ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕೊರೋನಾ ಸಂಕಷ್ಟದಿಂದಾಗಿ ತಡೆಹಿಡಿಯಲಾಗಿದ್ದ ತುಟ್ಟಿಭತ್ಯೆ (ಆಂ) ಬಿಡುಗಡೆ ಮಾಡುವಂತೆ ರಾಜ್ಯಾಧ್ಯಕ್ಷರಿಗೆ ಮನವಿ .

ನಿತ್ಯವಾಣಿ.ಚಿತ್ರದುರ್ಗ,(ಜು.18) :  ಈ ಮೇಲಿನ ವಿಷಯಕ್ಕೆ ಸಬಂಧಿಸಿದಂತೆ ಕೇಂದ್ರ ಸರ್ಕಾರವು ತನ್ನ ಸರ್ಕಾರಿ ನೌಕರರಿಗೆ ಜನವರಿ-2020, ಜುಲೈ 2020, ಹಾಗೂ ಜನವರಿ 2021 ರಂತೆ ತಡೆಹಿಡಿದಿದ್ದ ತುಟ್ಟಿಭತ್ಯೆ (ಆಂ) ಯನ್ನು ಮಂಜೂರು ಮಾಡಿರುತ್ತದೆ. ಹಾಗೇಯೇ ಕೇರಳ ರಾಜ್ಯ ಹಾಗೂ ರಾಜಸ್ತಾನ ರಾಜ್ಯಗಳು ಈಗಾಗಲೇ ತನ್ನ ನೌಕರರಿಗೆ ತಡೆಹಿಡಿದಿದ್ದ ತುಟ್ಟಿಭತ್ಯೆ (ಆಂ) ಯನ್ನು ಮಂಜೂರು ಮಾಡಿವೆ. ದಿನೇ ದಿನೇ ಎಲ್ಲಾ ರೀತಿಯ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವುದಷ್ಟೇ ಅಲ್ಲದೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಡುಗೆ ಎಣ್ಣೆ ಹೆಚ್ಚಾಗಿದೆ. ಹಾಗೇಯೇ ಕೊರೋನಾ ಸಂಕಷ್ಟಗಳಿಂದ ಅನಾರೋಗ್ಯದ ಸಮಸ್ಯೆ ಉಂಟಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮನೆಯ ಇತರ ಅವಲಂಭಿತ ಸದಸ್ಯರ ಅನಾರೋಗ್ಯದಿಂದ ತುಂಬಾ ಖರ್ಚು ವೆಚ್ಚವಾಗಿ ಆರ್ಥಿಕ ಸಮಸ್ಯೆ ಉಂಟಾಗಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆಗೆ ಕಷ್ಟ ಸಾದ್ಯವಾಗಿರುತ್ತದೆ. ಸರ್ಕಾರಿ ನೌಕರರು ಕೊರೋನಾ 1ನೇ ಅಲೆ ಹಾಗೂ 2ನೇ ಅಲೆಯ ನಿಯಂತ್ರಣ ಕಾರ್ಯದಲ್ಲಿ ಜಿಲ್ಲೆಯ ಮತ್ತಿ ರಾಜ್ಯದ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಕರೋನಾ ಯೋಧರು ಮೊದಲನೇ ಸಾಲಿನಲ್ಲಿ ನಿಂತು ಸರ್ಕಾರವಹಿಸಿದ ಕರೋನಾ ನಿರ್ವಹಣೆಯ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಕೊರೋನಾ 1ನೇ ಅಲೆ ಹಾಗೂ 2ನೇ ಅಲೆಯು ಈಗ ಕಡಿಮೆಯಾಗಿದೆ. ಹಾಗೂ 3ನೇ ಅಲೆಯು ಬರುವ ಮುನ್ಸೂಚನೆಯನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ನೀಡಿದೆ. ಆದ್ದರಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ಕರ್ನಾಟಕ ಘನ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿ ತಕ್ಷಣ ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 2020 ರಿಂದ ಈವರೆಗೆ ತಡೆಹಿಡಿದಿರುವ ತುಟ್ಟಿಭತ್ಯೆ (ಆಂ)ಯನ್ನು ಮಂಜೂರು ಮಾಡಿಸಿ ಕರೋನದ ಸಂಕಷ್ಟದ ಸಮಯzಲ್ಲಿ ಶ್ರಮಿಸಿರುವ ಕರ್ನಾಟಕ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಡಬೇಕೆಂದು 6.50 ಲಕ್ಷ ಸರ್ಕಾರಿ ನೌಕರನ್ನು ಪ್ರತಿ ನಿಧಿಸುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರದ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿಯವರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರದ ಸಂಘ ಜಿಲ್ಲಾಧ್ಯಕ್ಷರಾದ  ಕೆ.ಮಂಜುನಾಥ, ಪ್ರಧಾನಕಾರ್ಯದರ್ಶಿಗಳಾದ ಪ್ರದೀಪ್‍ಕುಮಾರ್ ಜಿ.ಆರ್, ರಾಜ್ಯಪರೀಷತ್ ಸದಸ್ಯರಾದ ಕೆ.ಟಿ ತಿಮ್ಮರೆಡ್ಡಿ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು, ತಾಲ್ಲೂಕು ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಇಲಾಖೆಗಳ ವೃಂಧ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು & ಜಿಲ್ಲೆಯ ಸಮಸ್ತ ನೌಕರರ ಪರವಾಗಿ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ

Leave a Reply

Your email address will not be published.