🙏ನಿತ್ಯವಾಣಿ ಭಾನುವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಭಾನುವಾರದ ರಾಶಿ ಭವಿಷ್ಯ 🙏

ಮೇಷ
ಭಾನುವಾರ, 1 ಆಗಸ್ಟ್
ಅದೃಷ್ಟಕರ ದಿನವು ನಿಮಗಾಗಿ ಕಾದಿದೆ, ಕುಟುಂಬದಲ್ಲಿ ಮಂಗಳಕರ ಸಮಾರಂಭವು ನಡೆಯುವ ಸಾಧ್ಯತೆಯಿದೆ. ಇದು ನೀವು ತುಂಬಾ ಸಮಯದಿಂದ ಸಂಪರ್ಕವನ್ನೇ ಕಳೆದುಕೊಂಡಿದ್ದ ಸಂಬಂಧಿಕರನ್ನು, ಸ್ನೇಹಿತರನ್ನು ಮತ್ತು ಬಂಧುವರ್ಗದವರನ್ನು ಭೇಟಿ ಮಾಡುವ ಸುವರ್ಣ ಅವಕಾಶವನ್ನು ಒದಗಿಸುತ್ತದೆ. ಅವರ ಸೆಲ್ ಫೋನ್ ಸಂಖ್ಯೆ ಅಥವಾ ಸಾಮಾಜಿಕ ನೆಟ್‌ವರ್ಕಿಂಗ್ ತಾಣಗಳ ವಿಳಾಸಗಳನ್ನು ತೆಗೆದುಕೊಳ್ಳಲು ಮರೆಯದಿರಿ. ವ್ಯವಹಾರದಲ್ಲಿ ಅಥವಾ ವಿನೋದಕ್ಕಾಗಿ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸಕಾಲ. ಈಗ ನೀವು ಯಾವುದೇ ವಿಚಾರದಲ್ಲೂ ತುಂಬಾ ಉತ್ಸಾಹಿಗಳಾಗಿರುತ್ತೀರಿ. ವಾಸ್ತವವಾಗಿ, ಎಷ್ಟು ಉತ್ಸಾಹಿಗಳೆಂದರೆ, ಯಾವುದೇ ಯೋಜನೆಯ ಬಗ್ಗೆ ಪೂರ್ಣವಾಗಿ ಕೇಳದೆಯೇ ನೀವು ಅದನ್ನು ದೃಢಪಡಿಸಲು ಶಕ್ತರಿರುತ್ತೀರಿ. ಇದನ್ನು ತಡೆಹಿಡಿಯಿರಿ. ಯಾವುದೂ ಮಿತಿಮೀರಿದರೆ ಅಪಾಯ. ನಿಮ್ಮ ಆರೋಗ್ಯ ಮತ್ತು ಹಣಕಾಸಿನ ಬಗ್ಗೆ ಎಚ್ಚರವಹಿಸಿ. ವಿಪರೀತ ಖರ್ಚು ಮಾಡಬೇಡಿ. ಅನಿರೀಕ್ಷಿತ ಐಶ್ವರ್ಯವು ನಿಮಗಾಗಿ ಕಾದಿದೆ.

