🙏ನಿತ್ಯವಾಣಿ ಸೋಮವಾರದ ರಾಶಿ ಭವಿಷ್ಯ 🙏
ಮೇಷ
ಸೋಮವಾರ, 19 ಜುಲೈ
ನಿಮ್ಮ ಆಧ್ಯಾತ್ಮ ಮನಸ್ಥಿತಿಯ ಕಾರಣದಿಂದಾಗಿ ಈ ದಿನವು ನಿಮಗೆ ವಿಶಿಷ್ಟ ದಿನವಾಗಲಿದೆ, ಇದು ನಿಮ್ಮನ್ನು ಆಧ್ಯಾತ್ಮದತ್ತ ಇನ್ನಷ್ಟು ಆಕರ್ಷಿತಗೊಳಿಸುತ್ತದೆ. ಇವೆಲ್ಲವನ್ನೂ ಮಾಡುವುದರಿಂದ, ನಿಮ್ಮ ಆಧ್ಯಾತ್ಮ ಮಟ್ಟದಲ್ಲಿ ನೀವು ಉತ್ತುಂಗಕ್ಕೇರುತ್ತೀರಿ. ಇದರೊಂದಿಗೆ, ನೀವು ಮೇಷರಾಶಿಯವರು, ಜನರು ಮತ್ತು ಅವರ ಭಾವನೆಗಳಿಗೆ ನೋವುಂಟುಮಾಡುವುದನ್ನು ತಪ್ಪಿಸಲು ನಿಮ್ಮ ನಾಲಗೆಯನ್ನು ನಿಯಂತ್ರಣದಲ್ಲಿರಿಸಬೇಕು. ನೀವು ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಆಲೋಚಿಸಿದ್ದಲ್ಲಿ, ಅದನ್ನು ಮುಂದೂಡಿ ಯಾಕೆಂದರೆ ಈ ದಿನ ಸೂಕ್ತವಾಗಿರಲಾರದು. ಅಂತಿಮವಾಗಿ ಪ್ರಯಾಣವನ್ನು ತಪ್ಪಿಸಿ.
ವೃಷಭ
ಸೋಮವಾರ, 19 ಜುಲೈ
ಗೃಹಕ್ಷೇತ್ರದಲ್ಲಿನ ಸಂತೋಷಕ್ಕೆ ಸಂಬಂಧಿಸಿ ಈ ದಿನವು ಅದ್ಭುತವಾಗಿರುತ್ತದೆ. ಮಧ್ಯಾಹ್ನ ಭೋಜನ ಅಥವಾ ಡಿನ್ನರ್‌ಗೆ ನಿಮ್ಮ ಪ್ರೀತಿಪಾತ್ರರು ಹಾಗೂ ಕೆಲವು ಸಂಬಂಧಿಗಳು ನಿಮ್ಮ ಮನೆ ಕಡೆ ಆಗಮಿಸುವುದನ್ನು ನಿರೀಕ್ಷಿಸಬಹುದು. ಇದು ನಿಮ್ಮ ಮನೆಯಲ್ಲಿ ಈಗಾಗಲೇ ನೆಲೆಸಿರುವ ಸಂಭ್ರಮಕ್ಕೆ ಇನ್ನಷ್ಟು ಖುಷಿಯನ್ನು ಸೇರಿಸುತ್ತದೆ. ಇಂದು ವಿಹಾರ ಯೋಜನೆಯನ್ನು ರೂಪಿಸಲು ಉತ್ತಮ ದಿನ. ವಿದೇಶದಲ್ಲಿ ನೆಲೆಸಿರುವ ಸಂಬಂಧಿಗಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಿ.ವೃಷಭ ರಾಶಿಯವರಿಗೆ ಸುಗಮ ದಿನವೆಂಬುದು ನಿಮ್ಮ ಕಿಸೆಯ ಮೇಲಿನ ಪ್ರತಿಷ್ಠೆಯ ವಿಷಯವಾಗಿದೆ. ಸಂಜೆಯ ವೇಳೆ ಖಂಡಿತವಾಗಿಯೂ ಇದು ಇನ್ನಷ್ಟು ಹೆಚ್ಚುತ್ತದೆ.
