🙏ನಿತ್ಯವಾಣಿ ಗುರುವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಗುರುವಾರದ ರಾಶಿ ಭವಿಷ್ಯ 🙏

ಮೇಷ
ಗುರುವಾರ, 29 ಜುಲೈ
ಈ ದಿನಪೂರ್ತಿ ನೀವು ಧನಾತ್ಮಕ ಶಕ್ತಿಯನ್ನು ಹೊಂದಿರುತ್ತೀರಿ. ಇಂದು ನೀವು ಸಂಪೂರ್ಣವಾಗಿ ಉಲ್ಲಾಸದಿಂದಿರುತ್ತೀರಿ ಮತ್ತು ಉತ್ಸಾಹದಿಂದ ನಿಮ್ಮ ಕಾರ್ಯವನ್ನು ಮುಂದುವರಿಸುತ್ತೀರಿ. ಲಕ್ಷ್ಮೀದೇವಿಯು ನಿಮ್ಮ ಮೇಲೆ ಪೂರ್ಣ ಅನುಗ್ರಹವನ್ನು ತೋರುತ್ತಾಳೆ. ಮನೆಯ ಅದ್ಭುತ ವಾತಾವರಣದಲ್ಲಿ ಕುಟುಂಬ ಸದಸ್ಯರೊಂದಿಗೆ ಕಳೆದ ಕ್ಷಣಗಳು ನಿಮ್ಮನ್ನು ಸಂಪೂರ್ಣವಾಗಿ ಲವಲವಿಕೆಯಲ್ಲಿರಿಸುತ್ತದೆ. ಸಾಮಾಜಿಕ ಸ್ನೇಹಕೂಟ ಅಥವಾ ಸಂಧ್ಯಾವಿನೋದಗಳಿಗೆ ತೆರಳಬಹುದು. ಈ ಅದ್ಭುತ ಸಮಯದ ಸಂಪೂರ್ಣ ಪ್ರಯೋಜನವನ್ನು ಪಡೆಯಿರಿ. ಮತ್ತು ಈ ಕ್ಷಣವನ್ನು ಆನಂದಿಸಿ. ನಿಮ್ಮ ತಾಯಿಯ ಕಡೆಯಿಂದ ಶುಭಸುದ್ದಿ ಬರಲಿದೆ.

ವೃಷಭ
ಗುರುವಾರ, 29 ಜುಲೈ
ಎಚ್ಚರಿಕೆಯಿಂದಿರಿ. ಈ ದಿನ ನೀವು ಜಾಗರೂಕರಾಗಿರಬೇಕು. ಇಂದು ನೀವು ಚಿಂತೆಯಿಂದ ಕೂಡಿರಬಹುದು. ಇದಕ್ಕೆ ಅನಾರೋಗ್ಯ ಅಥವಾ ಕಣ್ಣಿನ ತೊಂದರೆ ಕಾರಣವಾಗಿರಬಹುದು. ನಿಮ್ಮ ಕುಟುಂಬದವರಿಂದ ನೀವು ಕೋಪಕ್ಕೆ ಒಳಗಾಗಬಹುದು. ಇದು ಜಗಳವನ್ನು ತಂದೊಡ್ಡಬಹುದು. ಈ ದಿನ ಕೈಗೆತ್ತಿಕೊಂಡ ಕಾರ್ಯವು ಅಪೂರ್ಣಗೊಳ್ಳಲಿದೆ. ಖರ್ಚಿನ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ ನಿಮ್ಮ ಕಿಸೆ ಪೂರ್ತಿ ಖಾಲಿಯಾಗಬಹುದು. ಆದರೂ, ಕಠಿಣ ಪರಿಶ್ರಮವು ಇಂದು ಯಶಸ್ಸನ್ನು ನೀಡಲಿದೆ. ಎಚ್ಚರಿಕೆಯಿಂದಿರಿ ಅಪಘಾತದ ಸಂಭಾವ್ಯತೆಯನ್ನು ಹೊಂದಿರುವಿರಿ.

