🙏ನಿತ್ಯವಾಣಿ ಸೋಮವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಸೋಮವಾರದ ರಾಶಿ ಭವಿಷ್ಯ 🙏

ಮೇಷ
ಸೋಮವಾರ, 12 ಜುಲೈ
ಇಂದು ನಿಮ್ಮ ಭಾವುಕತೆಯನ್ನು ಅಡಗಿಸುವುದು ಅಥವಾ ನಿಯಂತ್ರಿಸುವುದು ಕಷ್ಟಕರವಾಗಲಿದೆ. ಆಂತರಿಕ ಆಲೋಚನೆಗಳನ್ನು ಸುಲಭವಾಗಿ ಬಿಟ್ಟುಬಿಡುವುದು ನಿಮ್ಮ ಸ್ವಭಾವವಲ್ಲ. ಆದರೆ, ಇದಕ್ಕಾಗಿ ನೀವು ಸಹಾಯ ಮಾಡಲು ಶಕ್ತರಾಗಿಲ್ಲ. ಎಚ್ಚರಿಕೆಯಿಂದಿರಿ, ಈ ವಿಶಾಲ ದುಷ್ಟ ಜಗತ್ತು ಅಂತಹ ತ್ಯಾಗದೊಂದಿಗೆ ನಿಮ್ಮ ದುರ್ಬಲತೆಯನ್ನು ಪ್ರದರ್ಶಿಸಬೇಕಾದ ಸ್ಥಳವಲ್ಲ.ಮಾನಸಿಕವಾಗಿ ನೀವು ಅಸ್ಥಿರವಾಗಿರುವಂತೆ ಅನಿಸಬಹುದು. ವಿಶ್ರಾಂತಿ ಪಡೆಯಿರಿ. ನಿಮ್ಮ ಆಂತರಿಕ ಚಿಂತನೆಗಳನ್ನು ತಿಳಿದುಕೊಳ್ಳಲು ಜನರಿಗೆ ಆಸ್ಪದ ನೀಡುವುದು ಉತ್ತಮ ಆಲೋಚನೆಯಲ್ಲಿ ಎಂಬುದು ಅರಿವಾದಾಗ ನೀವು ಪಶ್ಚಾತ್ತಾಪ ಮತ್ತು ವ್ಯಥೆಪಡುತ್ತೀರಿ. ಕೇಂದ್ರೀಕೃತವಾಗಿ ಮತ್ತು ನಿಮ್ಮ ಹೆತ್ತವರ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ. ಸ್ಥಿರಾಸ್ತಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ. ಜಾಗರೂಕತೆಯಿಂದ ವಾಹನ ಚಲಾಯಿಸಿ ಮತ್ತು ಒತ್ತಡವನ್ನು ತಗ್ಗಿಸಲು ನೀವು ತಿರುಗಾಟಕ್ಕೆ ತೆರಳುವಾಗ ನೀರಿನಲ್ಲಿ ಸಂಭ್ರಮಿಸುವುದನ್ನು ತಪ್ಪಿಸಿ. ಶೈಕ್ಷಣಿಕ ವಿಚಾರಗಳಿಗೆ ಇಂದು ಸಾಮಾನ್ಯ ದಿನವಾಗಿದೆ,