ವೃಷಭ
ಭಾನುವಾರ, 1 ಆಗಸ್ಟ್
ಏನೋ ಒಂದು ವಿಚಾರದ ಕುರಿತಾದ ಚಿಂತೆಯು ಇನ್ನೂ ನಿಮ್ಮನ್ನು ಕಾಡುತ್ತಿದೆ. ಬಹುಶಃ ಬಹುಮುಖ್ಯವಾದ ವಿಚಾರವೊಂದಕ್ಕೆ ಸಂಬಂಧಿಸಿ ನೀವು ಇನ್ನೂ ಒಂದು ನಿರ್ಧಾರಕ್ಕೆ ಬಂದಿರಲಿಕ್ಕಿಲ್ಲ. ಅದು ಏನೇ ಆಗಿರಲಿ, ಇದು ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರಲ್ಲಿ ಮಾನಸಿಕ ಕಳವಳವನ್ನು ಉಂಟುಮಾಡುತ್ತಿದೆ. ಎಲ್ಲಾ ಕುಟುಂಬ ಸಂಘರ್ಷಗಳನ್ನು ಪ್ರಸ್ತಾಪಿಸಬೇಡಿ. ನೀವು ಕುಟುಂಬ ಸದಸ್ಯರಿಂದ ಹೆಚ್ಚು ಸಹಕಾರ ಮತ್ತು ಸಮಾನತೆಯನ್ನು ನಿರೀಕ್ಷಿಸಿರುತ್ತೀರಿ ಮತ್ತು ಇದು ನಿಮ್ಮ ಮನಸ್ಸಿಗೆ ತುಂಬಾ ನೋವುಂಟುಮಾಡುತ್ತದೆ. ವಿಚಾರಗಳ ಬಗ್ಗೆ ನಿಧಾನವಾಗಿ ಆಲೋಚಿಸಿ. ಅವರು ಯಾಕೆ ಕರುಣೆ ತೋರುತ್ತಿಲ್ಲ? ಅವರು ಒಪ್ಪದೇ ಇರಲು ಇದು ಪ್ರೀತಿ ಸಂಬಂಧವೇ? ಇದು ನಿಜವಾಗಿಯೂ ನಿಮಗೆ ಒಳ್ಳೆಯದೇ? ನೀವು ತುಂಬಾ ಒತ್ತಡದಲ್ಲಿದ್ದೀರಿ ಮತ್ತು ಇದು ನಿಮ್ಮ ಕೆಲಸದ ಮೇಲೂ ಅಡ್ಡಿಯನ್ನುಂಟುಮಾಡುತ್ತದೆ. ಚೆನ್ನಾಗಿರಿ ಎಂದು ಸಲಹೆ

ಮಿಥುನ
ಭಾನುವಾರ, 1 ಆಗಸ್ಟ್
ವ್ಯವಹಾರ ಮತ್ತು ವ್ಯವಹಾರ ಸಂಬಂಧಿ ವಿಚಾರಗಳಿಗೆ ಇದು ಉತ್ತಮ ದಿನ,ಇಂದು ನೀವು ‘ಸ್ವರ್ಣಸ್ಪರ್ಷ’ವನ್ನು ಹೊಂದಿದ್ದೀರಿ. ಆದ್ದರಿಂದ ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ಈ ಫಲವನ್ನು ಅನುಭವಿಸಿ. ವ್ಯಾಪಾರದಲ್ಲಿ ಆದಾಯವು ತೀವ್ರವಾಗಿ ಹೆಚ್ಚಾಗಲಿದೆ ಮತ್ತು ಬಂಡವಾಳಗಳು ಉತ್ತಮ ಲಾಭಾಂಶವನ್ನು ತರುವ ಸಾಧ್ಯತೆಯಿದೆ. ಸ್ನೇಹಿತರಿಂದಲೂ ನಿಮಗೆ ಪ್ರಯೋಜನ ಉಂಟಾಗಲಿದೆ. ಅವರೊಂದಿಗೆ ಸಂಪರ್ಕದಲ್ಲಿರಿ. ಹೊಸ ಲಾಭದಾಯಕ ಉದ್ಯೋಗವನ್ನು ಅರಸುತ್ತಿರುವ ಉದ್ಯೋಗಿಗಳಿಗೆ ಅದೃಷ್ಟ ಕೂಡಿಬರಲಿದೆ. ಕಚೇರಿಯಲ್ಲಿ ಬಡ್ತಿಯನ್ನು ಎದುರುನೋಡುತ್ತಿರುವವರಿಗೂ ಇದು ಉತ್ತಮ ಸಮಯ. ವೃತ್ತಿಯಲ್ಲಿ ಪದೋನ್ನತಿ ಉಂಟಾಗಲಿದೆ. ಅವಿವಾಹಿತರಿಗೆ ಅಥವಾ ಎರಡನೇ ವಿವಾಹದ ಆಲೋಚನೆಯನ್ನು ಹೊಂದಿದ ವಿವಾಹ ವಿಚ್ಛೇದಿತರಿಗೆ ಕಲ್ಯಾಣಕ್ಕೆ ಇದು ಸಕಾಲ. ಸತ್ಕಾರಕೂಟದ ಆಮಂತ್ರಣವನ್ನು ನಿರಾಕರಿಸಬೇಡಿ. ಸಂಜೆಯ ವೇಳೆಗೆ ಹೆಚ್ಚಿನ ಶುಭಸುದ್ದಿ ಬರಲಿದೆ..