ಮಿಥುನ
ಗುರುವಾರ, 29 ಜುಲೈ
ಈ ದಿನ ನಿಮಗೆ ಸಾಕಷ್ಟು ಪ್ರಯೋಜನಗಳನ್ನು ತರಲಿದೆ,ಏಕಾಂಗಿಗಳು ಉತ್ತಮ ಜೀವನ ಸಂಗಾತಿಯನ್ನು ಪಡೆಯುವ ಸಾಧ್ಯತೆಯಿದೆ. ಹಣಕಾಸು ಪ್ರಯೋಜನಗಳಿಗೆ ಉತ್ತಮ ದಿನ. ಸ್ನೇಹಿತರನ್ನು ಭೇಟಿಯು ಮತ್ತು ಸಂಭ್ರಮಗಳ ವಿನಿಮಯವು ಈ ದಿನವನ್ನು ಫಲಪ್ರದವಾಗಿಸುತ್ತದೆ. ಎಲ್ಲಾ ಉತ್ತಮ ಸಂಗತಿಗಳು ಜೊತೆಯಾಗಿ ಬರಲಿವೆ. ಜೊತೆಗೆ ಮಗ ಮತ್ತು ಪತ್ನಿಯು ಸಹಾಯವನ್ನು ಸಾಬೀತುಪಡಿಸಲಿದ್ದಾರೆ ಮತ್ತು ನಿಮಗಾಗಿ ಸ್ವಾದಿಷ್ಟ ಭೋಜನ ಕಾದಿದೆ. ನಿಮ್ಮ ಮಕ್ಕಳಿಂದ ಉತ್ತಮ ಸುದ್ದಿಯನ್ನು ನಿರೀಕ್ಷಿಸಬಹುದು. ನಿಮ್ಮ ಖಜಾನೆಯ ಗಾತ್ರ ಹಿಗ್ಗುವುದು ಉದ್ಯೋಗ/ವ್ಯವಹಾರಗಳಲ್ಲಿನ ಪ್ರಯೋಜನವನ್ನು ಸೂಚಿಸುತ್ತದೆ. ಜೊತೆಗೆ ಆದಾಯದಲ್ಲಿನ ಹೆಚ್ಚಳ ಕೂಡಾ. ಈ ಅದೃಷ್ಟಕಾರಿ ಸಮಯ ಪ್ರಯೋಜನವನ್ನು ಪಡೆದುಕೊಳ್ಳಿ.

ಕರ್ಕಾಟಕ
ಗುರುವಾರ, 29 ಜುಲೈ
ಕರ್ಕಾಟಕ ರಾಶಿಯವರಿಗೆ ಅವಕಾಶಗಳು ಕಾದಿವೆ, ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ನೀವು ಮೇಲಾಧಿಕಾರಿಗಳೊಂದಿಗಿನ ಅತೀ ಮುಖ್ಯ ಚರ್ಚೆಗಳಲ್ಲಿ ನೀವು ಭಾಗವಹಿಸುವ ಸಾಧ್ಯತೆಯಿದೆ ಮತ್ತು ನಿಮ್ಮ ನಿರ್ವಹಣೆಯ ಬಗ್ಗೆ ಅವರು ಸಂತಸಪಡುತ್ತಾರೆ. ಬಡ್ತಿ ಸಿಗುವ ಸಾಧ್ಯತೆಯಿದೆ. ನಿಮ್ಮ ಗೃಹ ಸೌಂದರ್ಯ ವೃದ್ಧಿಗೆ ಸಂಬಂಧಿಸಿ ಹೊಸ ವಿಷಯಗಳ ಬಗ್ಗೆ ಮನೆಯಲ್ಲಿ ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ರೀತಿಯ ಸಂವಾದವನ್ನು ಹೊಂದಿರುತ್ತೀರಿ. ಕಚೇರಿ ಸಂಬಂಧ ಪ್ರವಾಸ ತೆರಳಬಹುದು. ನಿಮ್ಮ ಆರೋಗ್ಯ ಮತ್ತು ತಾಯಿಯೊಂದಿಗಿನ ನಿಮ್ಮ ಸಂಬಂಧದ ಕುರಿತಂತೆ ಧನಾತ್ಮ ಸುದ್ದಿಗಳು ಬರಲಿವೆ. ಸರಕಾರಿ ಸಂಬಂಧಿ ಕಾರ್ಯಗಳಿಂದ ಪ್ರಯೋಜನಗಳು ಸಿಗುವ ಸಾಧ್ಯತೆ ದಟ್ಟವಾಗಿದೆ.

