🙏ನಿತ್ಯವಾಣಿ ಮಂಗಳವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಮಂಗಳವಾರದ ರಾಶಿ ಭವಿಷ್ಯ 🙏

ಮೇಷ
ಮಂಗಳವಾರ, 3 ಆಗಸ್ಟ್
ನಿಮ್ಮ ಬಗ್ಗೆಯೇ ಹೆಚ್ಚು ಕಾಳಜಿವಹಿಸುವ ಬದಲು ಇತರರ ಬಗ್ಗೆ ಆಲೋಚಿಸುವಂತೆ ಸಲಹೆ,ನಿಮ್ಮ ಗೃಹಸಂಬಂಧಿ ಕರ್ತವ್ಯಗಳನ್ನು ಪೂರ್ತಿಮಾಡುವಾಗ ಜಾಣ್ಮೆಯಿಂದಿರಿ ಮತ್ತು ರಚನಾತ್ಮಕವಾಗಿರಿ. ಇತರರೊಂದಿಗೆ ಸಭ್ಯತೆಯಿಂದ ವರ್ತಿಸಿ. ಭಿನ್ನಾಭಿಪ್ರಾಯ ಮತ್ತು ವಿವಾದಗಳಿಗೆ ಮಹತ್ವ ನೀಡಬೇಡಿ. ಸಮಯಕ್ಕೆ ಸರಿಯಾದ ಆಹಾರ ಸೇವನೆಯು ಕಷ್ಟಕರವಾಗಬಹುದು. ನಿಮ್ಮ ಖರ್ಚುವೆಚ್ಚಗಳು ನಿಮ್ಮ ಬಜೆಟ್‌ನ ಮಿತಿಯೊಳಗೆ ಇರುವಂತೆ ನೋಡಿಕೊಳ್ಳಿ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಹಣಕಾಸಿನ ಎಲ್ಲಾ ವ್ಯವಹಾರಗಳಲ್ಲೂ ಕಣ್ಣಿಟ್ಟಿರಿ.

ವೃಷಭ
ಮಂಗಳವಾರ, 3 ಆಗಸ್ಟ್
ವಿಸ್ತೃತ ಯೋಜನೆಗಳನ್ನು ರೂಪಿಸಲು ಹಣಕಾಸು ಜವಾಬ್ಧಾರಿ ಮತ್ತು ಹೊಣೆಯಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಳ್ಳುದನ್ನು ಮತ್ತು ಇದರ ಕುರಿತಾಗಿಯೇ ಕಾರ್ಯ ನಿಶ್ಚಿತಗೊಳಿಸುವುದನ್ನು ನಡೆಸುತೀರಾ ಹಣಕಾಸು ಲಾಭ ಉಂಟಾಗಲಿದೆ. ನೀವು ಪೂರ್ಣ ಉತ್ಸಾಹ ಹಾಗೂ ಲವಲವಿಕೆಯಿಂದಿರುತ್ತೀರಿ. ಶಾಂತ ಹಾಗೂ ಸಮಾಧಾನದಿಂದಿರುವುದರಿಂದ ನೀವು ದಿನದ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು. ಆಡಂಬರದ ವಸ್ತುಗಳು, ಸುಗಂಧದ್ರವ್ಯಗಳು, ಪ್ರಸಾದನಗಳು ಮತ್ತು ಇತರ ಮನರಂಜನಾ ಹಾಗೂ ವಿನೋದಕ್ಕಾಗಿ ಖರ್ಚುಮಾಡಲಿದ್ದೀರಿ. ಕುಟುಂಬದ ಸ್ನೇಹಕೂಟವು ನಿಮ್ಮ ಹರ್ಷ ಮತ್ತು ನೆಮ್ಮದಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಮಿಥುನ
ಮಂಗಳವಾರ, 3 ಆಗಸ್ಟ್
ನಿಮ್ಮ ಮಾತುಗಳು ಹಾಗೂ ಕ್ರಿಯೆಗಳು ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಅತ್ಯಂತ ಜಾಗ್ರತೆಯಿಂದಿರಿ, ನಿಮ್ಮ ಉದ್ವೇಗ ಮತ್ತು ಕೋಪೋದ್ರೇಕವನ್ನು ನಿಯಂತ್ರಣದಲ್ಲಿರಿಸಿ. ಆರೋಗ್ಯ ಸಮಸ್ಯೆಗಳು ತಲೆದೋರುವ ಸಂಭವವಿದೆ. ವಿಶೇಷವಾಗಿ ಕಣ್ಣಿನ ತೊಂದರೆ ಉಂಟಾಗಬಹುದು. ಅನಿರೀಕ್ಷಿತ ಘಟನೆಗಳಿಗೆ ಸಿದ್ಧರಾಗಿರಿ. ಕುಟುಂಬ ಸದಸ್ಯರೊಂದಿಗಿನ ನಿಮ್ಮ ಅವಧಿಯು ಕೆಟ್ಟದಾಗಿರಬಹುದು.ಖರ್ಚು ಆದಾಯಕ್ಕಿಂತ ಹೆಚ್ಚಾಗಲಿದೆ. ಪ್ರಾರ್ಥನೆ ಮತ್ತು ಧ್ಯಾನದಿಂದ ಪ್ರಯೋಜನ ಸಿಗಲಿದೆ.

