ಶ್ರೀ ಜೀವನ್ ಸೇವಾಶ್ರಮ ವತಿಯಿಂದ ಮುಖ್ಯಮಂತ್ರಿಗೆ ಮನವಿ

ನಿತ್ಯವಾಣಿ,ಬೆಂಗಳೂರು,(ಮಾ.10) :  ಶ್ರೀ ಜೀವನ್ ಸೇವಾಶ್ರಮ ವತಿಯಿಂದ ಧಾರವಾಡ ಜಿಲ್ಲೆಶ್ರೀಯ ಬೈಲಹೊಂಗಲ ತಾಲೂಕಿನ ಹೊನ್ನೂರು ಗ್ರಾಮದ  ಲಕ್ಷ್ಮಿ ಕಳ್ಳಿಮನಿ ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳನ್ನು ಒಬ್ಬರನ್ನು ಬಂಧಿಸಲಾಗಿದ್ದು ,ಒಬ್ಬರಿಂದ ಈ ಕೃತ್ಯ ಎಸಗಿರಲು ಸಾಧ್ಯವಿಲ್ಲ . ಆದ್ದರಿಂದ ಇದರ ಬಗ್ಗೆ ಇನ್ನೂ ಹೆಚ್ಚೂ ತನಿಖೆ ಮಾಡಿಸಿ ಲಕ್ಷ್ಮಿ ಅವರಿಗೆ 3 ಜನ ಮಕ್ಕಳಿದ್ದು ಅವರ ಕುಟುಂದವರಿಗೆ 25 ಲಕ್ಷ ಪರಿಹಾರ ನೀಡಬೇಕು ಎಂದು
ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಅವರ ನಿವಾಸದಲ್ಲಿ ಮನವಿ ಪತ್ರವನ್ನು ಸೇವಾಶ್ರಮದ ಸಂಸ್ಥಾಪಕರಾದ ಸಮೀಕ್ಷಾ ಯಶೋಧ ಅವರು  ಖಂಡಿಸಿ ಮನವಿ ಸಲ್ಲಿದರು, ಇದೇ ಸಮಯದಲ್ಲಿ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಅವರು ಇದರ ಬಗ್ಗೆ ನಾನು ಸಿಎಂ ಜೊತೆಯಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ, ಈ ಸಂದರ್ಭದಲ್ಲಿ ಸೇವಾಶ್ರಮದ ನಿರ್ದೇಶಕರಾದ ಚೈತ್ರ ಲಿಂಗರಾಜ ಉಪಸ್ಥಿತರಿದ್ದರು

 

Leave a Reply

Your email address will not be published.