ಸಿಂಹ
ಗುರುವಾರ, 29 ಜುಲೈ
ಈ ದಿನವು ಸಾಧಾರಣ ದಿನವಾಗಿದೆ, ಧಾರ್ಮಿಕ ಮತ್ತು ಶುಭಕರ ಚಟುವಟಿಕೆಗಳಲ್ಲಿ ನೀವು ಭಾಗಿಯಾಗಬಹುದು ಜೊತೆಗೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ತೆರಳಬಹುದು. ಇಂದು ನಿಮ್ಮ ಸಿಡುಕಿನ ಬಗ್ಗೆ ನೀವು ಹತೋಟಿಯಿರಿಸಬೇಕು. ವಿದೇಶದಲ್ಲಿರುವ ನಿಮ್ಮ ಪ್ರೀತಿಪಾತ್ರರಿಂದ ನೀವು ಸುದ್ದಿಯನ್ನು ನಿರೀಕ್ಷಿಸಬಹುದು. ನಿಮ್ಮ ಕಾರ್ಯದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುವುದರಿಂದ ಇಂದು ನಿಯೋಜಿಸಿದ ಕಾರ್ಯದ ಮೇಲೆ ಗಮನಹರಿಸಿ ಮತ್ತು ಅದನ್ನು ಪೂರ್ಣಗೊಳಿಸುವ ಬಗ್ಗೆ ನೀವು ಏಕಾಗ್ರತೆಯನ್ನು ಹೊಂದಬೇಕಾಗುತ್ತದೆ. ಮಾನಸಿಕವಾಗಿ ನೀವು ಅಸ್ಥಿರತೆಯಿಂದ ಕೂಡಿರಬಹುದು. ಇದಕ್ಕೆ ನಿಮ್ಮ ಮಕ್ಕಳು ಕಾರಣವಾಗಿರಬಹುದು.

ಕನ್ಯಾ
ಗುರುವಾರ, 29 ಜುಲೈ
ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಆಲೋಚಿಸಿದ್ದಲ್ಲಿ ಈ ದಿನ ಶ್ರೇಯಸ್ಕರವಲ್ಲ, ರಸ್ತೆಬದಿಯ ಮಳಿಗೆಗಳಲ್ಲಿರುವ ಚಾಟ್ಸ್ ಮುಂತಾದ ತಿನಿಸುಗಳನ್ನು ತಿನ್ನಬೇಡಿ. ಅವುಗಳಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು. ನಿಮ್ಮ ಕೋಪವನ್ನು ನಿಗ್ರಹಿಸಿ ಮತ್ತು ಒರಟು ಮಾತುಗಳನ್ನು ನಿಯಂತ್ರಿಸಿ. ಇದು ಕೆಲವು ಅಹಿತಕರ ಸನ್ನಿವೇಶಗಳನ್ನು ತಡೆಯಲು ಸಹಕಾರಿಯಾಗುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗಿನ ಕೋಪಭರಿತ ವಾಗ್ವಾದಗಳು ನಿಮ್ಮನ್ನು ಬೇಸರಗೊಳಿಸುತ್ತದೆ. ನೀರಿರುವ ಪ್ರದೇಶಗಳಿಂದ ದೂರವಿರಿ. ಖರ್ಚುವೆಚ್ಚದಳು ಹೆಚ್ಚಾಗಲಿವೆ. ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಇದು ಸಂಘರ್ಷಕ್ಕೆ ಹಾದಿ ಮಾಡಿಕೊಡುತ್ತದೆ.

ತುಲಾ
ಗುರುವಾರ, 29 ಜುಲೈ
ಇಂದು ಸಂತಸಭರಿತ ಹಾಗೂ ನಿಶ್ಚಿಂತೆಯ ದಿನವಾಗಲಿದೆ, ಇಂದು ಬಹುಸಂಸ್ಕೃತಿಯ ಅಂಶಗಳು/ಘಟನೆಗಳು ನಿಮ್ಮ ದಿನವನ್ನು ಮುಂದುವರಿಸಲಿವೆ. ಇಂದು ವಾರ್ಡ್‌ರೋಬ್‌ನ್ನು ಇನ್ನಷ್ಟು ವೃದ್ಧಿಗೊಳಿಸಲು ಮತ್ತು ಹೊಸ ಉಡುಗೆ ಮತ್ತು ಆಭರಣಗಳನ್ನು ಖರೀದಿಸುವ ದಿನವಾದ್ದರಿಂದ ನಿಮ್ಮನ್ನು ನೀವೇ ಹುರಿದುಂಬಿಸಿಕೊಳ್ಳಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಉಲ್ಲಾಸದಿಂದಿರುತ್ತೀರಿ. ಸಮಾಜದಲ್ಲಿನ ಗೌರವ ಮತ್ತು ಮನ್ನಣೆಯ ಜೊತೆ ನೀವೇ ತಯಾರಿಸಿದ ನೀವು ಸ್ವಾದಿಷ್ಟ ಭೋಜನವನ್ನು ಸವಿಯಲಿದ್ದೀರಿ.ಆನಂದಿಸಿ.

