🙏ನಿತ್ಯವಾಣಿ ಮಂಗಳವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಮಂಗಳವಾರದ ರಾಶಿ ಭವಿಷ್ಯ 🙏
ಮೇಷ
ಮಂಗಳವಾರ, 29 ಜೂನ್
ಈ ದಿನವು ಅತ್ಯಂತ ಉಲ್ಲಾಸಕರ ದಿನವಾಗಲಿದೆ, ಸಾಮಾಜಿಕ ಸಮಾರಂಭಗಳಲ್ಲಿ/ಆಚರಣೆಗಳಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಭಾಗಿಯಾಗುವಿರಿ. ಸ್ನೇಹಿತರಿಂದ ಸಹಾಯ ಮತ್ತು ಲಾಭವನ್ನು ನಿರೀಕ್ಷಿಸಿ. ಅವರನ್ನು ಮನರಂಜಿಸಲು ನೀವು ಖರ್ಚುಮಾಡಬೇಕಾಗಿ ಬರಬಹುದು. ಹಿರಿಯರು ವಿಶೇಷ ಪ್ರೀತಿ ಮತ್ತು ಅಕ್ಕರೆಯನ್ನು ತೋರುತ್ತಾರೆ. ನಿಮ್ಮ ಆತ್ಮೀಯತೆಯು ಉನ್ನತ ಮಟ್ಟಕ್ಕೆ ಸಾಗುವ ನಿರೀಕ್ಷೆಯಿದೆ. ಸುಂದರ ಪ್ರದೇಶಗಳಿಗೆ ಭೇಟಿ ನೀಡಲಿರುವಿರಿ. ಅನಿರೀಕ್ಷಿತ ಧನಲಾಭ ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಮಕ್ಕಳಿಂದ ಪ್ರಯೋಜನ ಉಂಟಾಗಬಹುದು.

ವೃಷಭ
ಮಂಗಳವಾರ, 29 ಜೂನ್
ಈ ದಿನವು ನಿರೀಕ್ಷಿತವಾಗಿ ಶುಭಕರವಾಗಿರುವ ಭರವಸೆಯಿದೆ, ಹೊಸ ಯೋಜನೆ ಮತ್ತು ಕಾರ್ಯಗಳನ್ನು ಪ್ರಾರಂಭಿಸುವ ಸೂಚನೆಯಿದೆ. ವೃತ್ತಿನಿರತರಿಗೆ ಮತ್ತು ಉದ್ಯಮಿಗಳಿಗೆ ಈ ದಿನವು ವಿಶೇಷವಾಗಿ ಲಾಭದಾಯಕ ದಿನವಾಗಲಿದೆ. ನಿಮ್ಮ ಮೇಲಾಧಿಕಾರಿಗಳು ಹೆಚ್ಚು ಕೃತಜ್ಞರಾಗಿರುತ್ತಾರೆ ಮತ್ತು ನಿಮ್ಮ ಬಳಿ ಉತ್ತಮರೀತಿಯಲ್ಲಿಯೇ ವರ್ತಿಸುತ್ತಾರೆ. ಬಡ್ತಿ ಸಿಗಬಹುದು ಮತ್ತು ವೇತನದಲ್ಲಿ ಹೆಚ್ಚಳ ಉಂಟಾಗಬಹುದು. ಬಾಕಿ ಉಳಿದಿರುವ ಕಾರ್ಯಗಳು ಕಾಲಕ್ರಮದಲ್ಲಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ, ವಿಶೇಷ ಪ್ರೀತಿ ಮತ್ತು ಗೌರವವನ್ನು ನೀವು ಎದುರುನೋಡಬಹುದು. ಉಡುಗೊರೆ ಮತ್ತು ಬಹುಮಾನಗಳು ನಿಮಗೆ ಇನ್ನಷ್ಟು ಸಂತಸವನ್ನು ತರಬಹುದು.