ಕರ್ಕಾಟಕ
ಭಾನುವಾರ, 1 ಆಗಸ್ಟ್
ಗ್ರಹಗತಿಗಳು ಅದೃಷ್ಟಕರವಾಗಿಯೇ ಮುಂದುವರಿಯಲಿದೆ ಮತ್ತು ಸಮಯವು ಅನುಕೂಲಕರವಾಗಿರುತ್ತದೆ, ಅದೃಷ್ಟದ ಕರ್ಕಾಟಕ ರಾಶಿಯವರು ನೀವು. ನಿನ್ನೆಯ ದಿನದಂತ್ಯದಿಂದ ಎಲ್ಲಾ ಅದೃಷ್ಟಗಳನ್ನು ನೀವು ಆನಂದಿಸುತ್ತಿದ್ದೀರಿ. ನಗುವಿಂದಿರಿ ಮತ್ತು ಅಪರೂಪದ ಕೊಡುಗೆಗಳನ್ನು ಆಶ್ಚರ್ಯದಿಂದ ಪಡೆಯಿರಿ. ಕಾರ್ಯಸ್ಥಳದಲ್ಲಿ ಮತ್ತು ಮನೆಯಲ್ಲಿ ನಿಮಗೆ ಅತ್ಯುತ್ತಮ ಸಮಯ ಕಾದಿದೆ. ಪರಿವಾರದೊಂದಿಗೆ ನೀವು ಹಂಚಿಕೊಂಡಿರುವ ಸ್ನೇಹಪರ ಸಂಬಂಧ ನಿಮಗೆ ಒಂದು ಆದರ್ಶಭರಿತ ಪರಿಕಲ್ಪನೆ. ಹಾಗೂ ನಿಮಗೆ ಈ ಸುಲಲಿತವಾಗಿ ಬರುವ ಆಲೋಚನೆಗಳು ಇಷ್ಟವಾಗುತ್ತಿದೆಯೇ?ನಿಮ್ಮ ತಾಯಿಯಿಂದ ಮತ್ತು ಆಕೆಯ ಬುದ್ಧಿವಂತಿಕೆಯಿಂದ ನಿಮಗೆ ಲಾಭ ಉಂಟಾಗಲಿದೆ. ಇವೆಲ್ಲವೂ ನಿಮ್ಮ ಸ್ವಂತ ಆವರಣವನ್ನು ಕಲಾತ್ಮಕವಾಗಿ ಹೆಚ್ಚಿಸಲು ಪ್ರೇರೇಪಿಸುತ್ತದೆ. ಗೃಹಗತಿಗಳ ಅನುಗ್ರಹದ ಪ್ರಭಾವದಿಂದಾಗಿ ನಿಮ್ಮ ಘನತೆ ಮತ್ತು ಹಣಕಾಸು ಸ್ಥಿತಿಯು ವರ್ಧಿಸುತ್ತದೆ.