ವೃಶ್ಚಿಕ
ಗುರುವಾರ, 29 ಜುಲೈ
ಇಂದು ಗೃಹಕ್ಷೇತ್ರದಲ್ಲಿ ಶಾಂತಿಯ ವಾತಾವರಣವು ಮನೆಮಾಡಿರುತ್ತದೆ, ಇಂದು ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯ ಮತ್ತು ಉತ್ಸಾಹದಿಂದಿರುತ್ತೀರಿ. ಆನಾರೋಗ್ಯದಿಂದ ಬಳಲುತ್ತಿರವವರು ಇದು ಉಲ್ಲಾಸದಿಂದಿರುವ ಸಮಯ. ಆರೋಗ್ಯದಲ್ಲಿ ಗುರುತರ ಅಭಿವೃದ್ಧಿಯು ಖಂಡಿತವಾಗಿಯೂ ಸಾಧ್ಯವಿದೆ. ಇಂದು ನೀವು ನಿಮ್ಮ ಸಹೋದ್ಯೋಗಿಗಳಿಂದ ಸಹಕಾರ ಮತ್ತು ಬೆಂಬಲವನ್ನು ಪಡೆಯುತ್ತಿರಿ ಮತ್ತು ಹೌದು ನೀವು ನಿಮ್ಮ ಪ್ರತಿಸ್ಪರ್ಧಿಗಳನ್ನು ಸೋಲಿಸಲು ಶಕ್ತರಾಗುತ್ತೀರಿ. ಹಳೆಯ ಸ್ನೇಹಿತೆಯೊಬ್ಬರನ್ನು ಇಂದು ನೀವು ಭೇಟಿ ಮಾಡಬಹುದು. ತಾಯಿಯ ಕಡೆಯಿಂದ ಶುಭಸುದ್ದಿ ಬರುವ ಸಂಭವವಿದೆ. ಅಪೂರ್ಣಗೊಂಡಿರುವ ಕಾರ್ಯಗಳು ಇಂದು ಪೂರ್ಣಗೊಳ್ಳಲಿವೆ. ಒಂದೇ ದಿನ ಹಣಕಾಸು ಲಾಭ ಮತ್ತು ಕಡಿಮೆ ಖರ್ಚು ಸಂಭವಿಸಿದರೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು.

ಧನು
ಗುರುವಾರ, 29 ಜುಲೈ
ನಿಮ್ಮ ಪ್ರಯಾಣದ ಯೋಜನೆಗಳನ್ನು ತಡೆಹಿಡಿಯುವಂತೆ ಸಲಹೆ,ಅಜೀರ್ಣ ಸಮಸ್ಯೆಗಳು ನಿಮ್ಮನ್ನು ತೊಂದರೆಗೀಡುಮಾಡುವ ಸಾಧ್ಯತೆಯಿದೆ. ನಿಮ್ಮ ಮಕ್ಕಳ ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿ ವಿಚಾರಗಳು ನಿಮ್ಮ ಮನಸ್ಸಲ್ಲಿ ತುಂಬಿರುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸುವಂತೆ ಮತ್ತು ಬೌದ್ಧಿಕ ಚರ್ಚೆಗಳಲ್ಲಿ ಎಚ್ಚರಿಕೆಯಿಂದಿರುವಂತೆ ಗಣೇಶ ಸಲಹೆ ನೀಡುತ್ತಾರೆ. ಏನೇ ಆದರೂ, ಸಾಹಿತ್ಯ ಮತ್ತು ಕಲೆಯನ್ನು ಅಭಿವೃದ್ಧಿಪಡಿಸುವತ್ತ ನೀವು ಒಲವು ತೋರಬಹುದು. ಮತ್ತು ನಿಮ್ಮ ಆತ್ಮೀಯರೊಂದಿಗೆ ನಿಮ್ಮ ಉತ್ತಮ ಸಮಯವನ್ನು ಕಳೆಬಹುದು. ಆನಂದಿಸಿ.

