🙏ನಿತ್ಯವಾಣಿ ವರಮಹಾಲಕ್ಷ್ಮಿ ಯ ಶುಕ್ರವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ವರಮಹಾಲಕ್ಷ್ಮಿ ಯ ಶುಕ್ರವಾರದ ರಾಶಿ ಭವಿಷ್ಯ 🙏

ಮೇಷ
ಶುಕ್ರವಾರ, 20 ಆಗಸ್ಟ್
ನಿಮ್ಮ ಕುಟುಂಬ ಮತ್ತು ಅವರ ನೆಮ್ಮದಿಯು ಇಂದು ನಿಮ್ಮ ಮೊದಲ ಆದ್ಯತೆಯಾಗಲಿದೆ, ನಿಮ್ಮ ಮನೆಗೆ ಹೊಸ ರೂಪು ಕೊಡಲು, ಮನೆಯನ್ನು ಅಲಂಕರಿಸುವ ಕುರಿತಂತೆ ನೀವು ಯೋಚಿಸಬಹುದು. ಇಂದು ನೀವು ಅಧಿಕ ಸಮಯವನ್ನು ಮನೆಯಲ್ಲೇ ಕಳೆಯುವುದರಿಂದ ಅತ್ಯಂತ ಗಮನಹರಿಸಬೇಕಾಗಿರುವ ವಿವಿಧ ಕುಟುಂಬ ವಿಚಾರಗಳು ಹಾಗೂ ಸಮಸ್ಯೆಗಳ ಬಗ್ಗೆ ನಿಮಗೆ ಅರಿವಾಗುತ್ತದೆ. ಮತ್ತು ಒಮ್ಮೆ ನೀವು ಅದನ್ನು ಬಗೆಹರಿಸಲು ಪ್ರಾರಂಭಿಸಿದಲ್ಲಿ, ನೀವು ವಿಶ್ರಾಂತ ಹಾಗೂ ತೃಪ್ತಿಯ ಮನೋಭಾವವನ್ನು ಹೊಂದುತ್ತೀರಿ. ಇಂದು ನಿಮ್ಮ ಆದರ್ಶವು ಗುರುತಿಸಲ್ಪಡುತ್ತದೆ. ಆದರೆ, ನೀವು ಹೆಚ್ಚು ಆಶಾವಾದಿಯಾಗಿರುವ ಅಗತ್ಯವಿದೆ.

ವೃಷಭ
ಶುಕ್ರವಾರ, 20 ಆಗಸ್ಟ್
ವೃಷಭ ರಾಶಿಯವರಿಗೆ ಈ ದಿನವು ಸಾಮಾನ್ಯ ದಿನವಾಗಿರುತ್ತದೆ, ವಿದೇಶದಲ್ಲಿ ನೆಲೆಸಿರುವ ಸಂಬಂಧಿಗಳಿಂದ ಮತ್ತು ಪ್ರೀತಿಪಾತ್ರರಿಂದ ನೀವು ಸುದ್ದಿಯನ್ನು ನಿರೀಕ್ಷಿಸಬಹುದು. ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿರುವವರಿಗೆ ಈ ದಿನವು ಸಾಮಾನ್ಯವಾಗಿರುತ್ತದೆ. ದೂರ ಪ್ರದೇಶಗಳಿಗೆ ಪ್ರವಾಸ ತೆರಳುವ ಸಿದ್ಧತೆಗಳು ಕಾರ್ಯರೂಪಕ್ಕೆ ಬರಲಿವೆ. ಮತ್ತು ಇವುಗಳಲ್ಲಿ ಧಾರ್ಮಿಕ ಕ್ಷೇತ್ರಗಳೂ ಒಳಗೊಂಡಿರುತ್ತವೆ. ವೃತ್ತಿಪರರಿಗೆ ಕಾರ್ಯದೊತ್ತಡದಿಂದಾಗಿ ಕುಕ್ಕರ್‌ನಲ್ಲಿ ಕೂತಂತೆ ಭಾಸವಾಗಬಹುದು. ನಿಮ್ಮ ಖರ್ಚು ಹೆಚ್ಚಾಗಲ