ಸಿಂಹ
ಭಾನುವಾರ, 1 ಆಗಸ್ಟ್
ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ,ಏನೂ ಅದ್ಭುತವಾಗಿರುವುದಿಲ್ಲ. ಸಂಕ್ಷಿಪ್ತವಾಗಿ ಅಪೇಕ್ಷಿತ ಫಲಿತಾಂಶವನ್ನು ಪಡೆಯಲು ಪ್ರಾಯೋಗಿಕ ಪರೀಕ್ಷೆಗಳಲ್ಲಿ ನೀವು ಎಂದಿಗಿಂತ ಹೆಚ್ಚು ಶ್ರಮಪಡಬೇಕಾದೀತು ಅಥವಾ ನಿಮ್ಮ ಮನಸ್ಸಿನಲ್ಲಿನ ರೂಪರೇಷೆಗಳನ್ನು ಕಾಗದದ ಮೇಲೆ ಕಾರ್ಯರೂಪಕ್ಕೆ ತರಲು ನಿಮಗೆ ಎಂದಿಗಿಂತ ಹೆಚ್ಚು ಸಮಯ ಬೇಕಾದೀತು.ಎಲ್ಲವೂ ಗ್ರಹಗತಿಯನ್ನು ಹೊಂದಿರುವುದಿಲ್ಲ.ದೃಢನಿಷ್ಠೆಯನ್ನು ಹೊಂದಿ. ನೀವು ಆಲಸ್ಯವನ್ನು ಹೊಂದಿರುತ್ತೀರಿ ಮತ್ತು ಗೆಲುವಿಲ್ಲದವರಾಗಿರುತ್ತೀರಿ. ನೀವು ಒತ್ತಡಕ್ಕೆ ಒಳಗಾಗಬಹುದು ಅಥವಾ ಸುಸ್ತಾಗಿರುವಂತೆಯೂ ಕಂಡುಬರಬಹುದು. ನಿಮಗೆ ಯಾರಾದರೂ ಕಿರಿಕಿರಿಯನ್ನುಂಟುಮಾಡಿದರೆ ಅವರ ಮೇಲೆ ಹರಿಹಾಯಬೇಡಿ. ವಾಗ್ವಾದ ನಡೆಸುವವರಿಂದ ದೂರವಿರಿ. ಮಾತುಕತೆಯಿಂದ, ಚರ್ಚೆಗಳಿಗೆ ಇಂದು ಸೂಕ್ತದಿನವಲ್ಲ. ಏನೇ ಆದರೂ, ಅವುಗಳು ಹುರಿದುಂಬಿಸುವಂತೆ ಅನಿಸಬಹುದು. ಅವುಗಳಿಂದ ಹೊರಗುಳಿಯಿರಿ.

ಕನ್ಯಾ
ಭಾನುವಾರ, 1 ಆಗಸ್ಟ್
ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತಿರುವುದು ಏನದು? ನಿಮ್ಮ ಮನಸ್ಸಿನಲ್ಲಿ ಕ್ರಾಂತಿಕಾರಿ ಆಲೋಚನೆಗಳಿರುವ ಸಾಧ್ಯತೆಯಿರಬಹುದು.ನಿಮ್ಮ ಸ್ನೇಹಿತರು ಈ ಕಾಲ್ಪನಿಕ ಆಸೆಯನ್ನು ತೋರಿಸಿಕೊಟ್ಟಿರಬಹುದು.ಮತ್ತು ಇದು ನಿಮ್ಮ ಊಹನೆಯ ಅಸಮಧಾನಕ್ಕೆ ಕಾರಣವಾಗಿರಬಹುದು. ಮತ್ತು ಈಗ ನೀವು ಈ ನಿರರ್ಥಕ ವಿಚಾರವನ್ನು ಪ್ರಯತ್ನಿಸಲು ಬಯಸುತ್ತಿರಬಹುದು. ಕಾದು ನೋಡಿ. ಎಲ್ಲಾ ವಿಷಯಗಳು ತೋರಿಕೆಗೆ ಕಾಣುವಷ್ಟು ಸುಲಭವಲ್ಲ ಮತ್ತು ಫಲಕಾರಿಯಾಗಿಯೂ ಇರುವುದಿಲ್ಲ, ಆದ್ದರಿಂದ ಯೋಚಿಸಿ ಹೆಜ್ಜೆಯಿಡಿ. ನಿಮ್ಮ ಸ್ವಭಾವ ಅಥವಾ ಮೌಲ್ಯಗಳಿಗೆ ವಿರುದ್ಧವಾದ ಯಾವುದೇ ವಿಚಾರದಲ್ಲಿ ತೊಡಗಬೇಡಿ. ಇಲ್ಲವಾದಲ್ಲಿ ನೀವು ಗಂಭೀರ ಸಮಸ್ಯೆಯಲ್ಲಿ ಬೀಳುತ್ತೀರಿ. ವೆಚ್ಚಗಳು ಹೆಚ್ಚಾಗಲಿವೆ ಮತ್ತು ಪರಿಸ್ಥಿತಿಯು ನಿರಾಶಾದಾಯಕವಾಗಲಿದೆ. ಧೈರ್ಯ ತಂದುಕೊಳ್ಳಿ. ಮತ್ತು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಇದು ಅತಿ ಮುಖ್ಯವಾಗಿದೆ

