ತಮವಾಗಿಸಲಿವೆ.

ಕನ್ಯಾ
ಭಾನುವಾರ, 11 ಜುಲೈ
ವೃತ್ತಿ ಮತ್ತು ವೈಯಕ್ತಿವಾಗಿ ಇಂದು ನಿಮಗೆ ಪ್ರಯೋಜನ ಉಂಟಾಗಲಿದ್ದು, ಇಷ್ಟು ದಿನಗಳ ನಿಮ್ಮ ಕಾಯುವಿಕೆಗೆ ಅಂತ್ಯಕಂಡಿದೆ. ಲಕ್ಷ್ಮೀದೇವಿಯು ನಿಮಗೆ ಸಂಪೂರ್ಣ ಸಂಪತ್ತನ್ನು ಅನುಗ್ರಹಿಸಲಿದ್ದಾಳೆ. ಮುಂದಕ್ಕೆ ಸಾಗಿ ಮತ್ತು ಗಾಳಿ ಬಂದಾಗ ತೂರಿಕೊಳ್ಳಿ. ವಿರಾಮದ ಪ್ರವಾಸ ತೆರಳಲಿದ್ದೀರಿ. ಇದು ನಿಮ್ಮ ಸ್ನೇಹಿತರೊಂದಿಗೆ ಆತ್ಮೀಯತೆಯನ್ನು ಉಂಟುಮಾಡುವುದಲ್ಲದೆ, ನಿಮ್ಮ ಸಂಗಾತಿಯೊಂದಿಗೆ ಅದ್ಭುತ ಕೆಮೆಸ್ಟ್ರಿಯನ್ನು ಸೃಷ್ಟಿಸುತ್ತದೆ. ವಿವಾಹದ ಯೋಜನೆಯಲ್ಲಿರುವವರಿಗೆ ಸೂಕ್ತ ಸಂಬಂಧಗಳು ಕೂಡಿ ಬರಲಿವೆ. ಮುಂದಕ್ಕೆ ಸಾಗಿ ಮತ್ತು ಈ ದಿನವನ್ನು ಇನ್ನಷ್ಟು ಧನಾತ್ಮಕಗೊಳಿಸಿ.

ತುಲಾ
ಭಾನುವಾರ, 11 ಜುಲೈ
ಅದ್ಭುತ ಉದ್ಯೋಗ ಮತ್ತು ಮನೆಯಲ್ಲಿ ಸಾಮರಸ್ಯದ ವಾತಾವರಣದ ಮುನ್ಸೂಚನೆಯನ್ನು ನೀಡುವ ಕಾರಣ ತುಲಾ ರಾಶಿಯವರಿಗೆ ಇಂದು ಸಂಭ್ರಮದ ದಿನ, ನಿಮ್ಮ ಸಾಮರ್ಥ್ಯದಿಂದ ನೀವು ನಿಮ್ಮ ಮೇಲಾಧಿಕಾರಿಗಳ ಮೇಲೆ ಪ್ರಭಾವ ಬೀರುವಲ್ಲಿ ಶಕ್ತರಾಗುತ್ತೀರಿ. ನಿಮ್ಮ ಕಾಯುವಿಕೆ ಅಂತ್ಯಕಂಡಿತು ಮತ್ತು ಬಡ್ತಿ ಸಿಗಲಿದೆ. ಉತ್ಸಾಹ ಮತ್ತು ಸಂಭ್ರಮವು ನಿಮ್ಮ ಗೃಹಕ್ಷೇತ್ರವನ್ನು ತಾಜಾವಾಗಿರಿಸಲಿದೆ. ವೈವಾಹಿಕ ಸಂಭ್ರಮವು ಅಗೋಚರ ಎಂಬುದಾಗಿ ನೀವು ಅನಿಸಿದ್ದರೆ, ಇಂದು ನೀವು ಅದರ ಅನುಭವ ಪಡೆಯಲಿದ್ದೀರಿ. ಯಾವುದೇ ಸಮಸ್ಯೆಯಿದ್ದಲ್ಲಿ, ನಿಮ್ಮ ತಾಯಿಯು ನಿಮ್ಮನ್ನು ರಕ್ಷಿಸುತ್ತಾಳೆ. ಭೂ ಮತ್ತು ಆಸ್ತಿ ಸಂಬಂಧಿತ ಪತ್ರವ್ಯವಹಾರಗಳಿಗೆ ಇದು ಉತ್ತಮ ದಿನ..

