🙏ನಿತ್ಯವಾಣಿ ಶನಿವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಶನಿವಾರದ ರಾಶಿ ಭವಿಷ್ಯ 🙏
ಮೇಷ
ಶನಿವಾರ, 26 ಜೂನ್
ಮೇಷ ರಾಶಿಯವರಿಗೆ ಈ ದಿನವು ಸಾಮಾನ್ಯ ದಿನವಾಗಲಿದೆ, ಈ ದಿನ ಸಿಗುವ ಪ್ರತಿಫಲವನ್ನು ಪಡೆಯಲು ಅನಗತ್ಯ ವಾಗ್ವಾದಗಳು, ಅರ್ಥಹೀನ ಚರ್ಚೆಗಳನ್ನು ಮತ್ತು ನಕಾರಾತ್ಮಕತೆಯಿಂದ ದೂರವಿರಬೇಕು. ಇಲ್ಲವಾದಲ್ಲಿ ಈ ದಿನವು ಸಂಪೂರ್ಣವಾಗಿ ಶ್ರಮದಾಯಕವಾಗಿರುತ್ತದೆ ಮತ್ತು ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕಾರ್ಯಗಳ ಪೂರ್ಣಗೊಳಿಸುವಿಕೆ ಮತ್ತು ಯೋಜನ ಅವಧಿ ನಿಭಾಯಿಸುವಿಕೆಯು ಇಂದು ನಿಮಗೆ ಕಷ್ಟವಾಗಲಾರದು. ಈ ದಿನವು ಫಲಪ್ರದವಾಗಿರುತ್ತದೆ. ಮಧ್ಯಾಹ್ನದ ಬಳಿಕ, ಪ್ರತೀ ಗಂಟೆಯಲ್ಲಿ ಪರಿಸ್ಥಿತಿಗಳು ಉತ್ತಮವಾಗಿರುತ್ತದೆ. ನಿಮ್ಮ ಹಣಕಾಸು ಮತ್ತು ಹೂಡಿಕೆಗೆ ಸಂಬಂಧಿಸಿ ನೀವು ಉತ್ತಮ ರೀತಿಯಲ್ಲಿ ಯೋಜನೆ ರೂಪಿಸಬಹುದು. ನಿಮ್ಮ ಪರೋಪಕಾರಿ ಮನೋಭಾವವು ಸಂಜೆಯ ವೇಳೆಗೆ ಪ್ರಕಟಗೊಳ್ಳುತ್ತದೆ ಮತ್ತು ನಿಮ್ಮ ಸಹಾಯದ ಅಗತ್ಯವಿರುವ ಜನರಿಗೆ ನೀವು ಸಹಾಯ ಮಾಡುವಿರಿ.

ವೃಷಭ
ಶನಿವಾರ, 26 ಜೂನ್
ಗ್ರಹಗತಿಗಳು ನಿಮಗೆ ಅನುಗ್ರಹವನ್ನು ನೀಡಿಲ್ಲ, ಆದ್ದರಿಂದ, ಯಾವುದೇ ಕಾರ್ಯ ಪ್ರಾರಂಭಿಸುವ ಮುನ್ನ ಅಥವಾ ಯಾವುದರಲ್ಲಾದರೂ ತೊಡಗಿಕೊಳ್ಳುವ ಮುನ್ನ ಅನೈತಿಕ ಅಥವಾ ಕಾನೂನುಬಾಹಿರ ಪ್ರದೇಶಗಳನ್ನು ಮೆಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೊಸ ಯೋಜನೆ ಮತ್ತು ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದನ್ನು ತಪ್ಪಿಸಿ. ಈ ದಿನವು ಫಲಪ್ರದವಾಗಿರುವುದಿಲ್ಲ. ಬದಲಾಗಿ, ಹವ್ಯಾಸಗಳಲ್ಲಿ ಮತ್ತು ಇತರ ಉಲ್ಲಾಸಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಇದು ಉದ್ವೇಗ ಮತ್ತು ಒತ್ತಡಗಳನ್ನು ತೊಡಗಿಸಲು ಸಹಾಯಕವಾಗುತ್ತದೆ. ಮಾತಿನಲ್ಲಿನ ಹಿಡಿತವು ತಿಳುವಳಿಕೆಯ ಮನಸ್ಸನ್ನು ನೀಡುತ್ತದೆ. ಈ ಉಕ್ತಿಯನ್ನು ಪಾಲಿಸಿ ಮತ್ತು ನೀವು ಸಿಡುಕಿನಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವಿರಿ ಎಂಬುದನ್ನು ಕಾಣಿರಿ. ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿಯೂ, ನಿಮ್ಮ ಕಾರ್ಯವನ್ನು ವಿಳಂಬಗೊಳಿಸುವಂತಹ ಕೆಲವು ಅಡೆತಡೆಗಳನ್ನು ನೀವು ಎದುರಿಸಬೇಕಾದೀತು. ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳನ್ನು ಪ್ರಭಾವಿತಗೊಳಿಸುವುದು ಸುಲಭವಲ್ಲ. ನೀವು ಹೆಚ್ಚು ಶ್ರಮಪಡಬೇಕಾಗುತ್ತದೆ.