ಮಿಥುನ                                                                                            ಶುಕ್ರವಾರ,                                                                  20 ಆಗಸ್ಟ್
ನಿಮ್ಮ ಮನದಲ್ಲಿ ಮನೆಮಾಡಿರು ಎಲ್ಲಾ ಋಣಾತ್ಮಕ ಆಲೋಚನೆಗಳು ಹೊರಹೋಗಲಿ,  ಯಾಕೆಂದರೆ ಇಲ್ಲದಿದ್ದಲ್ಲ, ಈ ದಿನವು ಮಿಥುನ ರಾಶಿಯವರಿಗೆ ನೋವನ್ನು ತರಲಿದೆ. ನೀವು ಹೊಸ ಯೋಜನೆಯನ್ನು ಪ್ರಾರಂಭಿಸುವ ಆಲೋಚನೆಯಲ್ಲಿದ್ದಲ್ಲಿ, ಅವುಗಳನ್ನು ಮುಂದೂಡಿ. ಈ ದಿನವು ಅನುಕೂಲಕರ ದಿನವಲ್ಲ. ಆದ್ದರಿಂದ, ಹೆಚ್ಚು ದುರಾಕ್ರಮಣಕಾರಿಯಾಗುವುದನ್ನು ತಪ್ಪಿಸಿ ಇವು ನಿಮ್ಮ ಸುತ್ತಲಿರುವ ಜನರೊಂದಿಗಿನ ಸಂಬಂಧವನ್ನು ಹಾಳುಮಾಡಬಹುದು. ಇಂದು ನಿಮ್ಮ ಕಿಸೆ ಪೂರ್ತಿ ಖಾಲಿಯಾಗಬಹುದು. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಗಮನವಿಡಿ. ಒಟ್ಟಾರೆಯಾಗಿ, ಇಂದು ಅದ್ಭುತ ದಿನವಲ್ಲ. ಆದರೂ, ಧ್ಯಾನ ಮತ್ತು ಯೋಗದಿಂದ ಒತ್ತಡವನ್ನು ತಗ್ಗಿಸಬಹುದು.

ಕರ್ಕಾಟಕ
ಶುಕ್ರವಾರ, 20 ಆಗಸ್ಟ್
ಕರ್ಕಾಟಕ ರಾಶಿಯವರಿಗೆ ಇಂದು ಪರಿಪೂರ್ಣ ದಿನ, ಸಾಕಷ್ಟು ಖುಷಿ ಹಾಗೂ ಸಂತೋಷ ತುಂಬಿರುತ್ತದೆ. ದಿನಪೂರ್ತಿ ನೀವು ಆರೋಗ್ಯದಿಂದಿರುತ್ತೀರಿ. ಇಂದು ನೀವು ನಿಮ್ಮ ಸ್ನೇಹಿತರ ಹಾಗೂ ಕುಟುಂಬ ಸದಸ್ಯರೊಂದಿಹೆ ಸಂತಸದ ಪ್ರವಾಸ ಅಥವಾ ವಿಹಾರದ ಯೋಜನೆಯಲ್ಲಿದ್ದರೆ ಇಂದು ಉತ್ತಮ ದಿನವಾಗಲಾರದು. ಸಾಮಾಜಿಕ ಕಾರ್ಯಗಳಲ್ಲಿ ನೀವು ಸಾಕಷ್ಟು ಪ್ರಶಂಸೆ ಗಳಿಸಬಹುದು. ಸಂಕ್ಷಿಪ್ತವಾಗಿ ಇದೊಂದು ಅವಿಸ್ಮರಣೀಯ ದಿನ.

ಸಿಂಹ
ಶುಕ್ರವಾರ, 20 ಆಗಸ್ಟ್
ಸಾಮಾನ್ಯ ದಿನವು ನಿಮ್ಮದಾಗಲಿದೆ, ನಿಮ್ಮ ಸಿಟ್ಟಿನ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ವಾಗ್ವಾದದಲ್ಲಿ ತೊಡಗಬಹುದು. ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ಕೆಲಸವು ಕಷ್ಟಕರ ಅನಿಸುವುದರಿಂದ ಈ ದಿನವು ನಿಮಗೆ ಅನನುಕೂಲವೆನಿಸಲಿದೆ. ಸಾಕಷ್ಟು ಪರಿಶ್ರಮದ ನಂತರವೂ, ಫಲಿತಾಂಶವು ನಿಮ್ಮನ್ನು ನಿರಾಶೆಗೊಳಿಸಲಿದೆ. ನಿಮ್ಮ ತಾಯಿಯ ಆರೋಗ್ಯವು ನಿಮ್ಮ ಚಿಂತೆಯ ಕಾರಣವಾಗಬಹುದು.