ತುಲಾ
ಭಾನುವಾರ, 1 ಆಗಸ್ಟ್
ಪ್ರೀತಿಗೆ ಸಂಬಂಧಿಸಿದಂತೆ ನೀವು ಇಂದು ಉಜ್ವಲ ದಿನವನ್ನು ಹೊಂದಿರುತ್ತೀರಿ, ವಿವಾಹಿತಕು ತಮ್ಮ ಸಂಗಾತಿಯಲ್ಲಿ ತಮ್ಮ ಪ್ರೀತಿಯನ್ನು ಹೆಚ್ಚಿಸಿಕೊಳ್ಳುವ ಹಾದಿಯಲ್ಲಿರಬಹುದು ಅಥವಾ ಎರಡನೇ ಮಧುಚಂದ್ರಕ್ಕೆ ಸಿದ್ಧರಾಗಬಹುದು.ಅವಿವಾಹಿತರಿಗೂ ಗ್ರಹಗತಿಗಳು ಅತ್ಯುತ್ತಮವಾಗಿರುತ್ತದೆ. ಪ್ರೀತಿಯು ನಿಮ್ಮ ಬಾಗಿಲನ್ನು ತಟ್ಟುತ್ತಿದೆ. ಅದಕ್ಕಿಂತ ಸರಿಯಾಗಿ ಹೇಳುವುದಾದರೆ ಅದು ಬಾಗಿಲಿನೆಡೆಗಿನ ಮೆಟ್ಟಿಲುಗಳನ್ನು ಹತ್ತುತ್ತಿದೆ.ಶೃಂಗಾರಗೊಳ್ಳಿ, ಅಚ್ಚುಕಟ್ಟಾಗಿರಿ, ಉತ್ತಮ ಉಡುಪನ್ನು ಧರಿಸಿ ಮತ್ತು ಅವುಗಳನ್ನು ಮುತ್ತಿನಿಂದ ಜೋಡಿಸಿ. ಪ್ರೀತಿಪಾತ್ರರೊಂದಿಗಿನ ಪ್ರಯಾಣವು ಖುಷಿಭರಿತವಾಗಿರುತ್ತದೆ. ನಿಮ್ಮ ಜೀವನದುದ್ದಕ್ಕೀ ನೆನಪಿಡುವ ಸಮಯಾವಕಾಶದಲ್ಲಿ ನೀವಿದ್ದೀರಿ.ವೃತ್ತಿನಿರತರಿಗೆ ಮತ್ತು ಉದ್ಯಮಿಗಳಿಗೆ ಇದು ಉತ್ತಮ ಸಮಯ. ನಿಮ್ಮ ಸಾಮಾಜಿಕ ಸ್ಥಾನಮಾನವು ವೃದ್ಧಿಯಾಗಲಿದೆ ಮತ್ತು ಆಕಸ್ಮಿಕ ಫಲಪ್ರಾಪ್ತಿ ದೊರೆಯಬಹುದು.

ವೃಶ್ಚಿಕ
ಭಾನುವಾರ, 1 ಆಗಸ್ಟ್
ಮುಂಜಾನೆಯಿಂದ ನಿಮಗೆ ಗಾಳಿಯಲ್ಲಿನ ಹಠಾತ್ ತಾಜಾತನ ಮತ್ತು ಸಕಾರಾತ್ಮಕತೆಯ ಅರಿವಾಗಲಿದೆ.ಆದ್ದರಿಂದ ಹೂಗಳು ಸುವಾಸನೆ ಸುಮಧುರವಾಗಲಿದೆ, ಗಾಳಿಯು ತಂಪಾಗಲಿದೆ ಮತ್ತು ನಿಮ್ಮ ದನಿಯು ಸಿಹಿಸಿಹಿಯಾಗಲಿದೆ. ನಿಮ್ಮೊಳಗೆ ಏನಾಗಿದೆ ಎಂಬುದರ ಬಗ್ಗೆ ನೀವು ಆಶ್ಚರ್ಯಪಡುವಿರಿ. ಒಮ್ಮೆಲೇ ಎಲ್ಲವೂ ಆಶಾದಾಯಕವಾಗಿ ಕಂಡುಬರುತ್ತದೆ. ಈ ಸಮಯದಲ್ಲಿ ನೀವು ನಿಮಗೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದೀರಿ. ನಿಮಗೇ ನೀವು ಸ್ವಲ್ಪ ಸಮಯಾವಕಾಶ ಕಲ್ಪಿಸಿ. ಯಾಕೆಂದರೆ, ಇದು ಗ್ರಹಗತಿಯ ತಪ್ಪು. ಕೊನೆಯವರೆಗೂ ಒಳ್ಳೆಯ ವಿಚಾರಗಳನ್ನು ಆನಂದಿಸಿ. ಜೊತೆಗಾರರಿಂದ ಮತ್ತು ಸಹೋದ್ಯೋಗಿಗಳಿಂದ ಸಹಕಾರವನ್ನು ಪಡೆಯುತ್ತೀರಿ ಮತ್ತು ನಿಮ್ಮ ಹೆತ್ತವರಿಂದ ಉತ್ತೇಜನಕಾರಿ ಸುದ್ದಿಯನ್ನು ಕೇಳುವಿರಿ. ಹಣಕಾಸು ಲಾಭ ಉಂಟಾಗಲಿದೆ.ಬಾಕಿ ಉಳಿದಿರುವ ಕಾರ್ಯವನ್ನು ಮುಗಿಸುವ ಸಾಧ್ಯತೆಯಿದೆ. ಜೀವನದ ಮಧುರ ಕ್ಷಣಗಳನ್ನು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಿ.