ಮಿಥುನ
ಶನಿವಾರ, 26 ಜೂನ್
ಈ ದಿನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅನುಕೂಲಕರ ಮತ್ತು ಅನನುಕೂಲಕರ. ಮೊದಲನೆಯ ಭಾಗವು ಮನರಂಜನೆ, ಸಂತೋಷ, ಉತ್ತಮ ಆರೋಗ್ಯ ಮುಂತಾದವುಗಳನ್ನು ತಂದರೆ, ಎರಡನೆಯ ಭಾಗವು ಸ್ವಲ್ಪ ತೊಂದರೆಯನ್ನು ನೀಡುತ್ತದೆ. ಆದ್ದರಿಂದ ದಿನದ ಕೊಡುಗೆಯ ಪ್ರಯೋಜನವನ್ನು ಪಡೆದುಕೊಳ್ಳಿ ಮತ್ತು ಸಾಮಾಜಿಕವಾಗಿ ಸಮಯ ಕಳೆಯಿರಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಭ್ರಮಾಚರಿಸಿ. ಮಧ್ಯಾಹ್ನದ ಬಳಿಕ, ಒತ್ತಡ,ಉದ್ವೇಗ, ವ್ಯಾಧಿಗಶು ಚಿಂತೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತಡೆಯೊಡ್ಡುವುದರಿಂದ ಪರಿಸ್ಥಿತಿಯು ಸುಲಭವಾಗಿರುವುದಿಲ್ಲ.

ಕರ್ಕಾಟಕ
ಶನಿವಾರ, 26 ಜೂನ್
ಅದ್ಭುತ! ವೈಯಕ್ತಿ ವೃತ್ತಿ ಅಥವಾ ಸಾಮಾಜಿಕ ಯಾವುದೇ ಕ್ಷೇತ್ರವಾಗಿರಲಿ ಕಾರ್ಯತಃ ಎಲ್ಲಾ ಕ್ಷೇತ್ರಗಳಲ್ಲೂ ನೀವು ಅಧಿಕಾರ ಚಲಾಯಿಸುತ್ತೀರಿ. ಭಾರೀ ಧನಲಾಭ, ಬಡ್ತಿ, ವೇತನ ಹೆಚ್ಚಳ ವೃತ್ತಿಪರರಿಗಾಗಿ ಕಾದಿದೆ, ಮತ್ತು ಅವರು ಇಂದು ತಮ್ಮ ಕಾರ್ಯದಲ್ಲಿ ಯಾವುದೇ ತಪ್ಪುಗಳನ್ನೆಸಗುವುದಿಲ್ಲ.ಪ್ರತೀ ಕಾರ್ಯದಲ್ಲೂ ನೀವು ತೋರುವ ಉತ್ಸಾಹವು ಕೆಲಸದ ಗುಣಮಟ್ಟಕ್ಕೆ ಯಾವುದೇ ಕುಂದುಬರದಂತೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಸುತ್ತದೆ. ಇದು ನಿಮ್ಮ ಮೇಲಾಧಿಕಾರಿಗಳನ್ನು ಪ್ರಭಾವಿತಗೊಳಿಸುತ್ತದೆ. ಉದ್ಯಮ ಪಾಲುದಾರರು ನಿಮ್ಮ ಮೇಲೆ ತೋರುವ ವರ್ತನೆಯು ಧನಾತ್ಮಕವಾಗಿರುತ್ತದೆ. ಆದ್ದರಿಂದ ಧನ್ಮಾತ್ಮಕ ಅಭಿವ್ಯಕ್ತಿಯನ್ನು ನೀವು ಕಾಣುವಿರಿ. ಸಂಜೆಯ ವೇಳೆಗೆ ದಿನವನ್ನು ಪೂರ್ಣಗೊಳಿಸಲು, ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಖುಷಿ ಹಾಗೂ ಸಂಭ್ರಮದಲ್ಲಿ ತೊಡಗಿಕೊಳ್ಳುವಿರಿ.