ಮಿಥುನ
ಸೋಮವಾರ, 19 ಜುಲೈ
ಮಿಥುನರಾಶಿಯವರಾದ ನಿಮಗೆ ಈ ದಿನವು ಫಲಪ್ರದವಾಗಿರಲಿದೆ, ನಿಮ್ಮ ಮನೆಯ ವಾತಾವರಣವು ಸ್ನೇಹಪರ ಹಾಗೂ ಸಂತಸದಿಂದ ಕೂಡಿರುವ ಸಾಧ್ಯತೆಯಿದೆ. ಅಪೂರ್ಣವಾಗಿರುವ ಕಾರ್ಯಗಳನ್ನು ಪೂರ್ಣಗೊಳಿಸುವುದರಿಂದ ವೃತ್ತಿಕ್ಷೇತ್ರದಲ್ಲೂ ನೀವು ಅದ್ಭುತ ನಿರ್ವಹಣೆಯನ್ನು ತೋರುತ್ತೀರಿ. ಇಂದು ಧನಲಾಭವನ್ನು ನಿರೀಕ್ಷಿಸಿ. ಆದರೆ, ಅದರ ಜೊತೆಗೆ, ಖರ್ಚುವೆಚ್ಚಗಳಲ್ಲಿನ ಹೆಚ್ಚಳವನ್ನೂ ನಿರೀಕ್ಷಿಸಿ. ಆದರೆ, ನೀವು ಚಿಂತಿಸಬೇಕಾಗಿಲ್ಲ. ಈ ಖರ್ಚುಗೆಳಲ್ಲವೂ ಅನಗತ್ಯ. ನಿಮ್ಮ ಆಕಸ್ಮಿಕ ಆಕ್ರೋಶ ಮತ್ತು ದುರಾಕ್ರಮಣ ಪ್ರವೃತ್ತಿಯ ಮೇಲೆ ನೀವು ಅಗತ್ಯವಾಗಿ ಕಣ್ಣಿಟ್ಟಿರಬೇಕಾಗುತ್ತದೆ. ಮತ್ತು ಇದನ್ನು ನಿಮ್ಮ ಮಾತನ್ನು ಹತೋಟಿಯಲ್ಲಿಡುವ ಮೂಲಕ ಮಾಡಬಹುದು.
ಕರ್ಕಾಟಕ
ಸೋಮವಾರ, 19 ಜುಲೈ
ಜೀವನದಲ್ಲಿ ಪ್ರತಿಯೊಬ್ಬರೂ ಶಾಂತಿ ಮಾರ್ಗದಲ್ಲಿ ನಡೆದು ನಿಮ್ಮದನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ನೀವು ಕರ್ಕಾಟಕ ರಾಶಿಯವರು ಇಂದು ಇದನ್ನು ಮಾಡಬಲ್ಲಿರಿ. ಆಕ್ರೋಶ, ಸಿಟ್ಟು ಮತ್ತು ಉದ್ವೇಗಕ್ಕೆ ಒಳಗಾಗುವುದರಿಂದ ಪರಿಸ್ಥಿತಿಗಳು ಇನ್ನಷ್ಟು ಬಿಗಡಾಯಿಸುತ್ತದೆ. ದಿನ ಕಳೆದಂತೆ ನಿಮ್ಮ ಆರೋಗ್ಯವೂ ಕ್ಷೀಣಿಸುತ್ತದೆ. ಮತ್ತು ನಿಮ್ಮ ಕಿಸೆ ತೂತಾಗುವುದರೊಂದಿಗೆ, ಅವುಗಳನ್ನು ತಡೆಯಬೇಕಾಗುತ್ತದೆ ಮತ್ತು ನಿಮ್ಮನ್ನು ತೊಂದರೆಗೊಳಪಡಿಸುವ ಕೋಪ ಮತ್ತು ಹತಾಶೆಯ ತೀವ್ರ ಯಾತನೆಯನ್ನು ತೊಲಗಿಸಬೇಕಾಗುತ್ತದೆ. ಮತ್ತು ಹೌದು, ನೀವು ಚರ್ಚೆ ಅಥವಾ ಮಾತುಕತೆಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಬೇಕು. ಪ್ರಯಾಣ ಮತ್ತು ಪ್ರವಾಸಗಳನ್ನು ಮುಂದೂಡಿ.