ಮಕರ
ಗುರುವಾರ, 29 ಜುಲೈ
ನಿಮ್ಮ ಎಂದಿನ ಉತ್ಸಾಹ ಮತ್ತು ಚೈತನ್ಯವನ್ನು ಕಳೆದುಕೊಳ್ಳುವುದರ ಜೊತೆಗೆ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಉತ್ತಮವಾಗಿರುವುದಿಲ್ಲ,ಮನೆಯಲ್ಲಿನ ಸಂಘರ್ಷವು ಇದಕ್ಕೆ ಕಾರಣವಾಗಿರಬಹುದು.ಅಥವಾ ನೀವು ಸ್ವಲ್ಪ ಅಸ್ವಸ್ಥರಾಗಿರುವಂತೆ ಕಂಡುಬರಬಹುದು. ಎದೆ ನೋವು ಅಥವಾ ನಿದ್ರಾಹೀನತೆಯ ಅನುಭವವಾಗುತ್ತದೆ. ಅಥವಾ ನಿಮ್ಮ ಸಾಮಾಜಿಕ ನಿಲುವು ಅಥವಾ ಗೌರವಕ್ಕೆ ತೊಂದರೆ ತರುವು ಯಾವುದೇ ಪರಿಸ್ಥಿತಿ ಉಂಟಾಗಿರಬಹುದು. ಜಲಾವೃತ ಪ್ರದೇಶಗಳಿಂದ ಮತ್ತು ಋಣಾತ್ಮಕ ಮಹಿಳಾ ಪ್ರಭಾವದಿಂದ ದೂರವಿರಿ. ದಿನದಾಂತ್ಯದಲ್ಲಿ ಉತ್ತಮ ನಿದ್ರೆಯನ್ನು ಪಡೆಯಲು ಧ್ಯಾನ ಮಾಡಿ.

ಕುಂಭ
ಗುರುವಾರ, 29 ಜುಲೈ
ದಿನದ ಪ್ರಾರಂಭವು ಖುಷಿಯಿಂದ ತುಂಬಿರುತ್ತದೆ ಮತ್ತು ನೀವು ಉಲ್ಲಾಸದಿಂದಿರುತ್ತೀರಿ, ಇಂದು ನೀವು ಚಿಂತೆಯಿಂದ ದೂರವಿರುವುದರಿಂದ ಇಂದು ನೀವು ಹರ್ಷ ಮತ್ತು ನಿರುತ್ಸಾಹದಿಂದ ದೂರವಿರುತ್ತೀರಿ. ಸ್ನೇಹಿತರೊಂದಿಗೆ ಖುಷಿ ವಿನಿಮಯ, ಒಡಹುಟ್ಟಿದವರೊಂದಿಗೆ ಉತ್ತಮ ಸಮಯ ಕಳೆಯುವಿಕೆ ಇವೆಲ್ಲವೂ ಇಂದು ನಿಮ್ಮ ‘ಮಾಡಬೇಕಾದ ವಿಷಯಗಳ’ ಪಟ್ಟಿಯಲ್ಲಿರುತ್ತದೆ. ಆನಂದದಾಯಕ ಸಣ್ಣಪ್ರವಾಸವನ್ನು ಇಂದು ನೀವು ಕೈಗೊಳ್ಳಬಹುದು. ನಿಮ್ಮ ಸ್ಪರ್ಧಿಗಳನ್ನು ಸೋಲಿಸಿ ಯಶಸ್ಸನ್ನು ಪಡೆಯುವುದರಿಂದ ಅದೃಷ್ಟವು ನಿಮ್ಮಲ್ಲಿ ಕಂಗೊಳಿಸುತ್ತಿರುತ್ತದೆ.

ಮೀನ
ಗುರುವಾರ, 29 ಜುಲೈ
ಇಂದು ನಿಮ್ಮ ಯೋಗದಲ್ಲಿ ಖರ್ಚಿನ ಚಿತ್ರಣವಿರುವುದರಿಂದ ಅಗತ್ಯವಾದ ವಿಚಾರಗಳಿಗೆ ಮಾತ್ರವೇ ಪ್ರಾಮುಖ್ಯತೆ ನೀಡಿ ನಿಮ್ಮ ಹಣಕಾಸು ವಿವರಗಳನ್ನು ಸುಸ್ಥಿತಿಯಲ್ಲಿಡುವಂತೆ, ಸರಿಯಾದ ಸಮಯದಲ್ಲಿ ಮಾತು ಮತ್ತು ನಿಮ್ಮ ಕೋಪವನ್ನು ನಿಯಂತ್ರಿಸದಿದ್ದಲ್ಲಿ ನೀವು ಸಂಘರ್ಷಕ್ಕೆ ಒಳಗಾಗುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಹಣ ಕೊಡುಕೊಳ್ಳುವಿಕೆಯ ವ್ಯವಹಾರದಲ್ಲಿ ತೊಡಗುವ ವೇಳೆ ಎಚ್ಚರದಿಂದಿರಿ. ಅರ್ಥರಹಿತ ಆಲೋಚನೆಗಳಿಂದ ಮತ್ತು ಕುಟುಂಬ ಸದಸ್ಯರೊಂದಿಗಿನ ವಾಗ್ವಾದಗಳಿಂದ ದೂರವಿರಿ ಇದು ನಿಮ್ಮ ಸಾಮಾನ್ಯ ದಿನದ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತದೆ.

Leave a Reply

Your email address will not be published.