ಧನು
ಭಾನುವಾರ, 1 ಆಗಸ್ಟ್
ಗ್ರಹಗತಿಯ ತೊಡಕಿನಿಂದ ಗೃಹಗಳು ಇನ್ನೂ ಚೇತರಿಸಿಕೊಂಡಿರುವಂತೆ ಕಂಡುಬರುವುದಿಲ್ಲ. ಪರಿಣಾಮವಾಗಿ, ನೀವು ಅನಾರೋಗ್ಯಪೀಡಿತರಾಗಬಹುದು ಅಥವಾ ಮಾನಸಿಕವಾಗಿ ಅಸ್ಥಿರತೆಯನ್ನು ಹೊಂದಬಹುದು.ಜೀರ್ಣಕ್ರಿಯೆ ಸಂಬಂಧಿ ಕಾಯಿಲೆಗೆ ನೀವು ಏನು ಸೇವಿಸುತ್ತೀರಿ ಎಂಬುದರ ಬಗ್ಗೆ ದೃಷ್ಟಿಹಾಯಿಸಿ. ಇದು, ಕಳೆದ ಎರಡು ದಿನಗಳಿಂದ ನೀವು ಅನುಭವಿಸುತ್ತಿರುವ ಒತ್ತಡದ ಕಾರಣದಿಂದಾಗಿ ಉಂಟಾಗಿರುವ ಆಸಿಡಿಟಿ ಕಾಯಿಲೆಯಾಗಿರಬಹುದು. ಕೆಲವು ಮುಖ್ಯ ಯೋಜನೆಗಳ ಕುರಿತಾದ ನಿರ್ಣಯಗಳ ಬಗ್ಗೆ ಅಥವಾ ನೀವು ಕೈಗೊಂಡ ಸಂದರ್ಶನಗಳ ಬಗ್ಗೆ ನೀವು ಸಾಕಷ್ಟು ಚಿಂತಿಸಿರಬಹುದು. ಫಲಿತಾಂಶವು ಮುಂದೆ ಹೋಗಿದ್ದಿರಬಹುದು. ಇದು ನಿಮ್ಮ ಮಕ್ಕಳಿಗೆ ಸಂಬಂಧಿಸಿಯೂ ಆಗಿರಬಹುದು. ಆಳವಾಗಿ ಉಸಿರು ತೆಗೆದುಕೊಳ್ಳಿ ಮತ್ತು ವಿಷಯಗಳು ಅವುಗಳ ಹಾದಿಯಲ್ಲಿ ಸಾಗಲಿ. ಓದು ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ನೆಮ್ಮದಿಯನ್ನು ಕಾಣಿ.