ವೃಷಭ
ಸೋಮವಾರ, 12 ಜುಲೈ
ದಿನಪೂರ್ತಿ ನೀವು ಉಲ್ಲಾಸ ಹಾಗೂ ಹಗುರ ಭಾವನೆಯನ್ನು ಹೊಂದಿರುತ್ತೀರಿ,ಈ ದಿನದ ಮನಸ್ಥಿತಿಯೇ ಹಾಗೇ. ಒಂದೇ ಸಮಯದಲ್ಲಿ ಸಮಾಧಾನ ಮತ್ತು ಉತ್ಸಾಹದಲ್ಲಿರುತ್ತೀರಿ ಎಂಬುದು ಆಶ್ಚರ್ಯಕರವಲ್ಲ. ಇದೊಂದು ಅಪೂರ್ವ ಸಂಯೋಗ. ಆದರೆ, ಗ್ರಹಗತಿಗಳು ಅಂತಹ ಪ್ರಶಾಂತತೆಯನ್ನು ನೀಡಿರುವಾಗ, ಆನಂದಿಸಿ. ನಿಮ್ಮ ಮನಸ್ಸು ಇಂದು ಭಾವುಕತೆಯಿಂದ ತುಂಬಿರಬಹುದು. ಆದರೆ, ಅದು ಧನಾತ್ಮಕವಾಗಿರುತ್ತದೆ. ಮತ್ತು ಕಲ್ಪನಾಶಕ್ತಿಯನ್ನು ಹೊಂದಿರುತ್ತೀರಿ ಹಾಗೂ ತಗ್ಗುನುಡಿಯನ್ನು ಹೊಂದಿರುತ್ತೀರಿ. ಇವೆಲ್ಲವೂ ಕನಸಿನ ರೀತಿಯಲ್ಲಿರುತ್ತದೆ. ಆದರೂ, ಕುಟುಂಬ ಚರ್ಚೆ ಹಾಗೂ ಪ್ರಯಾಣ ಯೋಜನೆಗಳಿಂದ ಇದು ನಿಮ್ಮನ್ನು ತಡೆಯುವುದಿಲ್ಲ. ನಿಮ್ಮ ತಾಯಿಯಿಂದ ಅತ್ಯುತ್ತಮ ಭೋಜನ ಪಡೆಯುವಿರಿ ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಮಿಥುನ
ಸೋಮವಾರ, 12 ಜುಲೈ
ಈ ದಿನವು ಆಲಸ್ಯದಿಂದ ಕೂಡಿರುತ್ತದೆ ಆದರೂ, ಶಾಂತರೀತಿಯಲ್ಲಿರುತ್ತದೆ,ನಿಮ್ಮ ಕಾರ್ಯವನ್ನು ಮುಗಿಸಲು ಎಂದಿಗಿಂತ ಹೆಚ್ಚು ಸಮಯ ಬೇಕಾದಲ್ಲಿ ಸಿಡಿಮಿಡಿಗೊಳ್ಳಬೇಡಿ. ತಾಳ್ಮೆಯಿಂದಿರಿ ಇದು ಪೂರ್ಣಗೊಳ್ಳುತ್ತದೆ. ಮತ್ತು ವಿಳಂಬವಾದರೂ ಫಲಿತಾಂಶ ಸಿಗುತ್ತದೆ. ನಿಯೋಜಿತ ಕಾರ್ಯಗಳು ಮತ್ತು ಹಣಕಾಸು ವ್ಯವಹಾರಗಳು ಅದೇ ವಿಧಿಯನ್ನು ಹೊಂದಿದ್ದು, ಅವುಗಳು ಪೂರ್ಣಗೊಳ್ಳುತ್ತವೆ ಆದರೂ ಎಂದಿಗಿಂತ ಹೆಚ್ಚಿನ ಶ್ರಮ ಪಡಬೇಕಾಗುತ್ತದೆ. ದಿನದ ಆರಂಭದಲ್ಲಿನ ಪ್ರಾರಂಭಿಕ ಒತ್ತಡಗಳ ಹೊರತಾಗಿಯೂ, ನಿಮ್ಮದೇ ಶೈಲಿಯಲ್ಲಿನ ದಿನ ಪ್ರಾರಂಭಿಸುವುದನ್ನು ಸಾಬೀತುಪಡಿಸುವುರಿ.ನಿಮ್ಮ ಸಹೋದ್ಯೋಗಿಗಳು ಮತ್ತು ವರಿಷ್ಠರು ಸಂಭ್ರಮದ ಮನಸ್ಥಿತಿಯಲ್ಲಿದ್ದು, ಕಾರ್ಯಕ್ಷೇತ್ರದಲ್ಲಿ ಸ್ನೇಹಪರತೆ ಮತ್ತು ವಿಶ್ವಾಸವನ್ನು ಆನಂದಿಸುವಿರಿ. ನಿಮ್ಮ ಪ್ರೀತಿಪಾತ್ರರನ್ನು ಮತ್ತು ಸ್ನೇಹಿತರನ್ನು ಭೇಟಿ ಮಾಡುವ ಯೋಜನೆ ರೂಪಿಸಬಹುದು.