ಕರ್ಕಾಟಕ
ಮಂಗಳವಾರ, 3 ಆಗಸ್ಟ್
ಅನುಕೂಲಕರ, ಫಲದಾಯಕ ದಿನವು ನಿಮಗಾಗಿ ಕಾದಿದೆ. ವೃತ್ತಿನಿರತರಿಗೆ ಮತ್ತು ಉದ್ಯಮಿಗಳಿಗೆ ಲಾಭ ಮತ್ತು ಪ್ರಯೋಜನ ಉಂಟಾಗುವ ಭರವಸೆಯಿದೆ. ನೀವು ಆನಂದಭರಿತ ಕ್ಷಣಗಳನ್ನು ನಿಮ್ಮ ಸ್ನೇಹಿತರು ಹಾಗೂ ಜೊತೆಗಾರರೊಂದಿಗೆ ಹಂಚುಕೊಳ್ಳುವಿರಿ, ನೀವು ಅವಿವಾಹಿತರಾಗಿದ್ದಲ್ಲಿ, ವಿವಾಹ ಯೋಗವಿದೆ. ಆದಾಯ ಮೂಲಗಳು ಹೆಚ್ಚಳಗೊಳ್ಳಬಹುದು. ಅನಿರೀಕ್ಷಿತ ಫಲಪ್ರಾಪ್ತಿಯ ಯೋಗವನ್ನು ನಿರಾಕರಿಸುವಂತಿಲ್ಲ. ಹಣಕಾಸು ಯೋಜನೆಗಳು ಮತ್ತು ಸಿದ್ಧತೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. ತಿರುಗಾಟಕ್ಕೆ ಅಥವಾ ವಿನೋದ ಕೂಟಕ್ಕೆ ತೆರಳುವ ಸಾಧ್ಯತೆಯಿದೆ.

ಸಿಂಹ
ಮಂಗಳವಾರ, 3 ಆಗಸ್ಟ್
ನಿಮ್ಮ ವೃತ್ತಿ ಪ್ರಭಾವ ಮತ್ತು ಸ್ಥಿತಿಯಲ್ಲಿ ಅಭಿವೃದ್ಧಿ ಉಂಟಾಗಲಿದೆ,ನಿಮ್ಮ ಸಾಮರ್ಥ್ಯ ಮತ್ತು ವ್ಯವಹಾರ ಕೌಶಲ್ಯವು ಶ್ಲಾಘನೆಗೊಳಪಡುತ್ತದೆ ಮತ್ತು ಪುರಸ್ಕರಿಸಲ್ಪಡುತ್ತದೆ. ಅತ್ಯುನ್ನತ ಆತ್ಮವಿಶ್ವಾಸದೊಂದಿಗೆ ನೀವು ವ್ಯವಹಾರಗಳನ್ನು ನಿರ್ವಹಿಸುತ್ತೀರಿ ಮತ್ತು ನಿಭಾಯಿಸುತ್ತೀರಿ. ನಿಮ್ಮ ತಂದೆಯು ವಿಶೇಷವಾಗಿ ಆರೋಗ್ಯದಿಂದಿರುತ್ತಾರೆ. ಅನುಕೂಲತೆಗಳು ಮತ್ತು ಪ್ರಯೋಜನಗಳು ಉಂಟಾಗಲಿವೆ. ಸ್ಥಿರ ಹಾಗೂ ಚರ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಕೈಗೆತ್ತಿಕೊಳ್ಳಲು ಇದು ಸೂಕ್ತ ಸಮಯ.

ಕನ್ಯಾ
ಮಂಗಳವಾರ, 3 ಆಗಸ್ಟ್
ಅಸಮಧಾನ ಮತ್ತು ನಿರಾಶೆಗಳಿಗೆ ಇಂದು ಸಿದ್ಧರಾಗಿರಿ, ಚಿಂತೆ ಹಾಗೂ ಉದ್ವೇಗದಿಂದ ನಿಮ್ಮ ಮನಸ್ಸನ್ನು ಕಾಡಬಹುದು. ಕೆಲಸಕ್ಕೆ ಸಂಬಂಧಪಟ್ಟಂತೆ ನೀವು ನಿರಾಸಕ್ತಿ, ದಣಿವು ಮತ್ತು ಆಲಸ್ಯ ಭಾವನೆಯನ್ನು ಹೊಂದಬಹುದು.ತೀವ್ರ ಸ್ಪರ್ಧೆ ಮತ್ತು ಪ್ರತಿದ್ವಂದ್ವಗಳು ಉಂಟಾಗಲಿವೆ. ನಿಮ್ಮ ರಕ್ಷಣೆಯನ್ನು ಮಾಡಿಕೊಳ್ಳಿ.