ಮಕರ
ಭಾನುವಾರ, 1 ಆಗಸ್ಟ್
ಇಂದು ನೀವು ಆಲಸ್ಯ ಹಾಗೂ ತೂಕಡಿಕೆಯ ಭಾವನೆಯನ್ನು ಹೊಂದಿರುತ್ತೀರಿ. ಇದರಿಂದಾಗಿ ನೀವು ಜಡದಿಂದ ಹಾಗೂ ಭಾವಶೂನ್ಯವಾಗಿರುವ ಬಗ್ಗೆ ಆಶ್ಚರ್ಯಪಡಬೇಕಾಗಿಲ್ಲ.ಸಣ್ಣ ಅಡಚಣೆಗಳು, ಅನಿರೀಕ್ಷಿತ ತೊಡಕುಗಳು ಉಂಟಾಗುತ್ತದೆ ಇದರಿಂದಾಗಿ ಅಭಿವೃದ್ಧಿ ಮತ್ತು ಏಕಾಗ್ರತೆ ಕಷ್ಟಕರವಾಗಿರುತ್ತದೆ ಅಲ್ಲದೆ, ನಿಮ್ಮ ಸುತ್ತಲಿರುವ ಜನರು ನಿಮಗೆ ಸಹಕರಿಸಲು ನಿರಾಕರಿಸುತ್ತಾರೆ. ದಿನದಲ್ಲಿ ಅತಿ ಹೆಚ್ಚು ವ್ಯವಹಾರದಲ್ಲಿ ತೊಡಗಬೇಕಾಗುತ್ತದೆ. ದೃಢನಿರ್ಧಾರದಿಂದ ಮುಂದುವರಿಯಿರಿ ಮತ್ತು ಎಚ್ಚರಿಕೆಯಿಂದಿರುವುದನ್ನು ರೂಢಿ ಮಾಡಿಕೊಳ್ಳಿ. ಚರ್ಚೆ ನಡೆಸುವುದೂ ಒಂದು ಕಲೆಯಾಗಿರಬಹುದು ಮತ್ತು ಅದರ ಕುರಿತಾಗಿ ನೀವು ನಿಮ್ಮೊಳಗೇ ಹೆಮ್ಮೆ ಪಡುತ್ತಿರಬಹುದು. ಆದರೆ, ನಿಮ್ಮ ಕೌಶಲ್ಯವನ್ನು ಬಳಕೆಗೆ ತರಲು ಇದು ಸಕಾಲವಲ್ಲ. ನಿಷ್ಪ್ರಯೋಜಕ ಚರ್ಚೆಗಳು ಅನಗತ್ಯವಾಗಿ ಬೇಸರವನ್ನು ಉಂಟುಮಾಡುತ್ತದೆ ಮತ್ತು ದ್ವೇಷಭರಿತ ಮುಖಾಮುಖಿಯಾಗಿ ಮಾರ್ಪಾಡಾಗುತ್ತದೆ ಇದು ನೋವು ಹಾಗೂ ಅವಮಾನಕ್ಕೆ ಹಾದಿ ಮಾಡುಕೊಡುತ್ತದೆ. ಎಚ್ಚರಿಕೆಯಿಂದಿರಿ. ವಿಶ್ರಾಂತಿ ಪಡೆಯಿರಿ, ನಿದ್ರಿಸಿ.

ಕುಂಭ
ಭಾನುವಾರ, 1 ಆಗಸ್ಟ್
ಈ ಸಮಯದಿಂದ, ಹೆಚ್ಚಿನ ನಕಾರಾತ್ಮಕ ಚಿಂತನೆಗಳು ಒಳ್ಳೆಯ ಕಾರಣಕ್ಕಾಗಿಯೇ ನಿಮ್ಮಿಂದ ಹೊರಹೋಗಿರಬೇಕು, ಕಳೆದ ಹದಿನೈದು ದಿನಗಳಲ್ಲಿ ನೀವು ಆನಂದಿಸಿರುವುದರಲ್ಲಿ ಈ ದಿನವು ಅತ್ಯಂತ ಉತ್ಕೃಷ್ಟ ದಿನವಾಗಿ ಅಂತ್ಯಗೊಳ್ಳಲಿದೆ. ನೀವು ಖುಷಿಯಾಗಿರುತ್ತೀರಿ, ಉತ್ಸಾಹದಿಂದಿರುತ್ತೀರಿ ಮತ್ತು ಹೊರಗೆ ಹೋಗಿ ಜನರೊಂದಿಗೆ ಬೆರೆಯಲು ಬಯಸುತ್ತೀರಿ. ಈ ಎಲ್ಲಾ ಚೈತನ್ಯ, ಸಕಾರಾತ್ಮಕ ಭಾವನೆ ಹಾಗೂ ಅದೃಷ್ಟದ ಗೃಹಗತಿಯು ಪ್ರಯಾಣ ಅಥವಾ ಕುಟುಂಬದೊಂದಿಗೆ ಸಣ್ಣ ಸಂತೋಷ ವಿಹಾರವನ್ನು ತೆರಳಲು ಯೋಜನೆ ರೂಪಿಸಲು ಪ್ರೇರೇಪಿಸುತ್ತದೆ. ನಿಮ್ಮ ಪ್ರೀತಿಯ ಒಡಹುಟ್ಟಿದವರೊಂದಿಗೆ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ನೀವು ದಿನವನ್ನು ಆನಂದಿಸುವಿರಿ ಮತ್ತು ಉತ್ತಮ ಆರೋಗ್ಯದೊಂದಿಗೆ ಸಂಭ್ರಮದಿಂದ ದಿನ ಕಳೆಯುವಿರಿ.ಒಡಹುಟ್ಟಿದವರು ಅಥವಾ ಆತ್ಮೀಯ ಸ್ನೇಹಿತರು ವಿದೇಶದಿಂದ ಆಗಮಿಸುವುದನ್ನು ನೀವು ನಿರೀಕ್ಷಿಸಬಹುದು. ಮಜಾ ಮಾಡಿ.