ಕರ್ಕಾಟಕ
ಸೋಮವಾರ, 12 ಜುಲೈ
ಅದೃಷ್ಟಕಾರಿ ಘಟನೆಗಳೊಂದಿಗೆ ಉತ್ತಮ ದಿನವನ್ನು ನಿಮಗೆ ದಯಪಾಲಿಸುತ್ತದೆ,ಮನೆಯಲ್ಲಿ ಹಾಗೂ ಇತರ ತೊಂದರೆಯ ಹೆಣಗಾಟಗಳ ನಂತರ ಎಲ್ಲವೂ ಸುಸ್ಥಿತಿಯಲ್ಲಿ ಸಾಗಲಿದೆ ಮತ್ತು ನೀವು ಸಂಪೂರ್ಣವಾಗಿ ಆನಂದಿಸುತ್ತೀರಿ. ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ಇದನ್ನು ಎಲ್ಲಾ ವ್ಯವಹಾರಗಳಲ್ಲಿ ತೋರ್ಪಡಿಸುತ್ತೀರಿ. ಈ ಸುಂದರ ದಿನವನ್ನು ನೀವು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಕಳೆಯಲು ಬಯಸುತ್ತೀರಿ. ಸ್ನೇಹಿತರೊಂದಿಗೆ ಪ್ರಯಾಣಿಸುವ ಕುರಿತಂತೆ ನೀವು ಯಶಸ್ವೀ ಯೋಜನೆಗಳನ್ನು ರೂಪಿಸುತ್ತೀರಿ. ನಿಮ್ಮ ಭಾವಾತ್ಮಕ ಮತ್ತು ಕಾವ್ಯಲಕ್ಷ ಕೌಶಲ್ಯವನ್ನು ನಿಮ್ಮ ಪ್ರೀತಿಪಾತ್ರರಿಗೆ ಪ್ರದರ್ಶಿಸಲು ಇದು ಉತ್ತಮ ಸಮಯ. ಅವರಿಗಾಗಿ ಕವನ ಬರೆಯಲು ಸಿದ್ಧರಾಗಿರುವಿರಾ? ಗ್ರಹಗತಿಗಳು ನಿಮಗಾಗಿ ಸ್ವಾದಿಷ್ಟ ತಿನಿಸುಗಳ ಯೋಗವನ್ನು ನೀಡುವುದರಿಂದ ಸ್ವಾದಿಷ್ಟ ಭೋಜನವನ್ನು ಆನಂದಿಸಿ. ಹಣಕಾಸು ಹಾಗೂ ಬಂಡವಾಳಗಳಿಗೆ ಇದು ಉತ್ತಮ ಸಮಯ.