ತುಲಾ
ಮಂಗಳವಾರ, 3 ಆಗಸ್ಟ್
ನೀವು ಒಬ್ಬರೊಂದಿಗೆ ಚರ್ಚೆಯಲ್ಲಿ ತೊಡಗುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆಯಿಂದಿರುವಂತೆ ಸಲಹೆ,ಶಾಂತ ಹಾಗೂ ಸಮಾಧಾನದಿಂದಿರಿ. ಸಭ್ಯತೆಯಿಂದಿರಿ ಹಾಗೂ ವಿನಯದಿಂದ ವರ್ತಿಸಿ. ನಿಮ್ಮ ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಏನೇ ಆದರೂ, ಅನಿರೀಕ್ಷಿತ ಲಾಭ ಮತ್ತು ಪ್ರಯೋಜನಗಳು ಉಂಟಾಗಲಿದೆ. ಅತೀಂದ್ರಿಯ ಮತ್ತು ನಿಸರ್ಗಾತೀತ ವಿಷಯಗಳಲ್ಲಿ ಭಾಗಿಯಾಗಬಹುದು. ಧ್ಯಾನವು ನಿಮಗೆ ಶಾಂತಿಯನ್ನು ಒದಗಿಸುತ್ತದೆ.

ವೃಶ್ಚಿಕ
ಮಂಗಳವಾರ, 3 ಆಗಸ್ಟ್
ಈ ದಿನವು ಖುಷಿ, ನಲಿವು, ಹಾಸ್ಯ ಮತ್ತು ವಿನೋದದಿಂದ ಕೂಡಿರುತ್ತದೆ, ಹೊರಗಡೆ ತಿರುಗಾಟಕ್ಕೆ ತೆರಳುವ ಸಾಧ್ಯತೆಗಳು ದಟ್ಟವಾಗಿವೆ. ವೈಭವದ ದಿನಗಳಿಗೆ ನೀವು ಎದುರುನೋಡಬೇಕಾಗಿದೆ, ಕಾರು ಪ್ರಯಾಣ, ವಿಶೇಷ ಭೋಜನ, ಉತ್ತಮ ಲಾಭ ಇವೆಲ್ಲವನ್ನೂ ನೀವು ಅನುಭವಿಸುತ್ತೀರಿ. ಜನಪ್ರಿಯತೆ ಮತ್ತು ಘನತೆಯು ವರ್ಧಿಸಲಿದೆ.

ಧನು
ಮಂಗಳವಾರ, 3 ಆಗಸ್ಟ್
ಇಂದು ನಿಮಗೆ ವಿಶೇಷ ದಿನವಾಗಿದೆ,ಮನೆಯ ವಾತಾವರಣವು ಉಲ್ಲಾಸಕರ ಹಾಗೂ ಹರ್ಷದಿಂದ ಕೂಡಿರುತ್ತದೆ. ದಿನವಿಡೀ ನೀವು ತಾಜಾ ಹಾಗೂ ಲವಲವಿಕೆಯಿಂದ ಕೂಡಿರುತ್ತೀರಿ. ಕಚೇರಿಯಲ್ಲಿನ ಕಾರ್ಯವು ಅತ್ಯಂದ ಆನಂದದಾಯಕವಾಗಿರುತ್ತದೆ. ನೀವು ಕಚೇರಿ ಕೆಲಸಕ್ಕೆ ಹೋಗುವವರಾಗಿರಬಹುದು ಅಥವಾ ಉದ್ಯಮಿಯಾಗಿರಬಹುದು, ಅನಿರೀಕ್ಷಿತ ಸಹಕಾರ ಮತ್ತು ನೆರವನ್ನು ನಿರೀಕ್ಷಿಸಬಹುದು. ಮನೆಯಿಂದ ಉತ್ತೇಜನಕಾರಿ ಸುದ್ದಿ ಸಿಗಲಿದೆ.ಸ್ಪರ್ಧಿಗಳು ಮತ್ತು ಎದುರಾಳಿಗಳು ತಟಸ್ಥರಾಗಿರುವ ಸಾಧ್ಯತೆಯಿದೆ.