ಮಿಥುನ
ಮಂಗಳವಾರ, 29 ಜೂನ್
ಕೆಲವು ಕಾರಣಗಳಿಂದ ಇಂದು ನೀವು ಗೊಂದಲದಲ್ಲಿರುವ ಸಾಧ್ಯತೆಯಿದೆ, ಕೆಲಸದಲ್ಲಿ ನಿತ್ರಾಣ, ಜಡತ್ವ ಮತ್ತು ನಿರಾಸಕ್ತಿಯನ್ನು ಹೊಂದಿರುವಿರಿ. ಉದರ ಸಮಸ್ಯೆ ಉಂಟಾಗಬಹುದು. ದುಂದುವೆಚ್ಚದ ಸಾಧ್ಯತೆಯಿದೆ. ವ್ಯವಹಾರವು ನಿರೀಕ್ಷೆಯಂತೆ ಸಾಗುವುದಿಲ್ಲ. ಸಹೋದ್ಯೋಗಿಗಳ ವರ್ತನೆಯು ಕಷ್ಟಕರ ರೀತಿಯಲ್ಲಿರುತ್ತದೆ ಮತ್ತು ಅಸಹಕಾರ ತೋರಬಹುದು. ಮಕ್ಕಳಿಗೆ ಸಂಬಂಧಿಸಿ ಆತಂಕಗಳು ನಿಮ್ಮನ್ನು ಇನ್ನಷ್ಟು ಕುಗ್ಗಿಸಬಹುದು. ಶ್ರಮ ಮತ್ತು ಪ್ರಯತ್ನಗಳು ನಿರರ್ಥಕವಾಗಲಿವೆ. ಕಚೇರಿ ಅಸಾಮಾಧಾನಗಳು ನಿಮ್ಮ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಲಿವೆ.

ಕರ್ಕಾಟಕ
ಮಂಗಳವಾರ, 29 ಜೂನ್
ಈ ದಿನವು ಅಳುಕು ಮತ್ತು ದುರಾದೃಷ್ಟದಿಂದ ಕೂಡಿರುತ್ತದೆ, ಹೊಸ ಯೋಜನೆಗಳ ಪ್ರಾರಂಭವನ್ನು, ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸಿ.ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಅನೈತಿಕ ಮತ್ತು ಮೋಸದ ಆಲೋಚನೆಗಳನ್ನು ಬಿಟ್ಟುಬಿಡಿ. ಕಾನೂನುಬಾಹಿರ ಕಾರ್ಯಗಳು ಯಾವಾಗಲೂ ತೀವ್ರ ತೊಂದರೆಯನ್ನು ತರುತ್ತದೆ. ಕಚೇರಿ ವಿಚಾರಗಳು ಅನುಕೂಲಕರ ತಿರುವನ್ನು ಪಡೆದುಕೊಳ್ಳುತ್ತದೆ. ಮನೆಯಲ್ಲಿನ ಶಾಂತಿ ಮತ್ತು ಸಾಮರಸ್ಯಕ್ಕೆ ಕಲ್ಲೆಸೆಯಬೇಡಿ. ಮಾನಸಿಕ ಅಸ್ಥಿರತೆ ಮತ್ತು ವ್ಯಥೆ ಉಂಟಾಗಬಹುದು. ನಿಮ್ಮ ಧೈರ್ಯ ಕಳೆದುಕೊಳ್ಳಬೇಡಿ.

ಸಿಂಹ
ಮಂಗಳವಾರ, 29 ಜೂನ್
ಈ ದಿನವು ನೀವು ನಿರೀಕ್ಷಿಸಿದಂತೆ ಇರುವುದಿಲ್ಲ, ನಿಮ್ಮ ಸಂಗಾತಿಯೊಂದಿಗೆ ತೀವ್ರ ವಾಗ್ವಾದ ಉಂಟಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತವಾಗಿ ಎಚ್ಚರಿಕೆಯಿಂದಿರಿ. ವ್ಯವಹಾರ ಸಂಬಂಧಿತ ಜಗಳಗಳಿಂದ ದೂರವಿರಿ. ಆರೋಗ್ಯದಿಂದ ಯಾವುದೇ ತೊಂದರೆ ಉಂಟಾಗುವ ಸಾಧ್ಯತೆಯಿಲ್ಲ. ಏನೇ ಆದರೂ, ನಿಮ್ಮ ಸಂಗಾತಿಯ ಆರೋಗ್ಯವು ಆತಂಕಕ್ಕೆ ಕಾರಣವಾಗಬಹುದು. ಸಾಮಾಜಿಕ ಮತ್ತು ಸಾರ್ವಜನಿಕ ವ್ಯವಹಾರಗಳು ಅನುಕೂಲಕರವಾಗಿಯೇ ನಡೆಯಲಿದೆ. ವಿದೇಶಿ ವ್ಯಕ್ತಿಗಳನ್ನು ಭೇಟಿಯಾಗುವ ಸಂಭಾವ್ಯತೆಯಿದೆ. ಏನೇ ಆದರೂ, ಯಾವುದನ್ನೂ ಸ್ಪಷ್ಟ ನಿರ್ಧಾರವೆಂದು ಪರಿಗಣಿಸಬೇಡಿ.