ಸಿಂಹ
ಸೋಮವಾರ, 12 ಜುಲೈ
ಸಿಂಹರಾಶಿಯವರಾದ ನೀವು ಇಂದು ಅತೀ ಸೂಕ್ಷ್ಮ ಪ್ರವೃತ್ತಿಯವರು.ಅತೀ ಭಾವುಕತೆ ಹಾಗೂ ಸೂಕ್ಷ್ಮತೆಯಿಂದ ಕೂಡಿರುತ್ತೀರಿ. ಆದರೂ, ನಿಮ್ಮ ಭಾವುಕ ಪ್ರತಿಕ್ರಿಯೆಗಳು ಮಿತಿಮೀರದಂತೆ ಎಚ್ಚರವಹಿಸಿ. ಯಾರಾದರೂ ಟೀಕಿಸಿದಲ್ಲಿ ಪ್ರತಿಕ್ರಯಿಸಬೇಡಿ. ಇತರ ರಾಶಿಗಳೂ ಸೂಕ್ಷ್ಮ ಮನಸ್ಸಿವರಾಗಿರುವ ಕಾರಣ ಮತ್ತು ನಿಮ್ಮ ವಿಪರೀತ ಪ್ರತಿಕ್ರಿಯೆಯೊಂದಿಗೆ ವ್ಯವಹರಿಸಲು ಅಸಾಧ್ಯವಾದ ಕಾರಣ ನಿಮ್ಮ ಸಿಡುಕನ್ನು ನಿಯಂತ್ರಿಸಿ. ಮಿತಿಮೀರಿದ ವಾಗ್ವಾದಗಳಿಂದ ಕೂಡಿದ ಮಾತುಕತೆಗಳಿಂದ ದೂರವಿರಿ. ಇವುಗಳು ಕಾನೂನು ವಿಚಾರಣಾ ವಿಷಯಗಳಾಗಿ ಪರಿವರ್ತನೆಗೊಳ್ಳಬಹುದು. ಎಚ್ಚರಿಕೆಯಿಂದಿರಿ. ವೆಚ್ಚಗಳು ಹೆಚ್ಚಾಗಬಹುದು ಆದರೂ, ಇದಕ್ಕಾಗಿ ಇತರರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಅಷ್ಟಾಗಿಯೂ ನಿಮ್ಮ ಜೀವನವನ್ನು ನಿಯಂತ್ರಿಸುವ ಹೊಣೆ ನಿಮ್ಮದು. ಧ್ಯಾನ ಮತ್ತು ಉಸಿರಿನ ವ್ಯಾಯಾಮ ಮಾಡಿ ಇದು ನಿಮ್ಮ ಮನಸ್ಸನ್ನು ಶಾಂತಿಯಲ್ಲಿರಿಸುತ್ತದೆ,

ಕನ್ಯಾ
ಸೋಮವಾರ, 12 ಜುಲೈ
ಈ ದಿನ ಅತ್ಯಂತ ಭಾವುಕ ರೀತಿಯಲ್ಲಿರುತ್ತದೆ ಮತ್ತು ನಿಮ್ಮದೇ ರಾಶಿಯ ವ್ಯಕ್ತಿಗಳಿಗೆ ಈ ದಿನವು ಕನಸಿನ ರೀತಿಯಲ್ಲಿರುತ್ತದೆ, ನಿಮ್ಮ ನಿರ್ವಹಣೆಯಲ್ಲಿ ಜನರು ಹೆಚ್ಚು ಜವಾಬ್ಧಾರಿಯಿಂದ ಇರುವುದನ್ನು ನಿರೀಕ್ಷಿಸಬಹುದು. ಇಂದು ನಿಮ್ಮ ಉತ್ಸುಕದ ಪ್ರೀತಿಯನ್ನು ನೀವು ಯಾರೊಬ್ಬರಿಗಾದರೂ ತಿಳಿಯಪಡಿಸಬಹುದು. ಮುಂದಕ್ಕೆ ಸಾಗಿ, ಇದು ಅದೃಷ್ಟದಾಯಕವಾಗಲಿದೆ. ವಿವಿಧ ಪ್ರದೇಶಗಳಿಂದ ನಿಮಗೆ ಲಾಭ ಉಂಟಾಗಬಹುದು ಆದ್ದರಿಂದ ಸಾಮಾನ್ಯವಲ್ಲದ ವಿಷಯಗಳಲ್ಲಿ ಹಿಂಜರಿಕೆ ಬೇಡ.ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ಖುಷಿಭರಿತ ಪ್ರವಾಸಕ್ಕೆ ತೆರಳುವಿರಿ. ನಿಮ್ಮ ಮಕ್ಕಳಿಂದ ಶುಭಸುದ್ದಿಯನ್ನು ನಿರೀಕ್ಷಿಸಿ. ಮಹಿಳಾ ಸ್ನೇಹಿತರು ನಿಮಗೆ ಅದೃಷ್ಟವನ್ನು ತರಲಿದ್ದಾರೆ. ಖುಷಿಯಾಗಿರಿ ಮತ್ತು ಈ ಸಡಗರದ ಕ್ಷಣವನ್ನು ಆನಂದಿಸಿ.