ಸಿಂಹ
ಶನಿವಾರ, 26 ಜೂನ್
‘ಪರಿಪೂರ್ಣ’ ಪದವನ್ನು ಪಡೆದುಕೊಳ್ಳಲು ನೀವು ಉದರ ಸಂಬಂಧಿ ವ್ಯಾಧಿಗಳನ್ನು ತೊಲಗಿಸಬೇಕಾಗುತ್ತದೆ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಗ್ರಹಗತಿಗಳು ನಿಮಗೆ ಅನುಕೂಲಕರವಾಗಿರುತ್ತದೆ. ಮನೆಯಲ್ಲಿಯೂ ವಾತಾವರಣವು ಸ್ನೇಹಪರ ಹಾಗೂ ಶಾಂತಿಯುತವಾಗಿರುತ್ತದೆ. ಕಚೇರಿಯಲ್ಲಿನ ವಾತಾವರಣವು ಹಿತಕರವಾಗಿರುತ್ತದೆ. ನೀವು ಹಾಳುಮೂಳು ತಿಂಡಿಗಳಿಂದ ಹೋಟೇಲ್ ತಿನಿಸುಗಳಿಂದ ದೂರವಿದ್ದಲ್ಲಿ, ಆರೋಗ್ಯವು ನಿಮ್ಮನ್ನು ಚಿಂತೆಗೀಡುಮಾಡುವುದಿಲ್ಲ. ಉದ್ಯಮಿಗಳಿಗೆ ಈ ದಿನವು ಲಾಭ, ಅದೃಷ್ಟು ಮತ್ತು ಸೌಭಾಗ್ಯವನ್ನು ತರಲಿದೆ. ಮಧ್ಯಾಹ್ನದ ಬಳಿಕ ಗ್ರಹತಿಗಳು ಆರ್ಥಿಕ ನಿರ್ಬಂಧದಿಂದ ಮುಕ್ತರನ್ನಾಗಿಸುತ್ತದೆ. ಸಾಹಿತ್ಯ ಕಾರ್ಯಗಳು ನಿಮ್ಮನ್ನು ಆಕರ್ಷಿಸುತ್ತವೆ.