ಮೀನ
ಭಾನುವಾರ, 1 ಆಗಸ್ಟ್
ಇಂದಿನ ದಿನವು ತಕ್ಕಮಟ್ಟಿಗೆ ಅದೃಷ್ಟಕರವಾಗಿರುತ್ತದೆ. ಏನೇ ಆದರೂ, ಇತ್ತೀಚೆಗೆ ನಿಮ್ಮ ದೈನಂದಿನ ಪರಿಪಾಠದಲ್ಲಿ ನೀವು ರೂಢಿಮಾಡಿಕೊಂಡಿರುವ ಅಭ್ಯಾಸಗಳನ್ನು ಒಳ್ಳೆಯ ಹವ್ಯಾಸಗಳನ್ನು ತ್ಯಜಿಸಲು ಇದನ್ನು ನೆಪವಾಗಿ ತೆಗೆದುಕೊಳ್ಳಬೇಡಿ, ಗ್ರಹಗತಿಗಳ ಸ್ಥಿತಿಯಲ್ಲ ಸ್ವಲ್ಪಮಟ್ಟಿನ ಸುಧಾರಣೆ ಉಂಟಾಗಿದೆ ಆದರೂ ಪೂರ್ತಿ ಉತ್ತಮವಾಗಿಲ್ಲ. ನಿನ್ನೆಯ ಭವಿಷ್ಯವಾಣಿಯ ನಂತರ ನೀವು ತೊಡಗಿಸಿಕೊಂಡ ಪಾಕಶಾಸ್ತ್ರ ಕೌಶಲ್ಯವನ್ನು ಖಂಡಿತವಾಗಿಯೂ ಆವೇಶದಿಂದ ಬಿಡಬೇಡಿ. ಹೊರಗಡೆ ಆಹಾರ ಸೇವನೆಯನ್ನು ತಪ್ಪಿಸಿ. ಆರೋಗ್ಯಕರ ಆಹಾರ ತಯಾರಿಸಿ ಮತ್ತು ದೈಹಿಕವಾಗಿ ಬಲಿಷ್ಠರಾಗಲು ಪ್ರಯತ್ನಿಸಿ.ಮಾನಸಿಕ ಆರೋಗ್ಯದಲ್ಲಿಯೂ ಇದನ್ನೇ ಪರಿಪಾಲಿಸಿ. ಮಾನಸಿಕವಾಗಿ ಶಾಂತಿಯಿಂದಿರಲು ವಿವೇಚನೆಯಿಲ್ಲದ ಮಾತುಕತೆ, ವಿವಾದಿತ ಸಂವಾದಗಳಿಂದ ದೂರವಿರಿ. ನಕಾರಾತ್ಮಕ ಪ್ರಭಾವಗಳು ಈಗಲೂ ಬೇಡವೇ ಬೇಡ. ಸಿಟ್ಟು ಮತ್ತು ಸೋಮಾರಿತನವೂ ಕೂಡ.

 

Leave a Reply

Your email address will not be published.