ಸಿಂಹ
ಸೋಮವಾರ, 19 ಜುಲೈ
ಈ ದಿನವು ನಿಮ್ಮ ನೆನಪಿನಿಂದ ಶೀಘ್ರದಲ್ಲೇ ಹೊರಹೋಗವು ದಿನವಾಗಲಿದೆ,ಉದ್ವೇಗ, ಅವಿಶ್ರಾಂತತೆ ಮತ್ತು ಆಕ್ರೋಶ ಇವೆಲ್ಲವೂ ನಿಮ್ಮಲ್ಲಿಗೆ ಸಂಪೂರ್ಣ ಬಲದೊಂದಿಗೆ ಆಗಮಿಸುತ್ತದೆ. ಆದರೆ, ನೀವು ಸಿಂಹ ರಾಶಿಯವರು ನಿಮ್ಮ ಘರ್ಜನೆಯ ಮೂಲಕ ಅವುಗಳನ್ನು ತೊಲಗಿಸಬೇಕಾಗಿದೆ. ಮತ್ತು ಅದರೊಂದಿಗೆ, ನಿಮ್ಮ ವೈಯಕ್ತಿಕ ಕ್ಷೇತ್ರದಲ್ಲೂ ಪ್ರೀತಿಪಾತ್ರರು ಮತ್ತು ತಾಯಿಯೊಂದಿಗೆ ಕಲಹ ಮತ್ತು ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಇವೆಲ್ಲವೂ ನಿಮ್ಮನ್ನು ಅಸಮಾಧಾನಗೊಳಿಸದಂತೆ ನೋಡಿಕೊಳ್ಳಿ. ಕೊನೆಯದಾಗಿ, ಆಸ್ತಿ ಅಥವಾ ಸರಕಾರಿ ಸಂಬಂಧಿತ ವಿಚಾರಗಳಲ್ಲಿ ವ್ಯವಹರಿಸುವಾಗ ಹೆಚ್ಚು ಜಾಗರೂಕರಾಗಿರಿ.
ಕನ್ಯಾ
ಸೋಮವಾರ, 19 ಜುಲೈ
ಕನ್ಯಾರಾಶಿಯವರಾದ ನೀವು ಇದಕ್ಕಿಂತ ಉತ್ತಮ ದಿನವನ್ನು ನಿರೀಕ್ಷಿಸಲಾರಿರಿ, ನಿಮ್ಮ ಒಡಹುಟ್ಟಿದವರು ನಿಮ್ಮ ವ್ಯಕ್ತಿತ್ವದಲ್ಲಿ ಪ್ರೀತಿಯನ್ನು ಕಾಣಲಿದ್ದಾರೆ. ಇದು ಖಂಡಿತವಾಗಿಯೂ ಅವರೊಂದಿಗಿನ ನಿಮ್ಮ ಸಂಬಂಧವನ್ನು ಇನ್ನಷ್ಟು ಸಿಹಿಯಾಗಿಸುತ್ತದೆ. ನೀವು ನಿಮ್ಮ ಸ್ನೇಹಿತರನ್ನೂ ಭೇಟಿಯಾಗುವಿರಿ. ಆದ್ದರಿಂದ, ಜನರ ಪ್ರೀತಿಯೊಂದಿಗೆ ಸಂಬಂಧಗಳ ನಿರ್ಮಾಣ ಮತ್ತು ಪೋಷಣೆಗೆ ಸಂಬಂಧಿಸಿ ಈ ದಿನವು ಅತ್ಯುತ್ತಮವಾಗಿದೆ. ಆರ್ಥಿಕ ವಿಚಾರಕ್ಕೆ ಸಂಬಂಧಿಸಿ, ಇಂದಿನಂತೆ ಬೊಕ್ಕಸ ಭರ್ತಿಗೊಳಿಸುವ ಅವಕಾಶವು ಎಲ್ಲರಿಗೂ ಸಿಗುವುದಿಲ್ಲ. ಒಟ್ಟಾಗಿ, ದಿನದ ಅಂತ್ಯದಲ್ಲಿ ನಿಮ್ಮ ಸಾಮಾಜಿಕ ಸ್ಥಾನಮಾನ ವೃದ್ಧಿಗೊಳ್ಳುವುದರಿಂದ ಇದೊಂದು ಅದ್ಭುತ ದಿನವಾಗಲಿದೆ.