ಕನ್ಯಾ
ಶುಕ್ರವಾರ, 20 ಆಗಸ್ಟ್
ಇಂದು ಚರ್ಚೆಗಳಿಂದ ದೂರಿವಿರುವುದ ಉತ್ತಮ, ಆರೋಗ್ಯಕರ ಚರ್ಚೆಯ ವೇಳೆಗಿನ ನಿಮ್ಮ ಅನಿರೀಕ್ಷಿತ ದುರಾಕ್ರಮಣ ಪ್ರವೃತ್ತಿಯು ಉದ್ರೇಕದ ಚರ್ಚೆ ಹಾಗೂ ವಾಗ್ವಾದವಾಗಿ ಮಾರ್ಪಡಲಿದೆ. ಆಕಸ್ಮಿಕ ಖರ್ಚುವೆಚ್ಚಗಳು ಉಂಟಾಗಲಿದೆ. ನಿಮ್ಮ ಖಜಾನೆಯೊಂದಿಗೆ ಸಿದ್ಧರಾಗಿರಿ. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗಿನ ಸಮಾಗಮವು ನಿಮಗೆ ಸ್ವಲ್ಪ ನೆಮ್ಮದಿಯನ್ನು ತರಲಿದೆ. ಆದ್ದರಿಂದ ಅವರೊಂದಿಗೆ ತಿರುಗಾಟಕ್ಕೆ ತೆರಳಲು ಯೋಜನೆ ರೂಪಿಸಿ. ಉದರ ಸಂಬಂಧಿ ವ್ಯಾಧಿಗಳಿಂದ ನೀವು ನರಳಬಹುದು. ಆರೋಗ್ಯಕರ ಆಹಾರ ಸೇವಿಸಿ. ಹೂಡಿಕೆದಾರರು ಇಂದು ಎಚ್ಚರಿಕೆಯಿಂದಿರಬೇಕು.

ತುಲಾ
ಶುಕ್ರವಾರ, 20 ಆಗಸ್ಟ್
ಗ್ರಹಗತಿಗಳು ಇಂದು ಯೋಗ್ಯವಾಗಿರುವಂತೆ ಕಂಡುಬಂದರೂ, ವಿಚಿತ್ರವೆಂಬಂತೆ, ನಿಮ್ಮ ಜೀವನದ ವಿಚಾರಗಳು ಯೋಜನೆಯಂತೆ ಸಾಗುವುದಿಲ್ಲ. ಇದು ವಿರೋಧಾಭಾಸ ಅಥವಾ ನಿರಾಕರಣೆಯ ರೀತಿಯಲ್ಲಿರುವಂತೆ ಅನಿಸಬಹುದು ಆದರೆ, ಗ್ರಹಗತಿಗಳ ಅಂತಹ ಅನುಗ್ರಹಕ ಪೂರ್ವಕ ಅಂಶಗಳ ಹೊರತಾಗಿಯೂ, ನಿಮ್ಮ ದಿನವು ಸುಲಭರೀತಿಯದ್ದಾಗಿರುವುದಿಲ್ಲ,  ಇದು ಬಹುಶಃ ನಿಮ್ಮಲ್ಲಿರುವ ಹೆಚ್ಚುವರಿ ಭಾವುಕತೆಯಿಂದಾಗಿರಬಹುದು. ಪರಿಣಾಮವಾಗಿ ನೀವು ನಿಮ್ಮ ತಾಳ್ಮೆ ಕಳೆದುಕೊಳ್ಳಬಹುದು ಅಥವಾ ಒಮ್ಮಿಂದೊಮ್ಮೆಲೆ ಸ್ತಿಮಿತ ಕಳೆದುಕೊಳ್ಳುತ್ತೀರಿ. ಏನೋ ಒಂದು ವಿಚಾರವು ನಿಮ್ಮ ಮನಸ್ಸಿನಲ್ಲಿದೆ ಮತ್ತು ಇದು ನಿಮ್ಮ ಸ್ಪಷ್ಟ ಆಲೋಚನೆಗಳಿಗೆ ಅಡ್ಡಿಪಡಿಸುತ್ತದೆ. ನಿಮ್ಮ ಘನತೆಗೂ ಕುಂದು ಬರಬಹುದು. ನಿಮ್ಮ ಪ್ರೀತಿಪಾತ್ರರೊಂದಿಗೆ ವಾಗ್ವಾದಕ್ಕೆ ಒಳಗಾಗಬಹುದು. ನಿಮ್ಮ ತಾಯಿಗೆ ಸಂಬಂಧಿಸಿದ ವಿಚಾರದಿಂದಾಗಿ ಅಥವಾ ನಿಮ್ಮ ತಾಯಿಯಿಂದಾಗಿ ನೀವು ಚಿಂತೆಗೆ ಒಳಗಾಗಬಹುದು. ಎಚ್ಚರಿಕೆಯಿಂದಿರಿ ಮತ್ತು ತಾಳ್ಮೆಯನ್ನು ಹೊಂದಿ.