ತುಲಾ
ಸೋಮವಾರ, 12 ಜುಲೈ
ಜೀವನದ ಎಲ್ಲಾ ಕ್ಷೇತ್ರಗಳಿಗೂ ಸಂಬಂಧಿಸಿ ಇಂದು ಅದೃಷ್ಟಕಾರಿ ದಿನ. ಈಗ ನೀವು ಹೆಚ್ಚುಕಡಿಮೆ ನಿಮ್ಮ ಸಮತೋಲನವನ್ನು ಮರುಪಡೆದುಕೊಂಡಿರುವಿರಿ. ಇಂದು ನಿಮಗೆ ಯಾವುದೂ ಶ್ರಮ ನೀಡುವುದಿಲ್ಲ ಮತ್ತು ಎಲ್ಲವೂ ಸರಾಗವಾಗಿ ಸಾಗುತ್ತದೆ, ಆದ್ದರಿಂದ ಕಾರ್ಯಕ್ಷೇತ್ರದಲ್ಲಿ ಕೆಲಸವು ಸುಲಭವಾಗಿ ಬಗೆಹರಿಯುತ್ತದೆ ಮತ್ತು ಪೂರ್ಣಗೊಳ್ಳುತ್ತದೆ ಹಾಗೂ ಮನೆಯಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಸಂತಸ ಹಾಗೂ ಪ್ರೀತಿಭರಿತ ಸಂವಾದದಲ್ಲಿ ತೊಡಗುವಿರಿ. ಕಾರ್ಯಸ್ಥಳದಲ್ಲಿ ಮೇಲಾಧಿಕಾರಿಗಳೊಂದಿಗಿನ ಪ್ರಮುಖ ಮಾತುಕತೆಯು ಕಂಪನಿಯು ಆವಶ್ಯಕ ಆಸ್ತಿಯೆಂಬಂತೆ ನಿಮ್ಮ ಸ್ಥಾನದ ವರ್ಧನೆಗೆ ಕಾರಣವಾಗುತ್ತದೆ. ಎಲ್ಲಾ ಕಡೆಗಳಿಂದಲೂ ವಿಶೇಷವಾಗಿ ತಾಯಿಯ ಕಡೆಯಿಂದ ಲಾಭ ಹರಿದು ಬರಲಿದೆ. ಆಕೆಯೊಂದಿಗೆ ಸಾಕಷ್ಟು ಮಾತನಾಡಿ, ನಿಮಗಾಗಿ ನೀಡಲು ಆಕೆ ಪ್ರಮುಖ ಮತ್ತು ವಿವೇಚನೆಯ ಸಲಹೆಗಳನ್ನು ಹೊಂದಿರಬಹುದು. ಯಾವುದೇ ಸರಕಾರಿ ಸಂಬಂಧಿತ ಕಾರ್ಯಗಳಲ್ಲಿ ಅದೃಷ್ಟವು ನಿಮ್ಮ ಕಡೆಗಿರುತ್ತದೆ.