ತುಲಾ
ಸೋಮವಾರ, 19 ಜುಲೈ
ಇಂದು ನೀವು ಹೊಂದುವ ನಿಮ್ಮ ನಿರಾಕರಣ ವರ್ತನೆಯಿಂದಾಗಿ ನಿರ್ಧಾರ ಕೈಗೊಳ್ಳುವಿಕೆಯು ನಿಮಗೆ ಅಲ್ಪ ಕಷ್ಟಕರವಾಗಲಿದೆ,ಇದಕ್ಕಾಗಿ ನೀವು ಆಶಾವಾದಿಯಾಗಿರಬೇಕು ಮತ್ತು ಆತ್ಮವಿಶ್ವಾಸದಿಂದಿರಬೇಕು. ಇನ್ನೂ ನಿಮಗೆ ಆತ್ಮವಿಶ್ವಾಸದ ಕೊರತೆಯನ್ನು ಎದುರಿಸುತ್ತಿದ್ದಲ್ಲಿ, ಮುಖ್ಯ ನಿರ್ಧಾರಗಳ ಕೈಗೊಳ್ಳುವಿಕೆಯನ್ನು ತಪ್ಪಿಸಿ. ಇದು ಅವಿವೇಕಿತನದಿಂದ ಅಂತ್ಯವಾಗಬಹುದು. ಗೃಹಕ್ಷೇತ್ರದಲ್ಲೂ, ಮೊಂಡುತನ ಮತ್ತು ಹಠಮಾರಿತನದ ಬದಲಿಗೆ ನೀವು ಧನಾತ್ಮಕ ಹಾಗೂ ಹೊಂದಾಣಿಕೆಯಿಂದಿರಬೇಕಾಗುತ್ತದೆ. ಮತ್ತು ನಿಮ್ಮ ಹಾದಿಯನ್ನು ಸರಿಪಡಿಸುವಲ್ಲಿ ನೀವು ಸಫಲರಾದಲ್ಲಿ, ನಿಮ್ಮ ಮನೆಯಲ್ಲಿ ಯಾವುದೇ ತೊಂದರೆಯಿರುವುದಿಲ್ಲ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ.
ವೃಶ್ಚಿಕ
ಸೋಮವಾರ, 19 ಜುಲೈ
ವೃಶ್ಚಿಕ ರಾಶಿಯವರಿಗೆ ಇದೊಂದು ಪರಿಪೂರ್ಣ ದಿನವಾಗಲಿದೆ, ಮತ್ಯಾಕೆ ಬೇಡ? ವ್ಯಕ್ತಿಯು ಅವನ/ಅವಳ ಪ್ರೀತಿಪಾತ್ರರು ಮತ್ತು ಮನೆಮಂದಿಯೊಂದಿಗೆ ಖುಷಿಭರಿತ ಸಮಯ ಕಳೆಯಲು ಅರ್ಹಳಾ/ನಾದಲ್ಲಿ, ಆಕೆ/ಆತನು ಇಂದು ಎಲ್ಲಾ ರೀತಿಯ ನಗುವನ್ನು ಹೊಂದಲು ಬದ್ಧನಾಗುತ್ತಾನೆ/ಳೆ. ಜೊತೆಗೆ, ನಿಮ್ಮ ಪ್ರೀತಿಪಾತ್ರರಿಂದ ಉಡುಗೊರೆ ಹಾಗೂ ಬಹುಮಾನಗಳನ್ನು ನಿರೀಕ್ಷಿಸಿ. ಸಂತಸಭರಿತ ಪ್ರವಾಸಗಳನ್ನೂ ಇಂದು ಕೈಗೊಳ್ಳಬಹುದು. ಮತ್ತು ಅಂತಿಮವಾಗಿ, ನೀವು ಶುಭಸುದ್ದಿಯನ್ನು ಪಡೆಯುವುದರಿಂದ ಧನಾತ್ಮಕ ದೃಷ್ಟಿಯೊಂದಿಗೆ ಈ ದಿನವನ್ನು ಅಂತ್ಯಗೊಳಿಸುವಿರಿ.