ಕನ್ಯಾ
ಶನಿವಾರ, 26 ಜೂನ್
ತೊಂದರೆ ಉಂಟುಮಾಡುವ ದಿನವು ನಿಮ್ಮದಾಗಲಿದೆ, ನಿಮ್ಮ ಮನಸ್ಸು, ದೇಹ ಮತ್ತು ಉತ್ಸಾಹ ಹಾಗೂ ಆಶಾವಾದದಿಂದಿರಿಸುವಲ್ಲಿ ಯಶಸ್ವಿಯಾದರೆ, ದಿನದ ತೊಂದರೆಗಳನ್ನು ಯಶಸ್ವಿಯಾಗಿ ಎದುರಿಸಲು ಶಕ್ತರಾಗುವಿರಿ. ನಿಮ್ಮ ತಾಯಿಯ ಆರೋಗ್ಯವು ಹದಗೆಡುತ್ತಿರುವುದರಿಂದ,ಕುಟುಂಬದ ಸದಸ್ಯರು ದೂಷಣೆಗೊಳಪಡುವುದರಿಂದ ಮತ್ತು ನಿಮ್ಮ ಬೊಕ್ಕಸದಲ್ಲಿನ ಹಣವು ಖಾಲಿಯಾಗುತ್ತಿರುವುದರಿಂದ ಮನೆಯ ವಾತಾವರಣವು ಕಷ್ಟಕರವಾಗಿರುತ್ತದೆ. ಪ್ರೌಢತೆಯೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸಿ ಮತ್ತು ಪ್ರತೀ ಹಂತದಲ್ಲೂ ಎಚ್ಚರಿಕೆಯಿಂದಿರಿ. ಪ್ರಯಾಣವನ್ನು ಮುಂದೂಡಿ ಮತ್ತು ಜಲಾವೃತ ಪ್ರದೇಶಗಳಿಂದ ದೂರವಿರಿ. ಕುಟುಂಬ ಸದಸ್ಯರೊಂದಿಗಿನ ಕಲಹ ಮತ್ತು ಜಗಳಗಳನ್ನು ತಪ್ಪಿಸಲು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿರಿಸಬೇಕು.

ತುಲಾ
ಶನಿವಾರ, 26 ಜೂನ್
ಎಲ್ಲವೂ ಉತ್ತಮವಾಗಿಯೇ ಪ್ರಾರಂಭಗೊಳ್ಳುತ್ತದೆ ಆದರೆ ಅಂತ್ಯವು ಉತ್ತಮವಾಗಿರುವುದಿಲ್ಲ, ನೀವು ಹೊಸ ಯೋಜನೆ ಅಥವಾ ಕಾರ್ಯಗಳನ್ನು ಪ್ರಾರಂಭಿಸಲು ಆಲೋಚಿಸಿದ್ದಲ್ಲಿ ಮುಂಜಾನೆಯ ವೇಳೆಗೆ ನಿಗದಿಪಡಿಸಿ; ಇದು ಫಲಪ್ರದವಾಗಿರುತ್ತದೆ. ಯಾಕೆಂದರೆ ಮಧ್ಯಾಹ್ನದ ಬಳಿಕ ನೀವು ಮಾನಸಿಕ ಹಾಗೂ ದೈಹಿಕವಾಗಿ ಸುಸ್ತಾಗಿರುತ್ತೀರಿ ಮತ್ತು ಮಾನಸಿಕ ಒತ್ತಡ ಹಾಗೂ ಸಾಕಷ್ಟು ಶ್ರಮ ನೀಡುವ ಕಾರ್ಯಗಳನ್ನು ಮಾಡಲು ನೀವು ಬಯಸುವುದಿಲ್ಲ. ಮನೆಯಲ್ಲಿ, ವಾತಾವರಣವು ಸಂಜೆಯ ವೇಳೆಗೆ ಪ್ರತಿಕೂಲವಾಗಿರುತ್ತದೆ. ಆಗಿಹೋದುದಕ್ಕಾಗಿ ವಾಗ್ವಾದ ನಡೆಸುವುದನ್ನು ತಪ್ಪಿಸಿ ಮತ್ತು ಅದರ ಬದಲಾಗಿ ಸ್ನೇಹಪರವಾಗಿ ವಿವಾದಗಳನ್ನು ಪರಿಹರಿಸಿ.

