ಸರ್ಕಾರಿ ನೌಕರರ ಸಂಘಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರಿ ಜಮೀನನ್ನು ಕಾಯ್ದಿರಿಸುವಂತೆ ಶಾಸಕರಿಗೆ ಸಂಘದ ಅಧ್ಯಕ್ಷರಾದ ಕೆ.ಮಂಜುನಾಥ ಮನವಿ ಸಲ್ಲಿಸಿದರು

ಹಿರಿಯ ಉಪನಿರ್ದೇಶಕರ ಕಛೇರಿ ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ ಚಿತ್ರದುರ್ಗದ ಹೊಳಲ್ಕೆರೆ ರಸ್ತೆ ಜ್ಞಾನಭಾರತಿ ಶಾಲೆಯ ಹಿಂಭಾಗದ ನಗರಾಭಿವೃದ್ಧಿ ಪ್ರಾಧಿಕಾರದ ಧವಳಗಿರಿ ಬಡಾವಣೆಯ 1ನೇ ಹಂತದಲ್ಲಿರುವ ಕಛೇರಿ ನಿವೇಶನದಲ್ಲಿ ಕಟ್ಟಡ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮವನ್ನು ಪಿ.ಡಬ್ಲ್ಯೂಡಿ ಇಲಾಖೆ ಚಿತ್ರದುರ್ಗರವರು ದಿನಾಂಕ:01/03/2021 ರ ಸೋಮವಾರ ಬೆಳಗ್ಗೆ 09.30 ಕ್ಕೆ ನಡೆಯಿತು
ಒಂಭತ್ತು ತಿಂಗಳಲ್ಲಿ ನೂತನ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಕಛೇರಿಯ ಕಟ್ಟಡ ಕಾಮಗಾರಿ ಪೂರ್ಣ ಎಂದು ಶಾಸಕ ಶ್ರೀ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.


ನಗರದ ಹೊಳಲ್ಕೆರೆ ರಸ್ತೆಯ ಜ್ಞಾನಭಾರತಿ ಶಾಲೆಯ ಹಿಂಭಾಗದಲ್ಲಿನ ನೂತನ ಸ್ಥಳೀಯ ಲೆಕ್ಕ ಪರಿಶೋಧನಾ ಇಲಾಖೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು.
ಸ್ಥಳೀಯ ಲೆಕ್ಕ ಪರಿಶೋಧನೆ ಇಲಾಖೆಯ ಬಹು ದಿನಗಳ ಬೇಡಿಕೆಯಂತೆ ಇಂದು ಭೂಮಿ ಪೂಜೆ ಮಾಡಿದ್ದು 9 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿಯುವ ವಿಶ್ವಾಸವಿದೆ ಎಂದರು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಅರ್ಬನ್ ಡೆವೆಲಪ್ಮೆಂಟ್ ಅಧ್ಯಕ್ಷರಾಗಿದ್ದಾಗ ಈ ಇಲಾಖೆಗೆ 8 ಸಾವಿರ ಸ್ಕೋಯರ್ ಫೀಟ್ ವಿಸ್ತಾರದ ನಿವೇಶನ ಹಸ್ತಾಂತರ ಮಾಡಿದ್ದರು. ಕಟ್ಟಡ ನಿರ್ಮಾಣಕ್ಕೆ ರೂ.2.50 ಕೋಟಿ ಅನುದಾನ ಸರ್ಕಾರದಿಂದ ಮಂಜೂರು ಮಾಡಲಾಗಿದೆ. ಮೊದಲ ಹಂತದಲ್ಲಿ ಈಗಾಗಲೇ ರೂ.1.00 ಕೋಟಿ ಅನುದಾನ ಬಿಡುಗಡೆ ಸಹ ಮಾಡಲಾಗಿದೆ. ಪಿಡ್ಲ್ಯೂಡಿ ಇಲಾಖೆಗೆ ವಹಿಸಲಾಗಿದ್ದು ಶ್ರೀ ಪಂಪಾಪತಿ 1ದರ್ಜೆ ಗುತ್ತಿಗೆದಾರರು ಇವರಿಗೆ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ.

ಉತ್ತಮ ಸ್ಥಳ ಮತ್ತು ವಾತಾವರಣದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಸಿಬ್ಬಂದಿಗಳು ಸುಸಜ್ಜಿತ ಕಟ್ಟಡದಲ್ಲಿ ತಮ್ಮ ಇಲಾಖೆಯ ಕೆಲಸ ಕಾರ್ಯ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ರಾಜ್ಯ ಲೆಕ್ಕಪರಿಶೋಧಕ ಇಲಾಖೆ ಆಪರ ನಿರ್ದೇಶಕರಾದ ಕುಪ್ಪೂರಲಿಂಗಯ್ಯ ಬಂದಿದ್ದಾರೆ ಅವರಿಗೆ ಸಹ ಅಭಿನಂದನೆ ಸಲ್ಲಿಸುತ್ತೇನೆ. ಸುಂದರವಾದ ಕಟ್ಟಡ ನಿರ್ಮಾಣವಾಗುತ್ತದೆ ಮತ್ತು ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಬಾಲಮ್ಮ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಕೆ.ಮಂಜುನಾಥ, ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ ಅಧಿಕಾರಿ ಶ್ರೀ ಸಿ.ಜಿ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಶ್ರೀ ಕೆ.ಹೆಚ್.ಓಂಕಾರಪ್ಪ, ಇಲಾಖೆಯ ನಿವೃತ್ತ ಅಧಿಕಾರಿಗಳಾದ ಶ್ಯಾಮಸುಂದರ್ ರೆಡ್ಡಿ, ಎಲ್.ರಮೇಶ್ ರಾವ್, ಟಿ.ಮಲಯ್ಯ, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಉಪನಿರ್ದೇಶಕ ಶ್ರೀಮತಿ ಎಸ್.ಸಿ ದಾಕ್ಷಾಯಿಣಿ ಕಾರ್ಯಕ್ರಮದಲ್ಲಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ನೌಕರರು ಮತ್ತು ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.
ಇದರೊಂದಿಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಕೆ.ಮಂಜುನಾಥ ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ನೌಕರರು 100 ವರ್ಷಗಳ ಇತಿಹಾಸವಿರುವ ಸರ್ಕಾರಿ ನೌಕರರ ಸಂಘಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರಿ ಜಮೀನನ್ನು ಕಾಯ್ದಿರಿಸುವಂತೆ ಶಾಸಕರಿಗೆ ರಾಮ ಮಂದಿರದ ಪ್ರತಿಮೆಯನ್ನು ನೀಡುವ ಮೂಲಕ ಚಿತ್ರದುರ್ಗದ ಜನಪ್ರಿಯ ಶಾಸಕರಾದ ಶ್ರೀ ಜಿ.ಹೆಚ್.ತಿಪ್ಪಾರೆಡ್ಡಿರವರಿಗೆ ಮನವಿ ಸಲ್ಲಿಸಿದರು.

 

Leave a Reply

Your email address will not be published.