ಧನು
ಸೋಮವಾರ, 19 ಜುಲೈ
ಧನುರಾಶಿಯವರಾದ ನೀವು ಇಂದು ಅತ್ಯಂತ ಶ್ರಮದಿಂದ ಕೆಲಸ ಮಾಡುತ್ತೀರಿ, ಪರಿಸ್ಥಿತಿಗಳು ಸರಳ ಹಾಗೂ ನಿರಾಯಾಸವಾಗಿರುವುದಿಲ್ಲ. ಇದರ ಮೇಲೆ, ನೀವು ನಿಮ್ಮ ಮನೆಮಂದಿಯೊಂದಿಗೆ, ವಾಗ್ವಾದ ಅಥವಾ ಚರ್ಚೆಗಳಲ್ಲಿ ತೊಡಗಬಹುದು. ಆದ್ದರಿಂದ, ನಿಮ್ಮ ಮಾತು ಮತ್ತು ದುರಾಕ್ರಮಣ ಪ್ರವೃತ್ತಿಯ ಬಗ್ಗೆ ಎಚ್ಚರವಹಿಸಿ. ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ನೀವು ಅನಾರೋಗ್ಯದಿಂದ ನರಳಬಹುದು. ಜಾಗರೂಕರಾಗಿರಿ. ಇದು ಹಾಗೇನೇ. ಎಲ್ಲವೂ ಉತ್ತಮವಾಗಿಯೇ ಪ್ರಾರಂಭಗೊಳ್ಳುತ್ತೆ ಮತ್ತು ಅಂತ್ಯಗೊಳ್ಳುತ್ತದೆ. ಆದರೆ, ದುರಾದೃಷ್ಟವಾಗಿ ಇಂದು ಹೀಗಿರುವುದಿಲ್ಲ. ಇಂದು ಖರ್ಚುಗಳು ಹೆಚ್ಚಾಗಬಹುದು.
ಮಕರ
ಸೋಮವಾರ, 19 ಜುಲೈ
ಮಕರ ರಾಶಿಯವರಿಗೆ, ಲಾಭ ಹಾಗೂ ಸಾಮಾಜಿಕ ಕರ್ತವ್ಯಗಳ ನೆರವೇರಿಸುವಿಕೆಗೆ ಸಂಬಂಧಿಸಿ ಈ ದಿನವು ಉತ್ತಮ ದಿನವಾಗಿದೆ, ಸ್ನೇಹಿತರು ಮತ್ತು ಸಂಬಂಧಿಗಳ ಸಮಾಗಮವು ನಿಮ್ಮನ್ನು ಸಂತೋಷ ಹಾಗೂ ಖುಷಿಯಲ್ಲಿರಿಸುತ್ತದೆ. ಜೊತೆಗೆ, ಇಂದು ಎಲ್ಲಾ ಕ್ಷೇತ್ರದಲ್ಲೂ ನಿಮಗೆ ಯಶಸ್ಸು ಉಂಟಾಗುವುದರಿಂದ ಯಶಸ್ಸು ನಿಮ್ಮಿಂದ ದೂರವಾಗುವುದಿಲ್ಲ. ವಿವಾಹ ಯೋಜನೆಯಲ್ಲಿರುವವರಿಗೆ ಶೀಘ್ರದಲ್ಲೇ ಕಂಕಣಬಲ ಕೂಡಿಬರುವ ಸಾಧ್ಯತೆಯಿದೆ. ಈಗಾಗಲೇ ಸಿಹಿಯಾಗಿರುವ ದಿನವನ್ನು ಇನ್ನಷ್ಟು ಸಿಹಿಗೊಳಿಸಬೇಕಿದ್ದಲ್ಲಿ, ಸಂತಸಭರಿತ ಪ್ರವಾಸಯೋಜನೆ ರೂಪಿಸಿ. ಕೊನೆಯದಾಗಿ, ಕೆಲವು ಅನಿರೀಕ್ಷಿತ ಸಂಭ್ರಮಾಚರಣೆಗೆ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಿ ಆದರೆ, ಶುಭಸಮಾರಂಭಗಳು ನಡೆಯುವ ಸಾಧ್ಯತೆಯಿದೆ.