ವೃಶ್ಚಿಕ
ಭಾನುವಾರ, 11 ಜುಲೈ
ಸಂತೋಷ ಮತ್ತು ಬೇಸರದದೊಂದಿಗೆ ಮಿಶ್ರಿತ ಫಲದ ಪ್ರಭಾವವನ್ನು ಇಂದು ನೀವು ಹೊಂದಿದ್ದೀರಿ, ಮನೆಯಲ್ಲಿನ ವಾತಾವರಣವು ಅನನುಕೂಲವಾಗಿರುತ್ತದೆ. ಆದರೂ, ಕಚೇರಿಯಲ್ಲಿನ ಅಧಿಕಾರಿಗಳ ಮತ್ತು ಮೇಲಾಧಿಕಾರಗಳ ವಿಭಿನ್ನ ವರ್ತನೆಯ ಬಗ್ಗೆ ಗಮನಹರಿಸಬೇಡಿ. ಶಾಂತವಾಗಿರಿ. ವರಿಷ್ಠರೊಂದಿಗೆ ಮತ್ತು ಮಕ್ಕಳೊಂದಿಗಿನ ಸಂಘರ್ಷವನ್ನು ತಪ್ಪಿಸಿ. ಇದು ನಿಮ್ಮ ಮನಸ್ಸಿನ ಶಾಂತಿಯನ್ನು ಕದಡಬಹುದು. ಸೃಜನಶೀಲ ಚಟುವಟಿಕೆಗಳಾದ ಸಾಹಿತ್ಯ ಮತ್ತು ಬರಹ ಮುಂತಾದವುಗಳಿಂದ ನಿಮ್ಮ ಅವಿಶ್ರಾಂತ ಮನವು ನೆಮ್ಮದಿಯನ್ನು ಕಾಣಬಹುದು. ಪ್ರವಾಸದೊಂದಿಗೆ ಖರ್ಚುವೆಚ್ಚಗಳೂ ಉಂಟಾಗಲಿವೆ. ನಿಮ್ಮ ಆಭರಣಗಳ ಬಗ್ಗೆ ಎಚ್ಚರಿಕೆವಹಿಸಿ.

ಧನು
ಭಾನುವಾರ, 11 ಜುಲೈ
ಆರೋಗ್ಯಪ್ರಜ್ಞೆ ಇರಲಿ ಇಲ್ಲದೇ ಇರಲಿ, ಹಾಳುಮೂಳು ತಿಂಡಿಗಳನ್ನು ತಿನ್ನಲೇಬೇಡಿ,ನಿಮ್ಮ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಏನೇ ಆದರೂ, ವೈದ್ಯರ ಭೇಟಿಯನ್ನು ತಪ್ಪಿಸಬೇಡಿ. ಬಾಕಿ ಉಳಿದಿರುವ ಯೋಜನೆಗಳನ್ನು ನಿಗದಿತ ಅವಧಿಗೆ ಮುನ್ನ ಪೂರ್ಣಗೊಳಿಸಲಾಗದ ಒತ್ತಡಕ್ಕೆ ನೀವು ಒಳಗಾಗಬಹುದು. ಸದ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಡಿ. ಇವೆಲ್ಲವೂ ಅವಿಶ್ರಾಂತಕ್ಕೆ ಕಾರಣವಾಗಬಹುದು. ಸಿಹಿಯಾದ ಮಾತು ಯಾವತ್ತೂ ಪ್ರಯೋಜನಕಾರಿ ಎಂಬುದನ್ನು ಸಾಬೀತುಮಾಡುತ್ತದೆ ಆದ್ದರಿಂದ ಅದರಲ್ಲಿ ಕಹಿ ಬೆರೆಸಬೇಡಿ. ಇಂದು ನಿಮ್ಮ ಖರ್ಚುವೆಚ್ಚಗಳಲ್ಲಿ ಅನಿರೀಕ್ಷಿತ ವರ್ಧನೆಯಾಗುವ ಕಾರಣ ನಿಮ್ಮ ಕಿಸೆ ಹಣವನ್ನು ಭದ್ರಪಡಿಸಿ.