ವೃಶ್ಚಿಕ
ಶನಿವಾರ, 26 ಜೂನ್
ಕೆಳಮಟ್ಟದಿಂದ ಪ್ರಾರಂಭಗೊಳ್ಳುವ ದಿನವು, ಉತ್ತಮ ಅಂಶಗಳೊಂದಿಗೆ ಅಂತ್ಯಗೊಳ್ಳುತ್ತದೆ,ಮುಂಜಾನೆಯ ವೇಳೆ ಎಲ್ಲಾ ಕ್ಷೇತ್ರಗಳಲ್ಲೂ ನಿರ್ವಹಣೆಯು ಕಷ್ಟಕರವಾಗಿರುತ್ತದೆ, ವಿಶೇಷವಾಗಿ ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿದ ಕಾರ್ಯದೊತ್ತಡ ಮತ್ತು ಕಡಿಮೆ ಫಲಿತಾಂಶವು ನಿಮ್ಮ ಉತ್ಸಾಹಕ್ಕೆ ಭಂಗ ತರುತ್ತದೆ. ಆದರೆ, ಸಾವಾಶವಾಗಿರಿ, ಸಂಜೆಯ ವೇಳೆಗೆ ಎಲ್ಲವೂ ವೃದ್ಧಿಸಲಾರಂಭಿಸುತ್ತದೆ. ಮನೆಯಲ್ಲಿ ಜಗಳ ಮತ್ತು ಅರ್ಥಹೀನ ಚರ್ಚೆಗಳಿಂದ ನಿಮ್ಮನ್ನು ದೂರವಿರಿಸಿ, ಇದನ್ನು ನೀವು ಶಾಂತರಾಗಿರುವ ಮೂಲಕ ಹಾಗೂ ಕೋಪದ ಮೇಲೆ ನಿಯಂತ್ರಣದಲ್ಲಿರಿಸುವ ಮೂಲಕ ಮಾಡಬಹುದು. ಮಧ್ಯಾಹ್ನದ ಬಳಿಕ ಮನೆಯಲ್ಲಿನ ಕಷ್ಟಕರ, ಪ್ರತಿಕೂಲ ವಾತಾವರಣವು ಕಡಿಮೆಗೊಂಡು ಉತ್ತಮ ಪ್ರಭಾವ ಹಾಗೂ ಸಾಮರಸ್ಯವನ್ನು ಉಂಟುಮಾಡುತ್ತದೆ. ಸಂಜೆಯ ಅನುಗ್ರಹದಿಂದ ಸಂತೋಷವನ್ನು ಪಡೆಯಲು ನೀವು ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ತಿರುಗಾಟಕ್ಕೆ ತೆರಳಬಹುದು.

ಧನು
ಶನಿವಾರ, 26 ಜೂನ್
ಸಾಮಾನ್ಯ ದಿನವು ಧನು ರಾಶಿಯವರಿಗೆ ಕಾದಿದೆ,ದಿನದ ಪೂರ್ವಾರ್ಧದಲ್ಲಿ ಇದು ಸಂತಸ ಹಾಗೂ ತೃಪ್ತಿಯ ಮಳೆಗರೆಯುತ್ತದೆ. ಆದರೆ, ದ್ವಿತೀಯಾರ್ಧವು ಕಷ್ಟಕರವಾಗಿರುತ್ತದೆ. ಆರ್ಥಿಕ ಲಾಭ, ಸಾಮಾಜಿಕ ಭೇಟಿ, ದೇವಾಲಯಗಳ ಭೇಟಿ ಇವೆಲ್ಲವೂ ಮಧ್ಯಾಹ್ನದ ಬಳಿಕ ಉಂಟಾಗಲಿದೆ. ನಿಮ್ಮ ಉತ್ತಮ ಸಮಯವೂ ಸಹಕಾರ ಮತ್ತು ಪ್ರೋತ್ಸಾಹದಿಂದ ಕೂಡಿರುತ್ತದೆ. ಮಧ್ಯಾಹ್ನದ ಬಳಿಕ, ನೀವು ದಿನದ ಬಿಸಿಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕುಟುಂಬ ಸದಸ್ಯರು ಜಗಳದಲ್ಲಿ ತೊಡಗುವುದರಿಂದ ಮತ್ತು ಇದನ್ನು ನಿಭಾಯಿಸಲು ನಿಮಗೆ ಅಸಾಧ್ಯವೆನಿಸುವುದರಿಂದ, ಮನೆಯ ವಾತಾವರಣವು ಕಷ್ಟಕರವಾಗಿರುತ್ತದೆ. ಕಚೇರಿಯಲ್ಲಿ, ನಿಮ್ಮ ಫಲಿತಾಂಶವು ಅಸಮಾಧಾನವನ್ನು ತರಲಿದೆ. ನಿರ್ಧಾರ ಕೈಗೊಳ್ಳುವಿಯೂ ಸುಲಭವಾಗಿರುವುದಿಲ್ಲ ,ಕಡಿಮೆ ಮಾಹಿತಿಯನ್ನು ಹೊಂದಿರುವ ಸಾಕಷ್ಟು ಆಲೋಚನೆಗಳಲ್ಲಿ ನೀವು ಸಿಲುಕಿರುವಿರಿ.