ವೃಶ್ಚಿಕ
ಸೋಮವಾರ, 12 ಜುಲೈ
ಈ ಮುಂಜಾನೆ ನೀವು ಅತ್ಯಂತ ಆಲಸ್ಯ ಭಾವನೆಯನ್ನು ಹೊಂದುತ್ತೀರಿ. ಈ ದಿನ ನಿಮಗೆ ರಜೆಯು ಸುಲಭವಾಗಿ ಸಿಗುವುದಿಲ್ಲ ಮತ್ತು ಮತ್ತು ನೀವು ಕೆಲಸಮಾಡುವ ಸ್ಥಳಗಳಲ್ಲಿ ಎಲ್ಲಾ ಕೆಲಸಗಳು ಶ್ರಮರಹಿತವಾಗಿರುವುದಿಲ್ಲ. ಶ್ರಮಪಡಿ. ಸದ್ಯದಲ್ಲಿಯೇ ನೀವು ಉತ್ಸಾಹದಿಂದಿರುವಂತಹ ಮತ್ತು ಅತೀ ಏಕಾಗ್ರತೆಯಿಂದ ಕೂಡಿರುವಂತಹ ದಿನವು ಬರಲಿದೆ,ಏನೇ ಆದರೂಈ ನೀವು ಮಾಡಬೇಕಾಗಿರುವುದು ಏನೆಂದರೆ, ನಿಮ್ಮ ಎಲ್ಲಾ ಉದ್ಯಮ ವ್ಯವಹಾರಗಳಲ್ಲಿ, ಮತ್ತು ಕಾರ್ಯಸ್ಥಳದಲ್ಲಿನ ಜನರೊಂದಿಗಿನ ಸಂವಾದಗಳಲ್ಲಿ ಅತೀ ಎಚ್ಚರ ವಹಿಸಬೇಕು. ನಿಮ್ಮ ಮೇಲಾಧಿಕಾರಿಗಳ ದೃಷ್ಟಿ ಮತ್ತು ನಿರ್ಧಾರವನ್ನು ನೀವು ಒಪ್ಪಲಾರಿರಿ ಮತ್ತು ಇದು ಋಣಾತ್ಮಕವಾಗಿರಬಹುದು. ಅನರೀಕ್ಷಿತ ಪ್ರಯಾಣವು ನಿಮಗೆ ವಿಶ್ರಾಂತಿಯನ್ನು ನೀಡುತ್ತದೆ ಮತ್ತು ನಿಮ್ಮನ್ನು ಒತ್ತಡರಹಿತರನ್ನಾಗಿಸುತ್ತದೆ.

ಧನು
ಸೋಮವಾರ, 12 ಜುಲೈ
ಭಾವುಕತೆ ಮತ್ತು ಸೂಕ್ಷ್ಮತೆಯು ದುರಾದೃಷ್ಟವಾಗಿ ನಿಮ್ಮ ನಕ್ಷೆಯ ತಪ್ಪು ಹಾದಿಯಲ್ಲಿದೆ,ಅಂದರೆ, ಸುನಾಮಿಯಂತೆ ಹಬ್ಬುವ ಭೀತಿಯುಳ್ಳ ಭಾವುಕತೆಯ ಹರಿವನ್ನು ನೀವು ಪ್ರದರ್ಶಿಸುವುದರಿಂದ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ. ಇದನ್ನು ಆದಷ್ಟು ನಿಯಂತ್ರಣದಲ್ಲಿರಿಸಿ. ನಿಮ್ಮ ಕ್ರಿಯಾತ್ಮಕ ಆಲೋಚನೆಗಳನ್ನು ಹೊರತರಲು ಮತ್ತು ವ್ಯವಹಾರ ಯೋಜನೆಗಳನ್ನು ಪ್ರಾರಂಭಿಸಲು ಉತ್ತಮ ಸಮಯ. ಅನೇಕ ವಿಚಾರಗಳು ಸದ್ಯಕ್ಕೆ ನಿಮಗೆ ನಿಷೇಧವೆನಿಸಬಹುದು. ನಿಮ್ಮ ಮಿತಿಗಳನ್ನು ತಿಳಿದುಕೊಳ್ಳಿ ಮತ್ತು ಯಾವುದೇ ನೈತಿಕ, ಕಾನೂನಿನ ಮತ್ತು ಧಾರ್ಮಿಕ ಪರಿಧಿಗಳನ್ನು ದಾಟಲು ಪ್ರಯತ್ನಿಸಬೇಡಿ. ನೀವು ಅತ್ಯಂತ ಉದ್ವೇಗದಲ್ಲಿರುವ ಕಾರಣ ವೈದ್ಯಕೀಯ ಪ್ರಕ್ರಿಯೆಗಳಿಂದ ದೂರವಿರಿ. ಖರ್ಚುವೆಚ್ಚಗಳು ಹೆಚ್ಚಾಗಲಿವೆ, ಮತ್ತು ನಿಮ್ಮ ಕೋಪವೂ ಕೂಡ. ಪ್ರಾರ್ಥನೆ ಮತ್ತು ಧ್ಯಾನದಲ್ಲಿ ನೆಮ್ಮದಿಯನ್ನು ಕಾಣಿ.