ಮಕರ
ಮಂಗಳವಾರ, 3 ಆಗಸ್ಟ್
ಬೇಸರ ಮತ್ತು ಆಯಾಸದಿಂದ ಇಂದು ನೀವು ಹೊರಬರುವ ಸಾಧ್ಯತೆಯಿದೆ.ಜೊತೆಗೆ ದಿನಪೂರ್ತಿ ನೀವು ವ್ಯಾಕುಲತೆಯಿಂದ ಹಾಗೂ ಮಂಕಾಗಿ ಇರುವಿರಿ, ವೃತ್ತಿ ಮತ್ತು ಉದ್ಯಮದಲ್ಲಿ ಅದೃಷ್ಟವು ನಿಮ್ಮ ಹಾದಿಯಲ್ಲಿರುವ ಸಾಧ್ಯತೆಯಿಲ್ಲ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಮೇಲೆ ಅಸಮಾಧಾನ ತೋರುತ್ತಾರೆ. ಗೊಂದಲ ಮತ್ತು ಅನಿರ್ದಿಷ್ಟತೆಯು ಸಂದರ್ಭವನ್ನು ಇನ್ನೂ ಕಠಿಣಗೊಳಿಸುತ್ತದೆ. ಜೊತೆಗೆ ನಿಮ್ಮ ಮಕ್ಕಳ ಆರೋಗ್ಯವು ನಿಮ್ಮ ಚಿಂತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕುಂಭ
ಮಂಗಳವಾರ, 3 ಆಗಸ್ಟ್
ನಿಮ್ಮ ಮೊಂಡುತನವನ್ನು ಹತೋಟಿಯಲ್ಲಿಡುವಂತೆ ಸಲಹೆ,ಅತಿ ಹೆಚ್ಚು ಭಾವುಕರಾಗುವುದರಿಂದ ನಿಮ್ಮ ಆರೋಗ್ಯವು ಹದಗೆಡಬಹುದು. ನಿಮ್ಮ ಒಳ್ಳೆಯ ಹೆಸರನ್ನು ಅನಗತ್ಯ ಅಪಾಯಗಳಿಗೆ ತೆರೆದಿಡಬೇಡಿ. ಗೃಹ ಮತ್ತು ಆಸ್ತಿ ಸಂಬಂಧಿ ವಿಚಾರಗಳ ನಿರ್ವಹಣೆಯಲ್ಲಿ ಆದಷ್ಟು ಎಚ್ಚರ ವಹಿಸಿ. ನಿಮ್ಮ ತಾಯಿಯಿಂದ ಅನುಕೂಲತೆ ಮತ್ತು ಪ್ರಯೋಜನಗಳು ಉಂಟಾಗಲಿವೆ. ಶೈಕ್ಷಣಿಕ ಹಾಗೂ ವೃತ್ತಿ ವ್ಯಾಸಂಗದಲ್ಲಿ ತೊಡಗಿರುವವರಿಗೆ ಈದಿನವು ಉತ್ತಮವಾಗಿರುವ ಭರವಸೆಯಿದೆ. ಇಂದು ಕೈಗೊಂಡ ಹಣಕಾಸು ಯೋಜನೆಗಳು ಯಶಸ್ವಿಯಾಗುತ್ತದೆ.

ಮೀನ
ಮಂಗಳವಾರ, 3 ಆಗಸ್ಟ್
ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ದಿನವನ್ನು ಬಳಸಿಕೊಳ್ಳಿ. ಸಂದರ್ಭಗಳು ನಿಮ್ಮ ಹಾದಿಯಲ್ಲೇ ಸಾಗುತ್ತವೆ,ದಿನಪೂರ್ತಿ ನೀವು ಹೆಚ್ಚು ಸೃಜನಶೀಲ ಹಾಗೂ ವ್ಯವಹಾರ ಕುಶಲರಾಗಿರುವ ಸಾಧ್ಯತೆಯಿದೆ. ನಿಮ್ಮ ಆಲೋಚನೆಗಳು ಸ್ಪಷ್ಟ ಹಾಗೂ ಕೇಂದ್ರಬಿಂದುವಾಗಿರುವ ಭರವಸೆಯಿದೆ ಮತ್ತು ಇದು ನಿಮ್ಮ ಜವಾಬ್ಧಾರಿಗಳನ್ನು ಸುಲಭವಾಗಿ ನಿಭಾಯಿಸಲು ಸಹಕಾರಿಯಾಗಲಿದೆ. ನಿಮ್ಮ ಸ್ನೇಹಿತರೊಂದಿಗೆ ಖುಷಿಭರಿತ ವಿನೋದವಿಹಾರದಲ್ಲಿ ಭಾಗವಹಿಸುವಿರಿ. ಪ್ರೀತಿಯ ಅನುಬಂಧ ಮತ್ತು ತಿಳುವಳಿಕೆಯು ಇನ್ನೂ ವೃದ್ಧಿಯಾಗಲಿದೆ.

Leave a Reply

Your email address will not be published.