ಮಕರ
ಶನಿವಾರ, 26 ಜೂನ್
ಮುಂಜಾನೆಯ ವೇಳೆಗಿನ ಕೆಲವು ಸವಾಲುಗಳ ಹೊರತಾಗಿ, ಯಾವುದೇ ಚಿಂತೆಗಳಿರುವುದಿಲ್ಲ,ದಿನದ ಪೂರ್ವಾರ್ಧದಲ್ಲಿ, ನೀವು ಕಾನೂನು ವಿಚಾರಗಳಲ್ಲಿ ಸಾಕ್ಷಿದಾರರಾಗಿ ತೊಡಗಿಕೊಂಡಿದ್ದಲ್ಲಿ ನೀವು ಜಾಗರೂಕ ಹಾಗೂ ಎಚ್ಚರಿಕೆಯಿಂದಿರಬೇಕಾಗುತ್ತದೆ. ವಾಹನ ಚಲಾಯಿಸುವಾಗ ವೇಗವನ್ನು ಕಡಿಮೆಗೊಳಿಸಿ. ಅಪಘಾತದ ಸಂಭಾವ್ಯತೆಯಿದೆ. ನಿಮ್ಮ ಕೋಪವನ್ನು ನಿಯಂತ್ರಿಸಲು ನಿಮ್ಮ ವರ್ತನೆ ಮತ್ತು ದೈಹಿಕ ಕ್ರಿಯೆಗಳನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ನಿಮ್ಮ ಸಿಡುಕಿನ ಸ್ವಭಾವವು ನಿಮ್ಮ ಘನತೆಯ ಮೇಲೆ ಪರಿಣಾಮ ಬೀರಬಹುದು. ಮಧ್ಯಾಹ್ನದ , ಎಲ್ಲವೂ ಸರಿಹೋಗುತ್ತದೆ ಮತ್ತು ನಿಮ್ಮ ಜೀವನವು ಮತ್ತೊಮ್ಮೆ ಮೇಲ್ಗತಿಯಲ್ಲಿ ಸಾಗುತ್ತದೆ. ದಿನದ ಪ್ರಾರಂಭದಲ್ಲಿ ತೊಂದರೆಯನ್ನುಂಟುಮಾಡಿದ್ದ ಆರೋಗ್ಯವು ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸುತ್ತದೆ. ಮನೆಯಲ್ಲಿನ ವಾತಾವರಣವು ಹಿತಕರ ಮತ್ತು ಸ್ನೇಹಪರವಾಗಿರುತ್ತದೆ. ದಾನಶೀಲ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ.