ಮಕರ
ಸೋಮವಾರ, 12 ಜುಲೈ
ಅದೃಷ್ಟದಾಯಕ ದಿನವು ನಿಮಗಾಗಿ ಕಾದಿದೆ, ಹಣಕಾಸು ಹೂಡಿಕೆ ಮತ್ತು ಆರ್ಥಿಕ ವಿಚಾರಗಳಿಗೆ ಅದ್ಭುತ ದಿನ. ನಿನ್ನೆ ವ್ಯವಹಾರ ವೃದ್ಧಿ ಅಥವಾ ಮರುನಿರ್ಮಾಣದ ಬಗ್ಗೆ ಯೋಜನೆಗಳನ್ನು ಪ್ರಾರಂಭಿಸಿದ್ದಿರಬಹುದು. ಅವುಗಳು ಇಂದು ಮುಂದಕ್ಕೆ ಸಾಗಬಹುದು ಮತ್ತು ಇಂದು ನೀವು ಏನೇ ಪ್ರಯತ್ನಪಟ್ಟರೂ ಅದರಲ್ಲಿ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಆದಾಯವು ವೃದ್ಧಿಗೊಳ್ಳಲು ಸಿದ್ಧವಾಗಿದೆ. ಇದು ದಲ್ಲಾಳಿ ಲಾಭ, ಉಳಿತಾಯದಿಂದ ಪಡೆದ ಬಡ್ಡಿ ಅಥವಾ ಮ್ಯೂಚುವಲ್ ಬಾಂಡ್ ಮುಂತಾದವುಗಳು ವಾಯಿದೆ ಪೂರ್ಣದಿಂದ ಸಿಗಬಹುದು. ಪರಿಣಾಮವಾಗಿ ನೀವು ಆರ್ಥಿಕವಾಗಿ ಸುರಕ್ಷಿತವಾಗಿರುತ್ತೀರಿ. ಹೊಸ ವಿಚಾರಗಳಲ್ಲದಿದ್ದರೂ, ನೀವು ಮಕರ ರಾಶಿಯವರು ಎಚ್ಚರದಿಂದಿರಿ. ವ್ಯವಹಾರ ಪ್ರಯಾಣವು ಫಲಪ್ರದವಾಗಿರುತ್ತದೆ.

ಕುಂಭ
ಸೋಮವಾರ, 12 ಜುಲೈ
ಎಲ್ಲಾ ಕುಂಭರಾಶಿಯವರಿಗೆ ಉಜ್ವಲ ದಿನವು ಕಾದಿದೆ, ನಿಮ್ಮದೇ ಯಶಸ್ಸು ಮತ್ತು ಉತ್ತಮ ಜೀವನದ ಆದರದ ಶೋಭೆಯಲ್ಲಿ ನೀವು ಹಾಯಾಗಿರುತ್ತೀರಿ ಮತ್ತು ಅದನ್ನು ಆನಂದಿಸುವಿರಿ. ಕೆಲಸದಲ್ಲಿ ಯಶಸ್ಸು ಸಿಗಲಿದೆ ಜೊತೆದೆ, ಸಹೋದ್ಯೋಗಿಗಳ ನಡುವೆ ಪ್ರಸಿದ್ಧಿಗೆ ಸಂಬಂಧಿಸಿದಂತೆ ನಿಮಗೆ ಲಾಭ ಉಂಟಾಗಲಿದೆ. ಮೇಲಾಧಿಕಾರಿಗಳು ನಿಮ್ಮ ಬೆನ್ನುತಟ್ಟಲಿದ್ದಾರೆ ಮತ್ತು ನೀವು ಅವಲಂಬಿಸಬೇಕಾದ ವ್ಯಕ್ತಿ ಎಂದು ಪರಿಗಣಿಸುತ್ತಾರೆ. ಮನೆಯಲ್ಲಿನ ಉತ್ತಮ ವಾತಾವರಣವಿರುತ್ತದೆ ಮತ್ತು ಕುಟುಂಬ ಸದಸ್ಯರೊಂದಿಗೆ ಪ್ರೀತಿ ಮತ್ತು ನಗು ತುಂಬಿದ ಕ್ಷಣಗಳನ್ನು ಕಳೆಯುವಿರಿ. ಆರೋಗ್ಯವು ನಿಮ್ಮನ್ನು ಚಿಂತೆಗೀಡುಮಾಡುವುದಿಲ್ಲ. ಎಲ್ಲವೂ ಶಾಂತ ಹಾಗೂ ನೆಮ್ಮದಿಯಾಗಿರುವಂತೆ ಕಂಡುಬರುತ್ತದೆ. ಸದ್ಯದ ಮಟ್ಟಿಗೆ ಯಾವುದೇ ಎದುರಾಳಿಗಳಿರುವುದಿಲ್ಲ. ಗ್ರಹಗತಿಗಳ ಸಮಾಧಾನ ರೀತಿಯ ಭವಿಷ್ಯದ ಅನುಗ್ರಹದಲ್ಲಿ ಸಂಭ್ರಮಿಸಿ.