ವೃಶ್ಚಿಕ
ಶುಕ್ರವಾರ, 20 ಆಗಸ್ಟ್
ಗ್ರಹಗತಿಗಳು ನಿಮಗಾಗಿ ಅದೃಷ್ಟ ಹಾಗೂ ಸುಯೋಗದ ಸಂಗತಿಗಳನ್ನು ಹೊಂದಿವೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಅಥವಾ ಹಳೆಯ ವ್ಯವಹಾರವನ್ನು ಪುನಶ್ಚೇತನಗೊಳಿಸು ಇದು ಶುಭಕರ ಸಮಯ, ಇಂದು ನೀವು ಸಂತಸ ಹಾಗೂ ಖುಷಿಯಿಂದಿರುತ್ತೀರಿ. ಸಂಕ್ಷಿಪ್ತವಾಗಿ ನಿಮ್ಮ ಈ ದಿನದ ಮನಸ್ಥಿತಿಯು ನಿಮ್ಮ ಸಂಬಂಧಗಳ ಕುರಿತಾದ ಒಲವನ್ನು ಇನ್ನಷ್ಟು ಹೆಚ್ಚಿಸುತ್ತದೆ. ನೀವು ನಿಮ್ಮ ಒಡಹುಟ್ಟಿದವರೊಂದಿಗೆ ಕೂತು ಕೆಲವು ಪ್ರಮುಖ ಕುಟುಂಬ ಸಂಬಂಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಬಹುದು. ಇದು ಫಲಪ್ರದವಾಗಿರುತ್ತದೆ. ಹಣಕಾಸು ಯಶಸ್ಸು, ಮತ್ತು ಒಟ್ಟಾರೆ ಅದೃಷ್ಟವು ನಿಮ್ಮದಾಗಲಿದೆ. ಸ್ನೇಹಿತರೊಂದಿಗಿನ ಸಣ್ಣ ಹಂತದ ಪ್ರವಾಸವು ನಿಮ್ಮನ್ನು ಇನ್ನಷ್ಟು ಖುಷಿಯಲ್ಲಿರಿಸುತ್ತದೆ ಮತ್ತು ಕಾರ್ಯಸ್ಥಳದಲ್ಲಿ ಅನಿರೀಕ್ಷಿತ ಗೆಲುವು ಅಥವಾ ಯಶಸ್ಸು ಲಭಿಸಲಿದೆ. ಆನಂದಿಸಿ.

ಧನು
ಶುಕ್ರವಾರ, 20 ಆಗಸ್ಟ್
ಈ ದಿನವು ಸಾಮಾನ್ಯ ಪ್ರಭಾವವನ್ನು ಹೊಂದಿರುತ್ತದೆ, ಇಂದು ನೀವು ಚಂಚಲತೆಯಿಂದ ಕೂಡಿರಬಹುದು ಪರಿಣಾಮವಾಗಿ ನೀವು ವಿಚಾರಗಳ ಸಂಬಂಧ ಮಾನಸಿಕವಾಗಿ ಇಬ್ಬಾಗವಾಗಬಹುದು ಮತ್ತು ಇದು ವಿವೇಕದಿಂದ ನೀವು ಕೈಗೊಳ್ಳುವ ನಿರ್ಧಾರವನ್ನು ಸ್ಮರಣೀಯವಾಗಿಸಬಹುದು. ಏನೇ ಆಗಿರಲಿ. ಸಮಾಧಾನದಿಂದಿರಿ. ನೀವು ಸ್ವಲ್ಪ ಅಸ್ಥಿರತೆಯಿಂದ ಕೂಡಿರಬಹುದು ಮತ್ತು ಇದು ಆತಂಕಗಳಿಗೆ ಕಾರಣವಾಗಬಹುದು. ಒತ್ತಡ ತುಂಬಿದ ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸಿ. ಅಥವಾ ಇದರಿಂದಾಗಿ ನೀವು ನಿಮ್ಮ ಪ್ರೀತಿಪಾತ್ರರ ಮನಸ್ಸಿಗೆ ನೋವುಂಟುಮಾಡಬಹುದು. ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೋಲು ಅಥವಾ ಅನಿರೀಕ್ಷಿತ ನಷ್ಟಗಳಿಂದಾಗಿ ನೀವು ಋಣಾತ್ಮಕ ಭಾವನೆ ಹೊಂದಬಹುದು. ಧೈರ್ಯದಿಂದಿರಿ ಮತ್ತು ಇದು ನಿಮಗೆ ಸದ್ಯದಲ್ಲಿಯೇ ಒಳ್ಳೆಯ ಫಲಿತಾಂಶ ನೀಡಲಿದೆ. ಕಾರ್ಯದೊತ್ತಡ ಮತ್ತು ವೆಚ್ಚಗಳು ಹೆಚ್ಚಾಗಲಿವೆ. ಪ್ರಯಾಣ ಮಾಡಿ ಮತ್ತು ಅಬಿವೃದ್ಧಿ ಹೊಂದಿ