ಕನ್ಯಾ
ಮಂಗಳವಾರ, 29 ಜೂನ್
ಈ ದಿನವು ಆನಂದಕರ ದಿನವಾಗಲಿದೆ, ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ನೀವು ಎದುರುನೋಡಬಹುದು. ದಿನಪೂರ್ತಿ ನೀವು ಹೆಚ್ಚು ಉತ್ಸಾಹದಿಂದಿರುತ್ತೀರಿ. ಎಲ್ಲವೂ ನಿಮಗೆ ಸಂತೋಷ ಮತ್ತು ಸಂತೃಪ್ತಿಯನ್ನು ನೀಡುವ ನಿರೀಕ್ಷೆಯಿದೆ. ನೀವು ಆಹ್ಲಾದಕರ ಹಾಗೂ ಉಲ್ಲಾಸದಿಂದಿರುತ್ತೀರಿ. ನೀವು ತೊಂದರೆಗೊಳಪಟ್ಟಿದ್ದರೆ, ಚೇತರಿಕೆ ಕಾಣುವಿರಿ. ಲಾಭ ಮತ್ತು ಜನಪ್ರಿಯತೆಯು ಹೆಚ್ಚಳಗೊಳ್ಳುವ ನಿರೀಕ್ಷೆಯಿದೆ. ಸಹೋದ್ಯೋಗಿಗಳೊಂದಿಗೆ ಆರೋಗ್ಯಕರ ಮತ್ತು ಹಿತಕರ ಸಾಮರಸ್ಯವನ್ನು ಗ್ರಹಗತಿಗಳು ಯೋಜಿಸಿವೆ. ಮನೆಯಿಂದ ಸುಖಕರ ತರಂಗಗಳು ಬರುವಂತಿವೆ.

ತುಲಾ
ಮಂಗಳವಾರ, 29 ಜೂನ್
ಸಾಕಷ್ಟು ಹರ್ಷವು ಇಂದು ನಿಮಗಾಗಿ ಕಾದಿದೆ,ಬೌದ್ಧಿಕ ಆಸಕ್ತಿಗಳು ಇಂದು ನಿಮಗೆ ಸಂತೋಷ ಮತ್ತು ಸಂತೃಪ್ತಿಯನ್ನು ನೀಡಲಿವೆ. ನಿಮ್ಮ ಸೃಜನಶೀಲತೆ ಮತ್ತು ಕೌಶಲ್ಯದಲ್ಲಿ ಗಣನೀಯ ವೃದ್ಧಿಯಾಗಲಿದೆ. ದಿನಪೂರ್ತಿ ನೀವು ತಾಜಾ ಹಾಗೂ ಲವಲವಿಕೆಯಿಂದಿರುತ್ತೀರಿ. ತುಂಬಾ ಯೋಚಿಸಬೇಡಿ ಮತ್ತು ಚಿಂತಿಸಬೇಡಿ. ಕೇವಲ ದಿನವನ್ನು ಆನಂದಿಸಿ ಎಂಬುದಾಗಿ ಗಣೇಶ ಹೇಳುತ್ತಾರೆ..

ವೃಶ್ಚಿಕ
ಮಂಗಳವಾರ, 29 ಜೂನ್
ಇಂದು, ಶಾಂತಿ ಮತ್ತು ಸಮಾಧಾನದಿಂದಿರುವಂತೆ, ಆತಂಕವು ತಗ್ಗಲಿದೆ. ಸ್ನೇಹಿತರು ಮತ್ತು ಸಂಬಂಧಿಗಳು ಸ್ನೇಹಪರ ಹಾಗೂ ಸಂತೋಷದಿಂದ ವರ್ತಿಸುತ್ತಾರೆ. ಆರೋಗ್ಯವು ಕಳವಳಕ್ಕೆ ಕಾರಣವಾಗಲಿದೆ. ಹಣ ಮತ್ತು ಆಸ್ತಿಯಲ್ಲಿನ ನಷ್ಟವನ್ನು ನಿರಾಕರಿಸುವಂತಿಲ್ಲ. ಮಹಿಳೆ ಮತ್ತು ಜಲಾವೃತಪ್ರದೇಶಗಳು ನಿಮಗೆ ಅಸಹಿಷ್ಣುವಾಗಲಿದೆ. ನಿಮ್ಮ ಕೀರ್ತಿಯನ್ನು ಅಪಾಯಕ್ಕೆ ತಳ್ಳಬೇಡಿ. ದಾಖಲೆಗಳಿಗೆ ಸಹಿ ಹಾಕುವ ಮುನ್ನ ಎರಡು ಬಾರಿ ಯೋಚಿಸಿ.