ಕುಂಭ
ಶನಿವಾರ, 26 ಜೂನ್
ಕುಂಭ ರಾಶಿಯವರಿಗೆ ಫಲದಾಯಕ ದಿನವಾಗಲಿದೆ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ರೂಪದಲ್ಲಿ ದಿನವು ಫಲವನ್ನು ನೀಡುತ್ತದೆ. ಮನೆಯಲ್ಲಿನ ವಾತಾರಣವು ಶಾಂತ ಪರಸ್ಥಿತಿಯಿಂದ ಪ್ರತಿಕೂಲ ಸ್ಥಿತಿಗೆ ಸಾಗುವುದರಿಂದ, ದಿನದ ದ್ವಿತೀಯಾರ್ಧವು ತೊಡಕಿನಿಂದ ಕೂಡಿರುತ್ತದೆ. ಚಂಚಲ ವಾತಾವರಣವು ನಿಮ್ಮ ಕುಟುಂಬದ ಶಾಂತಿ ಮತ್ತು ಸಾಮರಸ್ಯವನ್ನು ಹಾಳುಗೆಡಹುತ್ತದೆ. ಆದ್ದರಿಂದ ನಿಮ್ಮನ್ನು ನೀವೇ ಶಾಂತರಾಗಿರಲು ಪ್ರಯತ್ನಿಸಿ. ಈ ಅವಧಿಯಲ್ಲಿ, ದುರಾಕ್ರಮಣ ಪ್ರವೃತ್ತಿಯು ನಿಮ್ಮನ್ನು ಸ್ವಾಧೀನಪಡಿಸಿಕೊಳ್ಳಬಹುದು. ಪ್ರಬಲರಾಗಿರಿ ಮತ್ತು ಅಂತಹ ಪ್ರವೃತ್ತಿಗಳನ್ನು ತೊಲಗಿಸಿ. ನಿಮ್ಮ ಖರ್ಚುವೆಚ್ಚಗಳ ಮೇಲೆ ನಿಗಾ ಇರಿಸಿ. ಇದು ಸಂಜೆಯ ವೇಳೆಗೆ ಸ್ವಲ್ಪ ಹೆಚ್ಚೇ ಆಗಿರಬಹುದು. ಕಾನೂನು ಸಂಬಂಧಿ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರದಿಂದಿರಿ.

ಮೀನ
ಶನಿವಾರ, 26 ಜೂನ್
ಉದಾರಿ! ಪ್ರಾಯಶಃ ಎಲ್ಲಾ ಕ್ಷೇತ್ರದಲ್ಲೂ ಈ ದಿನವು ನಿಮ್ಮನ್ನು ಶ್ರೀಮಂತರನ್ನಾಗಿಸಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಲಿದೆ. ಆರ್ಥಿಕ ಮತ್ತು ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿ ಬಡ್ತಿ, ಹಣಕಾಸು ಲಾಭವು ನಿಮ್ಮತ್ತ ಬರುತ್ತಿದೆ. ಮತ್ತು ವೈಯಕ್ತಿಕ ನೆಲೆಯಲ್ಲಿ, ಪರಿಸ್ಥಿತಿಗಳೆಲ್ಲವೂ ಜೇನಿನಂತೆ ಸಿಹಿಯಾಗಿರುತ್ತದೆ. ಸಂತೋಷ, ಶಾಂತಿ, ತೃಪ್ತಿ ಇವು ಮೂರು ಇಂದಿನ ನಿಮ್ಮ ಜೀವನದ ವ್ಯಾಕರಣಕ್ಕೆ ಸೂಕ್ತವಾಗಿ ಹೊಂದಾಣಿಕೆಯಾಗುವ ನಾಮವಾಚಕಗಳು. ಗಣೇಶನ ಆಶೀರ್ವಾದದೊಂದಿಗೆ, ಮನೆಯಲ್ಲಿನ ಸಾಮರಸ್ಯದ ವಾತಾವರಣವು ನಿಮ್ಮ ದಿನವನ್ನು ಶಾಂತಿಯುತವಾಗಿ ಕೊನೆಗೊಳಿಸುತ್ತದೆ. ಸಂಕ್ಷಿಪ್ತವಾಗಿ ಅದ್ಭುತ ದಿನವು ನಿಮಗಾಗಿ ಕಾದಿದೆ.

 

 

Leave a Reply

Your email address will not be published.