ನಿತ್ಯವಾಣಿ, ಚಿತ್ರದರ್ಗ, (ಜೂ.6) : ಮುಜರಾಯಿ ಹಾಗೂ ಧಾರ್ಮಿಕದತ್ತಿ ಇಲಾಖೆಯ ಸಚಿವರು ಕೋಟ ಶ್ರೀನಿವಾಸ ಪೂಜಾರಿ ಹಾಗು ಆಯುಕ್ತರಲ್ಲಿ ಚಿತ್ರದುರ್ಗ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರ ಮನವಿ , ಈಗಾಗಲೇ ಸರಕಾರದ ವತಿಯಿಂದ ರಾಜ್ಯದ ಸಿ ದರ್ಜೆ ದೇವಾಲಯದ ಅರ್ಚಕರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದು, ವಿತರಣೆ ಮಾಡುವ ಸಂದರ್ಭದಲ್ಲಿ ಪರಿಷತ್ತಿನ ಸದಸ್ಯರನ್ನು ಗಣನೆ ಗೆ ತೆಗೆದು ಕೊಳ್ಳುವಂತೆ ಆಯಾ ಜಿಲ್ಲಾಅಧಿಕಾರಿಗಳಿಗೆ ಆದೇಶ ಮಾಡಿದರೆ ಪರಿಷತ್ತಿನ ಸಂಘಟನೆಗೆ ಅನುಕೂಲ ವಾಗುತ್ತದೆ ಆದುದರಿಂದ ನಮ್ಮ ಮನವಿ ಪರಿಗಣಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ
ಹಾಗೂ ಮುಜರಾಯಿ ಇಲಾಖೆ ಸಂಬಂಧಪಟ್ಟ ದೇವಸ್ಥಾನಗಳಲ್ಲಿ ಅನ್ನದಾಸೋಹವನ್ನು ಪ್ರತಿದಿನ ಮಾಡುತ್ತಿದ್ದು ಕಳೆದ ಎರಡು ತಿಂಗಳಿನಿಂದ ಅನ್ನದಾಸೋಹವನ್ನು ನಿಲ್ಲಿಸಲಾಗಿದೆ, ಲಾಕ್ ಡೌನ್ ಆದ ಪ್ರಯುಕ್ತ ಭಕ್ತರು ಕೊಟ್ಟಂತಹ ಅಕ್ಕಿ, ಬೇಳೆ, ಬೆಲ್ಲ ಎಲ್ಲಾ ಪದಾರ್ಥಗಳು ಹಾಳಾಗಬಹುದು ಆದ್ದರಿಂದ ಎಲ್ಲಾ ಕಮಿಟಿ ಸದಸ್ಯರು ಸೇರಿ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಡುಬಡವರಿಗೆ ಪದಾರ್ಥಗಳನ್ನು ಕೊಡುವುದು ಅಥವಾ ಅನ್ನದಾನ ಮಾಡಿ ಹಂಚುವುದು ಇದರ ಬಗ್ಗೆ ಚರ್ಚೆ ಮಾಡಲು ಕಮಿಟಿಯ ಎಲ್ಲಾ ಸದಸ್ಯರು ತುರ್ತಾಗಿ ಒಂದು ಸಮಯ ನಿಗದಿ ಮಾಡಬೇಕೆಂದು ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಮನವಿ ಮಾಡುತ್ತೇನೆ ಎಂದು ಚಿತ್ರದುರ್ಗ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾರ್ಜುನ್ .ಎಸ್ ಬಿ ಎಲ್ ರವರು ಪತ್ರಿಕಾ ಪ್ರಕಟಣಿ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.