ಮೀನ
ಸೋಮವಾರ, 12 ಜುಲೈ
ನಿಮ್ಮ ಎಲ್ಲಾ ಕ್ರಿಯಾತ್ಮಕ ಅಂತರ್ದೃಷ್ಟಿಯ ಅರ್ಹತೆಗಳು ನಿಜವಾಗಿಯೂ ಉತ್ತುಂಗಕ್ಕೆ ಏರಲಿವೆ, ನಿಮಗೆ ನೈಸರ್ಗಿಕವಾಗಿ ದೊರೆತ ಅಂತರ್ದೃಷ್ಟಿ ಹಾಗೂ ಕ್ರಿಯಾತ್ಮಕ ಕೌಶಲ್ಯ ಮೀನರಾಶಿಯವರಾದ ನಿಮಗೆ ನಿಜಕ್ಕೂ ಅದ್ಬುತ ವಿಷಯವಾಗಿದೆ. ಆದ್ದರಿಂದ ನಿಮ್ಮ ನೈಸರ್ಗಿಕ ಉಡುಗೊರೆಗಳೊಂದಿಗೆ ಇಂದುನ ಸೂಕ್ಷ್ಮತೆ ಹಾಗೂ ಭಾವಾವೇಶದ ವಾತಾವರಣವು ನಿಜಕ್ಕೂ ಅದ್ಭುತವಾಗಿಸಲಿದೆ. ಇಂದು ನೀವು ಕವನ ಅಥವಾ ಯಾವುದೇ ಅದ್ಭುತ ಬರಹಗಳನ್ನು ಬರೆಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ನೀವು ಧೈರ್ಯದಿಂದಿರಲು ನಿರ್ಧರಿಸಬಹುದು ಮತ್ತು ಇಂದು ನೀವು ಪಡೆದಿರುವ ಉಜ್ವಲ ಕಲ್ಪನಾತೀತ ಉಡುಗೊರೆಯ ಬಗ್ಗೆ ಜಗತ್ತಿಗೇ ಸಾರಿ ಹೇಳಬಹುದು. ನೀವು ನಿಮ್ಮ ಉತ್ಸುಕದ ಪ್ರಶಂಸೆಯನ್ನು ವ್ಯಕ್ತಪಡಿಸಿದಾಗ ನಿಮ್ಮ ಪ್ರಿಯತಮೆಯು ನಿಜಕ್ಕೂ ಆಶ್ಚರ್ಯಕ್ಕೊಳಗಾಗುತ್ತಾರೆ. ವಿದ್ಯಾರ್ಥಿಗಳಿಗೆ ಮತ್ತು ಅವರ ಶಿಕ್ಷಣಕ್ಕೆ ಉತ್ತಮ ದಿನ.

 

 

Leave a Reply

Your email address will not be published.