ಧನು
ಮಂಗಳವಾರ, 29 ಜೂನ್
ಆಧ್ಯಾತ್ಮಜ್ಞಾನ ಮತ್ತು ಅತೀಂದ್ರಿಯಗಳ ಆಸಕ್ತಿಯಲ್ಲಿ ಇಂದು ದಿನವನ್ನು ಕಳೆಯುವ ಸಾಧ್ಯತೆಯಿದೆ ಮತ್ತು ಇದರಿಂದ ಅಗಾಧ ಸಂತೋಷವನ್ನು ಪಡೆದುಕೊಳ್ಳುವಿರಿ.ಸಹೋದರರು ಮತ್ತು ಸಹೋದರಿಯರು ಇಂದು ಸ್ನೇಹಪರ ಮತ್ತು ಆತ್ಮೀಯತೆಯಿಂದ ಇರುತ್ತಾರೆ.ಹೊಸ ಕಾರ್ಯಗಳನ್ನು ಮತ್ತು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇಂದು ಸೂಕ್ತ, ಸ್ನೇಹಿತರು ಮತ್ತು ಜೊತೆಗಾರರೊಂದಿಗೆ ಖುಷಿಭರಿತ ಸ್ನೇಹಕೂಟದ ಸಂಭವವಿದೆ. ಗ್ರಹಗತಿಗಳು ಈ ದಿನ ನಿಮಗೆ ಗೆಲುವಿನ ಸೂಚನೆ ನೀಡುತ್ತವೆ. ನಿಮ್ಮ ಸ್ಪರ್ಧಿಗಳನ್ನು ಸೋಲಿಸುತ್ತೀರಿ. ಸಂತಸಭರಿತ ಪ್ರವಾಸ ಅಥವಾ ತಿರುಗಾಟದ ಸಾಧ್ಯತೆಯಿದೆ. ನಿಮ್ಮ ಘನತೆ ಮತ್ತು ಕೀರ್ತಿ ವರ್ಧಿಸಲಿದೆ.

ಮಕರ
ಮಂಗಳವಾರ, 29 ಜೂನ್
ಶೇರು ಮಾರುಕಟ್ಟೆಯಲ್ಲಿನ ಬಂಡವಾಳವು ನಿಮಗೆ ಅನಿರೀಕ್ಷಿತ ಫಲವನ್ನು ನೀಡುವ ಸಾಧ್ಯತೆಯಿದೆ,ಮನೆಯಲ್ಲಿನ ಅನಾರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಬಹುದು. ಮನೆಯ ವಾತಾವರಣವು ಅತ್ಯುತ್ತಮ ರೀತಿಯಲ್ಲಿರುವುದಿಲ್ಲ. ಗೃಹಿಣಿಯರು ಅತೃಪ್ತಿ ಮತ್ತು ಆತಂಕಕ್ಕೆ ಒಳಗಾಗುವಿರಿ. ಮಕ್ಕಳು ತಮ್ಮ ಓದಿನಲ್ಲಿ ಎಂದಿಗಿಂತ ಹೆಚ್ಚಿನ ಶ್ರಮ ಪಡಬೇಕಾಗಬಹುದು. ಅನಾರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಕಣ್ಣಿನ ವ್ಯಾಧಿ ಉಂಟಾಗುವ ಸಂಭವವಿದೆ. ನಿಮ್ಮ ಆರೋಗ್ಯಕರ ದೃಷ್ಟಿಯು ನಿಮ್ಮ ಮನದಲ್ಲಿ ಲಗ್ಗೆಯಿಟ್ಟ ಋಣಾತ್ಮಕತೆಯಿಂದ ಹೊರಬರಲು ಸಹಾಯ ಮಾಡುತ್ತದೆ. ದುರಾಕ್ರಮಣದ ಚಲನೆ, ಅಪಾಯ ಕೈಗೆತ್ತಿಕೊಳ್ಳುವಿಕೆ ಮುಂತಾದವುಗಳಿಗೆ ಈ ದಿನ ಉತ್ತಮವಾಗಿದೆ.