ಕುಂಭ
ಸೋಮವಾರ, 19 ಜುಲೈ
ಫಲಪ್ರದ, ಲಾಭದಾಯಕ, ಸಂತೋಷ ಇವೆಲ್ಲವೂ ನಿಮ್ಮ ದಿನವನ್ನು ವ್ಯಾಖ್ಯಾನಿಸುವ ಗುಣವಾಚಕಗಳಾಗಿವೆ, ಈ ದಿನದ ಗುರಿಗಳನ್ನು ನೀವು ಸುಲಭವಾಗಿ ಸಾಧಿಸುತ್ತೀರಿ. ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕಾರ್ಯದ ಕುರಿತು ತೃಪ್ತಿ ಹಾಗೂ ಸಂತಸವನ್ನು ಹೊಂದುವುದರಿಂದ, ಬಡ್ತಿಯನ್ನು ನಿರೀಕ್ಷಿಸಬಹುದು. ವೈಯಕ್ತಿಕ ನೆಲೆಯಲ್ಲಿ, ದಿನಪೂರ್ತಿ ನೀವು ಖುಷಿಯಿಂದ ಇರುವಿರಿ. ಆರ್ಥಿಕ ಲಾಭ ಉಂಟಾಗಲಿದೆ. ಆದ್ದರಿಂದ ಉತ್ಸಾಹದಿಂದ ಸಾಗಿರಿ. ಇಂದು ನಿಮಗೆ ಹಿರಿಯರ ಆಶೀರ್ವಾದ ದೊರೆಯಲಿದೆ.
ಮೀನ
ಸೋಮವಾರ, 19 ಜುಲೈ
ಡೈರಿಯಲ್ಲಿನ ಎಲ್ಲಾ ಪುಟಗಳಲ್ಲೂ ಉತ್ತಮವಾದ ಬರಹವಿರುವುದಿಲ್ಲ. ನಿಮ್ಮ ಇಂದಿನ ಡೈರಿಯಲ್ಲಿ ನೀವು ಉತ್ತಮ ಬರಹದ ಪುಟವನ್ನು ಹೊಂದಲಾರಿರಿ ಆದರೂ, ಪ್ರಶಾಂತತೆಯ ಸಂಜೆಯ ಭರವಸೆಯನ್ನು ಯಾರೇ ಆದರೂ ಉದ್ವೇಗ, ಸೋಮಾರಿತನ ಮತ್ತು ಅವಿಶ್ರಾಂತತೆಯನ್ನು ತೊಲಗಿಸಬೇಕಾಗುತ್ತದೆ. ಸಾಧ್ಯವಿದ್ದಷ್ಟು ಶಾಂತರಾಗಿರಲು ಪ್ರಯತ್ನಿಸಿ. ಇದು ವೈಯಕ್ತಿಕ ನೆಲೆಯಲ್ಲಿ ನಿಮಗೆ ಧೈರ್ಯ ನೀಡಲು ಸಹಕಾರಿಯಾಗುವುದಲ್ಲದೆ, ಮೇಲಾಧಿಕಾರಿಗಳೊಂದಿಗೆ ವ್ಯವಹರಿಸುವಾಗ ನೀವು ಅತೀ ಎಚ್ಚರಿಕೆಯಿಂದಿರಬೇಕಾಗಿರುವುದರಿಂದ, ವೃತ್ತಿನೆಲೆಯಲ್ಲೂ ಇದು ಸಹಾಯಕವಾಗುತ್ತದೆ. ಸಣ್ಣ ತಪ್ಪುಗಳಿಗೂ ನೀವು ಖಂಡನೆಗೆ ಒಳಗಾಗಬೇಕಾಗುತ್ತದೆ. ಮನೆಯಲ್ಲಿ, ಮಕ್ಕಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ನೀವು ಚಿಂತೆಗೊಳಗಾಗುವಿರಿ. ಎಲ್ಲವನ್ನೂ ಎದುರಿಸಿರಿ.