ಮಕರ
ಭಾನುವಾರ, 11 ಜುಲೈ
ಅದೃಷ್ಟ ಮಕರರಾಶಿಯವರಾದ ನಿಮಗೆ ಇಂದು ಚಿನ್ನದ ಮಳೆ. ಅದರ ಉತ್ತಮ ಪ್ರಯೋಜನ ಪಡೆದುಕೊಳ್ಳಿ, ನಿಮ್ಮ ವ್ಯವಹಾರದ ಲಾಭವು ವೃದ್ಧಿಗೊಳ್ಳಲಿದೆ ಜೊತೆಗೆ ಬಡ್ಡಿದರಗಳು ಮತ್ತು ದಲ್ಲಾಳಿ ಹಣಗಳು ನಿಮ್ಮ ಹಣಕಾಸು ಖಜಾನೆಯನ್ನು ಇನ್ನಷ್ಟು ವರ್ಧಿಸಲಿದೆ. ಈ ದಿನ ನೀವು ಆಕರ್ಷಣೆ, ವ್ಯಾಮೋಹ ಮತ್ತು ಲೋಭಕ್ಕೆ ಒಳಗಾಗಬಹುದು. ಇತರರೊಂದಿಗೆ ಒಂದಾಗಲು ಬಯಸುವ ಏಕಾಂಗಿಗಳು ಸದ್ಯದಲ್ಲಿಯೇ ತಮ್ಮ ಪ್ರೀತಿಪಾತ್ರರನ್ನು ಕಂಡುಕೊಳ್ಳಲಿದ್ದಾರೆ. ಇತರರು ತಮ್ಮ ಪ್ರೇಮಿಯನ್ನು ಭೇಟಿಯಾಗಬಹುದು. ಬಹು ಸಂಸ್ಕೃತಿ ಹೊಂದಾಣಿಕೆಗಳು ನಿಮ್ಮನ್ನು ನಗುವಲ್ಲಿರಿಸಬಹುದು. ಹೆಚ್ಚುವರಿಯಾಗಿ, ಶಾಪಿಂಗ್ ಮತ್ತು ಸ್ವಾದಿಷ್ಟ ಖಾದ್ಯ ಸೇವನೆ ನಿಮ್ಮ ಹರ್ಷಕ್ಕೆ ಇನ್ನೊಂದು ಕಾರಣವಾಗಿದೆ. ನಿಮ್ಮ ಖುಷಿಯ ಸವಾರಿಯನ್ನು ಆನಂದಿಸಿ.

ಕುಂಭ
ಭಾನುವಾರ, 11 ಜುಲೈ
ಇಂದು ನೀವು ಅತ್ಯಂತ ಖುಷಿಯಿಂದಿರುತ್ತೀರಿ, ನಿಮ್ಮ ಪ್ರಸಕ್ತ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ ಮತ್ತು ಇದು ಖ್ಯಾತಿ ಮತ್ತು ಮನ್ನಣೆಯನ್ನು ತಂದುಕೊಡುತ್ತದೆ. ಇದಕ್ಕಾಗಿ ನಿಮ್ಮ ಬೆಂಬಲಿತ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸಲು ಮರೆಯಬೇಡಿ. ವಿಚಾರಗಳೆಲ್ಲವೂ ಶಾಂತರೀತಿಯಲ್ಲಿರುತ್ತದೆ ಮತ್ತು ಮನೆಯಲ್ಲಿ ಉತ್ಸಾಹದ ವಾತಾವರಣವಿರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಇಂದು ನೀವು ಉತ್ತಮ ಸ್ಥಿತಿಯಲ್ಲಿರುವಿರಿ. ಈ ಸುಂದರ ದಿನವ ಶಾಂತಿ ಮತ್ತು ಸ್ತಬ್ಧತೆಯನ್ನು ಆನಂದಿಸಿ.

ಮೀನ
ಭಾನುವಾರ, 11 ಜುಲೈ
ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ವೃತ್ತಿಯವರಿಗೆ ಇಂದು ಶುಭಶಕುನದ ದಿನವಾಗಿದೆ. ಅವರ ಮೇಲೆ ಗ್ರಹಗತಿಗಳು ಉತ್ತಮ ರೀತಿಯ ಪ್ರಭಾವ ಬೀರುತ್ತದೆ ಮತ್ತು ಅವರಿಗೆ ಹೊಸ ವೃತ್ತಿ ಅವಕಾಶಗಳು ಬರಬಹುದು, ಪ್ರಸಕ್ತ ನೀವು ಅತ್ಯುತ್ತಮ ಸೃಜನಶೀಲತೆಯನ್ನು ಹೊಂದಿರುವುದರಿಂದ ನಿಮ್ಮ ಲೌಕಿಕ ವಿಚಾರಗಳನ್ನು ಹಿಂದಕ್ಕೆ ತಳ್ಳಿ. ಇಂದು ನೀವು ಮಹಿಳೆಯೊಂದಿಗೆ ಸುತ್ತಾಡಲು ದಿನ ನಿಗದಿಪಡಿಸಿದ್ದಲ್ಲಿ, ಎಚ್ಚರದಿಂದಿರಿ ಅವರು ನಿಮ್ಮ ಕಿಸೆ ಕಾಲಿಮಾಡಬಹುದು. ಇಂದು ನೀವು ಅತ್ಯಂತ ಭಾವುಕರಾಗಿರುತ್ತೀರಿ. ವಿಷಯಾಸಕ್ತರಾಗಿರುತ್ತೀರಿ. ಜೋಡಿಗಳು ತಮ್ಮೊಳಗೆ ಸಾಂಗತ್ಯ ಮತ್ತು ಬೆಂಬಲವನ್ನು ಬಯಸಬಹುದು.

Leave a Reply

Your email address will not be published.