ಮಕರ
ಶುಕ್ರವಾರ, 20 ಆಗಸ್ಟ್
ನೀವು ಮಕರರಾಶಿಯವರು ಕಠಿಣ ಪರಿಶ್ರಮಗಳಾಗಿದ್ದು, ಈ ದಿನವು ಯಾವುದೇ ತೊಂದರೆಯಿಲ್ಲದ ದಿನವಾಗಲಿದೆ, ನಿಮ್ಮ ಹೆಚ್ಚಿನ ಕಾರ್ಯಗಳ ಸುಲಭವಾಗಿರುವಂತೆ ಅನಿಸುತ್ತದೆ ಮತ್ತು ಫಲಿತಾಂಶಗಳು ಕ್ಷಿಪ್ರವಾಗಿ ಹರಿಯುತ್ತದೆ.ನಿಮ್ಮ ಗೌರವ ಮತ್ತು ಘನತೆಯು ಖಂಡಿತವಾಗಿಯೂ ವರ್ಧಿಸಲಿದೆ. ನಿಮಗೆ ಬಡ್ತಿ ಸಿಗಬಹುದು ಅಥವಾ ಉತ್ತಮ ಉದ್ಯೋಗದ ಕರೆ ಬರಬಹುದು. ನಿಮ್ಮ ಮನೆಯ ವಾತಾವರಣವು ಸಂತಸದಿಂದ ಕೂಡಿರುತ್ತದೆ. ನಿಮ್ಮ ಅದ್ಭುತ ವೈವಾಹಿಕ ಸಂಯೋಜನೆಯು ಮತ್ತು ಮಮತೆಯ ಸಂಬಂಧವು ಪ್ರಮುಖ ಕಾರ್ಯಸೂಚಿಯಾಗಲಿದೆ. ನೀವು ಇಂದು ಸ್ನೇಹಿತರನ್ನು ಭೇಟಿಯಾಗುವ ಯೋಜನೆ ರೂಪಿಸಬಹುದು ಮತ್ತು ಶಾಂಪಿಗ್ ಪ್ರವಾಸವು ನಿಮ್ಮ ಮೊದಲ ಆದ್ಯತೆಯಾಗಿರಬಹುದು. ಕ್ಷಣಕ್ಕೆ ನೀವು ಮಾನಸಿಕವಾಗಿ ನೆಮ್ಮದಿಯಿಂದಿರುತ್ತೀರಿ ಮತ್ತು ನಿಮ್ಮ ಸಾಮಾನ್ಯ ಜ್ಞಾನ ಮತ್ತು ಎಚ್ಚರಿಕೆಯ ಬಗ್ಗೆ ರಾಜಿ ಬೇಡಿ. ಸಣ್ಣ ಮಟ್ಟದ ಕುಸಿತ ಉಂಟಾಗಲಿದೆ.