ಕುಂಭ
ಮಂಗಳವಾರ, 29 ಜೂನ್
ಈ ದಿನಪೂರ್ತಿ ನೀವು ತಾಜಾ ಹಾಗೂ ಉಲ್ಲಾಸದಿಂದಿರು ಇರುವಿರಿ, ಗ್ರಹಗತಿಗಳು ಲಾಭ ಮತ್ತು ಪ್ರಯೋಜನಗಳನ್ನು ನೀಡುತ್ತದೆ. ಕುಟುಂಬ ಸದಸ್ಯರ ಜೊತೆ ಸಂತಸಭರಿತ ತಿರುಗಾಟಕ್ಕೆ ತೆರಳುವ ಸಾಧ್ಯತೆಯಿದೆ. ಇಂದು ನೀವು ಸ್ಪಷ್ಟ ಮನಸ್ಸು ಹಾಗೂ ಆಧ್ಯಾತ್ಮ ಸುಧಾರಿತ ಮನಸ್ಥಿತಿಯನ್ನು ಹೊಂದಿರುತ್ತೀರಿ. ಸ್ನೇಹಿತರು ಮತ್ತು ಸಂಬಂಧಿಕರಿಂದ ಉಡುಗೊರೆ ಮತ್ತು ಬಹುಮಾನಗಳು ಸಿಗಲಿದೆ. ಎಲ್ಲಾ ನಕಾರಾತ್ಮಕತೆಗಳಿಂದ ದೂರವಿರುವಂತೆ ಗಣೇಶ ನಿಮ್ಮನ್ನು ಒತ್ತಾಯಿಸುತ್ತಾರೆ. ಈ ದಿನವು ವೈವಾಹಿಕ ಸಂತೋಷವನ್ನು ನೀಡುವ ಭರವಸೆಯಿದೆ.

ಮೀನ
ಮಂಗಳವಾರ, 29 ಜೂನ್
ಇಂದು ನಿಮ್ಮಲ್ಲಿ ಏಕಾಗ್ರತೆ ಮತ್ತು ಗಮನದ ಕೊರತೆ ಉಂಟಾಗುವ ಸಾಧ್ಯತೆಯಿದೆ, ಖಿನ್ನತೆ ಮತ್ತು ಅನಾಸಕ್ತಿ ನಿಮ್ಮನ್ನು ಕುಗ್ಗಿಸುತ್ತದೆ. ಧಾರ್ಮಿಕ ವಿಚಾರಗಳಿಗಾಗಿ ಸಾಕಷ್ಟು ಖರ್ಚು ಮಾಡಲಿದ್ದೀರಿ. ಬಂಡವಾಳ ಹೂಡಿಕೆಯ ವೇಳೆ ವಿವೇಚನೆಯಿಂದಿರುವ ಅಗತ್ಯವಿದೆ. ಮನೆಯ ಸದಸ್ಯರೊಂದಿಗೆ ಸಣ್ಣ ಸಂಘರ್ಷ ನಡೆಯುವ ಸಾಧ್ಯತೆಯಿದೆ ಮತ್ತು ನಂತರ ಅಲ್ಪಕಾಲ ದೂರವಾಗಬಹುದು. ಸಣ್ಣ ಲಾಭದಲ್ಲಿ ಸಾಗಿದ ನಂತರ ನಿಮಗೆ ಅಗಾಧ ನಷ್ಟ ಉಂಟಾಗಬಹುದು.ಕಾನೂನು ವಿಚಾರಗಳನ್ನು ಎಚ್ಚರಿಕೆಯಿಂದ ನಿಭಾಯಿಸುವ ಅಗತ್ಯವಿದೆ. ಪ್ರಾರ್ಥನೆ ಮತ್ತು ಧ್ಯಾನವು ನಿಮ್ಮನ್ನು ದಿನಪೂರ್ತಿ ನೋಡಿಕೊಳ್ಳುತ್ತದೆ.

 

 

Leave a Reply

Your email address will not be published.