ಕುಂಭ
ಶುಕ್ರವಾರ, 20 ಆಗಸ್ಟ್
ನೀವು ನಿಮ್ಮ ಆರೋಗ್ಯ, ಪೌಷ್ಟಿಕತೆ ಮತ್ತು ದೈಹಿಕ ದಿನಚರಿಯ ಮೇಲೆ ಗಮನಹರಿಸಿ, ನೀವು ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳದೇ ಇರಬಹುದು ಮತ್ತು ನಂತರ ಅದು ತನ್ನ ಸೂಚನೆಯನ್ನು ವ್ಯಕ್ತಪಡಿಸಬಹುಗು. ವಿಶೇಷವಾಗಿ ಮಾನಸಿಕವಾಗಿ ನೀವು ಅನಾರೋಗ್ಯದಿಂದ ಕೂಡಿರಬಹುದು. ಬಿಡುವು ಪಡೆಯಿರಿ. ಸಾಧ್ಯವಿದ್ದರೆ, ಅನಾರೋಗ್ಯದ ನಿಮಿತ್ತ ರಜೆ ಪಡೆಯಿರಿ. ಕಾನೂನು ವಿಚಾರಗಳಿಂದ ಮತ್ತು ನಿರುಂಕುಶ ಹೂಡಿಕೆಯಿಂದ ದೂರವಿರಿ. ಹಣಕಾಸು ವಿಚಾರಗಳ ಬಗ್ಗೆ ಮತ್ತು ನಿಮ್ಮ ಮಾತು ಹಾಗೂ ಸಿಡುಕಿನ ಬಗ್ಗೆ ಎಚ್ಚರದಿಂದಿರಿ. ನಿಮ್ಮದೇ ಪ್ರೀತಿಪಾತ್ರರು ನಿಮ್ಮನ್ನು ಇಂದು ವಿರೋಧಿಸಬಹುದು. ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ ಬದಲಾಗಿ ಅವರ ದೃಷ್ಟಿಕೋನವನ್ನು ಕಾಣಲು ವಿವೇಚನೆಯಿಂದ ವರ್ತಿಸಿ. ಬದಲಾವಣೆಗಾಗಿ ನೀವು ತಪ್ಪಿತಸ್ಥರಾಗಿರಬಹುದು.

ಮೀನ

ಶುಕ್ರವಾರ.20 ಆಗಸ್ಟ್

ಸಾಮಾಜಿಕ ಹೊಣೆಯು ನಿಮ್ಮ ಸಂತೋಷದ ಆಲೋಚನೆಯಲ್ಲ ಆದರೂ, ಇವು ನಿಮ್ಮನ್ನು ಆಕರ್ಷಿತಗೊಳಿಸುತ್ತದೆ  ಕಣ್ಣುಮಿಟುಕಿಸುತ್ತಾರೆ, ಇದಕ್ಕೆ ಕಾರಣ ಪ್ರಣಯ ಅಥವಾ ಕೌಟುಂಬಿಕವಾಗಿರಬಹುದು ಅಥವಾ ನಿರ್ದಿಷ್ಟ ಕಾರಣವಿಲ್ಲದೇ ಇರಬಹುದು. ಬಹುಶಃ ನೀವು ನಮ್ಮ ಸ್ನೇಹಿತರು,ಒಡನಾಡಿಗಳು ಅಥವಾ ಇತರ ಸಂಬಂಧಿಗಳೊಂದಿಗೆ ಉತ್ತಮ ಸಂಬಂಧ ಹೊಂದುವ ಅವಕಾಶಗಳಿಗಾಗಿ ಎದುರುನೋಡುತ್ತಿರಬಹುದು. ಈ ಆಸಕ್ತಿಗಳಲ್ಲಿ ನೀವು ಸಾಕಷ್ಟು ಸಮಯ ಕಳೆಯುತ್ತೀರಿ ಮತ್ತು ಪ್ರವಾಸಿ ತಾಣಗಳಿಗೆ ಪ್ರವಾಸ ತೆರಳುತ್ತೀರಿ. ಗ್ರಹಗತಿಗಳ ಶುಭಕರ ಹೊಂದಾಣಿಕೆಯೊಂದಿಗೆ, ಇಂದು ನೀವು ಸ್ನೇಹಕೂಟಕ್ಕೆ ತೆರಳಲು ಸಿದ್ಧರಾಗಿರಬಹುದು ಮತ್ತು ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಿಂದಲೂ ಪ್ರಯೋಜನ ಪಡೆಯಬಹುದು. ಮತ್ತು ಪ್ರೇಮ ಅಥವಾ ಬಾಳಸಂಗಾತಿಯ ಅನ್ವೇಷಣೆಯಲ್ಲಿರುವವರಿಗೆ ಇಂದು ಅದ್ಭುತ ದಿನ.

Leave a Reply

Your email address will not be published.